ದಕ್ಷಿಣ ಕನ್ನಡ

ಸೈಕಲ್ ಗೆ ಬೈಕ್ ಡಿಕ್ಕಿ

ಬೆಳ್ತಂಗಡಿ:  ಸೈಕಲ್ ಚಲಾಯಿಸಿಕೊಂಡು ಹೋಗುತ್ತಿದ್ದ ಹುಡುಗನಿಗೆ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದಲ್ಲಿ ಸಂಭವಿಸಿದೆ. ಅಬ್ದುಲ್ ಸಮದ್ ಗಾಯಗೊಂಡ ಬಾಲಕ. ಕೆ ಎಚ್ ಅಶ್ರಫ್ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದ್ದು, ಗಾಯಾಳು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೈಕಲ್ ಗೆ ಬೈಕ್ ಡಿಕ್ಕಿ Read More »

ಮದ್ಯದ ಅಮಲಿನಲ್ಲಿ ವಾಹನ ಚಾಲನೆ | ಸಾರ್ವಜನಿಕರ ಆಕ್ರೋಶ

ಸುಳ್ಯ: ಮದ್ಯಪಾನ ಸೇವಿಸಿ ರಾಜ್ಯ ಹೆದ್ದಾರಿಯಲ್ಲಿ ವಾಹನ ಅಡ್ಡಾದಿಡ್ಡಿಯಾಗಿ ಚಲಾಯಿಸಿದ ಘಟನೆ ಸುಳ್ಯದ ಆರಂಬೂರು ಬಳಿ ನಡೆದಿದೆ. ಸುಳ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ವಿಭಾಗದ ಕಾರ್ಯದರ್ಶಿ ನವೀನ್ ಕುಮಾರ್ ಎಂಬವರು ಮದ್ಯಪಾನ ಸೇವಿಸಿ ರಾಜ್ಯ ಹೆದ್ದಾರಿಯಲ್ಲಿ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅರಂಬೂರು ಬಳಿ ರಾಜ್ಯ ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ಸರಕಾರಿ ವಾಹನ ಚಲಾಯಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು ವಾಹನವನ್ನು ಬೆನ್ನಟ್ಟಿ ಅಡ್ಡಗಟ್ಟಿ ವಿಚಾರಿಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ವಾಹನ ಚಲಾಯಿಸುತ್ತಿದ್ದ ವ್ಯಕ್ತಿಯ ಪರಿಚಯ ಕೇಳಿದಾಗ ಕುಡಿದ

ಮದ್ಯದ ಅಮಲಿನಲ್ಲಿ ವಾಹನ ಚಾಲನೆ | ಸಾರ್ವಜನಿಕರ ಆಕ್ರೋಶ Read More »

ಅಪಾರ್ಟ್ಮೆಂಟ್ ನಲ್ಲಿ ಬೆಂಕಿ: ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು!!

ಮಂಗಳೂರು: ಇಲ್ಲಿನ ಅತ್ತಾವರದ ಅಪಾರ್ಟ್‌ ಮೆಂಟೊಂದರಲ್ಲಿ ಮಂಗಳವಾರ ಬೆಳಗ್ಗೆ ನಡೆದ ಆಕಸ್ಮಿಕ ಬೆಂಕಿ ಅನಾಹುತದಲ್ಲಿ ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ‌ಮಾಹಿ ತಿ ನೀಡಿದ್ದಾರೆ. ಮೃತ ಮಹಿಳೆಯನ್ನು ಶಾಹಿನಾ ನುಸ್ಬಾ (58) ಎಂದು ಗುರುತಿಸಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮುಂಜಾನೆ 4 ಗಂಟೆಯ ಹೊತ್ತಿಗೆ ಬೆಂಕಿ ಕಾಣಿಸಿಕೊಂಡಿದ್ದು, ಐವರು ಮಕ್ಕಳ ಸಹಿತ ಎಂಟು ಮಂದಿ ಅಪಾಯದಿಂದ ಪಾರಾಗಿದ್ದಾರೆ. ಅನಾರೋಗ್ಯದಿಂದಾಗಿ ಬೆಡ್ ರೂಮ್ ನಲ್ಲೇ ಇದ್ದ ಮಹಿಳೆ, ದಟ್ಟ ಹೊಗೆಯಿಂದಾಗಿ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ತಿಳಿದು

ಅಪಾರ್ಟ್ಮೆಂಟ್ ನಲ್ಲಿ ಬೆಂಕಿ: ಗಂಭೀರ ಗಾಯಗೊಂಡಿದ್ದ ಮಹಿಳೆ ಮೃತ್ಯು!! Read More »

ಅತ್ತಾವರ ಫ್ಲ್ಯಾಟ್’ನಲ್ಲಿ ಬೆಂಕಿ: ಮಹಿಳೆ ಗಂಭೀರ!

