ಅಪರಾಧ

ಸ್ಟೇಟ್‌ ಬ್ಯಾಂಕ್‌ನಿಂದ 50 ಕೆಜಿ ಚಿನ್ನ, 8 ಕೋ. ರೂ. ನಗದು ದರೋಡೆ

ಮ್ಯಾನೇಜರ್‌, ಕ್ಯಾಶಿಯರ್‌ ಕೈಕಾಲು ಕಟ್ಟಿ ಹಾಕಿ ದರೋಡೆ ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ಮನಗೂಳಿ ಕೆನರಾ ಬ್ಯಾಂಕ್ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿರುವ ಘಟನೆ ನಡೆದಿದೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ಚಡಚಣ ಪಟ್ಟಣದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬ್ಯಾಂಕ್‌ನಲ್ಲಿ ದರೋಡೆ ನಡೆದಿದೆ. ಸಿನಿಮೀಯ ರೀತಿಯಲ್ಲಿ ಬ್ಯಾಂಕ್ ಸಿಬ್ಬಂದಿಗೆ ಪಿಸ್ತೂಲ್, ಮಾರಕಾಸ್ತ್ರಗಳನ್ನು ತೋರಿಸಿ ಬ್ಯಾಂಕ್​ನ ಮ್ಯಾನೇಜರ್‌, ಕ್ಯಾಶಿಯರ್‌, ಸಿಬ್ಬಂದಿಯ ಕೈಕಾಲುಗಳನ್ನು ಕಟ್ಟಿಹಾಕಿ, ಅವರನ್ನು ರೂಂನಲ್ಲಿ ಕೂಡಿ ಹಾಕಿ ದರೋಡೆ […]

ಸ್ಟೇಟ್‌ ಬ್ಯಾಂಕ್‌ನಿಂದ 50 ಕೆಜಿ ಚಿನ್ನ, 8 ಕೋ. ರೂ. ನಗದು ದರೋಡೆ Read More »

ಬೈಕ್‌ನಲ್ಲಿ ಬಂದು ಮಹಿಳೆಯ ಕತ್ತಿನಿಂದ ಚಿನ್ನ ಎಗರಿಸಿದ ಆರೋಪಿ ಗ್ರಾಮಸ್ಥರ ಬಲೆಗೆ

ಚಿಕ್ಕಮಗಳೂರು: ಬೈಕ್‌‌ನಲ್ಲಿ ಬಂದ ಯುವಕನೊಬ್ಬ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಸರ ಕದಿಯಲು ಪ್ರಯತ್ನ ನಡೆಸಿದ್ದು, ಈ ಸಂಬಂಧ ಹರಿಹರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಹೇಮಂತ್ ಎಂದು ಗುರುತಿಸಲಾಗಿದೆ. ಬೈಕ್ ರೈಡಿಂಗ್‌ನಲ್ಲೇ ಸ್ಕೂಟಿಯಲ್ಲಿ ಹೋಗುತ್ತಿದ್ದ ಶಿಲ್ಪಾ ಎಂಬವರ ‌ಕುತ್ತಿಗೆಯಲ್ಲಿದ್ದ 30 ಗ್ರಾಂ ಚಿನ್ನದ ಸರವನ್ನು ಎಗರಿಸಲು ಪ್ರಯತ್ನ ನಡೆಸಿದ್ದಾನೆ. ಗಾಬರಿಯಾದ ಮಹಿಳೆ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ಗ್ರಾಮಸ್ಥರು ಪಕ್ಕದೂರಿಗೆ ಆತನ ಬಗ್ಗೆ ಮಾಹಿತಿ ನೀಡಿದ್ದಾರೆ. ಅದರಂತೆ ಕುರುಕುಬಳ್ಳಿ ಗ್ರಾಮದಲ್ಲಿ ಆರೋಪಿ ಬಲೆಗೆ ಬಿದ್ದಿದ್ದಾನೆ.

ಬೈಕ್‌ನಲ್ಲಿ ಬಂದು ಮಹಿಳೆಯ ಕತ್ತಿನಿಂದ ಚಿನ್ನ ಎಗರಿಸಿದ ಆರೋಪಿ ಗ್ರಾಮಸ್ಥರ ಬಲೆಗೆ Read More »

