ದಕ್ಷಿಣ ಕನ್ನಡ

ಇಂದು ರಾತ್ರಿ ಕುಕ್ಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ

ಸುಬ್ರಹ್ಮಣ್ಯ: ಮಾಜಿ ಪ್ರಧಾನಿ ದೇವೆ ಗೌಡ ಅವರು ಇಂದು ರಾತ್ರಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಲಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಬಂದು ಸಕಲೇಶಪುರದಲ್ಲಿ ಇಳಿದು ಶ್ರೀ ಕ್ಷೇತ್ರಕ್ಕೆ ಬರುವವರಿದ್ದರು. ಆದರೆ ಸಕಲೇಶಪುರ ಭಾಗದಲ್ಲಿ ಮೋಡ ಕವಿದ ವಾತಾವರಣ ಉಂಟಾಗಿದ್ದು, ಹೆಲಿಕಾಪ್ಟರ್ ಬರಲು ಅನಾನುಕೂಲ ವಾತಾವರಣ ಉಂಟಾಗಿದ್ಧ ಹಿನ್ನೆಲೆಯಲ್ಲಿ ಮಂಗಳೂರಿನವರೆಗೆ ವಿಮಾನದಲ್ಲಿ ಆಗಮಿಸಿ, ಅಲ್ಲಿಂದ ಸುಮಾರು ರಾತ್ರಿ 11:30ಕ್ಕೆ ಸುಬ್ರಹ್ಮಣ್ಯ ತಲುಪಲಿದ್ದಾರೆ.

ಇಂದು ರಾತ್ರಿ ಕುಕ್ಕೆ ಕ್ಷೇತ್ರಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ Read More »

ಬೈಕ್‍ ಗೆ ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಸಚಿನ್ ಕುಮಾರ್ ಆಚಾರ್ಯ ಸ್ಥಳದಲ್ಲೇ ಮೃತ್ಯು

ಕೈಕಂಬ: ಬೈಕ್‍ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳೂರು-ಮೂಡಬಿದ್ರೆ ರಾಷ್ಟ್ರೀಯ ಹೆದ್ದಾರಿ 169 ರ ಗಂಜಿಮಠ ಮುಚ್ಚಾರು ಕ್ರಾಸ್ ನಲ್ಲಿ ನಡೆದಿದೆ. ಗುರುಪುರ ಹೊಸಮನೆ ನಿವಾಸಿ, ಎಚ್‍ಡಿಎಫ್ ಸಿ ಉದ್ಯೋಗಿ ಸಚಿನ್ ಕುಮಾರ್ ಆಚಾರ್ಯ (33) ಮೃತಪಟ್ಟವರು. ಸಚಿನ್ ಸಂಜೆ ಕೆಲಸ ಮುಗಿಸಿ ಗುರುಪುರಕ್ಕೆ ಬೈಕ್‍ ನಲ್ಲಿ ಬರುತ್ತಿದ್ದ ಸಂದರ್ಭ ಬೈಕನ್ನು ಓವರ್ ಟೇಕ್ ಮಾಡುವ ಭರದಲ್ಲಿ ಟಿಪ್ಪರ್ ಡಿಕ್ಕಿ ಹೊಡೆದಿದೆ. ರಸ್ತೆಗೆ ಬಿದ್ದ ಸಚಿನ್ ನ ತಲೆಗೆ ಗಂಭೀರ

ಬೈಕ್‍ ಗೆ ಟಿಪ್ಪರ್ ಡಿಕ್ಕಿ : ಬೈಕ್ ಸವಾರ ಸಚಿನ್ ಕುಮಾರ್ ಆಚಾರ್ಯ ಸ್ಥಳದಲ್ಲೇ ಮೃತ್ಯು Read More »

