ದಕ್ಷಿಣ ಕನ್ನಡ

ಅಕ್ರಮ ಜಾನುವಾರು ಸಾಗಾಟ : ಆರೋಪಿ ಸಹಿತ ವಾಹನ ವಶಕ್ಕೆ, ಇಬ್ಬರು ಪರಾರಿ

ಬಂಟ್ವಾಳ : ಮಾ.26 ರಂದು ಪರವಾನಿಗೆ ಇಲ್ಲದೆ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ವೇಳೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ ಆರೋಪಿ ಸಹಿತ ವಾಹನದಲ್ಲಿದ್ದ ದನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.ಚಾಲಕ ಪ್ರವೀಣ್ ಪ್ರದೀಪ್ ಪೆರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದು, ಉಳಿದ ಇಬ್ಬರು ಆರೋಪಿಗಳು ವಾಹನದಿಂದ ಜಿಗಿದು ಪರಾರಿಯಾಗಿದ್ದಾರೆ. ವಾಹನದಲ್ಲಿ ಹಿಂಸಾತ್ಮಕ ವಾಗಿ ಕಟ್ಟಿಹಾಕಲಾಗಿದ್ದ ಎರಡು ಕರು ಸಹಿತ ಪಿಕಪ್ ವಾಹನ ಸೇರಿ ಒಟ್ಟು ಸುಮಾರು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಟ್ವಾಳ ಗ್ರಾಮಾಂತರ […]

ಅಕ್ರಮ ಜಾನುವಾರು ಸಾಗಾಟ : ಆರೋಪಿ ಸಹಿತ ವಾಹನ ವಶಕ್ಕೆ, ಇಬ್ಬರು ಪರಾರಿ Read More »

ಕಾಶ್ಮೀರದಲ್ಲಿ ಶಾರದಾ ಮೂರ್ತಿ ಪ್ರತಿಷ್ಠೆ | ಸುಬ್ರಹ್ಮಣ್ಯ ನಟ್ಟೋಜ ವಿವರಣೆಯಲ್ಲಿ ಕೇಳಿ

ಪುತ್ತೂರು: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಹಲವು ವರ್ಷಗಳ ಬಳಿಕ ಶಾರದಾ ಮೂರ್ತಿ ಪ್ರತಿಷ್ಠಾಪನೆಗೊಂಡಿದೆ. ಶೃಂಗೇರಿ ಶ್ರೀಗಳ ನೇತೃತ್ವದಲ್ಲಿ ಶಾರದಾ ಮೂರ್ತಿ ಪ್ರತಿಷ್ಠಾಪನಾ ಕಾರ್ಯ ನಡೆಯಿತು. ಪಕ್ಕದಲ್ಲೇ ಇರುವ ಪಿ.ಓ.ಕೆ. ಬಳಿಯಲ್ಲೇ ಶ್ರೀ ಶಾರದಾ ದೇವಾಲಯ ನಿರ್ಮಾಣಗೊಂಡಿದೆ. ಒಟ್ಟು ಕಾರ್ಯಕ್ರಮ, ವ್ಯವಸ್ಥೆಗಳ ಬಗ್ಗೆ ಅಂಬಿಕಾ ಸಮೂಹ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಅವರು ವಿವರಿಸಿದ್ದಾರೆ. ಅವರ ಮಾತುಗಳಲ್ಲೇ ಕೇಳಿ…

ಕಾಶ್ಮೀರದಲ್ಲಿ ಶಾರದಾ ಮೂರ್ತಿ ಪ್ರತಿಷ್ಠೆ | ಸುಬ್ರಹ್ಮಣ್ಯ ನಟ್ಟೋಜ ವಿವರಣೆಯಲ್ಲಿ ಕೇಳಿ Read More »

