ದಕ್ಷಿಣ ಕನ್ನಡ

ಮನೆ ಮನೆಗೆ ಬಂದು ಅನಿಲ ಸುರಕ್ಷತೆಯ ತಪಾಸಣೆ ಕಡ್ಡಾಯವಲ್ಲ | ಜಿಲ್ಲಾಧಿಕಾರಿ ಪ್ರಕಟಣೆ

ಮಂಗಳೂರು: ಎಚ್‌.ಪಿ.ಗ್ಯಾಸ್ ಏಜೆನ್ಸಿಗಳಿಂದ ತೈಲಕಂಪೆನಿಯ ನಿರ್ದೇಶಾನುಸಾರ ಅನಿಲ ಸುರಕ್ಷತೆಯ ತಪಾಸಣೆಯನ್ನು ಗ್ರಾಹಕರ ಸುರಕ್ಷತಾ ದೃಷ್ಟಿಯಿಂದ ಕಡ್ಡಾಯಗೊಳಿಸಿದ್ದು, ಗ್ರಾಹಕರ ಮನೆಗೆ ಬಂದು ಅಡುಗೆ ಅನಿಲ ತಪಾಸಣೆ ನಡೆಸುವುದು ಕಡ್ಡಾಯವಲ್ಲ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಪ್ರಕಟಣೆ ನೀಡಿದ್ದಾರೆ. ಪೆಟ್ರೋಲಿಯಮ್ ಕಂಪೆನಿಯ ಗುರುತು ಚೀಟಿ ಹೊಂದಿರುವ ವ್ಯಕ್ತಿಗಳು ತರಳಿ ಅಡುಗೆ ಕೋಣೆಯಲ್ಲಿ ಗ್ಯಾಸ ಅನ್ನು ಪರಿಶೀಲಿಸಲಿದ್ದು, ಸೇವಾ ಶುಲ್ಕ ರೂ.236 ನ್ನು ತೆರಬೇಕೆಂದೂ, ರಬ್ಬರ್ ಟ್ಯೂಬ್, ಬದಲಾಯಿಸಬೇಕಾದಲ್ಲಿ ರೂ.19೦ ಅನ್ನು  ನೀಡಬೇಕೆಂಬುದಾಗಿ ತಿಳಿಸಲಾಗಿರುತ್ತದೆ. ಈ ರೀತಿಯ ಅನಿಲ ಸುರಕ್ಷತೆಯ ತಪಾಸಣೆಯು […]

ಮನೆ ಮನೆಗೆ ಬಂದು ಅನಿಲ ಸುರಕ್ಷತೆಯ ತಪಾಸಣೆ ಕಡ್ಡಾಯವಲ್ಲ | ಜಿಲ್ಲಾಧಿಕಾರಿ ಪ್ರಕಟಣೆ Read More »

ಎಡನೀರಿನಲ್ಲಿ ಹಿರಿಯರ ಸಮಾವೇಶ, ಕಲಾವಿದರಿಗೆ ಸನ್ಮಾನ

ಎಡನೀರು: ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನವು ಕಳೆದೆರಡು ವರ್ಷಗಳಿಂದ ನಡೆಸುತ್ತಿರುವ  ಸೇವಾ ಚಟುವಟಿಕೆಗಳು ಉದಾತ್ತ  ಭಾವನೆಯಿಂದ ಕೂಡಿದ್ದು ಸಮಾಜಕ್ಕೆ ಧೈರ್ಯವನ್ನು ತುಂಬುವ ಕಾರ್ಯವನ್ನು ಮಾಡುತ್ತಿದೆ. ಪರಿಪಕ್ವ ಮನಸ್ಸಿನ ಹಿರಿಯರು ಸಮಾಜಕ್ಕೆ ಮತ್ತು ಯುವ ಜನಾಂಗಕ್ಕೆ ಮಾರ್ಗದರ್ಶನ ನೀಡುವ ಎಲ್ಲಾ ಕಾರ್ಯಕ್ರಮಗಳಿಗೆ ಮಠದಿಂದ ಸದಾ ಪ್ರೋತ್ಸಾಹವಿದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ತಿಳಿಸಿದರು. ಬಂಟ್ವಾಳ ಮೆಲ್ಕಾರ್ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ವತಿಯಿಂದ ಮಠದ ಸಹಯೋಗದಲ್ಲಿ ಚಾತುರ್ಮಾಸ್ಯ ಸಭಾಂಗಣದಲ್ಲಿ ಜರಗಿದ ಹಿರಿಯರ

ಎಡನೀರಿನಲ್ಲಿ ಹಿರಿಯರ ಸಮಾವೇಶ, ಕಲಾವಿದರಿಗೆ ಸನ್ಮಾನ Read More »

