ದಕ್ಷಿಣ ಕನ್ನಡ

ಮಾಣಿ ಶ್ರೀರಾಮಚಂದ್ರಾಪುರ ಮಠದ ಗುಡ್ಡಕ್ಕೆ  ಬೆಂಕಿ ಅವಘಡ

ಬಂಟ್ವಾಳ: ತಾಲೂಕಿನ ಮಾಣಿ ಪೆರಾಜೆಯಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಗುಡ್ಡದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಈ ಹಿನ್ನಲೆ ಮೂರು ವರ್ಷಗಳ ಹಿಂದೆ ನೆಟ್ಟಿದ್ದ ಸುಮಾರು 1,000 ಕೋಕಂ ಸಸಿಗಳು ಸುಟ್ಟೋಗಿದೆ ಎನ್ನಲಾಗಿದೆ. ಸ್ಥಳೀಯರು ನೀರು ಸುರಿದು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಆದರೆ ಹೊತ್ತಿಕೊಂಡ ಬೆಂಕಿ ನಂದಿ ಹೋಗಲಿಲ್ಲ ಎನ್ನಲಾಗಿದೆ. ತೀವ್ರ ಶಾಖದಿಂದಾಗಿ ಬೆಂಕಿ ಬೆಟ್ಟದಾದ್ಯಂತ ಹರಡಿದೆ. ಬಳಿಕ  ಬಂಟ್ವಾಳ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾದರು. ಬೆಂಕಿಯಲ್ಲಿ ಸುಮಾರು 50 ಹಣ್ಣು ಬಿಡುವ […]

ಮಾಣಿ ಶ್ರೀರಾಮಚಂದ್ರಾಪುರ ಮಠದ ಗುಡ್ಡಕ್ಕೆ  ಬೆಂಕಿ ಅವಘಡ Read More »

ಫೇಸ್‍ ಬುಕ್‍ನಲ್ಲಿ ಷೇರ್ ಟ್ರೇಡಿಂಗ್‍ ಜಾಹಿರಾತು ಮೂಲಕ ವಂಚನೆ | 38 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

ಮಂಗಳೂರು: ಷೇರು ಟ್ರೇಡಿಂಗ್ ಕುರಿತಾಗಿ ಫೇಸ್‌ಬುಕ್‌ನಲ್ಲಿ ಬಂದ ಜಾಹೀರಾತನ್ನು ನಂಬಿದ ವ್ಯಕ್ತಿಯೋರ್ವ 38,53,961 ರೂ. ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಈ ಬಗ್ಗೆ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೇಸ್‌ಬುಕ್‌ನಲ್ಲಿ ಬಂದ ಲಿಂಕ್‍ ನಲ್ಲಿ ವೈಯಕ್ತಿಕ ಮಾಹಿತಿಯನ್ನು  ತಿಳಿಸಿದ ಬಳಿಕ ಅಪರಿಚಿತ ವ್ಯಕ್ತಿಯೋರ್ವ ಕರೆ ಮಾಡಿ ಷೇರು ಟ್ರೇಡಿಂಗ್‌ನಲ್ಲಿ ನೋಂದಣಿ ಮಾಡಲು 21 ಸಾವಿರ ರೂ. ಹಣ ವರ್ಗಾವಣೆ ಮಾಡುವಂತೆ ಹೇಳಿದ್ದಾನೆ. ವಂಚಕ ಕಳುಹಿಸಿದ ಯುಪಿಐ ಐಡಿಗಳಿಗೆ ಹಣವನ್ನು ಪಾವತಿಸಿದ್ದಾನೆ. ಬಳಿಕ ಟ್ರೇಡಿಂಗ್ ಕಂಪೆನಿಯವರು ಕರೆ ಮಾಡಿ

ಫೇಸ್‍ ಬುಕ್‍ನಲ್ಲಿ ಷೇರ್ ಟ್ರೇಡಿಂಗ್‍ ಜಾಹಿರಾತು ಮೂಲಕ ವಂಚನೆ | 38 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ Read More »

ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ನಾಪತ್ತೆ

ಕಡಬ: ಸಾರಣೆ ಕೆಲಸಕ್ಕೆಂದು ಹೋದ ವ್ಯಕ್ತಿಯೋರ್ವರು ನಾಪತ್ತೆಯಾದ ಘಟನೆ ಕಡಬದಲ್ಲಿ ನಡೆದಿದೆ. ಈ ಕುರಿತಾಗಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ಕಡಬ ತಾಲೂಕು ಬಳ್ಳ ಗ್ರಾಮದ ಜೋಗಿ ಮನೆ ಚೆನ್ನಕೇಶವ ಜೋಗಿ (61) ಎಂದು ಪತ್ತೆಹಚ್ಚಲಾಗಿದೆ. ಮಾ.11 ರಂದು ತನ್ನ ಮನೆಯಿಂದ ಕೋಡಿಂಬಾಳಕ್ಕೆ ಸಾರಣೆ ಕೆಲಸಕ್ಕೆ ಹೋದವರು ತಿರುಗಿ ಬರಲಿಲ್ಲ. ಇವರ ಬಳಿ ಇದ್ದ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮನೆಯಿಂದ ಹೊರ ಹೋಗುವ ವೇಳೆ ಉದ್ದ ತೋಳಿನ ಹಸಿರು

ಕೆಲಸಕ್ಕೆ ಹೋದ ವ್ಯಕ್ತಿಯೋರ್ವ ನಾಪತ್ತೆ Read More »

ಆನ್‌ಲೈನ್ ಮೂಲಕ  ಬಡಜನರ ಬ್ಯಾಂಕ್‍ ಖಾತೆ ವಂಚನೆ : ಇಬ್ಬರು ಆರೋಪಿಗಳ ಬಂಧನ

ಮಂಗಳೂರು : ಆನ್‌ಲೈನ್ ವಂಚನೆಯ ಮೂಲಕ  ಬಡ ಜನರ ಬ್ಯಾಂಕ್ ಖಾತೆಗಳನ್ನು ದುರುಪಯೋಗಿಸುತ್ತಿದ್ದ  ಇಬ್ಬರು ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿಯ ತಹಸೀಲ್ದಾರ್ ಗಲ್ಲಿಯ ಅವಿನಾಶ್ ಸುತಾರ್ (28), ರಾಮದೇವ ಗಲ್ಲಿಯ ಅನೂಪ್ ಕಾರೇಕರ್ (42) ಬಂಧಿತ ಆರೋಪಿಗಳು. ದಕ್ಷಿಣ ಕನ್ನಡ ಸೈಬರ್ ಕ್ರೈಂ ಪ್ರಕರಣದ ತನಿಖೆ ವೇಳೆ ಆರೋಪಿಗಳ ಪ್ಲಾನ್ ತಿಳಿದು ಬಂದಿದೆ. ಮುಗ್ಧ ಜನರ ಬ್ಯಾಂಕ್ ಖಾತೆಯೇ ಇವರ ಗುರಿಯಾಗಿತ್ತು. ಆರೋಪಿಗಳು ಅಮಾಯಕರಿಗೆ ಚಿಲ್ಲರೆ ಹಣ ನೀಡಿ ಬ್ಯಾಂಕ್ ಖಾತೆ ತೆರೆಯಲು

ಆನ್‌ಲೈನ್ ಮೂಲಕ  ಬಡಜನರ ಬ್ಯಾಂಕ್‍ ಖಾತೆ ವಂಚನೆ : ಇಬ್ಬರು ಆರೋಪಿಗಳ ಬಂಧನ Read More »