ಉಪ್ಪಿನಂಗಡಿ: 10 ಲಕ್ಷ ರೂ. ನಗದು ದರೋಡೆ, ಪ್ರಕರಣ ಓರ್ವ ವಶ

ಉಪ್ಪಿನಂಗಡಿ : ಮಗಳ ಮದುವೆಗೆ ಚಿನ್ನವನ್ನು ಖರೀದಿಸಲೆಂದು ದ್ವಿಚಕ್ರ ವಾಹನದಲ್ಲಿ 10 ಲಕ್ಷ ರೂ. ನಗದು ಹಣ ಕೊಂಡೊಯ್ಯುತ್ತಿದ್ದ ವೇಳೆ ಇಳಂತಿಲ ಗ್ರಾಮದ ಪೆದಮಲೆ- ಸರಳಿಕಟ್ಟೆ ರಸ್ತೆಯ ರಿಫಾಯಿನಗರ ಎಂಬಲ್ಲಿ ಅಪರಿಚಿತ ಯುವಕನೋರ್ವ ಹಣವನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪ್ಪಿನಂಗಡಿ ಪೊಲೀಸರು ಓರ್ವ ಆರೋಪಿಯನ್ನು ಒಂಬತ್ತು ಲಕ್ಷ ರೂ. ನಗದಿನೊಂದಿಗೆ ವಶಪಡಿಸಿಕೊಂಡಿದ್ದಾರೆ. ಇಳಂತಿಲ ಗ್ರಾಮದ ಕಾರ್ಯಪಾಡಿ ಮನೆ ನಿವಾಸಿ ಮಹಮ್ಮದ್ ಕೆ. (60) ಅವರು ತನ್ನ ಮಗಳ ಮದುವೆಗಾಗಿ ಚಿನ್ನಾಭರಣ ಖರೀದಿಸಲು ಸಂಗ್ರಹಿಸಿಟ್ಟ 10 ಲಕ್ಷ

ಉಪ್ಪಿನಂಗಡಿ: 10 ಲಕ್ಷ ರೂ. ನಗದು ದರೋಡೆ, ಪ್ರಕರಣ ಓರ್ವ ವಶ Read More »

ಮಂಗಳೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು : ಸುಮಾರು 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊಣಾಜೆ ಪೊಲೀಸರು ಮಾರ್ಚ್ 23 ರಂದು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ತುಂಬೆ ವ್ಯಾಪ್ತಿಯ ತಲಪಾಡಿ ನಿವಾಸಿ ಅಬ್ದುಲ್ ಅಜೀಜ್ ಅಲಿಯಾಸ್ ಅಜೀಜ್ (45) ಎಂದು ಗುರುತಿಸಲಾಗಿದೆ.ಈತ ಕೇರಳ ಮತ್ತು ಕರ್ನಾಟಕದ ವಿವಿಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಬಂಧಿತ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಅಜೀಜ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ನಾಲ್ಕು, ಉಳ್ಳಾಲದಲ್ಲಿ ಮೂರು, ಬಂಟ್ವಾಳದಲ್ಲಿ ಒಂದು ಮತ್ತು ಹಾಸನದ ಅರೇಹಳ್ಳಿ ಮತ್ತು ಕೇರಳ ರಾಜ್ಯದ ಕುಟ್ಯಾಡಿಯಲ್ಲಿ ತಲಾ ಒಂದು

ಮಂಗಳೂರು: 14 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ Read More »

ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಅವಘಡ : ತಪ್ಪಿದ ಅನಾಹುತ

ಮಂಗಳೂರು : ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪುವಿನ ವಾಣಿಜ್ಯ ಸಂಕೀರ್ಣವೊಂದರ ಐದನೇ ಮಹಡಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ತೊಕ್ಕೊಟ್ಟು ಕಲ್ಲಾಪುದಲ್ಲಿರುವ ಕಿಯಾಂಜಾ ಯೂನಿವರ್ಸಲ್ ವಾಣಿಜ್ಯ ಸಂಕೀರ್ಣದಲ್ಲಿರುವ ಮನ್ಹಾಸ್ ಮಂಡಿ ಹೋಟೆಲ್‌ನ ಹೊಗೆ ಹೊರಸೂಸುವ ಚಿಮಣಿಯ ತುದಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಟ್ಟಡದ ಸಿಬ್ಬಂದಿ ಹಾಗೂ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿದರೂ ಅದು ವ್ಯಾಪಿಸಿದೆ.ಇನ್ನು ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಐದನೇ ಮಹಡಿ ಹತ್ತಿ ಚಿಮಣಿಗೆ ತಗುಲಿದ ಬೆಂಕಿಯನ್ನು

ವಾಣಿಜ್ಯ ಸಂಕೀರ್ಣದಲ್ಲಿ ಬೆಂಕಿ ಅವಘಡ : ತಪ್ಪಿದ ಅನಾಹುತ Read More »