ದ.ಕ.ಭೌತಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ

ಮಂಗಳೂರು : ದ.ಕ ಭೌತಶಾಸ್ತ್ರ ಉಪನ್ಯಾಸಕರ ಶೈಕ್ಷಣಿಕ ಕಾರ್ಯಾಗಾರ ಸರಕಾರಿ ಬಾಲಕಿಯರ ಪಿ.ಯು ಕಾಲೇಜು ಬಲ್ಮಠದಲ್ಲಿ ನಡೆಯಿತು. ದ.ಕ ಜಿಲ್ಲಾ ಪ.ಪೂ. ಕಾಲೇಜುಗಳ ಭೌತಶಾಸ್ತ್ರ ಉಪನ್ಯಾಸಕರ ಸಂಘ, ಪ್ರಾಚಾರ್ಯರ ಸಂಘ(ರಿ) ಮತ್ತು ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, ಬಲ್ಮಠ ಮಂಗಳೂರು ಇದರ ಜಂಟಿ ಸಹಯೋಗದಲ್ಲಿ ಪ್ರತಿ ವರ್ಷದಂತೆ ಈ ವರುಷವು ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಿ ಡಿ ಜಯಣ್ಣ ಮಾನ್ಯ ಉಪನಿರ್ದೇಶಕರು ಇವರು ಭೌತಶಾಸ್ತ್ರದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸುವ

ದ.ಕ.ಭೌತಶಾಸ್ತ್ರ ಉಪನ್ಯಾಸಕರ ಸಂಘದ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ Read More »

ಆ.13: ರಾಮಕುಂಜದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದಿಂದ ಆಟಿಡೊಂಜಿ ದಿನ, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ

ರಾಮಕುಂಜ: ಒಕ್ಕಲಿಗ ಗೌಡ ಸೇವಾ ಸಂಘ ಆಲಂಕಾರು ವಲಯ, ಒಕ್ಕಲಿಗ ಗೌಡ ಸೇವಾ ಸಂಘ ರಾಮಕುಂಜ ಮತ್ತು ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟ ರಾಮಕುಂಜ ಇದರ ಆಶ್ರಯದಲ್ಲಿ ಆಟಿಡೊಂಜಿ ದಿನ ಹಾಗೂ ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ, ಅಭಿನಂದನಾ ಕಾರ್ಯಕ್ರಮ ಆ.13ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ರಾಮಕುಂಜ ಗ್ರಾಮದ ಸಮಾಜ ಬಾಂಧವರಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 11 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ನಿವೃತ್ತ ಮುಖ್ಯಶಿಕ್ಷಕಿ ಚಂದ್ರಾವತಿ

ಆ.13: ರಾಮಕುಂಜದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದಿಂದ ಆಟಿಡೊಂಜಿ ದಿನ, ಸ್ವಸಹಾಯ ಸಂಘಗಳ ವಾರ್ಷಿಕೋತ್ಸವ Read More »

ದಿನದಿಂದ ದಿನಕ್ಕೆ ಕಾವೇರುತ್ತಿರುವ ಸೌಜನ್ಯ ಪ್ರಕರಣ | ಜಿಲ್ಲೆಯಾದ್ಯಂತ  ವಾಹನ ಜಾಥಾ, ಪ್ರತಿಭಟನೆ, ಮೌನ ಮೆರವಣಿಗೆ

ನಿಂತಿಕಲ್ಲು: ಸೌಜನ್ಯ ಕೊಲೆಯಾಗಿ 11 ವರ್ಷ ಕಳೆದರೂ ನೈಜ ಕೊಲೆ ಅಪರಾಧಿಗಳ ಪತ್ತೆಗೆ ಪ್ರತಿಭಟನೆ, ಹಕ್ಕೊತ್ತಾಯಗಳು ದಿನದಿಂದ ದಿನಕ್ಕೆ ಕಾವೇರುತ್ತಿದೆ. ದ.ಕ.ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಲ್ಲಿರುವ ಸಂಘ ಸಂಸ್ಥೆಗಳು, ಸಮುದಾಯಗಳು ನೈಜ ಆರೋಪಿಗಳ ಪತ್ತೆಗಾಗಿ ದೈವ-ದೇವಸ್ಥಾನಗಳಲ್ಲಿ, ಮಠ-ಮಂದಿರಗಳಲ್ಲಿ ಪ್ರಾರ್ಥನೆಗಳನ್ನು ನಡೆಸುತ್ತಿರುವುದಲ್ಲದೆ, ಸೌಜನ್ಯ ಕುಟುಂಬಕ್ಕೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಮೌನ ಮೆರವಣಿಗೆ, ವಾಹನ ಜಾಥಾ, ಪ್ರತಿಭಟನೆಗಳನ್ನು ಹಮ್ಮಿಕೊಳ‍್ಳುತ್ತಿದೆ. ಸಮುದಾಯದವರು ತಾಲೂಕು ಮಟ್ಟದಿಂದ ತೊಡಗಿ ಜಿಲ್ಲಾ ಮಟ್ಟದ ತನಕ ಹಕ್ಕೊತ್ತಾಯದ ಸಭೆಗಳನ್ನು ನಡೆಸುವ ಮೂಲಕ ಮುಂದಿನ ನಡೆಯ ಕುರಿತು ಚರ್ಚೆಗಳನ್ನು ನಡೆಸುತ್ತಿದೆ.