ಕೊಣಾಜೆ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ನಾಗರಿಕರು

ಕೊಣಾಜೆ: ಕೊಣಾಜೆ ಸಮೀಪದ ನಡುಪದವಿನ ಪರಿಸರದಲ್ಲಿ ಗುರುವಾರ ರಾತ್ರಿ ಚಿರತೆಯೊಂದು ಪ್ರತ್ಯಕ್ಷಗೊಂಡ ಬಗ್ಗೆ ವರದಿಯಾಗಿದ್ದು, ಈ ಭಾಗದ ನಾಗರಿಕರು ಆತಂಕಗೊಂಡಿದ್ದಾರೆ. ನಡುಪದವು ಮಸೀದಿ ಸಮೀಪ ಚಿರತೆಯೊಂದು ರಸ್ತೆಯ ಒಂದು ಬದಿಯಿಂದ‌ ಮತ್ತೊಂದು ಭಾಗಕ್ಕೆ ಜಿಗಿದು ಓಡಿರುವುದನ್ನು‌ ಆಸೀಫ್ ಎನ್ನುವವರು ನೋಡಿದ್ದು ಬಳಿಕ ಪರಿಸರದವರಲ್ಲಿ ತಿಳಿಸಿದ್ದರು. ನಂತರ ಸುಮಾರು 9.30ರ ವೇಳೆಗೆ ನಡುಪದವು ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕಾಲೇಜೊಂದರ ಪ್ರಾಧ್ಯಾಪಕ ಚೇತನ್ ಎನ್ನುವವರು ಊಟ ಮುಗಿಸಿ ವಾಕಿಂಗ್ ಹೋಗುತ್ತಿದ್ದ ವೇಳೆ ಇಲ್ಲೇ ಸಮೀಪದ ರಸ್ತೆಯಲ್ಲಿ ಸ್ಕೂಟರೊಂದು ಬರುತ್ತಿದ್ದಾಗ ಅದರ

ಕೊಣಾಜೆ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಆತಂಕದಲ್ಲಿ ನಾಗರಿಕರು Read More »

ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪುತ್ತೂರಿನಿಂದ 350 ಮಂದಿ ಭಾಗಿ | ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್’ನಿಂದ ಬಸ್ ವ್ಯವಸ್ಥೆ

ಪುತ್ತೂರು: ಮೂಡಬಿದ್ರೆ ಆಳ್ವಾಸ್‍ನಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳಕ್ಕೆ ಪುತ್ತೂರಿನಿಂದ ಸುಮಾರು 350 ಮಂದಿ ಉದ್ಯೋಗಾಕಾಂಕ್ಷಿಗಳು ತೆರಳಿದ್ದಾರೆ. ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ಪುತ್ತೂರು ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಪುತ್ತೂರಿನ ಜನತೆಗೆ ಉದ್ಯೋಗ ಮೇಳಕ್ಕೆ ತೆರಳಲು ವಾಹನದ ವ್ಯವಸ್ಥೆ ಮಾಡಲಾಗಿತ್ತು. ಪುತ್ತೂರು ಶಾಸಕರ ಟ್ರಸ್ಟ್ ಮೂಲಕ ನಿರಂತರ ಉದ್ಯೋಗ ತರಬೇತಿ ಆಯೋಜನೆ; ಸುದೇಶ್ ಶೆಟ್ಟಿ ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ ಶಾಂತಿನಗರ ಮಾತನಾಡಿ, ರೈ ಎಸ್ಟೇಟ್ ಎಜುಕೇಶನಲ್ ಆಂಡ್

ಮೂಡಬಿದ್ರೆ ಆಳ್ವಾಸ್ ನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಪುತ್ತೂರಿನಿಂದ 350 ಮಂದಿ ಭಾಗಿ | ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್’ನಿಂದ ಬಸ್ ವ್ಯವಸ್ಥೆ Read More »

ಧರ್ಮಸ್ಥಳ ಅಕ್ಕಿ ಮಿಲ್’ನ ಸಿಬ್ಬಂದಿ ಸಾವು: ಆತ್ಮಹತ್ಯೆಯೆಂದು ವರದಿ | ಕೊಪ್ಪರಿಗೆಗೆ ಹಾರಿ ಆತ್ಮಹತ್ಯೆ ಸಾಧ್ಯವೇ? ಸ್ಥಳೀಯರ ಸಂಶಯ

