ದಕ್ಷಿಣ ಕನ್ನಡ

ಅಕ್ರಮ ಗೋಸಾಗಾಟ : ಇಬ್ಬರ ಬಂಧನ

ಮೂಡುಬಿದಿರೆ: ತಾಲೂಕಿನ ಮೂಡುಕೊಣಾಜೆ ಗ್ರಾಮದ ಕುಕ್ಕುದಕಟ್ಟೆಯಲ್ಲಿ ನಸುಕಿನ ಜಾವ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ ಎರಡು ಹಸು ಹಾಗೂ ಎರಡು ಕರುಗಳನ್ನು ರಕ್ಷಿಸಿದ್ದಾರೆ. ವಾಹನ ಚಾಲಕ ವೇಣೂರಿನ ನಡ್ತಿಕಲ್ಲು ನಿವಾಸಿ ಹೈದರ್‌ ಹಾಗೂ ಪಣಪಿಲದ ಶೈಲೇಶ್ ಮಡಿವಾಳ ಬಂಧಿತ ವ್ಯಕ್ತಿಗಳು. ಗಂಟಾಲ್ಕಟ್ಟೆಯ ಫಾರೂಕ್, ನಿಸಾರ್ ಹಾಗೂ ಪಣಪಿಲದ ಹೆರಾಲ್ಡ್ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಪೊಲೀಸರು ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಕುಮಾರ್ ನೇತೃತ್ವದ ತಂಡ […]

ಅಕ್ರಮ ಗೋಸಾಗಾಟ : ಇಬ್ಬರ ಬಂಧನ Read More »

ನೇಣು ಬಿಗಿದುಕೊಂಡು ಆತ್ಮಹತ್ಯೆ !!

ಉಳ್ಳಾಲ: ನೇಣು ಬಿಗಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಡಿಪು ಬಳಿಯ ಕಾರ್ ಗ್ಯಾರೇಜ್‌ನಲ್ಲಿ ನಡೆದಿದೆ. ಕಿಶೋರ್ (25) ಆತ್ಮಹತ್ಯೆ ಮಾಡಿಕೊಂಡವರು. ಮುಡಿಪುವಿನಲ್ಲಿ ಕಾರು ಗ್ಯಾರೇಜ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಿಶೋರ್‌ ಕಂಕನಾಡಿಯ ಕಾರ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ನ.20 ರಂದು ಕೆಲಸಕ್ಕೆ ಹೋಗಿದ್ದು ತಡವಾದರೂ ಮನೆಗೆ ಬಂದಿರಲಿಲ್ಲ. ಮನೆಯವರು, ಸಂಬಂಧಿಕರ ಹುಡುಕಾಡಿದರೂ ಕಿಶೋರ್ ಪತ್ತೆಯಾಗಿರಲಿಲ್ಲ. ಕೊನೆಗೆ ಕಿಶೋರ್‌ ಪ್ರತಿದಿನ ಕೆಲಸ ಬಿಟ್ಟು ಕೆಲ ಹೊತ್ತು ಕುಳಿತುಕೊಳ್ಳುತ್ತಿದ್ದ ಮುಡಿಪುವಿನ ಗ್ಯಾರೇಜ್‌ ನಲ್ಲಿ ಹುಡುಕಾಟ

ನೇಣು ಬಿಗಿದುಕೊಂಡು ಆತ್ಮಹತ್ಯೆ !! Read More »

ಸುಬ್ರಹ್ಮಣ್ಯದಲ್ಲಿ ನೃತ್ಯೋಪಾಸನಾ ತಂಡದಿಂದ ನೃತ್ಯೋಹಂ ನೃತ್ಯ ವೈಭವ

ಸುಬ್ರಹ್ಮಣ್ಯ: ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಸುಬ್ರಹ್ಮಣ್ಯ ಶಾಖೆಯ ಕಲಾತಂಡದಿಂದ ನೃತ್ಯೋಹಂ ಭರತನಾಟ್ಯ ಶನಿವಾರ ಕುಕ್ಕೆ ಸುಬ್ರಹ್ಮಣ್ಯ ವನದುರ್ಗಾದೇವಿ ಸಭಾಂಗಣದಲ್ಲಿ ನಡೆಯಿತು. ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಶ್ರೀ ಸುಬ್ರಹ್ಮಣ್ಯ ಮಠದ ಸುದರ್ಶನ ಜೋಯಿಸರು, ಸನಾತನ ಸಾಂಸ್ಕೃತಿಕ ಕಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಶಾಸ್ತ್ರೀಯ ಕಾರ್ಯಕ್ರಮಗಳು ಅನಿವಾರ್ಯ. ಪ್ರಸ್ತುತ ಪಾಶ್ಚಾತ್ಯ  ನೃತ್ಯ ಹಾಗೂ ಸೀರಿಯಲ್’ಗಳ ಭರಾಟೆಯ ನಡುವೆ ಇಂತಹ ಕಾರ್ಯಕ್ರಮಗಳು ಇನ್ನೂ ಹೆಚ್ಚು ನಡೆಯಬೇಕು ಎಂದು ಆಶಿಸಿದರು. ಇದೇ ಸಂದರ್ಭ

