ಅಪರಾಧ

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ

ಉಡುಪಿ: ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಮಹೇಶ್ ಶೆಟ್ಟಿ ತಿಮರೋಡಿಯನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ತಾಲೂಕು ಸಂಚಾರಿ ಪೀಠ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ತಿಮರೋಡಿಗೆ ಎರಡು ಬಾರಿ ನೊಟೀಸ್ ‌ನೀಡಲಾಗಿತ್ತು. ಆದರೆ ಅದಕ್ಕೆ ಯಾವುದೇ ಉತ್ತರ ನೀಡದ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ದರು. ತಿಮರೋಡಿ ಬಂಧನದ ಸಮಯದಲ್ಲಿ ಅವರ ನಿವಾಸದ ಸಮೀಪ ಹೈಡ್ರಾಮಾ ನಡೆದಿದ್ದು, ಕೊನೆಗೆ ಅವರ ಖಾಸಗಿ ವಾಹನದಲ್ಲಿ […]

ಮಹೇಶ್ ಶೆಟ್ಟಿ ತಿಮರೋಡಿಗೆ ನ್ಯಾಯಾಂಗ ಬಂಧನ Read More »

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದ ಪೊಲೀಸರು

ಬಿ.ಎಲ್‌. ಸಂತೋಷ್‌ ಅವರನ್ನು ನಿಂದಿಸಿದ ಪ್ರಕರಣ ಉಜಿರೆ ಮನೆಯಲ್ಲಿ ತಿಮರೋಡಿ ಬೆಂಬಲಿಗರಿಂದ ಪ್ರತಿರೋಧ- ಪೊಲೀಸರ ಜೊತೆ ವಾಗ್ವಾದ ಮಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ. ಎಲ್‌. ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಬ್ರಹ್ಮಾವರ ಪೊಲೀಸರು ಮಹೇಶ್‌ ಶೆಟ್ಟಿ ತಿಮರೋಡಿಯನ್ನು ಇಂದು ಮನೆಯಿಂದ ವಶಕ್ಕೆ ಪಡೆದುಕೊಂಡು ಕರೆದೊಯ್ದಿದ್ದಾರೆ. ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡು ತಿಮರೋಡಿ, ಬಿಎಲ್ ಸಂತೋಷ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಈ ಕುರಿತು ರಾಜೀವ್‌ ಕುಲಾಲ್‌ ಎಂಬವರು ನೀಡಿದ ದೂರಿನ ಮೇರೆಗೆ ಬ್ರಹ್ಮಾವರ ಠಾಣೆಯಲ್ಲಿ

ಮಹೇಶ್‌ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದ ಪೊಲೀಸರು Read More »

ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶದಿಂದ ಹಣ : ಇ.ಡಿ. ಪರಿಶೀಲನೆ

ಯೂಟ್ಯೂಬರ್‌ಗಳಿಗೆ ವಿದೇಶದಿಂದ ಹಣ ಬರುತ್ತಿರುವ ಕುರಿತು ಹಲವು ದೂರು ದಾಖಲು ಧರ್ಮಸ್ಥಳ : ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಲು ಯೂಟ್ಯೂಬರ್‌ಗಳಿಗೆ ವಿದೇಶದಿಂದ ಹಣ ಹರಿದುಬಂದಿದೆ ಎಂಬ ಆರೋಪದ ಬಗ್ಗೆ ಪರಿಶೀಲನೆ ನಡೆಸಲು ಜಾರಿ ನಿರ್ದೇಶನಾಲಯ ಮುಂದಾಗಿದೆ ಎಂದು ತಿಳಿದುಬಂದಿದೆ. ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೆ ಯೂಟ್ಯೂಬರ್‌ಗಳಿಗೆ ವಿದೇಶಗಳಿಂದ ಭಾರಿ ಮೊತ್ತದ ಹಣ ಬಂದಿರುವ ಅನುಮಾನವಿದೆ ಎಂದು ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ದಾಖಲೆಗಳ ಪರಿಶೀಲನೆ ಮಾಡುವಂತೆ

ಧರ್ಮಸ್ಥಳ ಅಪಪ್ರಚಾರಕ್ಕೆ ವಿದೇಶದಿಂದ ಹಣ : ಇ.ಡಿ. ಪರಿಶೀಲನೆ Read More »