ಧರ್ಮಸ್ಥಳ: ಧರ್ಮಸ್ಥಳ ನಿವಾಸಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸಂಬಂಧಿಸಿದ ಅಕ್ಕಿ ಮಿಲ್ ಉದ್ಯೋಗಿ ಕೃಷ್ಣ ಗಾಣಿಗ (ಕಿಟ್ಟ) ಸೆಪ್ಟೆಂಬರ್ 3ರಂದು ಅಸಹಜವಾಗಿ ಮೃತಪಟ್ಟಿದ್ದು, ಒಂದು ತಿಂಗಳ ಬಳಿಕ ವರದಿ ಬಹಿರಂಗವಾಗಿದೆ. ಪಾತ್ರೆ ಮಾದರಿಯ ಕೊಪ್ಪರಿಗೆಗೆ ಮುಳುಗಿ ಕೃಷ್ಣ ಗಾಣಿಗ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಸೊಂಟದ ಮಟ್ಟಕ್ಕೆ ಇರುವ ಕೊಪ್ಪರಿಗೆಗೆ ಬಿದ್ದು ಸಾಯುವುದಾದರೂ ಹೇಗೆ ಎಂಬ ಪ್ರಶ್ನೆ ಇದೀಗ ಕೇಳಿಬರತೊಡಗಿದೆ. ಒಟ್ಟಿನಲ್ಲಿ ಕೃಷ್ಣ ಗಾಣಿಗ ಅವರ ಸಾವಿನ ಸುತ್ತ ಹಲವು ಸಂಶಯಗಳು ವ್ಯಕ್ತವಾಗತೊಡಗಿದೆ. ಘಟನೆ ನಡೆದ

ಧರ್ಮಸ್ಥಳ ಅಕ್ಕಿ ಮಿಲ್’ನ ಸಿಬ್ಬಂದಿ ಸಾವು: ಆತ್ಮಹತ್ಯೆಯೆಂದು ವರದಿ | ಕೊಪ್ಪರಿಗೆಗೆ ಹಾರಿ ಆತ್ಮಹತ್ಯೆ ಸಾಧ್ಯವೇ? ಸ್ಥಳೀಯರ ಸಂಶಯ Read More »

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು!

ಬೆಳಪು: ಏಳನೇ ತರಗತಿ ವಿದ್ಯಾರ್ಥಿಯೊಬ್ಬ ತನ್ನ ಸಂಗಡಿಗರೊಂದಿಗೆ ಈಜಲು ತೆರಳಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳಪು ಕೆಐಎಡಿಬಿ ಯೋಜನಾ ಪ್ರದೇಶದಲ್ಲಿ ನಡೆದಿದೆ. ಬೆಳಪು ವಸತಿ ಬಡಾವಣೆ ಕಸ್ತೂರಿ ಎಂಬವರ ಪುತ್ರ ವಿಶ್ವಾಸ್ ನಾಯಕ್ (11) ಮೃತಪಟ್ಟ ಬಾಲಕ. ಈತ ಇನ್ನಂಜೆ ಎಸ್‍.ಎಸ್. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ. ಗುರುವಾರ ಶಾಲೆಯಿಂದ ಬಂದು ಸ್ನೇಹಿತರೊಂದಿಗೆ ಕೆರೆಗೆ ಈಜಲು ತೆರಳಿದ್ದ. ಈಜಾಡುತ್ತಿದ್ದ ಬಾಲಕ ಮುಳುಗಿ ಅಸ್ವಸ್ಥನಾಗಿದ್ದನ್ನು ಕಂಡ ಮಕ್ಕಳು ಮಹಿಳೆಯೊಬ್ಬರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು

ಸಂಗಡಿಗರೊಂದಿಗೆ ಈಜು: ವಿದ್ಯಾರ್ಥಿ ಮೃತ್ಯು! Read More »

‘ಮಂಗಳ’ ಹಾಡಿದ ವಾರಪತ್ರಿಕೆ ಮಂಗಳ!! | ಪ್ರಕಟಣೆ ನಿಲ್ಲಿಸಿದ ಓದುಗರ ಮನ ಗೆದ್ದಿದ್ದ ಕುಟುಂಬ ವಾರಪತ್ರಿಕೆ

