ದಕ್ಷಿಣ ಕನ್ನಡ

ಕಾಳು ಮೆಣಸು ಕೊಯ್ಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು

ಸುಳ್ಯ: ಕಾಳುಮೆಣಸು ಕೊಯ್ಯುವ ವೇಳೆ ಮರದಿಂದ ಆಯತಪ್ಪಿ ಬಿದ್ದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಕನಕಮಜಲು ಗ್ರಾಮದ ಕೊಲ್ಲಂತಡ್ಕ ಎಂಬಲ್ಲಿ ಸೋಮವಾರ ಸಂಭವಿಸಿದೆ. ಕನಕಮಜಲು ಗ್ರಾಮದ ಕೊಲ್ಲಂತಡ್ಕದ ಜಗನ್ನಾಥ (75) ಮೃತರು. ಜಗನ್ನಾಥ ಅವರು ಸೋಮವಾರ ಬೆಳಿಗ್ಗೆ ತಮ್ಮ ಮನೆಯ ಅಂಗಳದಲ್ಲಿದ್ದ ಮರದಲ್ಲಿ ಕಾಳುಮೆಣಸು ಕೊಯ್ಯಲು ಏಣಿ ಇರಿಸಿ, ಹತ್ತಿ ಕಾಳು ಮೆಣಸು ಕೊಯ್ಯುವ ವೇಳೆ ಆಯತಪ್ಪಿ ಕೆಳಗೆ ಬಿದ್ದು, ತಲೆಗೆ ತೀವ್ರ ಗಾಯಗೊಂಡಿದ್ದು, ಗಾಯಾಳುವನ್ನು ಮನೆಯವರು ಸುಳ್ಯ ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತರಾಗಿದ್ದಾರೆ […]

ಕಾಳು ಮೆಣಸು ಕೊಯ್ಯುವ ವೇಳೆ ಮರದಿಂದ ಬಿದ್ದು ವ್ಯಕ್ತಿ ಸಾವು Read More »

ಚಾರ್ಮಾಡಿ ಘಾಟಿಯಲ್ಲಿ ಕಾರು-ಲಾರಿ ಅಪಘಾತ : ನಾಲ್ವರಿಗೆ ಗಂಭೀರ ಗಾಯ

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಮೂರನೇ ತಿರುವಿನಲ್ಲಿ ಲಾರಿ ಮತ್ತು ಕಾರು ಡಿಕ್ಕಿಯಾಗಿ ನಾಲ್ವರು ಗಾಯಗೊಂಡ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮೂಡಿಗೆರೆಯಿಂದ ಉಜಿರೆ ಕಡೆ ಬರುತ್ತಿದ್ದ ಕಾರು ಹಾಗೂ ಕೊಟ್ಟಿಗೆಹಾರ ಕಡೆ ತೆರಳುತ್ತಿದ್ದ ಲಾರಿ ಡಿಕ್ಕಿಯಾಗಿದ್ದು ಕಾರಿನಲ್ಲಿ ಉಜಿರೆ ಕಡೆ ಪ್ರಯಾಣಿಸುತ್ತಿದ್ದ ಹಂಪೆಯ ವೇದಮ್ಮ(55) ಜ್ಞಾನಮ್ಮ (70), ಮಂಜುಳಾ (50) ಮತ್ತು ರೇಣುಕಾ (26) ಗಂಭೀರವಾಗಿ ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಕಾರಿನಲ್ಲಿದ್ದ ಚಾಲಕ ಮತ್ತು ಇಬ್ಬರು ಮಕ್ಕಳು ಯಾವುದೇ ರೀತಿಯ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆಂದು

ಚಾರ್ಮಾಡಿ ಘಾಟಿಯಲ್ಲಿ ಕಾರು-ಲಾರಿ ಅಪಘಾತ : ನಾಲ್ವರಿಗೆ ಗಂಭೀರ ಗಾಯ Read More »

ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ಮೃತ ಕಾಡಾನೆ ಪತ್ತೆ

ಸುಳ್ಯ : ತಾಲುಕಿನ ಮಂಡೆಕೋಲು ಗ್ರಾಮದ ಕೇರಳ ಗಡಿ ಸಮೀಪದ ಕನ್ಯಾನ ಎಂಬಲ್ಲಿ ಕಾಡಾನೆ ಮೃತಪಟ್ಟ ರೀತಿಯಲ್ಲಿ ಪತ್ತೆಯಾಗಿದೆ. ಭಾನುವಾರ ಈ ಘಟನೆ ಬೆಳಕಿಗೆ ಬಂದಿದೆ. ಕಾಡಾನೆ ಹೇಗೆ ಮೃತಪಟ್ಟಿದೆ ಎಂಬುದು ತಿಳಿದು ಬಂದಿಲ್ಲ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಮಂಡೆಕೋಲು ಗ್ರಾಮದ ಕನ್ಯಾನದಲ್ಲಿ ಮೃತ ಕಾಡಾನೆ ಪತ್ತೆ Read More »