ಸುಬ್ರಹ್ಮಣ್ಯದಲ್ಲಿ ನೃತ್ಯೋಪಾಸನಾ ತಂಡದಿಂದ ನೃತ್ಯೋಹಂ ನೃತ್ಯ ವೈಭವ Read More »

ಶಾಸಕ ಶ್ರೀಮಂತರ್ ಗೌಡ ಅವರಿಗೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನ ಶಿಲಾನ್ಯಾಸದ ಆಮಂತ್ರಣ

ಕಡಬ: ಇಲ್ಲಿನ ಒಕ್ಕಲಿಗ ಗೌಡ ಸೇವಾ ಸಂಘದ ಪದಗ್ರಹಣ ಹಾಗೂ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸುವಂತೆ ಶಾಸಕ ಶ್ರೀಮಂತರ್ ಗೌಡ ಅವರನ್ನು ಅವರ ಸೋಮವಾರಪೇಟೆಯ ಮನೆಯಲ್ಲಿ ಭೇಟಿಯಾಗಿ ಆಮಂತ್ರಣ ನೀಡಲಾಯಿತು. ಸಂಘ ಕೈಗೊಂಡ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಮಂತರ್ ಗೌಡ ಅವರು, ಮುಂದಿನ ಕೆಲಸಗಳಿಗೆ ಸಂಪೂರ್ಣ ಸಹಕಾರ ಹಾಗೂ ಬೆಂಬಲದ ಭರವಸೆ ನೀಡಿದರು. ಈ ಸಂದರ್ಭ ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು, ಮಂಗಳೂರು ತಾಲೂಕು ಯುವ ಒಕ್ಕಲಿಗ

ಶಾಸಕ ಶ್ರೀಮಂತರ್ ಗೌಡ ಅವರಿಗೆ ಕಡಬ ಒಕ್ಕಲಿಗ ಗೌಡ ಸಮುದಾಯ ಭವನ ಶಿಲಾನ್ಯಾಸದ ಆಮಂತ್ರಣ Read More »

ಟೊಮೇಟೊ ಸಾಗಾಟದ ಟೆಂಪೋ ಪಲ್ಟಿ!!

ಬೆಳ್ತಂಗಡಿ: ಟೊಮೇಟೊ ಸಾಗಾಟದ ಟೆಂಪೋ ಪಲ್ಟಿಯಾದ ಘಟನೆ ಸೋಮವಾರ ರಾತ್ರಿ ಚಾರ್ಮಾಡಿ ಚೆಕ್ ಪೋಸ್ಟ್ ಸಮೀಪದ ವಲಸರಿ ಎಂಬಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ರಸ್ತೆ ಬದಿಯ ಚರಂಡಿಗೆ ಪಲ್ಟಿಯಾಗಿ ಬಿದ್ದಿತು. ಚಿಕ್ಕಮಗಳೂರು ಕಡೆಯಿಂದ ಉಜಿರೆಯತ್ತ ಟೊಮೇಟೊ ಸಾಗಾಟ ಮಾಡಲಾಗುತ್ತಿತ್ತು. ವಾಹನದಲ್ಲಿದ್ದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಸ್ಥಳೀಯರ ಸಹಕಾರದಿಂದ ಉರುಳಿ ಬಿದ್ದ ವಾಹನವನ್ನು ತೆರವು ಮಾಡಲಾಯಿತು.

