ದಕ್ಷಿಣ ಕನ್ನಡ

ಗ್ಯಾಸ್ ಸೋರಿಕೆ: ಚಿಕಿತ್ಸೆ ಫಲಿಸದೆ ಗೃಹಿಣಿ ಮೃತ್ಯು

ಉಳ್ಳಾಲ : ಮಂಜನಾಡಿ ಗ್ರಾಮ ವ್ಯಾಪ್ತಿಯ ಕಲ್ಕಟ್ಟ ಖಂಡಿಕ ಎಂಬಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆ ಪರಿಣಾಮ ಬೆಂಕಿ ಹಿಡಿದು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಮಕ್ಕಳ ತಾಯಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ತಡರಾತ್ರಿ ಮೃತಪಟ್ಟಿದ್ದಾರೆ. ಖಂಡಿಕ ನಿವಾಸಿ ಮುತ್ತಲಿಬ್ ಎಂಬವರ ಪತ್ನಿ ಖುಬ್ರ ಮತ್ತು ಮೂವರು ಮಕ್ಕಳು ಒಂದೇ ಕೊಠಡಿಯಲ್ಲಿ ಕಳೆದ ಶನಿವಾರ ರಾತ್ರಿ ಮಲಗಿದ್ದ ಸಂದರ್ಭದಲ್ಲಿ ಗ್ಯಾಸ್ ಸೋರಿಕೆ ಯಿಂದ ಈ ದುರಂತ ಸಂಭವಿಸಿತ್ತು. ಇದರಿಂದ ಮನೆಯೊಡತಿ ಖುಬ್ರಾ ಹಾಗೂ ಅವರ ಮೂವರು ಮಕ್ಕಳಾದ […]

ಗ್ಯಾಸ್ ಸೋರಿಕೆ: ಚಿಕಿತ್ಸೆ ಫಲಿಸದೆ ಗೃಹಿಣಿ ಮೃತ್ಯು Read More »

ಶ್ರೀ ಮಹಾವಿಷ್ಣುಸೇವಾ ಪ್ರತಿಷ್ಠಾನ ಆನಾಜೆ , ವೀರಮಂಗಲ 24ರ ವಾರ್ಷಿಕ ಸಂಭ್ರಮ | ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ

ವೀರಮಂಗಲ : ವೀರಮಂಗಲ ಆನಾಜೆ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿಯ ವಾರ್ಷಿಕ ಸಂಭ್ರಮದ ಅಂಗವಾಗಿ 2024 ರ ಸಾಲಿನ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಡಿಸೆಂಬರ್14-ರಂದು ಆನಾಜೆಯಲ್ಲಿ ನಡೆಯಲಿದೆ. ಸಂಜೆ 5:30 ಕ್ಕೆ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಪ್ರಾರಂಭವಾಗಲಿದ್ದು, 7:30 ಕ್ಕೆ ಮಹಾ ಪೂಜೆ ನಡೆಯಲಿದೆ. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಕಾಸರಗೋಡು ಸಂಸ್ಕೃತ ಭಾರತಿ ಜಿಲ್ಲಾ ಸಂಯೋಜಕರು, ಎಸ್,ಎಂ. ಉಡುಪ ಕುಂಟಾರು ಧಾರ್ಮಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಮಂಗಳೂರು ಲೋಕ ಸಭಾ

ಶ್ರೀ ಮಹಾವಿಷ್ಣುಸೇವಾ ಪ್ರತಿಷ್ಠಾನ ಆನಾಜೆ , ವೀರಮಂಗಲ 24ರ ವಾರ್ಷಿಕ ಸಂಭ್ರಮ | ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ Read More »

ಮಂಗಳೂರು, ಸಿಂಗಾಪುರ ಮಧ್ಯೆ  ನೇರ ವಿಮಾನ ಸಂಚಾರಕ್ಕೆ ಮನವಿ| ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಸಲ್ಲಿಕೆ