ಮಂಗಳೂರು: ನಗರದ ಅತ್ತಾವರದಲ್ಲಿ ವಸತಿ ಸಮುಚ್ಚಯದ 12ನೇ ಮಹಡಿಯಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಮಹಿಳೆಯೋರ್ವರು ಗಂಭೀರ ಗಾಯಗೊಂಡಿದ್ದಾರೆ. ಒಂದು ಫ್ಲ್ಯಾಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಲ್ಲಿ ಒಂಭತ್ತು ಮಂದಿ ಇದ್ದರೆಂದು ತಿಳಿದು ಬಂದಿದೆ. ಗಂಭೀರ ಸ್ಥಿತಿಯಲ್ಲಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾಂಡೇಶ್ವರ ಅಗ್ನಿಶಾಮಕ ದಳ ಕಾರ್ಯಾಚರಣೆ ನಡೆಸಿದೆ.

ಅತ್ತಾವರ ಫ್ಲ್ಯಾಟ್’ನಲ್ಲಿ ಬೆಂಕಿ: ಮಹಿಳೆ ಗಂಭೀರ! Read More »

ಬೈಕ್‍ನಲ್ಲಿ ತೆರಳುತ್ತಿದ್ದ ಭಿನ್ನ ಕೋಮಿನ ಜೋಡಿ | ಹಲ್ಲೆಗೆ ಯತ್ನಿಸಿದ ಇಬ್ಬರ ಬಂಧನ

ಭಿನ್ನಕೋಮಿನ ಯುವಕ ಹಾಗೂ ಯುವತಿ ಬೈಕ್’ನಲ್ಲಿ ಹೋಗುತ್ತಿದ್ದ ವೇಳೆ, ಹಿಂಬಾಲಿಸಿಕೊಂಡು ಹೋದ ತಂಡ ಹಲ್ಲೆಗೆ ಮುಂದಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಕ್ಷಯ್ ರಾವ್ ಮತ್ತು ಶಿಬಿನ್ ಪಡಿಕ್ಕಲ್ ಬಂಧಿತರು. ಸೋಮವಾರ ರಾತ್ರಿ 8 ಗಂಟೆಯ ವೇಳೆಗೆ ಮಂಗಳೂರಿನ ಮುಳಿಹಿತ್ಲು ಎಂಬಲ್ಲಿನ ಸ್ಪೋರ್ಟ್ಸ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಭಿನ್ನಕೋಮಿನ ಜೋಡಿ ಬೈಕ್’ನಲ್ಲಿ ಜೊತೆಯಾಗಿ ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ ಎನ್ನಲಾಗಿದೆ. ಮೊಬೈಲ್ ರಿಪೇರ್ ಮಾಡಿಸಿಕೊಂಡು ನಗರದ ಮಿಲಾಗ್ರಿಸ್ ಚರ್ಚ್ ಕಡೆಯಿಂದ ಭಗಿನಿ ಸಮಾಜದ ಕಡೆಗೆ ಬೈಕ್ ನಲ್ಲಿ ತೆರಳುತ್ತಿದ್ದರು.

ಬೈಕ್‍ನಲ್ಲಿ ತೆರಳುತ್ತಿದ್ದ ಭಿನ್ನ ಕೋಮಿನ ಜೋಡಿ | ಹಲ್ಲೆಗೆ ಯತ್ನಿಸಿದ ಇಬ್ಬರ ಬಂಧನ Read More »

ನೆರಿಯದಲ್ಲಿ ಕಾಡಾನೆ ದಾಳಿ !

ನೆರಿಯ: ನೆರಿಯ ಪೋಸ್ಟ್ ಆಫೀಸ್ ಬಳಿ ಕಾಡಾನೆ ಕಾರೊಂದರ ಮೇಲೆರಗಿದ ಘಟನೆ ನಡೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಆರು ಜನರು ಪ್ರಯಾಣಿಸುತ್ತಿದ್ದ ಆಲ್ಟೋ ಕಾರಿನ ಮೇಲೆ ಆನೆ ದಾಳಿ ನಡೆಸಿದೆ ಎನ್ನಲಾಗಿದ್ದು, ಪುತ್ತೂರು ಮೂಲದ ಅಬ್ದುಲ್ ರೆಹಮಾನ್ (40) ಹಾಗೂ ನಾಸಿಯಾ (30) ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ. ಕಾರು ಸಂಪೂರ್ಣ ಜಖಂಗೊಂಡಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ.