ಮಂಗಳೂರು: ಶುಕ್ರವಾರಕ್ಕಾಗಿ ಓದುಗರ ದೊಡ್ಡ ಗುಂಪೇ ಕಾದು ಕುಳಿತುಕೊಳ್ಳುತ್ತಿದ್ದರು. ಕಾರಣ, ಮಂಗಳ ಕುಟುಂಬ ವಾರಪತ್ರಿಕೆ ಪ್ರಕಟವಾಗುತ್ತಿದ್ದ ದಿನವದು. ಆದರೆ ಇನ್ನು ಅಂತಹ ಕಾತರತೆ ಇರದು. 40 ವರ್ಷಗಳ ಪತ್ರಿಕಾ ಯಾನಕ್ಕೆ ಮಂಗಳ ವಾರಪತ್ರಿಕೆ ಮಂಗಳ ಹಾಡಿದೆ. ಓದುಗರು ನಿರಾಸೆಯ ನಿಟ್ಟುಸಿರನ್ನಷ್ಟೇ ಹೊರಹಾಕುವಂತಾಗಿದೆ. ಈ ವಾರ ಮಂಗಳ ವಾರಪತ್ರಿಕೆಯ ಕೊನೆಯ ಸಂಚಿಕೆ ಮುದ್ರಣಗೊಂಡಿದೆ. ಈ ಬಗ್ಗೆ ಸಂಪಾದಕರು ಪ್ರಕಟಣೆಯನ್ನು ನೀಡಿದ್ದಾರೆ. ಕನ್ನಡ ಪತ್ರಿಕಾರಂಗದಲ್ಲಿ ತನ್ನ ಛಾಯೆಯನ್ನು ಮೂಡಿಸಿದ್ದ ಮಂಗಳ, ಓದುಗ ವಲಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡಿತ್ತು. ಬಾಲಮಂಗಳ, ಚಿತ್ರಕತೆಯಿಂದ

‘ಮಂಗಳ’ ಹಾಡಿದ ವಾರಪತ್ರಿಕೆ ಮಂಗಳ!! | ಪ್ರಕಟಣೆ ನಿಲ್ಲಿಸಿದ ಓದುಗರ ಮನ ಗೆದ್ದಿದ್ದ ಕುಟುಂಬ ವಾರಪತ್ರಿಕೆ Read More »

ಸುಳ್ಯ ಎಂ.ಎಸ್. ರಾಮಕೃಷ್ಣ ಕೊಲೆ ಪ್ರಕರಣದ ತೀರ್ಪು ಪ್ರಕಟ | ಡಾ. ರೇಣುಕಾ ಪ್ರಸಾದ್ ಸಹಿತ ಐವರಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ಸುಳ್ಯದ ಕೆವಿಜಿ ಪಾಲಿಟೆಕ್ನಿಟ್ ಪ್ರಾಂಶುಪಾಲರಾಗಿದ್ದ ಎಂ.ಎಸ್. ರಾಮಕೃಷ್ಣ ಅವರ ಕೊಲೆ ಪ್ರಕರಣದಲ್ಲಿ ಕುರುಂಜಿ ವೆಂಕಟರಮಣ ಗೌಡರ ಪುತ್ರ ಡಾ| ರೇಣುಕಾ ಪ್ರಸಾದ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ. ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಹೈ ಕೋರ್ಟ್ ನ್ಯಾಯಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಮತ್ತು ಬಸವರಾಜ ಅವರನ್ನೊಳಗೊಂಡ ವಿಭಾಗೀಯ ಪೀಠ ಶಿಕ್ಷೆ ಪ್ರಮಾಣ ಪ್ರಕಟ ಮಾಡಿದೆ. ಕೆಲ ದಿನಗಳ ಹಿಂದೆ ರೇಣುಕಾ ಪ್ರಸಾದ್ ಸೇರಿ ಆರು ಮಂದಿ ದೋಷಿಗಳೆಂದು ಹೈಕೋರ್ಟ್ ತೀರ್ಪು

ಸುಳ್ಯ ಎಂ.ಎಸ್. ರಾಮಕೃಷ್ಣ ಕೊಲೆ ಪ್ರಕರಣದ ತೀರ್ಪು ಪ್ರಕಟ | ಡಾ. ರೇಣುಕಾ ಪ್ರಸಾದ್ ಸಹಿತ ಐವರಿಗೆ ಜೀವಾವಧಿ ಶಿಕ್ಷೆ Read More »

ಸಾಕುಪ್ರಾಣಿಗಳ ಬಂಧನ, ಮಾಲಕರಿಗೆ ಶಿಕ್ಷೆ: ಎಚ್ಚರಿಕೆ! | ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿ ಬಿಟ್ಟರೆ ಶಿಕ್ಷೆ ಗ್ಯಾರೆಂಟಿ!!