ಅನನ್ಯಾ ಭಟ್‌ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ

ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾಗಿರುವ ಅನನ್ಯಾ ಭಟ್‌ ಬೆಂಗಳೂರು: ಅನನ್ಯಾ ಭಟ್ ಎಂಬ ವೈದ್ಯಕೀಯ ವಿದ್ಯಾರ್ಥಿನಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದಾರೆ ಎನ್ನಲಾದ ಪ್ರಕರಣದ ತನಿಖೆಯನ್ನು ಅಧಿಕೃತವಾಗಿ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ. ಡಿಜಿ&ಐಜಿಪಿ ಆದೇಶದಂತೆ ಮುಂದಿನ ವಿಚಾರಣೆಗಾಗಿ ಅನನ್ಯಾ ಭಟ್ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ. 2003ರಲ್ಲಿ ಧರ್ಮಸ್ಥಳ ದೇವಸ್ಥಾನದ ಪರಿಸರದಿಂದ ತನ್ನ ಪುತ್ರಿ ಅನನ್ಯಾ ಭಟ್ ಕಾಣೆಯಾಗಿದ್ದ ಬಗ್ಗೆ ತಾಯಿ ಸುಜಾತ ಭಟ್ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನ್ನ ಮಗಳು ಅನನ್ಯಾ ಭಟ್ ಮಣಿಪಾಲದಲ್ಲಿ ವೈದ್ಯಕೀಯ

ಅನನ್ಯಾ ಭಟ್‌ ನಾಪತ್ತೆ ಪ್ರಕರಣ ಎಸ್‌ಐಟಿಗೆ ಹಸ್ತಾಂತರ Read More »

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ

ಜನಸಂಪರ್ಕ ಕಾರ್ಯಕ್ರಮದಲ್ಲಿ ಕಪಾಲಕ್ಕೆ ಹೊಡೆದ ವ್ಯಕ್ತಿ ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿದ್ದಾನೆಂದು ದೆಹಲಿ ಬಿಜೆಪಿ ಘಟಕ ತಿಳಿಸಿದೆ. ಸಿವಿಲ್ ಲೈನ್ಸ್‌ ಬಳಿಯಿರುವ ತಮ್ಮ ನಿವಾಸದಲ್ಲಿ ಜನ್ ಸುನ್‌ವಾಯಿ (ಜನಸಂಪರ್ಕ) ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, 30 ವರ್ಷದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಖಾ ಗುಪ್ತಾಗೆ ಯಾವುದೇ ಗಾಯವಾಗದಿದ್ದರೂ, ಈ ಘಟನೆ ಅವರನ್ನು ಆಘಾತಕ್ಕೀಡು ಮಾಡಿದೆ. ದಾಳಿಕೋರನನ್ನು ಈಗ ದೆಹಲಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ. ಜನಸಂಪರ್ಕ

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮೇಲೆ ಹಲ್ಲೆ Read More »

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಂದು ಸುಟ್ಟು ಹಾಕಿದ ದುರುಳರು

ವಸತಿ ಶಾಲೆಯ ವಿದ್ಯಾರ್ಥಿನಿ ಮೇಲೆ ನಡೆದ ಪೈಶಾಚಿಕ ಕೃತ್ಯಕ್ಕೆ ಆಕ್ರೋಶ ಬೆಂಗಳೂರು: ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಬಳಿಕ ಶವ ಸುಟ್ಟು ಹಾಕಿರುವ ಪೈಶಾಚಿಕ ಕೃತ್ಯ ಚಿತ್ರದುರ್ಗದ ಹಿರಿಯೂರು ಎಂಬಲ್ಲಿ ಸಂಭವಿಸಿದ್ದು, ಈ ಘಟನೆಗೆ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಕೋವೇರಹಟ್ಟಿ ಮೂಲದ 19 ವರ್ಷದ ವರ್ಷಿತಾ ಎಂಬಾಕೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವರ್ಷಿತಾ ಚಿತ್ರದುರ್ಗ ನಗರದ ಬಾಲಕಿಯರ ವಸತಿ ಶಾಲೆಯ ಪದವಿ ವಿದ್ಯಾರ್ಥಿನಿಯಾಗಿದ್ದು, ಈಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಂದು ಸುಟ್ಟು ಹಾಕಿದ ದುರುಳರು Read More »

ಉಪ್ಪಿನಂಗಡಿ : ಮಹಿಳೆಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿ ಬಂಧನ

ಉಪ್ಪಿನಂಗಡಿ: ನೆಲ್ಯಾಡಿ ಗ್ರಾಮದ ಪಡುವೆಟ್ಟು ಎಂಬಲ್ಲಿ ಕಳೆದ ಜೂನ್ 4ರಂದು ಮನೆಯ ಗೇಟು ಮುಂಭಾಗದಲ್ಲಿ ನಿಂತಿದ್ದ ಮಹಿಳೆಯೋರ್ವರ ಕತ್ತಿನಿಂದ 6 ಪವನ್ ತೂಕದ ಚಿನ್ನದ ಸರವನ್ನು ಬೈಕ್‍ನಲ್ಲಿ ಬಂದು ಎಳೆದುಕೊಂಡು ಪರಾರಿಯಾಗಿದ್ದ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಸುಳ್ಯ ಆಲೆಟ್ಟಿ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತನಾಗಿರುತ್ತಾರೆ. ಆರೋಪಿಯಿಂದ 4,54,000 ರೂ. ಮೌಲ್ಯದ ಚಿನ್ನದ ಸರ ಮತ್ತು ಕೃತ್ಯಕ್ಕೆ ಬಳಸಿದ ಪಲ್ಸರ್ ಬೈಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೈಕ್ ಬಗ್ಗೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ

