ದಕ್ಷಿಣ ಕನ್ನಡ

ದೈವದ ಮಂಚದಲ್ಲಿ ವಿರಾಜಮಾನರಾಗಿ ಪೂಜಿಸಲ್ಪಡುವ ಏಕೈಕ ಸ್ವಾಮೀಜಿ | ಮಂಗಳೂರಿನ ಜೋಗಿ ಮಠದ ವಿಶೇಷತೆ

ಮಂಗಳೂರು: ದೈವದ ಮಂಚದಲ್ಲಿ ವಿರಾಜಮಾನರಾಗಿ ಪೂಜಿಸಲ್ಪಡುವ ಏಕೈಕ ಸ್ವಾಮೀಜಿ ಎಂಬುವುದಕ್ಕೆ ಇಲ್ಲಿದೆ ಒಂದು ವಿಶೇಷತೆ. ಇಂತಹ ಒಂದು ವಿಶಿಷ್ಟ ಸಂಪ್ರದಾಯವಿರುವುದು ಮಂಗಳೂರಿನ ಕದ್ರಿಯಲ್ಲಿರುವ ಜೋಗಿ ಮಠದಲ್ಲಿ. ಮರಳು ಧೂಮಾವತಿ ಎಂಬ ದೈವ, ಜೋಗಿ ಮಠ ಕ್ಷೇತ್ರದ ದೈವವಾಗಿದ್ದು,ವರ್ಷಂಪ್ರತಿ ನವರಾತ್ರಿಯ ಕೊನೆಯ ದಿನ ಅಂದರೆ ಮಹಾನವಮಿಯಂದು ನಾಥ ಪಂಥದ ಸ್ವಾಮೀಜಿಯವರು ದೈವದ ಮಂಚದಲ್ಲಿ ವಿರಾಜಮಾನರಾಗುವರು. ಅಲ್ಲದೇ ಆ ಸಂಧರ್ಭದಲ್ಲಿ ಸ್ವಾಮೀಜಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಅದರಂತೆ ಈ ಬಾರಿಯೂ ಮಹಾನವಮಿಯಂದು ಜೋಗಿ ಮಠ ನಾಥ ಪಂಥದ ಸ್ವಾಮೀಜಿಗಳಾದ ರಾಜಾ […]

ದೈವದ ಮಂಚದಲ್ಲಿ ವಿರಾಜಮಾನರಾಗಿ ಪೂಜಿಸಲ್ಪಡುವ ಏಕೈಕ ಸ್ವಾಮೀಜಿ | ಮಂಗಳೂರಿನ ಜೋಗಿ ಮಠದ ವಿಶೇಷತೆ Read More »

ಉಜಿರೆಯಲ್ಲಿ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆ

ಉಜಿರೆ: ವಿವಾಹಿತ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆಯಾಗಿರುವ ಘಟನೆ ಉಜಿರೆ ಗ್ರಾಮದ ಗಡಿ ಪ್ರದೇಶವಾದ ಮಾಚಾರು ಸಮೀಪದ ಕೆಂಪನೊಟ್ಟುವಿನಲ್ಲಿ ಶುಕ್ರವಾರ ನಡೆದಿದೆ. ಮಾಚಾರು ನಿವಾಸಿ ಶಶಿಕಲಾ ಎಂಬವರ ಶವವೇ ಬಾವಿಯಲ್ಲಿ ಅನುಮಾನಾಸ್ಪದವಾಗಿ  ಪತ್ತೆಯಾಗಿರುವುದು. ಹತ್ಯೆ ಮಾಡಿ ಬಾವಿಗೆ ಹಾಕಿರುವ ಕುರಿತು ಆರೋಪಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ. ಇದು ಆಕಸ್ಮಿಕ ಘಟನೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ. ಧರ್ಮಸ್ಥಳ ಠಾಣಾ ಪೊಲೀಸರು, ಉನ್ನತಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಉಜಿರೆಯಲ್ಲಿ ಮಹಿಳೆಯೊಬ್ಬರ ಶವ ಬಾವಿಯಲ್ಲಿ ಪತ್ತೆ Read More »

ಉದ್ಯಮಿ ಸೊಸೆ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ವರದಕ್ಷಿಣ ಕಿರುಕುಳ ಆರೋಪದಲ್ಲಿ ಐವರ ಬಂಧನ