ಜೈಲಿನ ಮೊಬೈಲ್‌ ಜಾಮರ್‌ನಿಂದ ಪರಿಸರದ ನಾಗರಿಕರಿಗೆ ನೆಟ್‌ವರ್ಕ್‌ ಸಮಸ್ಯೆ

ನೆಟ್‌ವರ್ಕ್‌ ಇಲ್ಲದೆ ತುರ್ತು ಸಂದರ್ಭದಲ್ಲಿ ಉಂಟಾದ ಸಮಸ್ಯೆಯನ್ನು ವಿವರಿಸಿದ್ದಾರೆ ಖ್ಯಾತ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್‌ ಮಂಗಳೂರು: ಜೈಲಿನಲ್ಲಿರುವ ಕೈದಿಗಳು ಮೊಬೈಲ್‌ ಫೋನ್‌ ಬಳಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜೈಲಿನೊಳಗೆ ಜಾಮರ್‌ಗಳನ್ನು ಜೈಲು ಅಧಿಕಾರಿಗಳು ಅಳವಡಿಸುತ್ತಾರೆ. ಆದರೆ ಈ ಜಾಮರ್‌ಗಳು ಜೈಲಿನ ಸುತ್ತುಮುತ್ತಲಿನ ಸಮಾರು 1 ಕಿಲೋಮೀಟರ್‌ ವ್ಯಾಪ್ತಿಯಲ್ಲಿರುವ ಮೊಬೈಲ್‌ಗಳ ನೆಟ್‌ವರ್ಕ್‌ ಸಂಪರ್ಕವನ್ನು ತೀವ್ರವಾಗಿ ಬಾಧಿಸುತ್ತವೆ. ಜನರು ನಿತ್ಯ ಮೊಬೈಲ್‌ ನೆಟ್‌ವರ್ಕ್‌ ಇಲ್ಲದೆ ಪರದಾಡಬೇಕಾಗುತ್ತದೆ. ಇದು ಕೆಲವು ತುರ್ತು ಸಂದರ್ಭದಲ್ಲಿ ಭಾರಿ ಅನಾಹುತಗಳಿಗೆ ಎಡೆಮಾಡಿಕೊಡಬಹುದು. ಇಂಥ ಒಂದು ಪರಿಸ್ಥಿಯನ್ನು

ಜೈಲಿನ ಮೊಬೈಲ್‌ ಜಾಮರ್‌ನಿಂದ ಪರಿಸರದ ನಾಗರಿಕರಿಗೆ ನೆಟ್‌ವರ್ಕ್‌ ಸಮಸ್ಯೆ Read More »

ಶರವೂರಿನಲ್ಲಿ ಕೌಶಿಕ ಚರಿತ್ರೆ ತಾಳಮದ್ದಳೆ

ಶರವೂರು : ಶ್ರೀ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ಇದರ ವತಿಯಿಂದ ದಿನಾಂಕ 22/03/2025 ರಂದು ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ  ಸೇವಾರೂಪದ ಕೌಶಿಕ ಚರಿತ್ರೆ  ತಾಳಮದ್ದಳೆ  ನಡೆಯಿತು. ಭಾಗವತರಾಗಿ  ಮಹೇಶ್ ಕನ್ಯಾಡಿ, ಗೋಪಾಲ ಭಟ್ ನೈಮಿಷ, ಸುಬ್ರಹ್ಮಣ್ಯ ರಾವ್ ಶರವೂರು, ಕುಸುಮಾಕರ ಆಚಾರ್ಯ ಹಳೆನೇರೆಂಕಿ. ಹಿಮ್ಮೇಳದಲ್ಲಿ ಪದ್ಮರಾಜ ತಂತ್ರಿ, ಭಾಸ್ಕರ ಕೋಳ್ಯೂರು, ಚಂದ್ರ ದೇವಾಡಿಗ, ಶಿಕಿನ್ ಶರ್ಮ ಶರವೂರು,ಚಕ್ರತಾಳದಲ್ಲಿ ಸುರೇಂದ್ರ ಭಟ್ ಕಳಸ ಮತ್ತುಅರ್ಥಧಾರಿಗಳಾಗಿ