23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್

ಮಂಗಳೂರು : 23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಕೃಷ್ಣಾಪುರ, ಕಾಟಿಪಳ್ಳ ಗ್ರಾಮದ ನಿವಾಸಿ ಅಜರುದ್ದೀನ್ ಅಲಿಯಾಸ್ ಅಜರ್ (ನಾಥು)(29) ಬಂಧಿತ ಆರೋಪಿ.ಈತನ ಮೇಲೆ ಮಂಗಳೂರು ನಗರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಒಟ್ಟು 23 ಪ್ರಕರಣಗಳಲ್ಲಿ ಜಾಮೀನು ರಹಿತ ವಾರಂಟ್ ಇದೆ.ಇನ್ನು ಮಂಗಳೂರು ಪೊಲೀಸು ಆಯುಕ್ತರ ಆದೇಶದ ಮೇರೆಗೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಆಯುಕ್ತರಾದ ಮನೋಜ್‌ ಕುಮಾರ್‌ರವರ ನಿರ್ದೇಶನದಂತೆ ಮಾರ್ಚ್ 22

23 ಪ್ರಕರಣಗಳಲ್ಲಿ ಬೇಕಾಗಿದ್ದ ಮೋಸ್ಟ್ ವಾಂಟೆಡ್ ಆರೋಪಿ ಅರೆಸ್ಟ್ Read More »

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಅವಾರ್ಡ್-2023

ಪುತ್ತೂರು: ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯವರು ನಡೆಸಿದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ಸ್ ಮೈಸೂರು 2023 ಇದರಲ್ಲಿ ಬೆಸ್ಟ್ ಬ್ಯಾಂಕರ್ ಇನ್ ರೂರಲ್ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ಗೆ ಟೈಮ್ಸ್ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಆವಾರ್ಡ್ ಲಭಿಸಿದೆ. ಮೈಸೂರು ಸೈಲೆಂಟ್ ಸ್ಪಾದಲ್ಲಿ ಮಾ.14 ರಂದು ನಡೆದ ಟೈಮ್ಸ್ ಬ್ಯುಸಿನೆಸ್ ಆವಾರ್ಡ್ 2023 ಸಮಾರಂಭದಲ್ಲಿ ಖ್ಯಾತ ತೆಲುಗು ಚಿತ್ರನಟಿ ರಾಶಿ ಸಿನ್ಹಾರವರು ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟುರವರಿಗೆ ಬೆಸ್ಟ್ ಬ್ಯಾಂಕ್ ಆವಾರ್ಡ್ ವಿತರಿಸಿದರು. ಸಮೀಕ್ಷೆಯಲ್ಲಿ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗೆ ಬೆಸ್ಟ್ ಬ್ಯಾಂಕ್ ಬ್ಯುಸಿನೆಸ್ ಅವಾರ್ಡ್-2023 Read More »

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ | ದ.ಕ. ಜಿಲ್ಲೆಯಿಂದ 34,340 ವಿದ್ಯಾರ್ಥಿಗಳು 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ

ಪುತ್ತೂರು : ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭ.ಈ ಹಿನ್ನಲೆಯಲ್ಲಿ ಜಿಲ್ಲೆ ಸೇರಿದಂತೆ ತಾಲೂಕಿನಲ್ಲಿ ಪ್ರತೀ ಪರೀಕ್ಷಾ ಕೇಂದ್ರಗಳಲ್ಲಿ ಸಿದ್ಧತೆಗಳು ನಡೆದಿದೆ. ಮಾ.9 ರಿಂದ 29 ರ ತನಕ ಪರೀಕ್ಷೆ ನಡೆಯಲಿದ್ದು, ಮೌಲ್ಯ ನಿರ್ಣಯ ಮಂಡಳಿ ನಿರ್ದೇಶನದಂತೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ. ದ.ಕ.ಜಿಲ್ಲೆಯಲ್ಲಿ ಹೊಸ ವಿದ್ಯಾರ್ಥಿಗಳು, ಖಾಸಗಿ ಹಾಗೂ ಪುನರಾವರ್ತಿ ಅಭ್ಯರ್ಥಿಗಳು ಸೇರಿದಂತೆ 34,340 ಮಂದಿ ಪರೀಕ್ಷೆಗೆ  ನೋಂದಾವಣೆ ಮಾಡಿಕೊಂಡಿದ್ದು, ಪರೀಕ್ಷೆ ಬರೆಯಲಿದ್ದಾರೆ. ದ.ಕ.ಜಿಲ್ಲೆಯಲ್ಲಿ ಒಟ್ಟು 52 ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಅಗತ್ಯ ಭದ್ರತೆ ಒದಗಿಸಲಾಗಿದೆ.