ಮೂವರು ಗೋಕಳ್ಳರ ಬಂಧನ

ಮಡಿಕೇರಿ: ಈದ್ ಹಬ್ಬದ ಸಂದರ್ಭದಲ್ಲಿ ಗೋವನ್ನು ಕಳ್ಳತನ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ವಿರಾಜಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಕೊಂಡೃಗೇರಿ ಗ್ರಾಮದ ಆಶಿಕ್, ಶಾಹಿದ್ ಮತ್ತು ಹಾರಿಸ್ ಎಂದು ಗುರುತಿಸಲಾಗಿದೆ. ಮೈತಾಡಿ ಗ್ರಾಮದ ಬೊಳ್ಳಪ್ಪಂಡ ಎಂ. ಭೀಮಯ್ಯ ಎಂಬವರಿಗೆ ‌ಸೇರಿದ ಹಸುವನ್ನು ಆರೋಪಿಗಳು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ನೀಡಲಾದ ದೂರಿನನ್ವಯ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿದೆ. ಹಾಗೆಯೇ ಆರೋಪಿಗಳಿಂದ 2600 ರೂ. ಗಳನ್ನು ವಶಕ್ಕೆ ಪಡೆದಿದ್ದಾರೆ.

ಮೂವರು ಗೋಕಳ್ಳರ ಬಂಧನ Read More »

ಧರ್ಮಸ್ಥಳ : ಮತ್ತೆ ಉತ್ಖನನ ಆಗ್ರಹಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ

ಶವ ಹೂಳುವಾಗ ನೋಡಿದ್ದೇವೆ ಎಂದ ಇಬ್ಬರಿಂದ ಅರ್ಜಿ ಧರ್ಮಸ್ಥಳ: ಧರ್ಮಸ್ಥಳ ಆಸುಪಾಸಿನಲ್ಲಿ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ ಶವ ಹೂತ ಜಾಗ ಗುರುತಿಸಲು ಹಾಗೂ ಉತ್ಖನನ ನಡೆಸುವಂತೆ ಇಬ್ಬರು ಸ್ಥಳೀಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ನ್ಯಾ‌‌ಯಮೂರ್ತಿ ನಾಗಪ್ರಸನ್ನ ಪೀಠ ರಿಟ್ ಅರ್ಜಿಯನ್ನು ಕೈಗೆತ್ತಿಕೊಂಡು ಎಸ್ಐಟಿಗೆ ನೊಟೀಸ್ ಜಾರಿ ಮಾಡಿದೆ. ಸ್ಥಳೀಯರಾದ ಪುರಂದರ ಗೌಡ ಹಾಗೂ ತುಕಾರಾಮ್ ಗೌಡ ಎಂಬ ಇಬ್ಬರು ಸಾಕ್ಷಿದಾರರು ನೇತ್ರಾವತಿ ಕಾಡಿನಲ್ಲಿ ಚಿನ್ನಯ್ಯ ಶವವನ್ನು ಹೂಳುವಾಗ ನೋಡಿದ್ದೇವೆ ಎಂದು

ಧರ್ಮಸ್ಥಳ : ಮತ್ತೆ ಉತ್ಖನನ ಆಗ್ರಹಿಸಿ ಹೈಕೋರ್ಟ್‌ಗೆ ರಿಟ್‌ ಅರ್ಜಿ Read More »

ಧರ್ಮಸ್ಥಳ ಪ್ರಕರಣ : ಇಂದು ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವ ದಫನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ದೂರುದಾರನಾಗಿ ಬಂದು ಇದೀಗ ಶಿವಮೊಗ್ಗ ಜೈಲಿನಲ್ಲಿ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಚಿನ್ನಯ್ಯನ ಜಾಮೀನು ಅರ್ಜಿಯ ತೀರ್ಪು ಸೆ.16‌ರಂದು ಬೆಳ್ತಂಗಡಿ ನ್ಯಾಯಾಲಯ‌ ಪ್ರಕಟಿಸಲಿದೆ. ಸೆ.12ರಂದು ಬೆಳ್ತಂಗಡಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯವು ತೀರ್ಪನ್ನು ಸೆ.16ಕ್ಕೆ ಕಾಯ್ದಿರಿಸಿದೆ. ಪ್ರಕರಣದ ವಿಚಾರಣೆ ವೇಳೆ ಎಸ್‌ಐಟಿಯಿಂದ ಜಾಮೀನು ನೀಡದಂತೆ ಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದ್ದರು. ಚಿನ್ನಯ್ಯ ಪರ ಉಚಿತ ಕಾನೂನು ಸೇವಗಳ ಪ್ರಾಧಿಕಾರದ ವಕೀಲರು ವಾದ ಮಂಡಿಸಿದ್ದರು. ಚಿನ್ನಯ್ಯನ ಬಂಧನದ

ಧರ್ಮಸ್ಥಳ ಪ್ರಕರಣ : ಇಂದು ಚಿನ್ನಯ್ಯನ ಜಾಮೀನು ಅರ್ಜಿ ವಿಚಾರಣೆ Read More »