ಮಂಗಳೂರು:  ಮಂಗಳೂರು ಮತ್ತು ಸಿಂಗಾಪುರ ನಡುವೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಜನವರಿ 21 ರಿಂದ ವಾರಕ್ಕೆ ಎರಡು ಬಾರಿ ವಿಮಾನ ಸಂಚಾರವಾಗಲಿದೆ. ಮಂಗಳೂರಿನೊಂದಿಗೆ ವಿಮಾನ ಸಂಪರ್ಕವನ್ನು ಪಡೆಯುವ ಆಗ್ನೆಯ ಏಷ್ಯಾದ ಮೊದಲ ಅಂತರರಾಷ್ಟ್ರೀಯ ತಾಣ ಎಂದುಸಿಂಗಾಪುರವಾಗಲಿದೆ. ಈವರೆಗೆ, ಮಂಗಳೂರಿನಿಂದ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳು ಮಧ್ಯಪ್ರಾಚ್ಯ ದೇಶಗಳಿಗೆ ಮಾತ್ರ ಕಾರ್ಯಾಚರಿಸುತ್ತಿದ್ದು. ಮಂಗಳವಾರ ಮತ್ತು ಶುಕ್ರವಾರದಂದು ಉಭಯ ನಿಲ್ದಾಣಗಳ ನಡುವೆ ವಿಮಾನಗಳು ಸಂಚಾರ ಮಾಡಲಿವೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಪ್ರಕಟಣೆ ತಿಳಿಸಿದೆ. ಸರ್ಕಾರಕ್ಕೆ ಮನವಿ ಮಾಡಿದ್ದ ಸಂಸದ

ಮಂಗಳೂರು, ಸಿಂಗಾಪುರ ಮಧ್ಯೆ  ನೇರ ವಿಮಾನ ಸಂಚಾರಕ್ಕೆ ಮನವಿ| ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮನವಿ ಸಲ್ಲಿಕೆ Read More »

ಕಾರಿನಲ್ಲಿದ್ದ ಚಿನ್ನಾಭರಣ, ಲ್ಯಾಪ್ ಟಾಪ್‍ ಕಳವು | ಆರೋಪಿಯ ಬಂಧನ

ಮಂಗಳೂರು: ಪಾರ್ಕ್‌ ಮಾಡಿದ್ದ ಕಾರಿನ ಗ್ಲಾಸ್ ಹೊಡೆದು 6,80,000ರೂ. ಬೆಲೆಬಾಳುವ ಚಿನ್ನಾಭರಣ, ಮತ್ತು ಲ್ಯಾಪ್ ಟಾಪನ್ನು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೂರ್ವ ಠಾಣೆಯ ಪೊಲೀಸರು ತೀವ್ರವಾಗಿ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಳವು ಮಾಡಿದ ಸೊತ್ತನ್ನು ಪೋಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತ ಆರೋಪಿಯನ್ನು ಮಂಗಳೂರಿನ ಅಡ್ಯಾರು ಗ್ರಾಮದ ಪದವು, ಅಡ್ಯಾರ್, ಭರಿರತ್ ಮಂಜಿಲ್ ನಿವಾಸಿ ಅಬ್ದುಲ್ ಅಕ್ರಮ್(33) ಎಂದು ಗುರುತಿಸಲಾಗಿದೆ. ಆರೋಪಿಯು ಡಿ. 8ರ ರಾತ್ರಿ ಕಂಕನಾಡಿ ಮಾರ್ಕೆಟ್ ಬಳಿ ಪಾರ್ಕ್ ಮಾಡಿದ್ದ ಕ್ರೇಟಾ

ಕಾರಿನಲ್ಲಿದ್ದ ಚಿನ್ನಾಭರಣ, ಲ್ಯಾಪ್ ಟಾಪ್‍ ಕಳವು | ಆರೋಪಿಯ ಬಂಧನ Read More »

ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿಯಾದ ಆರೋಪಿಯ ಬಂಧನ

ಕೊಯ್ಯರು: ಮಹಿಳೆಯೊಬ್ಬರು ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಕಸಿದು ಪರಾರಿಯಾಗಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ, ಕದ್ದೊಯ್ದ ಚಿನ್ನದ ಕರಿಮಣಿ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯರು ಗ್ರಾಮದ ಗಿರಿಗುಡ್ಡೆ, ಡೆಂಬುಗ ನಿವಾಸಿ ಉಮೇಶ್ ಗೌಡ(38) ಆರೋಪಿ ಎಂದು ತಿಳಿದು ಬಂದಿದ್ದು, ಆತನನ್ನು ಬೆಳ್ತಂಗಡಿ ಸರ್ಕಲ್ ಇನ್ಸೆಕ್ಟರ್ ನಾಗೇಶ್ ಕದ್ರಿ ನೇತೃತ್ವದ ತಂಡದ ಸಿಬ್ಬಂದಿಗಳು ಕೊಯ್ಯರು ಗ್ರಾಮದ ಆದೂರ್ ಪೆರಲ್ ಬಸ್ ನಿಲ್ದಾಣದಲ್ಲಿ

ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿಯಾದ ಆರೋಪಿಯ ಬಂಧನ Read More »

ಮಾಜಿ ಮುಖ್ಯಮಂತ್ರಿ ಎಸ್‍ ಎಂ ಕೃಷ್ಣ ನಿಧನದ ಹಿನ್ನಲೆ ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ

ಮಂಗಳೂರು:  ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಸ್‍ ಎಂ ಕೃಷ್ಣ ನಿಧನದ ಹಿನ್ನಲೆ ಸರ್ಕಾರ ಡಿ.11 ರಂದು  ರಜೆ ಘೋಷಿಸಿದೆ. ಈ ಹಿನ್ನಲೆ  ದಿನಾಂಕ 11-12-2024 ರಂದು ನಿಗದಿಪಡಿಸಿದ್ದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬದಲಾದ ಪರಿಷ್ಕ್ರತ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲಿ  ತಿಳಿಸಲಾಗುವುದು ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲಸಚಿವರು  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಎಸ್‍ ಎಂ ಕೃಷ್ಣ ನಿಧನದ ಹಿನ್ನಲೆ ಮಂಗಳೂರು ವಿವಿ ಪರೀಕ್ಷೆ ಮುಂದೂಡಿಕೆ Read More »

ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಆರೋಪಿಯ ಬಂಧನ | 56,000 ರೂ. ಮೌಲ್ಯದ ಮಾದಕ ವಸ್ತು ವಶ

ಮಂಗಳೂರು: ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ  ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಾಮಂಜೂರು ತಿರುವೈಲು ಮೂಡುಜೆಪ್ಪು ಅಮೃತೇಶ್ವರ ದೇವಸ್ಥಾನದ ಬಳಿಯ ನಿವಾಸಿ ನದೀಂ(34) ಎಂದು ಪತ್ತೆ ಹಚ್ಚಲಾಗಿದೆ. ಈತ ಬಂಗ್ರ ಕೂಳೂರು ಕಡೆಗೆ ಹೋಗುವ ರಸ್ತೆಯಲ್ಲಿ ಕಾರಿನಲ್ಲಿ ಮಾದಕ ವಸ್ತುಗಳನ್ನಿಟ್ಟುಕೊಂಡು ಗಿರಾಕಿಗಳಿಗಾಗಿ ಕಾಯುತ್ತಿದ್ದ ಎನ್ನಲಾಗಿದ್ದು, ಈತನ ವಶದಲ್ಲಿದ್ದ ಅಂದಾಜು 56,000 ರೂ. ಬೆಲೆಬಾಳುವ ಮಾದಕ ವಸ್ತುಗಳು, ಮೊಬೈಲ್ ಫೋನ್, 7 ಡೆಬಿಟ್‌ ಕಾರ್ಡ್‌ಗಳು ಮತ್ತು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಮಾದಕ ವಸ್ತು ಮಾರಾಟ ಮಾಡುತ್ತಿದ್ದ  ಆರೋಪಿಯ ಬಂಧನ | 56,000 ರೂ. ಮೌಲ್ಯದ ಮಾದಕ ವಸ್ತು ವಶ Read More »

ಪಾದಚಾರಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿ

ಬೆಳ್ತಂಗಡಿ : ಮಹಿಳೆಯೊಬ್ಬರನ್ನು ಹಿಂಬಾಲಿಸಿಕೊಂಡು ಬಂದು ಬೆದರಿಸಿ ಚಿನ್ನದ ಕರಿಮಣಿ ಸರವನ್ನು ಎಳೆದು ಪರಾರಿಯಾದ ಘಟನೆ ಬೆಳ್ತಂಗಡಿಯ ಕೊಯ್ಯೂರಿನಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಕೋರಿಯಾರ್ ನಿವಾಸಿ ದಾಮೋಧರ್ ಭಟ್ ಅವರ ಪತ್ನಿ ರಾಜೀವಿ(50) ಎಂಬವರ ಕುತ್ತಿಗೆಯಿಂದ ಆರೋಪಿ ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ಗಿರಿಗುಡ್ಡೆ ಡೆಂಬುಗ ನಿವಾಸಿ ಕೊರಗಪ್ಪ ಗೌಡರ ಮಗ ಉಮೇಶ್‍ ಗೌಡ ಕರಿಮಣಿ ಸರ ಎಳೆದು ಪರಾರಿಯಾಗಿದ್ದನೆ ಎನ್ನಲಾಗಿದೆ. ಮಹಿಳೆ ಬೆಳ್ತಂಗಡಿಗೆ ಹೋಗಿ ವಾಪಸ್ ಮನೆಗೆ ಕೊಯ್ಯೂರು ಗ್ರಾಮದ ಪಾಂಬೇಲ್ ಕ್ರಾಸ್

ಪಾದಚಾರಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಳೆದು ಪರಾರಿ Read More »