ನಾಳೆಯಿಂದ ದ್ವಿತೀಯ ಪಿಯುಸಿ ಪರೀಕ್ಷೆ | ದ.ಕ. ಜಿಲ್ಲೆಯಿಂದ 34,340 ವಿದ್ಯಾರ್ಥಿಗಳು 52 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ Read More »

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ಭಂಡಾರ ಆಗಮನ | ಮಂಗಳವಾರ ಮಧ್ಯಾಹ್ನ ಇತಿಹಾಸ ಪ್ರಸಿದ್ಧ ಮೆಚ್ಚಿಜಾತ್ರೆ

ಪುತ್ತೂರು: ಇತಿಹಾಸ ಪ್ರಸಿದ್ಧ ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಯ‌ ಹಿಂದಿನ‌ ದಿನವಾದ ಸೋಮವಾರ ರಾತ್ರಿ ದೈವಗಳ ಭಂಡಾರ ಆಗಮನವಾಯಿತು. ದೊಡ್ಡಮನೆಯಿಂದ ಸಂಪ್ರದಾಯದಂತೆ ಭಂಡಾರ ಹೊರಟು, ಚಿತ್ತರಿಗೆ ಬೂಡಿಗೆ ದೈವಗಳ ಭಂಡಾರ ಆಗಮನವಾಯಿತು. ಚಿತ್ತರಿಗೆ ಬೂಡಿನಲ್ಲಿ ಪೂರ್ವಶಿಷ್ಟ ಸಂಪ್ರದಾಯದಂತೆ ಪೂಜೆ ನೆರವೇರಿತು. ನಂತರ ದೈವಗಳ ಭಂಡಾರ ಬಂಟ್ರಿಂಜ ಮಾಡಕ್ಕೆ ತೆರಳಿತು. ಮಂಗಳವಾರ ಮಧ್ಯಾಹ್ನ ಶ್ರೀ ಉಳ್ಳಾಲ್ತಿ ದೈವದ ಮೆಚ್ಚಿ ಜಾತ್ರೆ ನಡೆಯಲಿದೆ.

ಅನಂತಾಡಿ ಶ್ರೀ ಉಳ್ಳಾಲ್ತಿ ಮೆಚ್ಚಿ ಜಾತ್ರೆಗೆ ಭಂಡಾರ ಆಗಮನ | ಮಂಗಳವಾರ ಮಧ್ಯಾಹ್ನ ಇತಿಹಾಸ ಪ್ರಸಿದ್ಧ ಮೆಚ್ಚಿಜಾತ್ರೆ Read More »

ಮುಕ್ಕೂರು ಅಂಚೆ ಕಚೇರಿ ಉಳಿಸಿಕೊಳ್ಳಲು ಪೂರ್ವಭಾವಿ ಸಭೆ

ಮುಕ್ಕೂರು: ಊರಿನ ಅಂಚೆ ಕಚೇರಿಯು ವ್ಯವಹಾರ ಕುಸಿತದಿಂದ ಬೇರೆಡೆಗೆ ಸ್ಥಳಾಂತರ ಅಥವಾ ಮುಚ್ಚುವುದನ್ನು ಯಾರಿಂದಲೂ ಒತ್ತಡ ಹೇರಿ ತಡೆಯುವುದು ಸಾಧನೆ ಅಲ್ಲ. ಅದರ ಬದಲಾಗಿ ಅಂಚೆ ಕಚೇರಿಯಲ್ಲಿ ಪ್ರತಿಯೊಬ್ಬರು ಖಾತೆ ತೆರೆದು ವ್ಯವಹಾರ ಹೆಚ್ಚಳಗೊಳಿಸಿ ಸ್ವಂತ ಶಕ್ತಿಯಿಂದ ಅಂಚೆ ಕಚೇರಿ ಶಾಶ್ವತವಾಗಿ ಉಳಿಯುವಂತೆ ಮಾಡುವುದೇ ಸಾಧನೆ ಎಂದು ಪೆರುವಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಹೇಳಿದರು. ಬೆಳ್ಳಾರೆ ವ್ಯಾಪ್ತಿಯ ಪೆರುವಾಜೆ ಗ್ರಾಮದ ಮುಕ್ಕೂರು ಶಾಖಾ ಅಂಚೆ ಕಚೇರಿ ವ್ಯವಹಾರ ಕುಸಿದಿದ್ದು ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ

ಮುಕ್ಕೂರು ಅಂಚೆ ಕಚೇರಿ ಉಳಿಸಿಕೊಳ್ಳಲು ಪೂರ್ವಭಾವಿ ಸಭೆ Read More »

error: Content is protected !!
Scroll to Top