ದೋಟಿ ವಿದ್ಯುತ್‌ ತಂತಿಗೆ ತಗುಲಿ ತೆಂಗಿನಕಾಯಿ ಕೀಳುತ್ತಿದ್ದ ವ್ಯಕ್ತಿ ಮೃತ್ಯು

ಹೈಟೆನ್ಶನ್‌ ತಂತಿಗೆ ತಗುಲಿದ ಅಲ್ಯುಮಿನಿಯಂ ದೋಟಿ ಸುಳ್ಯ: ತೆಂಗಿನಕಾಯಿ ಕೀಳುತ್ತಿದ್ದಾಗ ಅಲ್ಯೂಮಿನಿಯಂ ದೋಟಿ ವಿದ್ಯುತ್ ಲೈನ್‌ಗೆ ತಾಗಿ ಕಾಯಿ ಕೊಯ್ಯುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಸುಳ್ಯ ಸಮೀಪ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಲ್ಲಿ ಸಂಭವಿಸಿದೆ. ಮೃತರಾದ ವ್ಯಕ್ತಿ ತಂಬಿನಮಕ್ಕಿಯ ರಾಮ (47) ಎಂದು ತಿಳಿದು ಬಂದಿದೆ. ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ಸಿದ್ದಿಕ್ ಎಂಬರಿಗೆ ಸೇರಿದ ತೆಂಗಿನಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಮ ಅವರು ತೆಂಗಿನಕಾಯಿ ಕೊಯ್ಯುತ್ತಿದ್ದಾಗ ಅವರ ಕೈತಪ್ಪಿ

ದೋಟಿ ವಿದ್ಯುತ್‌ ತಂತಿಗೆ ತಗುಲಿ ತೆಂಗಿನಕಾಯಿ ಕೀಳುತ್ತಿದ್ದ ವ್ಯಕ್ತಿ ಮೃತ್ಯು Read More »

ಈದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ಬೈಕ್‌ನಲ್ಲಿ ಪ್ರಯಾಣ: 3 ಜನರ ವಿರುದ್ಧ FIR

ಶಿವಮೊಗ್ಗ: ಕೆಲ ದಿನಗಳ ಹಿಂದೆ ಈದ್ ಮಿಲಾದ್ ಮೆರವಣಿಗೆಯಲ್ಲಿ ಮೂವರು ಯುವಕರು ಬೈಕ್‌ನಲ್ಲಿ ಪ್ಯಾಲೆಸ್ತೇನ್ ಧ್ವಜ ಹಾರಿಸಿಕೊಂಡು ಪ್ರಯಾಣಿಸಿದ್ದು, ಈ ವಿಡಿಯೋ ಆಧರಿಸಿ ಭದ್ರಾವತಿ ಹಳೇ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭದ್ರಾವತಿಯ ಬಿ. ಎಚ್. ರಸ್ತೆಯ ರೈಲ್ವೆ ನಿಲ್ದಾಣ ಮಹಾದ್ವಾರದಲ್ಲಿ 3 ಜನ ಯುವಕರು ಪ್ಯಾಲೆಸ್ಟೈನ್ ಧ್ವಜ ಹಾರಿಸಿಕೊಂಡು ಅಕ್ಸಾ ಮಸೀದಿ ಪ್ಯಾಲೆಸ್ಟೈನ್ ಎಂದು ಬೊಬ್ಬೆ ಹೊಡೆಯುತ್ತಾ ಪ್ರಯಾಣ ನಡೆಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಈದ್ ಮೆರವಣಿಗೆಯಲ್ಲಿ ಪ್ಯಾಲೆಸ್ಟೈನ್ ಧ್ವಜ ಹಿಡಿದು ಬೈಕ್‌ನಲ್ಲಿ ಪ್ರಯಾಣ: 3 ಜನರ ವಿರುದ್ಧ FIR Read More »

ದರ್ಶನ್ ವಿಷಯದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ: ಜೈಲಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ವಕೀಲರ ದೂರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ‌ಸಂಬಂಧಿಸಿದ ಹಾಗೆ ಜೈಲು ಸೇರಿರುವ ನಟ ದರ್ಶನ್ ತೂಗುದೀಪ್‌ಗೆ ‌ ಕೋರ್ಟ್ ಸಮ್ಮತಿಯ ಬಳಿಕವೂ ಹೆಚ್ಚುವರಿ ಹಾಸಿಗೆ, ದಿಂಬು, ಬೆಡ್‌ಶೀಟ್ ನೀಡಲಾಗುತ್ತಿಲ್ಲ ಎಂದು ತಿಳಿದು ಬಂದಿದೆ. ಈ ಸಂಬಂಧ ಜೈಲಧಿಕಾರಿಗಳ ನಡೆಯನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಜೈಲಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಕಡೆ ಗಣಿಸಿದ್ದಾಗಿ ಅರ್ಜಿಯಲ್ಲಿ ಹೇಳಲಾಗಿದೆ. ಕೋರ್ಟ್ ಆದೇಶ‌ ನೀಡಿದ ಬಳಿಕವೂ ಜೈಲಿನಲ್ಲಿ ದರ್ಶನ್ ತೂಗುದೀಪ್ ಅವರ ಸ್ಥಿತಿ ಹಾಗೆಯೇ ಇದೆ. ಬೆಳಗ್ಗೆ ಮತ್ತು