ಶರವೂರಿನಲ್ಲಿ ಕೌಶಿಕ ಚರಿತ್ರೆ ತಾಳಮದ್ದಳೆ Read More »

ಪಿಕ್ಅಪ್ ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತ್ಯು

ಬಂಟ್ವಾಳ : ತುಂಬೆ ಜಂಕ್ಷನ್ ಬಳಿಯ ಹೆದ್ದಾರಿಯಲ್ಲಿ ಪಿಕ್ಅಪ್ ರಸ್ತೆ ದಾಟುತ್ತಿದ್ದ ವ್ಯಕ್ತಿಯೋರ್ವನಿಗೆ ವಾಹನ ಢಿಕ್ಕಿಯಾಗಿ ಮೃತ ಪಟ್ಟ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿ ತುಂಬೆ ನಿವಾಸಿ ಮಹಾಬಲ (47) ಎನ್ನಲಾಗಿದೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಕ್ಅಪ್ ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತ್ಯು Read More »

ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರಿಗೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡಬೇಕು : ಡಿ.ಬಿ.ಬಾಲಕೃಷ್ಣ

ಸುಬ್ರಹ್ಮಣ್ಯ: ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರು ಹಾಗೂ ಇವರ ಪೂರ್ವಿಕರು ಶ್ರೀ ಕ್ಷೇತ್ರಕ್ಕೆ ಸಲ್ಲಿಸಿದ ದೇವತಾ ಹಾಗೂ ಸೇವಾ ಕೈಂಕರ್ಯವನ್ನು ಪರಿಗಣಿಸಿ ಕೂಜುಗೋಡು ಕಟ್ಟೆಮನೆ ಕುಟುಬಂಸ್ಥರಿಗೆ ಹಾಗೂ ಮಲೆಕುಡಿಯ ಜನಾಂಗದವರಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಶ್ರೀ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿಯಲ್ಲಿ ಸದಸ್ಯತ್ವ ಕಲ್ಪಿಸಬೇಕು ಎಂದು ಆಗ್ರಹ ಕೇಳಿ ಬಂದಿದೆ. ಹಿಂದಿನಿಂದಲೂ ಯಾವುದೇ ಸರಕಾರವಿದ್ದಾಗಲೂ ಕೂಜುಗೋಡು ಕುಟುಂಬಸ್ಥರಿಗೆ ಸೇರಿದ ಒಬ್ಬರಿಗೆ ಹಾಗೂ ಮಲೆಕುಡಿಯ ಜನಾಂಗದ ಓರ್ವರಿಗೆ ವ್ಯವಸ್ಥಾಪನಾ ಸಮಿತಿಯಲ್ಲಿ ಸದಸ್ಯತ್ವವನ್ನು ನೀಡುತ್ತಾ ಬಂದಿದೆ. ಅದರಂತೆ ಈ ಭಾರಿಯೂ

ಪ್ರತಿಷ್ಠಿತ ಕೂಜುಗೋಡು ಕಟ್ಟೆಮನೆ ಕುಟುಂಬಸ್ಥರಿಗೆ ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಲ್ಲಿ ಅವಕಾಶ ನೀಡಬೇಕು : ಡಿ.ಬಿ.ಬಾಲಕೃಷ್ಣ Read More »

