ವಿದ್ಯುತ್ ಕಳ್ಳತನ : ಗುತ್ತಿಗೆದಾರ ಸಹಿತ ಬಳಕೆದಾರನ ಮೇಲೆ ಪ್ರಕರಣ ದಾಖಲು
ಸವಣೂರು: ವ್ಯಕ್ತಿಯೊಬ್ಬರು ವಿದ್ಯುತ್ ಕಳ್ಳತನ ಮಾಡಿರುವುದನ್ನು ಮೆಸ್ಕಾಂ ಜಾಗೃತ ದಳದ ಸಿಬ್ಬಂದಿಗಳು ಕಡಬ ತಾಲೂಕು ಸವಣೂರು ಗ್ರಾಮದ ಕಣಿಮಜಲು ಎಂಬಲ್ಲಿ ಪತ್ತೆಹಚ್ಚಿದ್ದಾರೆ. ಅಬ್ದುಲ್ ಆಸೀಫ್ ರೆಂಜಾಲಾಡಿ ಎಂಬವರ ತೋಟದಲ್ಲಿ ವಿದ್ಯುತ್ ಕಳ್ಳತನ ಮಾಡಿರುವುದರ ಕುರಿತು ಖಚಿತ ಮಾಹಿತಿ ಮೇರೆಗೆ ಮಂಗಳೂರು ಮೆಸ್ಕಾಂ ಜಾಗೃತದಳ ಸಿಬ್ಬಂದಿಗಳು ಪತ್ತೆ ಹಚ್ಚಿದ್ದಾರೆ. ವಿದ್ಯುತ್ ಕಂಬ ಅಳವಡಿಸಿ ಅನಧಿಕೃತವಾಗಿ ಸಂಪರ್ಕ ನೀಡಿದ ಗುತ್ತಿಗೆದಾರ ಬೈಟ್ ಪವರ್ ಪ್ಲಸ್ ತಾಜುದ್ದೀನ್ ಕೂರತ್ ಹಾಗೂ ಅಬ್ದುಲ್ ಆಸೀಫ್ ರೆಂಜಲಾಡಿಯವರ ಮೇಲೆ ಪ್ರಕರಣ ದಾಖಲಾಗಿದೆ.
ವಿದ್ಯುತ್ ಕಳ್ಳತನ : ಗುತ್ತಿಗೆದಾರ ಸಹಿತ ಬಳಕೆದಾರನ ಮೇಲೆ ಪ್ರಕರಣ ದಾಖಲು Read More »