ನೆರಿಯದಲ್ಲಿ ಕಾಡಾನೆ ದಾಳಿ ! Read More »

ದೇವಸ್ಥಾನದಂತಿರುವ ಸಮಾಜದಲ್ಲಿ ಪ್ರತಿಯೊಬ್ಬರೂ ಕರ್ತವ್ಯಮುಖರಾಗಿ

ಕಡಬ: ಸಮಾಜ ದೇವಸ್ಥಾನದಂತೆ. ಇಲ್ಲಿ ಪ್ರತಿಯೊಬ್ಬರಿಗೂ ಕರ್ತವ್ಯ ಇದೆ. ಆ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಹೇಳಿದರು. ಕಡಬ ಒಕ್ಕಲಿಗ ಗೌಡ ಸಮುದಾಯ ಭವನ ಶಿಲಾನ್ಯಾಸ ಸಮಾರಂಭಕ್ಕೆ ಪೂರ್ವಭಾವಿಯಾಗಿ ಭಾನುವಾರ ವಿಜ್ಞಾಪನಾ ಪತ್ರವನ್ನು ಬಿಡುಗಡೆಗೊಳಿಸಿ, ಸಮುದಾಯದ ಜನಸಂಖ್ಯಾ ಸಮೀಕ್ಷೆ ಹಾಗೂ ಭವನ ನಿರ್ಮಾಣ ಸಹಾಯಾರ್ಥ ದೇಣಿಗೆ ಸಂಗ್ರಹಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ಹಿರಿಯರ ಮಾರ್ಗದರ್ಶನದೊಂದಿಗೆ ಪರಿಶ್ರಮದಿಂದ ಸಮಾಜವನ್ನು ಕಟ್ಟಿ

ದೇವಸ್ಥಾನದಂತಿರುವ ಸಮಾಜದಲ್ಲಿ ಪ್ರತಿಯೊಬ್ಬರೂ ಕರ್ತವ್ಯಮುಖರಾಗಿ Read More »

ಕುಲ್ಕುಂದ ಜಾನುವಾರು ಜಾತ್ರೆ: ಗೋಪೂಜೆ

ಸುಬ್ರಹ್ಮಣ್ಯ: ಕಾರ್ತಿಕ ಹುಣ್ಣಿಮೆ ದಿನ ಕುಲ್ಕುಂದ ಜಾನುವಾರು ಜಾತ್ರೆಯ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದೊಂದಿಗೆ ಕುಲ್ಕುಂದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಗೋ ಪೂಜೆ ಸಾಂಕೇತಿಕವಾಗಿ ನಡೆಯಿತು. ದೇವಸ್ಥಾನದ ಅರ್ಚಕರು ವಿಧಿ ವಿಧಾನದೊಂದಿಗೆ ಗೋಪೂಜೆ ನೆರವೇರಿಸಿದರು. ಬಸವೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಬಸವೇಶ್ವರ ದೇವಸ್ಥಾನದ ಅರ್ಚಕ ಗಣೇಶ್ ದೀಕ್ಷಿತ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ, ವ್ಯವಸ್ಥಾಪನ ಸಮಿತಿ ಸದಸ್ಯ ವನಜ ಭಟ್, ಶೋಭಾ ಗಿರಿಧರ, ಮನೋಜ್, ಶ್ರೀಕುಮಾರ್, ರವಿ ಶೆಟ್ಟಿ

ಕುಲ್ಕುಂದ ಜಾನುವಾರು ಜಾತ್ರೆ: ಗೋಪೂಜೆ Read More »

ಸಮುದ್ರದಲ್ಲಿ ಮೀನಿನ ಕೊರತೆ: ಹಿಂದೆಂದೂ ಕೇಳರಿಯದ ಮತ್ಸ್ಯಕ್ಷಾಮ!! ಮತ್ಸ್ಯ ಸಂತತಿ ಕುಂಠಿತವಾಗಲು ಕಾರಣವೇನು?

