ಅಪರಾಧ

ತಿಮರೋಡಿ ಗಡಿಪಾರಿಗೆ ಮತ್ತೆ ನೋಟಿಸ್‌ ಜಾರಿ?

ಹೊಸ ಪ್ರಕರಣಗಳನ್ನು ಸೇರಿಸಿ ಮತ್ತೆ ಗಡಿಪಾರು ನೋಟಿಸ್‌ ಬೆಳ್ತಂಗಡಿ: ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಮತ್ತೆ ಗಡಿಪಾರು ಮಾಡುವ ಬಗ್ಗೆ ನೋಟಿಸ್ ನೀಡಿರುವುದಾಗಿ ತಿಳಿದು ಬಂದಿದೆ. ಈ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ನಿನ್ನೆಯಿಂದ ಬಹಳ ವೈರಲ್‌ ಆಗುತ್ತಿದೆ. ಈ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಸಹಾಯಕ ಕಮಿಷನರ್ ಆದೇಶ ಮಾಡಿದ್ದರು ಈ ಆದೇಶವನ್ನು ಪ್ರಶ್ನಸಿ ಮಹೇಶ್ ಶೆಟ್ಟಿ ತಿಮರೋಡಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ […]

ತಿಮರೋಡಿ ಗಡಿಪಾರಿಗೆ ಮತ್ತೆ ನೋಟಿಸ್‌ ಜಾರಿ? Read More »

ಧರ್ಮಸ್ಥಳ ಪ್ರಕರಣ ತನಿಖೆ ಪೂರ್ಣಗೊಂಡಿಲ್ಲ : ಮೊಹಾಂತಿ ಸ್ಪಷ್ಟನೆ

ತನಿಖೆ ಇನ್ನೂ ಮುಂದುವರಿಯಲಿದೆ ಎಂದು ಎಸ್‌ಐಟಿ ಮುಖ್ಯಸ್ಥ ಬೆಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಸರಕಾರಕ್ಕೆ ಸಲ್ಲಿಕೆ ಆಗಿರುವುದು ಈವರೆಗಿನ ವರದಿ ಮಾತ್ರ. ಚಾಜ್‌ರ್ಶೀಟ್ ಅಲ್ಲ ಎಂದು ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಾಂತಿ ಸ್ಪಷ್ಟಪಡಿಸಿದ್ದಾರೆ. ಶುಕ್ರವಾರ ಬೆಂಗಳೂರಿನ ನೃಪತುಂಗ ರಸ್ತೆಯ ರಾಜ್ಯ ಪೊಲೀಸ್‌ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಅಂತಿಮ ಚಾಜ್‌ರ್ಶೀಟ್ ಸಲ್ಲಿಕೆಯಾಗಿದೆ ಅಥವಾ ಸಿದ್ಧಗೊಂಡಿದೆ ಎಂದು ಹೇಳಿದವರು ಯಾರು? ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗ ಸಲ್ಲಿಕೆ ಆಗಿರುವುದು

ಧರ್ಮಸ್ಥಳ ಪ್ರಕರಣ ತನಿಖೆ ಪೂರ್ಣಗೊಂಡಿಲ್ಲ : ಮೊಹಾಂತಿ ಸ್ಪಷ್ಟನೆ Read More »

ಗುಂಪು ಮಾರಾಮಾರಿಯಲ್ಲಿ ಕಾಂಗ್ರೆಸ್‌ ನಾಯಕ ಹತ್ಯೆ

ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ದುಷ್ಕರ್ಮಿಗಳು ಬೆಂಗಳೂರು : ಎರಡು ಗುಂಪುಗಳ ಮಧ್ಯೆ ನಡೆದ ಮಾರಾಮಾರಿಯಲ್ಲಿ ಕಾಂಗ್ರೆಸ್ ಗ್ರಾಮ ಪಂಚಾಯತ್‌ ಸದಸ್ಯ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ ನಡೆದಿದೆ. ಗಣೇಶ್ ಗೌಡ ಕೊಲೆಯಾದ ದುರ್ದೈವಿ. ಕೊಲೆಗೂ ಮುನ್ನ ಶುಕ್ರವಾರ ರಾತ್ರಿ 10.30ರ ವೇಳೆ ಸಖರಾಯಪಟ್ಟಣ ಬಾರ್ ಬಳಿ ಎರಡು ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಬಾರ್ ಬಳಿ ಗಲಾಟೆ ನಡೆದ ಅರ್ಧ ಗಂಟೆ ನಂತರ ಮಠದ ಬಳಿ

ಗುಂಪು ಮಾರಾಮಾರಿಯಲ್ಲಿ ಕಾಂಗ್ರೆಸ್‌ ನಾಯಕ ಹತ್ಯೆ Read More »

ಡಿಕೆಶಿಗೂ ಇದೆ ನ್ಯಾಶನಲ್‌ ಹೆರಾಲ್ಡ್‌ ಹಗರಣದ ನಂಟು : ನೋಟಿಸ್‌ ಜಾರಿ

ಹಗರಣದ ಪ್ರಮುಖ ಮಾಹಿತಿ ಡಿಕೆಶಿ ಬಳಿ ಇರುವ ಅನುಮಾನ ಬೆಂಗಳೂರು : ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ದೆಹಲಿ ಪೊಲೀಸರು ಕಾಂಗ್ರೆಸ್​ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್​ಐಆರ್ ದಾಖಲಿಸಿದ ಬೆನ್ನಲ್ಲೇ ಇದೇ ಪ್ರಕರಣಕ್ಕೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ನೋಟಿಸ್​ ಜಾರಿ ಮಾಡಿ ಡಿಸೆಂಬರ್ 19ರೊಳಗೆ ದೆಹಲಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಈ ಪ್ರಕರಣದ ಪ್ರಮುಖ ಮಾಹಿತಿ ಡಿಕೆಶಿ ಬಳಿ ಇದೆ ಎಂದು ದೆಹಲಿ ಪೊಲೀಸರು ನಂಬಿದ್ದಾರೆ.

