ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಸಾಸನ ಕೈಪಿಡಿ ಹಸ್ತಾಂತರ
ಬೆಳ್ತಂಗಡಿ: ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಬೀಟಿಗೆ ದಿವಂಗತ ಮೋನು ಅವರ ಧರ್ಮ ಪತ್ನಿ ಸೇಲ್ಮ ಒಂಟಿ ವಾಸವಾಗಿದ್ದರಿಂದ ಶ್ರೀ ಕ್ಷೇತ್ರದ ವತಿಯಿಂದ ನಿರ್ಗತಿಕ ಮಸಾಸನ ಕೈಪಿಡಿಯನ್ನು ವಿತರಿಸಲಾಗಿದೆ. ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ನಿರ್ಗತಿಕ ಮಸಾಸನ ಕೈಪಿಡಿಯನ್ನು ಸೇಲ್ಮರಿಗೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಪೆರ್ನೆ ಮೇಲ್ವಿಚಾರಕಿ ಶಾರದಾ, ಜ್ಞಾನವಿಕಾಸ ದೀಪಾ, ಸೇವಾ ಪ್ರತಿನಿಧಿ ಶಾರದಾ, ಕೆದಿಲ ಶೌರ್ಯ ವಿಪತ್ತು ನಿರ್ವಹಣಾ ಸದಸ್ಯ ಜಗದೀಶ, ಗಿರೀಶ, ವೆಂಕಪ್ಪ ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಸಾಸನ ಕೈಪಿಡಿ ಹಸ್ತಾಂತರ Read More »