ಕಡಬ: ಸಾಕುಪ್ರಾಣಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಟ್ಟಿದ್ದೇ ಆದರೆ, ಆ ಸಾಕುಪ್ರಾಣಿಗಳನ್ನು ಬಂಧಿಸಲಾಗುವುದು. ಮಾತ್ರವಲ್ಲ, ಅದರ ಮಾಲಕರಿಗೆ ದಂಡ ವಿಧಿಸಲಾಗುವುದು. ಹೀಗೆಂದು ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಫಕೀರ ಮೂಲ್ಯ ಅವರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಸಾಕುಪ್ರಾಣಿಗಳನ್ನು ಸಾರ್ವಜನಿಕ ಪ್ರದೇಶದಲ್ಲಿ ಬಿಡುವುದರಿಂದ ನೂರಾರು ಸಮಸ್ಯೆಗಳು ಕಾಣಿಸಿಕೊಂಡಿದೆ. ಸಾರ್ವಜನಿಕರಿಗೆ ತೊಂದರೆ ಆಗುವ ಜೊತೆಗೆ, ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಕೃಷಿ ಹಾನಿ ಆದ ಬಗ್ಗೆಯೂ ವರದಿಯಾಗಿದೆ. ಆದ್ದರಿಂದ ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿಗಳನ್ನು ಬಿಡದಂತೆ ಪಟ್ಟಣ ಪಂಚಾಯತ್ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಸಾಕುಪ್ರಾಣಿಗಳ ಬಂಧನ, ಮಾಲಕರಿಗೆ ಶಿಕ್ಷೆ: ಎಚ್ಚರಿಕೆ! | ಸಾರ್ವಜನಿಕ ಸ್ಥಳದಲ್ಲಿ ಸಾಕುಪ್ರಾಣಿ ಬಿಟ್ಟರೆ ಶಿಕ್ಷೆ ಗ್ಯಾರೆಂಟಿ!! Read More »

ಕೊರಗ ಭಾಷೆಯಲ್ಲಿ ಮೂಡಿಬಂದ ಮದುವೆ ಆಮಂತ್ರಣ! | ಪ್ರಶಂಸೆಗೆ ಪಾತ್ರವಾದ ಆಹ್ವಾನ ಪತ್ರಿಕೆಯ ದೇಸಿ ಭಾಷೆ | ಹೀಗಿದೆ ನೋಡಿ ಆಮಂತ್ರಣ

ಮಂಗಳೂರು: ದೇಸಿ ಭಾಷೆಗಳಿಗೆ ಬೆಂಬಲ ಸಿಗುತ್ತಿಲ್ಲ ಎನ್ನುವ ಕೊರಗಿನ ನಡುವೆ, ಇಲ್ಲೊಂದು ಜೋಡಿ ತಮ್ಮ ಮದುವೆ ಆಮಂತ್ರಣವನ್ನು ತಮ್ಮ ಮಾತೃಭಾಷೆಯಾದ ಕೊರಗ ಭಾಷೆಯಲ್ಲಿ ಮುದ್ರಿಸಿ ಗಮನ ಸೆಳೆದಿದೆ. ಮಂಗಳೂರಿನ ಕೋಡಿಬೆಟ್ಟುವಿನ ಅಕ್ಷತಾ ಹಾಗೂ ಬಾರ್ಕೂರಿನ ಅಮಿತ್ ಕುಮಾರ್ ಅವರ ವಿವಾಹ ನವಂಬರ್ 19ರಂದು ನಡೆಯಲಿದ್ದು, ಮದುವೆಯ ಆಮಂತ್ರಣ ಪತ್ರಿಕೆಯನ್ನು ಕೊರಗ ಭಾಷೆಯಲ್ಲೇ ಮುದ್ರಿಸಲಾಗಿದೆ. ಇದೀಗ ಈ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಎಲ್ಲೆಡೆಯಿಂದ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಅರುಣ್ ಜೋಳದ ಕೂಡ್ಲಿಗಿ ಎನ್ನುವವರು ತಮ್ಮ

ಕೊರಗ ಭಾಷೆಯಲ್ಲಿ ಮೂಡಿಬಂದ ಮದುವೆ ಆಮಂತ್ರಣ! | ಪ್ರಶಂಸೆಗೆ ಪಾತ್ರವಾದ ಆಹ್ವಾನ ಪತ್ರಿಕೆಯ ದೇಸಿ ಭಾಷೆ | ಹೀಗಿದೆ ನೋಡಿ ಆಮಂತ್ರಣ Read More »

error: Content is protected !!
Scroll to Top