ಟೊಮೇಟೊ ಸಾಗಾಟದ ಟೆಂಪೋ ಪಲ್ಟಿ!! Read More »

ಕಡಬ ಗೌಡ ಸಮುದಾಯ ಭವನ ಶಿಲಾನ್ಯಾಸದ ಪೂರ್ವಭಾವಿ ಸಭೆ | ಡಿ. 26ರಂದು ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ ಸಹಿತ ಭವ್ಯ ವಾಹನ ಜಾಥಾ, ಹೊರೆಕಾಣಿಕೆ

ಪುತ್ತೂರು: ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಳಕೆಗೆ ಸಿಗುವಂತಹ ಭವನವನ್ನು ನಿರ್ಮಾಣ ಮಾಡುವ ಕನಸು ನನಸಾಗುತ್ತಿದೆ. ಇಂತಹ ಭವನದ ಶಂಕುಸ್ಥಾಪನೆಗೆ ಇನ್ನು ಕೇವಲ 1 ತಿಂಗಳು ಮಾತ್ರ ಇರುವುದು. ಈ ಸಣ್ಣ ಅವಧಿಯಲ್ಲಿ ಸೂಕ್ತ ಕಾರ್ಯಯೋಜನೆ ಸಿದ್ಧಪಡಿಸಿ, ಎಲ್ಲರೂ ಒಂದಾಗಿ ಜಾರಿಗೊಳಿಸಿದರೆ ಯಶಸ್ಸು ಖಂಡಿತಾ ಎಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಬೈಲು ಹೇಳಿದರು. ಕಡಬ ವಲಯ ಸಮುದಾಯ ಭವನದಲ್ಲಿ ಶನಿವಾರ ನಡೆದ ಸುಸಜ್ಜಿತ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭ, ಕಡಬ ತಾಲೂಕು

ಕಡಬ ಗೌಡ ಸಮುದಾಯ ಭವನ ಶಿಲಾನ್ಯಾಸದ ಪೂರ್ವಭಾವಿ ಸಭೆ | ಡಿ. 26ರಂದು ಕೆದಂಬಾಡಿ ರಾಮಯ್ಯ ಗೌಡರ ಸ್ತಬ್ದಚಿತ್ರ ಸಹಿತ ಭವ್ಯ ವಾಹನ ಜಾಥಾ, ಹೊರೆಕಾಣಿಕೆ Read More »

ತೆಂಗಿನ ಮರವನ್ನು ಪೋಷಿಸಿದರೆ ಭವಿಷ್ಯದ ಪೀಳಿಗೆ ಉಳಿಸಲು ಸಾಧ್ಯ | ಸೌತ್ ಕೆನರಾ ತೆಂಗು ರೈತರ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಪ್ರಾದೇಶಿಕ ಕಚೇರಿ ಉದ್ಘಾಟಿಸಿ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ

ಮಂಗಳೂರು: : ಸೌತ್ ಕೆನರಾ ತೆಂಗು ರೈತರ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಪ್ರಾದೇಶಿಕ ಕಚೇರಿ ಉದ್ಘಾಟನಾ ಸಮಾರಂಭ ಗುರುವಾರ ಮರೋಳಿಯಲ್ಲಿ ನಡೆಯಿತು. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠ ಡಾ.ಧರ್ಮಪಾಲನಾಥ ಸ್ವಾಮೀಜಿ ಪ್ರಾದೇಶಿಕ ಕಚೇರಿಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿ, ತೆಂಗಿನ ಮರಗಳು ದೈವಿಕ ಸೃಷ್ಟಿಯಾಗಿದ್ದು, ಮಾಹಿತಿಯ ಕೊರತೆಯಿಂದ ನಾವು ಆಗಾಗ್ಗೆ ಅವುಗಳ ಮೌಲ್ಯವನ್ನು ಕಡಿಮೆ ಮಾಡುತ್ತೇವೆ. ತೆಂಗಿನಕಾಯಿಯು ಹಲವಾರು ಉಪ ಉತ್ಪನ್ನಗಳನ್ನು ನೀಡುತ್ತದೆ. ಯಾವುದೇ ತ್ಯಾಜ್ಯವನ್ನು ಬಿಡುವುದಿಲ್ಲ. ನಾವು ಐದು ವರ್ಷಗಳ ಕಾಲ ತೆಂಗಿನ ಮರಗಳನ್ನು

ತೆಂಗಿನ ಮರವನ್ನು ಪೋಷಿಸಿದರೆ ಭವಿಷ್ಯದ ಪೀಳಿಗೆ ಉಳಿಸಲು ಸಾಧ್ಯ | ಸೌತ್ ಕೆನರಾ ತೆಂಗು ರೈತರ ಉತ್ಪಾದಕ ಕಂಪೆನಿ ಲಿಮಿಟೆಡ್ ನ ಪ್ರಾದೇಶಿಕ ಕಚೇರಿ ಉದ್ಘಾಟಿಸಿ ಡಾ.ಶ್ರೀ ಧರ್ಮಪಾಲನಾಥ ಸ್ವಾಮೀಜಿ Read More »

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!!