ಸುಳ್ಯ :ಸುಳ್ಯದ ಉದ್ಯಮಿ ಕಾಪಿಲ ಗಿರಿಯಪ್ಪ ಗೌಡರ ಸೊಸೆ ಐಶ್ವರ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ರಾಜೇಶ್, ಅತ್ತೆ ಸೀತಾ, ಮಾವ ಗಿರಿಯಪ್ಪ ಗೌಡ ಕಾಪಿಲ, ಮೈದುನ, ಮೈದುನನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 5 ವರ್ಷಗಳ ಹಿಂದೆ ರಾಜೇಶ್ ಅವರನ್ನು ಐಶ್ವರ್ಯ ಮದುವೆಯಾಗಿದ್ದರು. ಐಶ್ವರ್ಯ ಯುಎಸ್ಎ ನಲ್ಲಿ ಎಂಬಿಎ ಮಾಡಿದ್ದರು. ಪತಿ ರಾಜೇಶ್, ಡೈರಿ ರಿಚ್ ಐಸ್ ಕ್ರೀಮ್ ಕಂಪನಿ ಮಾಲೀಕರಾಗಿದ್ದಾರೆ. ಇದೇ ಕಂಪನಿಯಲ್ಲಿ ಐಶ್ವರ್ಯ ತಂದೆ ಸುಬ್ರಮಣ್ಯ ಅವರ ತಂಗಿ ಗಂಡ ರವೀಂದ್ರ ಆಡಿಟರ್

ಉದ್ಯಮಿ ಸೊಸೆ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ | ವರದಕ್ಷಿಣ ಕಿರುಕುಳ ಆರೋಪದಲ್ಲಿ ಐವರ ಬಂಧನ Read More »

ಬೆಳ್ಳಾರೆ ಮಸೂದ್ ಕೊಲೆ ಪ್ರಕರಣ | ಜೈಲಿನಲ್ಲಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್‍ ನಿಂದ ಜಾಮೀನು

ಮಂಗಳೂರು: ಸುಳ್ಯದ ತಾಲೂಕಿನ ಬೆಳ್ಳಾರೆಯಲ್ಲಿ ನಡೆದ ಮಸೂದ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್‌ ಜಾಮೀನು ನೀಡಿದೆ. 2022 ರ ಜುಲೈಯಲ್ಲಿ ಬೆಳ್ಳಾರೆ ಸಮೀಪದ ಕಳೆಂಜ ಎಂಬಲ್ಲಿ ಮಸೂದ್ ಕೊಲೆ ಕೃತ್ಯ ನಡೆದಿತ್ತು. ಎಂಟು ಆರೋಪಿಗಳ ಪೈಕಿ ಅಭಿಲಾಷ್ ಮತ್ತು ಸುನಿಲ್ ಇವರಿಗೆ ಈಗ ಜಾಮೀನು ಲಭಿಸಿದೆ. ಆರು ಮಂದಿಗೆ ಈ ಮೊದಲೇ ಜಾಮೀನು ಸಿಕ್ಕಿತ್ತು. ಜಾಮೀನು ಅರ್ಜಿಯನ್ನು ಪರಿಗಣಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ಏಕಸದಸ್ಯ ಪೀಠದ ಜಸ್ಟಿಸ್ ವಿಶ್ವಜೀತ್ ಎಸ್ ಶೆಟ್ಟಿ,

ಬೆಳ್ಳಾರೆ ಮಸೂದ್ ಕೊಲೆ ಪ್ರಕರಣ | ಜೈಲಿನಲ್ಲಿದ್ದ ಇಬ್ಬರು ಆರೋಪಿಗಳಿಗೆ ಹೈಕೋರ್ಟ್‍ ನಿಂದ ಜಾಮೀನು Read More »

ನಾಡು ನುಡಿಯ ಅಭಿಮಾನ ಹೊಂದುವುದು ಮನದಾಳದ ಸಂಕಲ್ಪವಾಗಲಿ | ಎಸ್‌ಎಸ್‌ಪಿಯು ಕಾಲೇಜಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಸೋಮಶೇಖರ್ ನಾಯಕ್

ಸುಬ್ರಹ್ಮಣ್ಯ: ಸ್ಪರ್ಧಾತ್ಮಕ ಜಗತ್ತಿನಲ್ಲಿ ಬಹು ಭಾಷೆಗಳಲ್ಲಿ ಪರಿಣಿತರಾದರೆ ಮಾತ್ರ ಯಶ ಗಳಿಸಲು ಸಾಧ್ಯ. ನಾವು ನಮ್ಮ ನಾಡಭಾಷೆಯ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಕನ್ನಡವನ್ನು ಪ್ರೀತಿಸುತ್ತಾ ಇತರ ಭಾಷೆಗಳ ಮೇಲೆ ಅಭಿಮಾನ ಹೊಂದಬೇಕು. ನಾಡು ನುಡಿಯ ಮೇಲೆ ಅಭಿಮಾನ ಹೊಂದುವುದು ಮನದಾಳದ ಸಂಕಲ್ಪವಾಗಬೇಕು ಎಂದು ಎಸ್ ಎಸ್‌ಪಿಯು ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್ ಹೇಳಿದರು. ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾದ ಆಡಳಿತಕ್ಕೊಳಪಟ್ಟ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು

ನಾಡು ನುಡಿಯ ಅಭಿಮಾನ ಹೊಂದುವುದು ಮನದಾಳದ ಸಂಕಲ್ಪವಾಗಲಿ | ಎಸ್‌ಎಸ್‌ಪಿಯು ಕಾಲೇಜಿನ ಕನ್ನಡ ರಾಜ್ಯೋತ್ಸವ ದಿನಾಚರಣೆಯಲ್ಲಿ ಸೋಮಶೇಖರ್ ನಾಯಕ್ Read More »

ಅಪ್ರಾಪ್ತ ಬಾಲಕಿಯ ಅತ್ಯಾಚಾರ | ಆಟೋ ಚಾಲಕನ ಬಂಧನ !

ಸುಬ್ರಹ್ಮಣ್ಯ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆಟೋ ಚಾಲಕನೊಬ್ಬನ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಬೆಳ್ಳಾರೆಯ ಆಟೋ ಚಾಲಕ ಮಹೇಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿರುವುದು. ಈತ ಪಂಜದ ಪಿಯುಸಿ ವಿದ್ಯಾರ್ಥಿನಿಯೋರ್ವಳನ್ನು ಪ್ರೀತಿಸುವ ನಾಟಕವಾಡಿ ಪುಸಲಾಯಿಸಿ ಲಾಡ್ಜ್‍ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಬಳಿಕ ವಂಚಿಸಿದ್ದಾನೆ ಎಂದು ಪೋಷಕರು ಆರೋಪಿಸಿದ್ದರು. ಈ ಕುರಿತು ಠಾಣೆಗೆ ದೂರು ನೀಡಿದ್ದರು. ಇದೀಗ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು

ಅಪ್ರಾಪ್ತ ಬಾಲಕಿಯ ಅತ್ಯಾಚಾರ | ಆಟೋ ಚಾಲಕನ ಬಂಧನ ! Read More »

ಉಜಿರೆ ಎಸ್‍ಡಿಎಂ ಪಾಲಿಟೆಕ್ನಿಕ್‍ನಲ್ಲಿ ‘ಗೃಹ ಟೆಕ್ನಿಕಲ್ ಎಕ್ಸ್ಪೋ’

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗವು ‘ಗೃಹ ‘ಟೆಕ್ನಿಕಲ್ ಎಕ್ಸ್ಪೋ’ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಿತ್ತು. ಮುಖ್ಯ ಅತಿಥಿಯಾಗಿ ಇಂಜಿನಿಯರ್ ವಿಜಯ ವಿಷ್ಣು ಮಯ್ಯ ಮಾತನಾಡಿ, ಭವಿಷ್ಯದ ಸಿವಿಲ್ ಇಂಜಿನಿಯರಿಂಗ್ ಕ್ಷೇತ್ರದ ಅವಶ್ಯಕತೆಯನ್ನು ಹಾಗೂ ಯುವ ಎಂಜಿನೀಯರುಗಳಿಗೆ    ಶಿಸ್ತು ಮತ್ತು ಕೌಶಲ್ಯಗಳ ಅಗತ್ಯತೆಯನ್ನು ವಿವರಿಸಿದರು . ಇನ್ನೋರ್ವ ಅತಿಥಿಯಾಗಿ ಕಾಂತಾರ ಖ್ಯಾತಿಯ ನಟ ದೀಪಕ್ ರೈ  ಪಾಣಾಜೆ, ಇಂಜಿನಿಯರ್ ಜಗದೀಶ್ ಪ್ರಸಾದ್ ಯುವ ಇಂಜಿನಿಯರ್ ಗಳಿಗೆ ಶುಭಹಾರೈಸಿದರು. ಎಸ್ ಡಿ ಎಂ ಶಿಕ್ಷಣ

ಉಜಿರೆ ಎಸ್‍ಡಿಎಂ ಪಾಲಿಟೆಕ್ನಿಕ್‍ನಲ್ಲಿ ‘ಗೃಹ ಟೆಕ್ನಿಕಲ್ ಎಕ್ಸ್ಪೋ’ Read More »

ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ

ಪೆರುವೋಡಿ: ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ (96) ಮಂಗಳವಾರ ನಿಧನರಾದರು. ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ  ಪದ್ಯಾಣದಲ್ಲಿ 1927 ರಲ್ಲಿ ಜನಿಸಿದ ಪೆರುವೋಡಿ ಪ್ರಸಿದ್ಧ ಧರ್ಮಸ್ಥಳ ಮೇಳಕ್ಕೆ ಸೇರಿ ಹಲವಾರು ಮೇಳಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಪಾಪಣ್ಣ ಭಟ್ರು ಎಂದೇ ಖ್ಯಾತಿ ಪಡೆದ ನಾರಾಯಣ ಭಟ್ ಅವರು ಯಕ್ಷಗಾನದ ಹಾಸ್ಯ ಪಾತ್ರಗಳಿಗೆ ವಿಶೇಷ ಮಾನ, ಮಾನ್ಯತೆ ತಂದು ಕೊಟ್ಟಿದ್ದಾರೆ. ‘ಪಾಪಣ್ಣ ವಿಜಯ’ ಪ್ರಸಂಗದ ಪಾಪಣ್ಣ ಪಾತ್ರದ ವಿನ್ಯಾಸ ಹಾಗೂ ಪಾತ್ರಾಭಿವ್ಯಕ್ತಿಯ ಮೂಲಕ ತಮ್ಮ ಕಲ್ಪನಾಶಕ್ತಿಯನ್ನು

ಯಕ್ಷಗಾನ ಹಾಸ್ಯ ಕಲಾವಿದ ಪೆರುವೋಡಿ ನಾರಾಯಣ ಭಟ್ ಇನ್ನಿಲ್ಲ Read More »

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ | ದ.ಕ.ಜಿಲ್ಲೆಯ ನಾಲ್ವರು ಪ್ರಶಸ್ತಿಗೆ ಆಯ್ಕೆ

ಬೆಂಗಳೂರು: ರಾಜ್ಯದ ಪ್ರಮುಖ ಸಾಹಿತಿಗಳು, ತೆರೆಮರೆಯ ಸಾಧಕರು, ಸಮಾಜ ಸೇವಕರು ಸೇರಿದಂತೆ 68 ಸಾಧಕರಿಗೆ 2023-24ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರಕಾರ ಘೋಷಣೆ ಮಾಡಿದ್ದು, ದ.ಕ.ಜಿಲ್ಲೆಯ ನಾಲ್ವರಿಗೆ ಪ್ರಶಸ್ತಿ ಘೋಷಣೆ ಮಾಡಿದೆ. ಕನ್ನಡ ನಾಡಿನ ಪರವಾಗಿ ಗಣನೀಯ ಸೇವೆ ಸಲ್ಲಿಸಿದ 10 ಸಂಘ-ಸಂಸ್ಥೆಗಳನ್ನೂ ಸರಕಾರ ಗುರುತಿಸಿದೆ. ಪತ್ರಕರ್ತರಾದ ದಿನೇಶ್ , ಚಾರ್ಮಾಡಿ ಹಸನಬ್ಬ, ಹಾಜಿ ಅಬ್ದುಲ್ಲ ಪರ್ಕಳ, ಕೆ. ಷರೀಫಾ, ಹುಸೇನಾಬಿ ಬುಡೇನ್ ಸಾಬ್ ಸೇರಿದಂತೆ ಹಲವರು ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇನ್ನು 10 ಸಂಘ-

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದ ರಾಜ್ಯ ಸರಕಾರ | ದ.ಕ.ಜಿಲ್ಲೆಯ ನಾಲ್ವರು ಪ್ರಶಸ್ತಿಗೆ ಆಯ್ಕೆ Read More »

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಕೇಂದ್ರದ ಅನುಮತಿ | ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ

ಮಂಗಳೂರು: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ಧಾರಿ ಚತುಷ್ಪತ ಕಾಮಗಾರಿಗೆ ಕೇಂದ್ರದ ಅನುಮತಿ, ಡಿ.ಪಿ.ಆರ್ ಹಾಗೂ ಸಾಧ್ಯತಾ ವರದಿ ತಯಾರಿಸಲು ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ ಟೆಂಡರ್ ಕರೆದಿದೆ. ಸಂಸದ ನಳಿನ್ ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಬಹು ನಿರೀಕ್ಷಿತ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರ (ಮಾಣಿ-ಮೈಸೂರು-ಬೆಂಗಳೂರು ವಿಭಾಗ) 0.00 ಕಿ.ಮೀ. ನಿಂದ 71.60 ವರೆಗಿನ ರಸ್ತೆಯ ಚತುಷ್ಪಥ ಕಾಮಗಾರಿಗೆ ಯೋಜನಾ ವರದಿ (ಡಿಪಿಆರ್), ಕಾರ್ಯಸಾಧ್ಯತೆಯ ಅಧ್ಯಯನ, ಸಮೀಕ್ಷೆ ಮತ್ತು ಭೂ ಯೋಜನೆಯನ್ನು ಸಿದ್ಧಪಡಿಸಲು ಅರ್ಹ

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಕೇಂದ್ರದ ಅನುಮತಿ | ಟೆಂಡರ್ ಕರೆದ ರಾಷ್ಟ್ರೀಯ ಹೆದ್ದಾರಿ ಇಲಾಖೆ Read More »

error: Content is protected !!
Scroll to Top