ದಿನದಿಂದ ದಿನಕ್ಕೆ ಕಾವೇರುತ್ತಿರುವ ಸೌಜನ್ಯ ಪ್ರಕರಣ | ಜಿಲ್ಲೆಯಾದ್ಯಂತ  ವಾಹನ ಜಾಥಾ, ಪ್ರತಿಭಟನೆ, ಮೌನ ಮೆರವಣಿಗೆ Read More »

ಸೌಜನ್ಯ ಕೊಲೆ ಪ್ರಕರಣ | ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಾಹನ ಜಾಥಾ-ಬೃಹತ್ ಪ್ರತಿಭಟನೆ | ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸಮೂಹ

ಸುಳ್ಯ: ಸೌಜನ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಆಗ್ರಹಿಸಿ ಸುಳ್ಯ ತಾಲೂಕಿನ ನಿಂತಿಕಲ್ಲಿನಿಂದ ಸುಳ್ಯದ ತನಕದ ಬೃಹತ್ ವಾಹನ ಜಾಥಾ-ಪ್ರತಿಭಟನೆಗೆ ಮಂಗಳವಾರ ಬೆಳಿಗ್ಗೆ ನಿಂತಿಕಲ್ಲು ವೃತ್ತದ ಬಳಿ ಚಾಲನೆ ನೀಡಲಾಯಿತು. ನ್ಯಾಯ ಎಲ್ಲಿದೆ ? ಎಂಬ ಘೋಷ ವಾಕ್ಯದೊಂದಿಗೆ ನಡೆಯುತ್ತಿರುವ ವಾಹನ ಜಾಥಾಕ್ಕೆ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸೌಜನ್ಯ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು.

ಸೌಜನ್ಯ ಕೊಲೆ ಪ್ರಕರಣ | ನೈಜ ಆರೋಪಿಗಳನ್ನು ಪತ್ತೆಹಚ್ಚಿ ಸೌಜನ್ಯ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ವಾಹನ ಜಾಥಾ-ಬೃಹತ್ ಪ್ರತಿಭಟನೆ | ಸಾವಿರಾರು ಸಂಖ್ಯೆಯಲ್ಲಿ ಸೇರಿದ ಜನಸಮೂಹ Read More »

ಸೌಜನ್ಯ ಪ್ರಕರಣ : ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು : ಸಂಚಲನ ಮೂಡಿಸಿದ ವಸಂತ ಬಂಗೇರ ಹೇಳಿಕೆ

ಬೆಳ್ತಂಗಡಿ : ಸೌಜನ್ಯ ಪ್ರಕರಣದಲ್ಲಿ ಸಿಬಿಐ ತನಿಖೆಯಿಂದ ನ್ಯಾಯ ಸಿಗಬಹುದು ಎಂಬ ನಂಬಿಕೆಯಿತ್ತು. ಆದರೆ ಸತ್ಯ ಹೊರಬಂದಿಲ್ಲ, ಸಿಬಿಐ ತನಿಖೆ ಹಳಿ ತಪ್ಪಿದ ವಿಚಾರ ಆಗಲೇ ಗೊತ್ತಾಗಿತ್ತು. ತನಿಖೆಯಲ್ಲಿ ಏನಾಯಿತು ಎಂಬುದು ಗೊತ್ತಿದೆ. ಅದನ್ನು ಈಗ ಹೇಳುವುದಿಲ್ಲ. ಆದರೆ ಒಂದಲ್ಲ ಒಂದು ದಿನ ಅದಕ್ಕೆ ಕಾಲ ಬರುತ್ತೆ. ಯಾರು ಇದನ್ನು ತಪ್ಪಿಸಿದ್ದಾರೆ, ಯಾರು ಅನ್ಯಾಯ ಮಾಡಿದ್ದಾರೆ, ಯಾರು ತೊಂದರೆ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು. ಇಲ್ಲವೆಂದರೆ ಎಲ್ಲವನ್ನೂ ಹೇಳುತ್ತೇನೆ, ನನ್ನ ಜೀವನದ ಅಂತ್ಯದೊಳಗೆ