ದರ್ಶನ್ ವಿಷಯದಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘನೆ: ಜೈಲಧಿಕಾರಿಗಳ ವಿರುದ್ಧ ನ್ಯಾಯಾಲಯಕ್ಕೆ ವಕೀಲರ ದೂರು Read More »

ಪ್ರಚೋದನಾತ್ಮಕ ಭಾಷಣದ ಆರೋಪದಲ್ಲಿ ಯತ್ನಾಳ್ ವಿರುದ್ಧ ಕೇಸು ದಾಖಲು

ಬೆಂಗಳೂರು: ಗಣೇಶೋತ್ಸವ ಶೋಭಾಯಾತ್ರೆಯಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪ್ರಕರಣ ದಾಖಲಾಗಿದೆ. ತುಮಕೂರಿನಲ್ಲಿ ನಡೆದ ಗಣೇಶೋತ್ಸವದಲ್ಲಿ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದೆ ಮದ್ದೂರಿನಲ್ಲಿಯೂ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದರು ಎಂಬ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ಅವರು ತುಮಕೂರಿನಲ್ಲಿ ಶನಿವಾರ ನಡೆದ ಗಣೇಶ ವಿಸರ್ಜನಾ ಯಾತ್ರೆಯಲ್ಲಿ ಭಾಗವಹಿಸಿದ್ದು, ಈ ವೇಳೆ ಅನ್ಯ ಕೋಮಿನ ಜನರ ಭಾವನೆಗಳಿಗೆ ಧಕ್ಕೆಯಾಗುವಂತೆ ಮಾತನಾಡಿದ್ದಾಗಿ ಪೊಲೀಸ್ ಸಿಬ್ಬಂದಿ ರಘುನಾಥ್ ದೂರು ನೀಡಿರುವುದಾಗಿದೆ. ಈ

ಪ್ರಚೋದನಾತ್ಮಕ ಭಾಷಣದ ಆರೋಪದಲ್ಲಿ ಯತ್ನಾಳ್ ವಿರುದ್ಧ ಕೇಸು ದಾಖಲು Read More »

ಅಮೆರಿಕದಲ್ಲಿ ಪತ್ನಿ, ಪುತ್ರನ ಎದುರೇ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ

ಕ್ಯೂಬಾ ಮೂಲದ ಪಾತಕಿ ಎಸಗಿದ ಕೃತ್ಯಕ್ಕೆ ಟ್ರಂಪ್‌ ಖಂಡನೆ ವಾಷಿಂಗ್ಟನ್‌ : ಕರ್ನಾಟಕ ಮೂಲದ 50 ವರ್ಷದ ವ್ಯಕ್ತಿಯೊಬ್ಬರನ್ನು ಅಮೆರಿಕದಲ್ಲಿ ಹೆಂಡತಿ ಮತ್ತು ಮಗನ ಎದುರೇ ತಲೆ ಕತ್ತರಿಸಿ ಕೊಲೆ ಮಾಡಿದ ಬರ್ಬರ ಘಟನೆ ಸಂಭವಿಸಿದ್ದು, ಈ ಘಟನೆ ಜಾಗತಿಕವಾಗಿ ಕಳವಳಕ್ಕೆ ಕಾರಣವಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇಂಥ ಕೃತ್ಯ ಎಸಗಿದವನಿಗೆ ಯಾವುದೇ ಕಾರಣಕ್ಕೂ ಮೃದು ಧೋರಣೆ ತೋರಿಸುವುದಿಲ್ಲ ಎಂದು ಹೇಳಿದ್ದಾರೆ. ಡಲ್ಲಾಸ್‌ನಲ್ಲಿ ಮೋಟೆಲ್‌ ಮ್ಯಾನೇಜರ್‌ ಆಗಿದ್ದ ಕರ್ನಾಟಕ ಮೂಲದ ಚಂದ್ರಮೌಳಿ ಬಾಬ್‌ ನಾಗಮಲ್ಲಯ್ಯ ಅವರನ್ನ

ಅಮೆರಿಕದಲ್ಲಿ ಪತ್ನಿ, ಪುತ್ರನ ಎದುರೇ ಕರ್ನಾಟಕದ ವ್ಯಕ್ತಿಯ ಶಿರಚ್ಛೇದ Read More »

error: Content is protected !!
Scroll to Top