ಮರವೂರು ಸೇತುವೆಯಲ್ಲಿ ಕಾರು ಡಿಕ್ಕಿ ಹೊಡೆದು ದನ ಸಾವು

ಬಜಪೆ: ಮಂಗಳೂರು – ಬಜಪೆ ರಾಜ್ಯ ಹೆದ್ದಾರಿ 67ರ ಮರವೂರು ಸೇತುವೆಯಲ್ಲಿ ಮಂಗಳೂರು ಕಡೆಯಿಂದ ಬಂದ ಕಾರೊಂದು ಸೇತುವೆಯ ಅವೈಜ್ಞಾನಿಕ ಮಾರ್ಗಸೂಚಿ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಆಯ ತಪ್ಪಿ ದನವೊಂದಕ್ಕೆ ಡಿಕ್ಕಿ ಹೊಡೆದ ಘಟನೆ ಸೋಮವಾರ ರಾತ್ರಿ ಸಂಭವಿಸಿದ್ದು ಅಪಘಾತಕ್ಕೊಳಗಾದ ದನ ಮೃತಪಟ್ಟಿದೆ. ಮರವೂರಿನಲ್ಲಿರುವ ಎರಡು ಸೇತುವೆಗಳ ಪೈಕಿ ಒಂದರಲ್ಲಿ ಸಂಚಾರ ನಿಷೇಧಿಸಲಾಗಿದ್ದು ಸಂಚಾರದ ಮಾರ್ಗಸೂಚಿ ತೀರಾ ಗೊಂದಲಕಾರಿಯಾಗಿದ್ದು ಕಾಮಗಾರಿ ಕೂಡಾ ಅವೈಜ್ಞಾನಿಕವಾಗಿರುವುದರಿಂದ ಇಂತಹ ಘಟನೆಗಳು ಪುನರಾವರ್ತನೆಯಾಗುತ್ತಿದೆ ಎಂದು ಸ್ಥಳೀಯರ ಆರೋಪ. ಅಪಘಾತಕ್ಕೊಳಗಾದ ಕಾರಿನಲ್ಲಿದ್ದ ವ್ಯಕ್ತಿಗಳಿಗೆ ಸಣ್ಣಪುಟ್ಟ

ಮರವೂರು ಸೇತುವೆಯಲ್ಲಿ ಕಾರು ಡಿಕ್ಕಿ ಹೊಡೆದು ದನ ಸಾವು Read More »

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ

30ನೇ ವರ್ಷದವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಗಳ ಮೆರುಗು, ಮೇಳಗಳ ಬೆರಗು ಮೂಡುಬಿದಿರೆ: ಮೋಹನ್‌ ಆಳ್ವ ನೇತೃತ್ವದ ವಿರಾಸತ್‌ ಸಾಂಸ್ಕೃತಿಕ ವೈಭವಕ್ಕೆ 30ನೇ ವರ್ಷದ ಸಂಭ್ರಮ. ಈ ವರ್ಷದ ವಿರಾಸತ್‌ ಇಂದಿನಿಂದ ಮೂಡುಬಿದಿರೆಯ ವಿದ್ಯಾಗಿರಿಯಲ್ಲಿ ಅನಾವರಣಗೊಳ್ಳಲಿದೆ. ಈ ರಾಷ್ಟ್ರೀಯ ಸಾಂಸ್ಕೃತಿಕ ಹಬ್ಬಕ್ಕಾಗಿ ವಿದ್ಯಾಗಿರಿ ಸರ್ವಾಲಂಕಾರಗೊಂಡು ಸಜ್ಜಾಗಿದೆ. ಇಂದಿನಿಂದ ಭಾನುವಾರದವರೆಗೆ ಆರು ದಿನಗಳ ಮಹಾಮೇಳಗಳ ಜೊತೆ ಸಾಂಸ್ಕೃತಿಕ ರಸದೌತಣ ವಿದ್ಯಾಗಿರಿಯಲ್ಲಿ ಸಿಗಲಿದೆ.ಈ ಬಾರಿ ಡಿ.10ರಿಂದ 14ರವರೆಗೆ ಮೇಳಗಳ ಜೊತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮೇಳೈಸಲಿದ್ದರೆ, ಡಿ.15ರ ಭಾನುವಾರದ ಪೂರ್ಣ ದಿನವನ್ನು ಜನ ಮೇಳಗಳಲ್ಲಿ

ಮೂಡುಬಿದಿರೆ : ಇಂದಿನಿಂದ ಆಳ್ವಾಸ್‌ ವಿರಾಸತ್‌ ವೈಭವ Read More »

error: Content is protected !!
Scroll to Top