ಮಂಗಳೂರು: ಈಗಲೇ ಶೇ. 80ರಷ್ಟು ಬೋಟುಗಳು ಸಮುದ್ರ ದಡದಲ್ಲಿ ಲಂಗರು ಹಾಕುವ ಸ್ಥಿತಿ ನಿರ್ಮಾಣವಾಗಿದೆ. ಸಮುದ್ರದಲ್ಲಿ ಹಿಂದೆಂದೂ ಕಂಡು ಕೇಳರಿಯದ ಮತ್ಸ್ಯಕ್ಷಾಮ ಉಂಟಾಗಿರುವುದೇ ಇದಕ್ಕೆ ಕಾರಣ. ಸಮುದ್ರದಲ್ಲಿ ಮೀನಿನ ಬರ ಎದುರಾಗಿದೆ. ತೀವ್ರ ಮೀನಿನ ಕೊರತೆಯಿಂದಾಗಿ ಮೀನುಗಾರರು ಕಂಗಾಲಾಗಿದ್ದಾರೆ. ಮೀನುಗಾರಿಕೆ ಆರಂಭವಾಗಿ ಮೂರು ತಿಂಗಳಾಗಿದೆಯಷ್ಟೆ. ಅಷ್ಟರಲ್ಲಿ ಕರಾವಳಿಯ ಸಮುದ್ರದಲ್ಲಿ ಮತ್ಸ್ಯಕ್ಷಾಮದ ಭೀತಿ ಎದುರಾಗಿದ್ದು, ಮೀನುಗಾರಿಕೆಯ ಖರ್ಚುವೆಚ್ಚ ಸರಿದೂಗಿಸಲು ಸಾಧ್ಯವಾಗದೆ ಬೋಟುಗಳು ಅವಧಿಗೆ ಮುನ್ನವೇ ಕಡಲ ಕಿನಾರೆಯಲ್ಲಿ ಲಂಗರು ಹಾಕಲು ಆರಂಭಿಸಿವೆ. ಕಳೆದೊಂದು ತಿಂಗಳಿನಿಂದ ಪರ್ಸಿನ್ ಬೋಟ್‌ಗಳು ಸಮುದ್ರಕ್ಕಿಳಿಯುತ್ತಿಲ್ಲ.

ಸಮುದ್ರದಲ್ಲಿ ಮೀನಿನ ಕೊರತೆ: ಹಿಂದೆಂದೂ ಕೇಳರಿಯದ ಮತ್ಸ್ಯಕ್ಷಾಮ!! ಮತ್ಸ್ಯ ಸಂತತಿ ಕುಂಠಿತವಾಗಲು ಕಾರಣವೇನು? Read More »

ಮಂಗಳೂರಿನ ಈ ಸರ್ಕಲ್’ಗೆ ಕ್ಯಾ| ಪ್ರಾಂಜಲ್ ಹೆಸರು!

ಮಂಗಳೂರು: ಕಾಶ್ಮೀರದ ರಜೌರಿಯಲ್ಲಿ ಉಗ್ರರೊಂದಿಗೆ ಹೋರಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೇ ಬಲಿದಾನಗೈದ ಕರುನಾಡಿನ ವೀರಯೋಧ ಕ್ಯಾಪ್ಟನ್ ಪ್ರಾಂಜಲ್ ಅವರ ಹೆಸರನ್ನು ಹೆದ್ದಾರಿ ಮತ್ತು ನಗರ ಸಂಪರ್ಕಿ ಸುವ ಕೊಟ್ಟಾರಚೌಕಿ ಜಂಕ್ಷನ್ ಸರ್ಕಲ್ ಗೆ ಇಡಲಾಗುವುದು ಎಂದು ಶಾಸಕ ಭರತ್ ಶೆಟ್ಟಿ ತಿಳಿಸಿದ್ದಾರೆ. ಕೊಟ್ಟಾರಚೌಕಿಯಲ್ಲಿ ಅಮರ್ ಜವಾನ್ ಥೀಮ್ ಪಾರ್ಕ್ ನಿರ್ಮಾಣವಾಗಲಿದೆ.‌ ಇದರ ಜೊತೆಗೆ ಮಂಗಳೂರಿನಲ್ಲಿ ಕಲಿತು, ಬೆಳೆದು ಅವಿನಾಭಾವ ಸಂಬಂಧ ಹೊಂದಿರುವ ಕ್ಯಾ. ಪ್ರಾಂಜಲ್ ಹೆಸರಿಡುವುದು ಸೂಕ್ತವಾಗಿದೆ. ಈ ಬಗ್ಗೆ ಮಂಗಳೂರು ಪಾಲಿಕೆ ಕ್ರಮ ಕೈಗೊಳ್ಳುವಂತೆ ಪತ್ರ

ಮಂಗಳೂರಿನ ಈ ಸರ್ಕಲ್’ಗೆ ಕ್ಯಾ| ಪ್ರಾಂಜಲ್ ಹೆಸರು! Read More »

error: Content is protected !!
Scroll to Top