ಸೌಜನ್ಯ ಪ್ರಕರಣ : ಎಲ್ಲಿಯಾದರೂ ನನ್ನನ್ನು ಕೊಂದರೆ ಮುಗಿಯಿತು : ಸಂಚಲನ ಮೂಡಿಸಿದ ವಸಂತ ಬಂಗೇರ ಹೇಳಿಕೆ Read More »

ಸೌಜನ್ಯ ನೈಜ ಕೊಲೆ ಆರೋಪಿಗಳ ಪತ್ತೆಗಾಗಿ ಕಾರಿಂಜೇಶ್ವರ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ

ಬಂಟ್ವಾಳ : ಸೌಜನ್ಯರನ್ನು ಕ್ರೂರವಾಗಿ ಅತ್ಯಾಚಾರ ಮಾಡಿದ ನೈಜ ಆರೋಪಿಗಳಿಗೆ ಶಿಕ್ಷೆಯಾಗಲೆಂದು ವಿಶ್ವಹಿಂದೂಪರಿಷದ್ ಭಜರಂಗದಳ ಬಂಟ್ವಾಳ ಪ್ರಖಂಡ ವತಿಯಿಂದ ಕಾರಣಿಕ ಕ್ಷೇತ್ರ ಕಾರಿಂಜೇಶ್ವರ ಸನ್ನಿದಿಯಲ್ಲಿ ಸೋಮವಾರ ಸಾಮೂಹಿಕ  ಪ್ರಾರ್ಥನೆ ಮಾಡಲಾಯಿತು. ನೈಜ ಆರೋಪಿಗಳಿಗೆ  ಕಾನೂನು ಶಿಕ್ಷೆ ಆಗಲಿ  ಆದರೂ ದೈವ ದೇವರ ಮೇಲೆ ನಂಬಿಕೆ ಇರಿಸಿದವರು ನಾವು ತಪ್ಪು ಮಾಡಿದವರಿಗೆ ಕಾನೂನಿನಲ್ಲಿ ತಪ್ಪಿಸಿಕೊಂಡರು ಕಾರ್ಣಿಕ ಕ್ಷೇತ್ರವಾದ ಕಾರಿಂಜೇಶ್ವರ ದೇವರ ಅನುಗ್ರಹದಿಂದ ನಿಜವಾದ ಆರೋಪಿಗಳು ಯಾರೇ ಆಗಿರಲಿ ಅವರಿಗೆ ಹುಚ್ಚು ಹಿಡಿದು ಅವರೇ ಆರೋಪಿಗಲೆಂದು ಸಮಾಜಕ್ಕೆ ಆದಷ್ಟು ಬೇಗ

ಸೌಜನ್ಯ ನೈಜ ಕೊಲೆ ಆರೋಪಿಗಳ ಪತ್ತೆಗಾಗಿ ಕಾರಿಂಜೇಶ್ವರ ಕ್ಷೇತ್ರದಲ್ಲಿ ಸಾಮೂಹಿಕ ಪ್ರಾರ್ಥನೆ Read More »

ಬಹುಮಹಡಿಯಿಂದ ಹಾರಿ ಉದ್ಯಮಿ ಆತ್ಮಹತ್ಯೆ

ಮಂಗಳೂರು: ಮಂಗಳೂರಿನ ಉದ್ಯಮಿಯೊಬ್ಬರು ಬಹುಮಹಡಿ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಂಗಳೂರಿನ ಬೆಂದೂರುವೆಲ್‍ ನಲ್ಲಿ ಈ ಘಟನೆ ನಡೆದಿದ್ದು, ಮೋಹನ್ ಅಮೀನ್ ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಈ ಕುರಿತು ಕದ್ರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಹುಮಹಡಿಯಿಂದ ಹಾರಿ ಉದ್ಯಮಿ ಆತ್ಮಹತ್ಯೆ Read More »

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನ ಪತ್ತೆ ಹಚ್ಚುವಂತೆ ಆಗ್ರಹ | ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಪತ್ರಿಕಾಗೋಷ್ಠಿ

ಮಂಗಳೂರು : ಉಜಿರೆಯಲ್ಲಿ 2011ರಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಎಚ್ಚರಿಸಿದೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಒಕ್ಕಲಿಗರ ಯಾನೆ  ಗೌಡರ ಸೇವಾ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ. ಮಾತನಾಡಿ, ಸೌಜನ್ಯ ಕೊಲೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿ ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಪ್ರಕರಣದ ನೈಜ ಆರೋಪಿಗಳು ಯಾರು

ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ನೈಜ ಆರೋಪಿಗಳನ್ನ ಪತ್ತೆ ಹಚ್ಚುವಂತೆ ಆಗ್ರಹ | ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದಿಂದ ಪತ್ರಿಕಾಗೋಷ್ಠಿ Read More »

error: Content is protected !!
Scroll to Top