ಉಪ್ಪಿನಂಗಡಿ : ಮಹಿಳೆಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿ ಬಂಧನ Read More »

5 ಕೋ.ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಪ್ರಜೆಗಳ ಬಂಧನ

ಬೆಂಗಳೂರು : ಡ್ರಗ್ಸ್‌ ದಂಧೆ ವಿರುದ್ಧ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಬೆಂಗಳೂರು ಪೊಲೀಸರು ಇಬ್ಬರು ವಿದೇಶಿ ಪ್ರಜೆಗಳನ್ನು ಬಂಧಿಸಿ ಅವರಿಂದ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಆಫ್ರಿಕಾ ಮೂಲದ ಜೊಯಲ್ ಕಾಬೊಂಗ್ ಮತ್ತು ಜೊಯ್ ಸಂಡೇ ಬಂಧಿತ ಆರೋಪಿಗಳು. ಜೊಯಲ್ ಕಾಬೊಂಗ್​ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ಜೊಯ್ ಸಂಡೇ ಮೂರು ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ವೀಸಾ ಅವಧಿ ಮುಗಿದಿದ್ದರೂ ಬೆಂಗಳೂರಲ್ಲಿ ವಾಸವಾಗಿದ್ದರು. ಈ ಇಬ್ಬರು

5 ಕೋ.ರೂ. ಮೌಲ್ಯದ ಡ್ರಗ್ಸ್‌ ವಶ : ಇಬ್ಬರು ವಿದೇಶಿ ಪ್ರಜೆಗಳ ಬಂಧನ Read More »

ನಕಲಿ ಕ್ರೀಡಾ ಪರಿಕರ ಮಾರಾಟ ಅಂಗಡಿಗಳಿಗೆ ಪೊಲೀಸರ ದಾಳಿ, ವಸ್ತುಗಳು ವಶಕ್ಕೆ

ಮಂಗಳೂರು: ನಕಲಿ‌ ಕ್ರೀಡಾ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಪೊಲೀಸರು ಕ್ರೀಡಾ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ಕ್ರೀಡಾ ಸಾಮಗ್ರಿಗಳು ಮಾರಟವಾಗುತ್ತಿರುವ ಬಗ್ಗೆ ಬ್ರಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈ. ಲಿ. ನ ದಕ್ಷಿಣ ಭಾರತದ ಪ್ರಾದೇಶಿಕ ಮುಖ್ಯಸ್ಥರಾದ ಸ್ಟೀಫನ್ ರಾಜ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದ ಹಾಗೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಆ. 18 ಮತ್ತು 19 ರಂದು ಸ್ಪೋರ್ಟ್ಸ್ ವಿನ್ನರ್ ಅಂಗಡಿ, ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವ

ನಕಲಿ ಕ್ರೀಡಾ ಪರಿಕರ ಮಾರಾಟ ಅಂಗಡಿಗಳಿಗೆ ಪೊಲೀಸರ ದಾಳಿ, ವಸ್ತುಗಳು ವಶಕ್ಕೆ Read More »

ಬಿ.ಎಲ್‌.ಸಂತೋಷ್‌ ನಿಂದನೆ : ತಿಮರೋಡಿ ವಿರುದ್ಧ ದೂರು ದಾಖಲು

ಉಡುಪಿ: ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರನ್ನು ವಾಚಾಮಗೋಚರವಾಗಿ ನಿಂದಿಸಿದ ಮಹೇಶ್‌ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಫೇಸ್‌ಬುಕ್‌ ವೀಡಿಯೊದಲ್ಲಿ ಮಹೇಶ್‌ ತಿಮರೋಡಿ ಎಂಬ ವ್ಯಕ್ತಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಹಿರಿಯ ಹಿಂದೂ ನಾಯಕರಾಗಿರುವ ಬಿ.ಎಲ್‌.ಸಂತೋಷ್‌ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿ ತೇಜೋವಧೆ ಮಾಡಿದ್ದಾರೆ. ಈ ಮೂಲಕ ವಿಭಿನ್ನ ಧರ್ಮಗಳ ನಡುವೆ ವೈಷಮ್ಯ ಸೃಷ್ಟಿಸಲು ಯತ್ನಿಸಿದ್ದಾರೆ ಎಂದು ಬಿಜೆಪಿ ಉಡುಪಿ ಜಿಲ್ಲೆ ಗ್ರಾಮಾಂತರ ಮಂಡಲಾಧ್ಯಕ್ಷ ರಾಜೀವ್‌ ಕುಲಾಲ್‌ ಎಂಬವರು

ಬಿ.ಎಲ್‌.ಸಂತೋಷ್‌ ನಿಂದನೆ : ತಿಮರೋಡಿ ವಿರುದ್ಧ ದೂರು ದಾಖಲು Read More »

error: Content is protected !!
Scroll to Top