ವೃತ್ತಿ ಜೀವನದ ಬಿಝಿ ಶೆಡ್ಯೂಲ್ ನಲ್ಲೂ ಕ್ರೀಡಾ ಕ್ಷೇತ್ರಕ್ಕೆ ಸಮಯ ಮೀಸಲು | ಎರಡನೇ ಬಾರಿ ರಾಷ್ಟ್ರ,ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾದ ಕೋಡಿಂಬಾಳದ ಮಣಿಕಂಠನ್
ಸುಳ್ಯ: ತನ್ನ ವೃತ್ತಿ ಜೀವನದ ಬಿಝಿ ಶೆಡ್ಯೂಲ್ ಮಧ್ಯೆಯೂ ತನ್ನ ಆಸಕ್ತಿಯ ಕ್ರೀಡಾ ಕ್ಷೇತ್ರಕ್ಕೆ ಒಂದಿಷ್ಟು ಸಮಯವನ್ನು ಮೀಸಲಿಡುವ ಈ ಇಂಜಿನಿಯರ್ ಎರಡನೇ ಬಾರಿಯೂ ರಾಷ್ಟ್ರಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ. ಸುಳ್ಯದ ಇಂಜಿನಿಯರ್ ಮಣಿಕಂಠನ್ ಸ್ಪೋರ್ಟ್ಸ್ ಇಂಜಿನಿಯರಿಂಗ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸುಳ್ಯ ಉಪವಿಭಾಗದಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಮಣಿಕಂಠನ್ ಬಾಲ್ಯದಿಂದಲೇ ಕ್ರೀಡಾಪಟು. ಸರಕಾರಿ ಹುದ್ದೆಯಲ್ಲಿದ್ದರೂ ತನ್ನ ಕ್ರೀಡಾ ಅಸಕ್ತಿಯನ್ನು ಮುಂದುವರಿಸುತ್ತಿರುವ ರಾಜ್ಯಮಟ್ಟದ ಸರಕಾರಿ ನೌಕರರ ಕ್ರೀಡಾಕೂಟದಲ್ಲಿ […]