ಕಕ್ಕಿಂಜೆ ವೃದ್ಧ ದಂಪತಿ ಹತ್ಯೆ ಮಾಡಿ ಚಿನ್ನ, ನಗದು ದೋಚಿದ ಪ್ರಕರಣ | ಆರೋಪಿಗೆ ಜೀವಾವಧಿ ಶಿಕ್ಷೆ

ಬೆಳ್ತಂಗಡಿ: ಕಕ್ಕಿಂಜೆಯಲ್ಲಿ ನಡೆದ ವೃದ್ಧ ದಂಪತಿ ಕೊಲೆ  ಹಾಗೂ ಚಿನ್ನ ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ಮಂಗಳೂರಿನ 2ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2016ರ ನ. 10 ರಂದು ರಾತ್ರಿ ಕಕ್ಕಿಂಜೆ ಹೈಸ್ಕೂಲ್ ನ ಹಿಂಬದಿಯ ಮನೆಯಲ್ಲಿ ವಾಸಿಸುತ್ತಿದ್ದ ವೃದ್ದ ದಂಪತಿ ವರ್ಕಿ ಹಾಗೂ ಏಲಿಕುಟ್ಟಿ ಅವರನ್ನು ಗದಗ ಜಿಲ್ಲೆಯ ಬಿ.ಸಿ.ಕೇರಿ ನಿವಾಸಿ ರಾಜು ಕಲ್ಲವಡ್ಡರ್ ಎಂಬಾತ ಹತ್ಯೆ ಮಾಡಿರುವುದು ಸಾಬೀತಾಗಿದೆ. ಈತ ಬೆಳ್ತಂಗಡಿಯ ನೆರಿಯಾ

ಕಕ್ಕಿಂಜೆ ವೃದ್ಧ ದಂಪತಿ ಹತ್ಯೆ ಮಾಡಿ ಚಿನ್ನ, ನಗದು ದೋಚಿದ ಪ್ರಕರಣ | ಆರೋಪಿಗೆ ಜೀವಾವಧಿ ಶಿಕ್ಷೆ Read More »

ಬಸ್‍ನಿಂದ ತಲೆ ಹೊರಹಾಕಿದ ಮಹಿಳೆಗೆ ಲಾರಿ ಡಿಕ್ಕಿ | ದೇಹದಿಂದ ಬೇರ್ಪಟ್ಟ ರುಂಡ

ಚಾಮರಾಜನಗರ : ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಕಿಟಿಕಿಯಿಂದ ತಲೆ ಹೊರ ಹಾಕಿದ್ದು, ಎದುರಿಗೆ ಬಂದ ಲಾರಿಯೊಂದು ತಲೆಯನ್ನೇ ಕತ್ತರಿಸಿಕೊಂಡು ಹೋಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆಯಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲು ಪೇಟೆಯಿಂದ ನಂಜನಗೂಡು ಕಡೆಗೆ ಹೊರಟ್ಟಿದ್ದ ಕೆಎಸ್ಸಾರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ತಮ್ಮ ತಲೆಯನ್ನು ಕಿಟಕಿಯಿಂದ ಹೊರ ಹಾಕಿದ್ದ ವೇಳೆ ಮುಂಭಾಗದಿಂದ ವೇಗವಾಗಿ ಬಂದ ಲಾರಿಯೊಂದು ಮಹಿಳೆಯ ದೇಹದಿಂದ ರುಂಡವನ್ನು ಬೇರ್ಪಡಿಸಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಲಾರಿಯನ್ನು

ಬಸ್‍ನಿಂದ ತಲೆ ಹೊರಹಾಕಿದ ಮಹಿಳೆಗೆ ಲಾರಿ ಡಿಕ್ಕಿ | ದೇಹದಿಂದ ಬೇರ್ಪಟ್ಟ ರುಂಡ Read More »