ಮಂಗಳೂರು: ಬೆಂಕಿ ತಗುಲಿ ಗಂಭೀರ ಗಾಯಗೊಂಡಿದ್ದ ಹಿರಿಯ ನಾಗರಿಕರೋರ್ವರು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಕೂಳೂರು ಪೊಯ್ಯೇಲು ನಿವಾಸಿ ದಿ. ಮದನಪ್ಪ ಶೆಟ್ಟಿ ಅವರ ಪತ್ನಿ ಸುನೀತಾ ಎಂ. (84) ಮೃತಪಟ್ಟವರು. ನವಂಬರ್ 14ರಂದು ದೇವರ ಕೋಣೆಯಲ್ಲಿಟ್ಟಿದ್ದ ದೀಪದಿಂದ ಸೀರೆಗೆ ಬೆಂಕಿ ಹತ್ತಿಕೊಂಡಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಬೆಂಕಿ ತಗುಲಿ ಹಿರಿಯ ನಾಗರಿಕೆ ಸಾವು!! Read More »

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ

ಮಲ್ಪೆ: ವಿಂಚ್ ಬೋಟ್ ಪ್ಯಾರಾ ಸೈಲಿಂಗ್ ಮಾಡುತ್ತಿದ್ದ ಪ್ರವಾಸಿಗ ಬಾಲಕನೋರ್ವ ಕೆಳಗೆ ಬಿದ್ದು ಗಾಯಗೊಂಡಿರುವ ಘಟನೆ ಮಲ್ಪೆ ಬೀಚ್ನಲ್ಲಿ ಸಂಭವಿಸಿದೆ. ಬೆಂಗಳೂರು ಮೂಲದ ಇಕ್ಯಾನ್ ಚೌಧರಿ (12) ಗಾಯಗೊಂಡ ಬಾಲಕ. 10 ಮೀಟರ್ ಎತ್ತರದಿಂದ ಬೋಟಿಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿದೆ. ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಸುರಕ್ಷತಾ ವೈಫಲ್ಯ: ಪ್ಯಾರಾ ಸೈಲಿಂಗ್’ನಿಂದ ಬಿದ್ದು ಗಾಯಗೊಂಡ ಬಾಲಕ Read More »

ಖ್ಯಾತ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನ

ಮಂಗಳೂರು: ಮಂಗಳೂರಿನ ಖ್ಯಾತ ಯೂರಾಲಜಿಸ್ಟ್ (ಮೂತ್ರಶಾಸ್ತ್ರ ವಿಭಾಗ) ತಜ್ಞರಾಗಿದ್ದ ಕೆಎಂಸಿ ಆಸ್ಪತ್ರೆಯ ವೈದ್ಯ ಡಾ.ಜಿ.ಜಿ. ಲಕ್ಷ್ಮಣ ಪ್ರಭು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. 61 ವರ್ಷದ ಲಕ್ಷ್ಮಣ ಪ್ರಭು ಅವರು ವಾರದ ಹಿಂದೆ ಆಸ್ಪತ್ರೆಯಲ್ಲಿ ಕರ್ತವ್ಯದಲ್ಲಿರುವಾಗಲೇ ಹೃದಯಾಘಾತಕ್ಕೆ ಒಳಗಾಗಿದ್ದರು. ಕೂಡಲೇ ಅವರನ್ನು ತೀವ್ರ ನಿಗಾ ವಿಭಾಗಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಶುಕ್ರವಾರ ಬೆಳಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ನಿಧನ ಹೊಂದಿದ್ದಾರೆ. ಮೂರು ದಶಕಕ್ಕೂ ಹೆಚ್ಚು ಅನುಭವ ಹೊಂದಿದ್ದ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹಲವು ವರ್ಷಗಳ ಕಾಲ ಕೆಎಂಸಿ

ಖ್ಯಾತ ಯೂರಾಲಜಿಸ್ಟ್ ಡಾ. ಜಿ.ಜಿ. ಲಕ್ಷ್ಮಣ ಪ್ರಭು ಹೃದಯಾಘಾತದಿಂದ ನಿಧನ Read More »

error: Content is protected !!
Scroll to Top