ಕಾಡಿನ ಮಧ್ಯೆ ಪತ್ತೆಯಾದ ನಾಲ್ಕು ತಿಂಗಳ ಹೆಣ್ಣು ಮಗು | ಮಹಿಳೆಯಿಂದ  ಮಗು ರಕ್ಷಣೆ

ಉಜಿರೆ: ಬೆಳಾಲುವಿನ  ಕೊಡೋಳುಕೆರೆಯಲ್ಲಿ ನಾಲ್ಕು ತಿಂಗಳ ಹೆಣ್ಣು ಮಗುವೊಂದು ಕಾಡಿನ ಮಧ್ಯೆ ಬಿಟ್ಟು ಹೋದ ಘಟನೆ ಇಂದು(ಮಾ.22) ಬೆಳಗ್ಗೆ ನಡೆದಿದೆ. ಬೆಳಾಲು ಗ್ರಾ.ಪಂ ವ್ಯಾಪ್ತಿಯ ಮುಂಡ್ಕೊಟ್ಟು ರಸ್ತೆಯ ಕೊಡೋಳುಕೆರೆ ಕಾಡಿನಲ್ಲಿ ಮಗುವೊಂದು ಅಳುವ ಶಬ್ದ ದಾರಿಹೋಕ ಮಹಿಳೆಗೆ ಕೇಳಿದ್ದು, ತಕ್ಷಣ ಅವರು ಮಗುವನ್ನು ಕಂಡು ಸಂಬಂಧ ಪಟ್ಟವರಿಗೆ ತಿಳಿಸಿದ್ದಾರೆ. ಹಸುಕೂಸು ಆರೋಗ್ಯಕರವಾಗಿದೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಮತ್ತು ಆರೋಗ್ಯ ಇಲಾಖೆ ಧಾವಿಸಿದ್ದು,  ಮಹಿಳಾ ಮತ್ತು ಮಕ್ಕಳ ಇಲಾಖಾ ಬರುವಿಕೆಗಾಗಿ ಕಾಯುತ್ತಿದ್ದಾರೆ ಎಂದು ಬೆಳಾಲು ಗ್ರಾ.ಪಂ.

ಕಾಡಿನ ಮಧ್ಯೆ ಪತ್ತೆಯಾದ ನಾಲ್ಕು ತಿಂಗಳ ಹೆಣ್ಣು ಮಗು | ಮಹಿಳೆಯಿಂದ  ಮಗು ರಕ್ಷಣೆ Read More »

ಮಾ.25-26 : ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ 11ನೇ ವರ್ಷದ ಪ್ರತಿಷ್ಠಾವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ

ಮುಗೇರು : ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಮಾ.25 ಬುಧವಾರದಂದು 11ನೇ ವರ್ಷದ ಪ್ರತಿಷ್ಠಾವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ ಬ್ರಹ್ಮಶ್ರೀ ನೀಲೇಶ್ವರ ಆರೋತ್‍ ಪದ್ಮನಾಭ ತಂತ್ರಿಗಳ ದಿವ್ಯ ನೇತೃತ್ವದಲ್ಲಿ ನಡೆಯಲಿದೆ. ಮಾ.18  ಮಂಗಳವಾರದಂದು ಬೆಳಗ್ಗೆ 10 ಗಂಟೆಗೆ ಗೊನೆ ಮುಹೂರ್ತ ನಡೆದಿದ್ದು, ಮಾ.25 ಮಂಗಳವಾರ ಬೆಳಗ್ಗೆ 6:30ಕ್ಕೆ ಅರ್ಧ ಏಕಾಹ ಭಜನೆ ಪ್ರಾರಂಭ, ಬೆಳಗ್ಗೆ 10 ಗಂಟೆಗೆ ಊರ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ, ಬಳಿಕ ಭಕ್ತಾದಿಗಳಿಂದ ಸ್ವಚ್ಛತೆ ಹಾಗೂ ಅಲಂಕಾರ ಸೇವೆ, ಸಂಜೆ 5

ಮಾ.25-26 : ಮುಗೇರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ 11ನೇ ವರ್ಷದ ಪ್ರತಿಷ್ಠಾವಾರ್ಷಿಕೋತ್ಸವ ಮತ್ತು ಜಾತ್ರೋತ್ಸವ ಹಾಗೂ ಭಜನಾ ಸಂಭ್ರಮ Read More »

error: Content is protected !!
Scroll to Top