ಉತ್ತರ ಪ್ರದೇಶದ ಪ್ರಯಾಗ್ ರಾಜ್ಯದ ಮಹಾ ಕುಂಭಮೇಳದಲ್ಲಿ ನಾಥಯೋಗಿ ಪಂಥದ ಮಹಾಸಭೆ| ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಂದ ಆಶೀರ್ವಚನ

ಪ್ರಯಾಗ್‌ರಾಜ್‌ : ಉತ್ತರ ಪ್ರದೇಶದ ಪ್ರಯಾಗ್ ರಾಜ್ಯದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ನಾಥಯೋಗಿ ಪಂಥದ ಮಹಾಸಭೆ ಜ. 25ರಂದು ಬೆಳಗ್ಗೆ 10ಗಂಟೆಗೆ ನಡೆಯಿತು. ಮಹಾಸಭೆಯಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ಹಾಗೂ ಗೋರಖ್ ಪುರದ ಗೋರಕ್ಷಾ ಮಠದ ಮಹಂತ ಯೋಗಿ ಆದಿತ್ಯ ನಾಥ್ ಜಿರವರು  ಸಾನಿಧ್ಯವನ್ನು  ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿವಿಧ

ಉತ್ತರ ಪ್ರದೇಶದ ಪ್ರಯಾಗ್ ರಾಜ್ಯದ ಮಹಾ ಕುಂಭಮೇಳದಲ್ಲಿ ನಾಥಯೋಗಿ ಪಂಥದ ಮಹಾಸಭೆ| ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರಿಂದ ಆಶೀರ್ವಚನ Read More »

ಜುಬಿನ್‌ ಮೊಹಾಪಾತ್ರ ರಾಯಚೂರಿಗೆ ವರ್ಗ

12 ಐಎಎಸ್‌ ಅಧಿಕಾರಿಗಳ ವರ್ಗಾವಣೆ ಬೆಂಗಳೂರು: ಪುತ್ತೂರು ಉಪವಿಭಾಗದ ಹಿರಿಯ ಸಹಾಯಕ ಆಯುಕ್ತ ಜುಬಿನ್‌ ಮೊಹಾಪಾತ್ರ ಸಹಿತ 12 ಐಎಎಸ್‌ ಅಧಿಕಾರಿಗಳನ್ನು ಸರಕಾರ ವರ್ಗಾವಣೆಗೊಳಿಸಿದೆ. ಜುಬಿನ್‌ ಮೊಹಾಪಾತ್ರ ಅವರನ್ನು ರಾಯಚೂರು ನಗರದ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಉಳಿದಂತೆ ಕಲಬುರಗಿ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು ಜಿಲ್ಲೆಗಳಲ್ಲಿ ಐಎಎಸ್‌ ಅಧಿಕಾರಿಗಳ ವರ್ಗಾವಣೆಯಾಗಿದೆ.

ಜುಬಿನ್‌ ಮೊಹಾಪಾತ್ರ ರಾಯಚೂರಿಗೆ ವರ್ಗ Read More »

ಕೆ.ವಿ.ಜಿ. ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಡಾ. ವಜಿದಾ ಬಾನು ಅವರಿಗೆ ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್-ಚೀಫ್

ಸುಳ್ಯ: ಕೆ.ವಿ.ಜಿ. ಡೆಂಟಲ್ ಕಾಲೇಜಿನ ದ್ವಿತೀಯ ವರ್ಷ ಎಮ್.ಡಿಎಸ್ ವಿದ್ಯಾರ್ಥಿನಿ ಮತ್ತು NSS ಸ್ವಯಂಸೇವಕಿ ಡಾ. ವಜಿದಾ ಬಾನು, 2023ರ ಜನವರಿಯಲ್ಲಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ್ದರು. ಅವರ ಈ ಸಾಧನೆಗೆ ಗೌರವ ಸೂಚವಾಗಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರುನಲ್ಲಿ ಈ ವರ್ಷ (2025) ನಡೆಯುವ ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್-ಚೀಫ್ ಅವರನ್ನು ಆಯ್ಕೆ ಮಾಡಲಾಗಿದೆ. ಹಿಂದಿನ ವರ್ಷ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ, ಡಾ. ವಜಿದಾ ಬಾನು ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ

ಕೆ.ವಿ.ಜಿ. ಡೆಂಟಲ್ ಕಾಲೇಜಿನ ವಿದ್ಯಾರ್ಥಿನಿ ಡಾ. ವಜಿದಾ ಬಾನು ಅವರಿಗೆ ಗಣರಾಜ್ಯೋತ್ಸವ ಪಥಸಂಚಲನದ ಕಮಾಂಡರ್-ಇನ್-ಚೀಫ್ Read More »

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ

ಕಳೆಂಜ: ಕಾಡಾನೆ ದಾಳಿ ನಡೆಸಿ ವಿಶ್ವನಾಥ ಕುಂಬಾರ ಎಂಬವರು ಗಾಯಗೊಂಡಿರುವ ಘಟನೆ ಕಳಂಜ ಗ್ರಾಮದ ಬಂಡೇರಿ ಸೇತುವೆ ಬಳಿ ನಡೆದಿದೆ. ಕಳೆಂಜ ಗ್ರಾಮದ ಗೋಶಾಲೆ ಮಾರ್ಗ ಸಮೀಪದ ಮನೆಯ ವಿಶ್ವನಾಥ ಕುಂಬಾರ ಎಂಬವರು ಮನೆಯಲ್ಲಿ ಮೊಬೈಲ್ ನೆಟ್ವರ್ಕ್ ಇಲ್ಲದಿದರಿಂದ ಪಕ್ಕದಲ್ಲಿರುವ ಬಂಡೇರಿ ಸೇತುವೆ ಬಳಿ ಸಂಜೆ ಫೋನ್ ನಲ್ಲಿ ಮಾತನಾಡಲೆಂದು ಕುಳಿತಿದ್ದಾಗ ಒಂಟಿ ಸಲಗವೊಂದು ಹಿಂಬದಿಯಿಂದ ಬಂದು ಸೊಂಡಿಲಿನಿಂದ ತಳ್ಳಿ ಹಾಕಿದೆ. ಈ ಘಟನೆಯಲ್ಲಿ ಸಣ್ಣ ಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪಾರಾಗಿದ್ದಾರೆ. ವಿಶ್ವನಾಥ್ ಅವರಿಗೆ ಕಿವಿ ಸರಿಯಾಗಿ

ಕಾಡಾನೆ ದಾಳಿಯಿಂದ ವಿಶ್ವನಾಥ ಕುಂಬಾರರಿಗೆ ಗಾಯ Read More »

ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ⁠ಉತ್ತಮ ವೇತನ | ಪ್ರತೀ ತಾಲೂಕಿಗೆ ಎಐ ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ

ಮಂಗಳೂರು: ಆಧುನಿಕ ತಂತ್ರಜ್ಞಾನ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಯತಿಕಾರ್ಪ್ ಇಂಡಿಯಾ ಪ್ರೈ.ಲಿ. ಕಂಪನಿಯು ಕರ್ನಾಟಕದಾದ್ಯಂತ ಪದವೀಧರರಿಗೆ ಉದ್ಯೋಗ ಅವಕಾಶವನ್ನು ಘೋಷಿಸಿದೆ. ಕಂಪನಿಯು ತನ್ನ ಹೊಸ ಎಐ ಸಾಕ್ಷರತಾ ಅಭಿಯಾನವನ್ನು ಮುನ್ನಡೆಸಲು ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಿಗೂ ಪ್ರಾದೇಶಿಕ ಪ್ರತಿನಿಧಿಗಳನ್ನು ನೇಮಿಸುತ್ತಿದ್ದು, ಆಕರ್ಷಕ ವೇತನ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಹುದ್ದೆ ಹೆಸರು – ಎಐ ರೀಜನಲ್ ರೆಪ್ರೆಸೆಂಟೇಟಿವ್, ವೇತನ ಶ್ರೇಣಿಯು ತಿಂಗಳಿಗೆ ರೂ. 25,000 ದಿಂದ ರೂ.30,000ದವರೆಗೆ ಇರುತ್ತದೆ. ಸಂಸ್ಥೆಯು ಅಭಿವೃದ್ಧಿ ಪಡಿಸಿದ ಎಐ

ಯತಿಕಾರ್ಪ್ ಇಂಡಿಯಾ ಐಟಿ ಕಂಪನಿಯಲ್ಲಿ ಪದವೀಧರರಿಗೆ ಉದ್ಯೋಗ ಅವಕಾಶ | ⁠ಉತ್ತಮ ವೇತನ | ಪ್ರತೀ ತಾಲೂಕಿಗೆ ಎಐ ಪ್ರಾದೇಶಿಕ ಪ್ರತಿನಿಧಿಗಳ ಆಯ್ಕೆ Read More »

error: Content is protected !!
Scroll to Top