ಡಿಕೆಶಿಗೂ ಇದೆ ನ್ಯಾಶನಲ್‌ ಹೆರಾಲ್ಡ್‌ ಹಗರಣದ ನಂಟು : ನೋಟಿಸ್‌ ಜಾರಿ Read More »

ಬಾಲಕಿ ನೇಣು ಬಿಗಿದು ಆತ್ಮಹತ್ಯೆ

ಉಳ್ಳಾಲ: ಹದಿನಾರು ವರ್ಷದ ಹುಡುಗಿಯೊಬ್ಬಳು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಾವೂರು ಇನೋಳಿ ಎಂಬಲ್ಲಿ ನಡೆದಿದೆ. ಮೃತಳನ್ನು ಇನೋಳಿ ಕಾನ ನಿವಾಸಿ ಝೈನಾಜ್ ಎಂದು ಗುರುತಿಸಲಾಗಿದೆ. ಮೃತ ಬಾಲಕಿ SSLC ಓದಿನ ಬಳಿಕ ಬ್ಯೂಟಿಷಿಯನ್ ಕೋರ್ಸ್‌ಗೆ ‌ಸೇರಿಕೊಂಡಿದ್ದಳು. ಆದರೆ ಗುರುವಾರ ಅನಾರೋಗ್ಯದ ಕಾರಣ ಹೇಳಿ ಮನೆಯಲ್ಲೇ ಉಳಿದುಕೊಂಡಿದ್ದಳು. ತನ್ನ ಅಜ್ಜಿ ಹಾಗೂ ತಾಯಿ ಮನೆಯಲ್ಲಿಲ್ಲದ ‌ಸಮಯ ನೋಡಿ ಈಕೆ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಾಲಕಿ ನೇಣು ಬಿಗಿದು ಆತ್ಮಹತ್ಯೆ Read More »

ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ

ಬೆಂಗಳೂರು: ಹಗ್ಗವನ್ನು ಪತ್ನಿಯ ಕತ್ತಿಗೆ ‌ಸುತ್ತಿ ಕೊಲೆಗೈದು, ಬಳಿಕ ತಾನೂ ಅದೇ ಹಗ್ಗದಿಂದ ಪತಿಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಬ್ರಹ್ಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬೇಬಿ (60) ಎಂಬವರೇ ಕೊಲೆಯಾದ ದುರ್ದೈವಿ. ಇವರ ಪತಿ ವೆಂಕಟೇಶನ್ (65) ಎಂಬವರೇ ಕೊಲೆ ನಡೆಸಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶನ್ ಅವರು ಬಿಎಂ‌ಟಿಸಿ ಚಾಲಕನಾಗಿ ಕೆಲಸ ಮಾಡಿದ್ದು, ಸದ್ಯ ನಿವೃತ್ತಿ ಹೊಂದಿದ್ದರು. ಪತ್ನಿ ಸ್ಟ್ರೋಕ್ ಕಾರಣದಿಂದ ಹಾಸಿಗೆ ಹಿಡಿದಿದ್ದರು. ಈ ದಂಪತಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇವರಿಗೆ

ಜಗಳ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಪತಿ Read More »

ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಖದೀಮರು

ಮಂಗಳೂರು: ದರೋಡೆಕೋರರು ಮನೆಗೆ ನುಗ್ಗಿ ಮಹಿಳೆಯನ್ನು ಕಟ್ಟಿ ಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳ್ಳತನ ನಡೆಸಿರುವ ಘಟನೆ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಂತ್ರಸ್ಥ ಮಹಿಳೆ ಜಲಜಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಜಲಜಾ ಅವರು ಒಂಟಿಯಾಗಿ ವಾಸಿಸುತ್ತಿದ್ದು, ಡಿ. 3 ರ ಮಧ್ಯಾಹ್ನದ ವೇಳೆ ಇಬ್ಬರು ಯುವಕರು ನೀರು ಕೇಳುವ ನೆಪದಲ್ಲಿ ಅವರ ಮನೆಯ ಬಾಗಿಲು ಬಡಿದಿದ್ದಾರೆ. ಆಗ ಜಲಜ ಅವರು ನೀನು ಹೊರಗಡೆ ಇರುವುದಾಗಿ ತಿಳಿಸಿದ್ದಾರೆ. ಕೆಲವು ಹೊತ್ತಲ್ಲೇ ಒಬ್ಬ

ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ನಗದು, ಚಿನ್ನಾಭರಣ ದೋಚಿದ ಖದೀಮರು Read More »

ವಂಚಕರ ಪಾಲಾಗುತ್ತಿದ್ದ ವೃದ್ಧ ದಂಪತಿಯ ಲಕ್ಷಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌

ವೃದ್ಧ ದಂಪತಿಯನ್ನು ಡಿಜಿಟಲ್‌ ಅರೆಸ್ಟ್‌ ಮಾಡಿ ಹಣ ದೋಚಲು ಯತ್ನಿಸಿದ್ದ ಸೈಬರ್‌ ಚೋರರು ಮಂಗಳೂರು : ಬ್ಯಾಂಕ್‌ ಮ್ಯಾನೇಜರ್‌ ಒಬ್ಬರ ಸಮಯಪ್ರಜ್ಞೆಯಿಂದಾಗಿ ಸೈಬರ್‌ ವಂಚಕರ ಪಾಲಾಗುತ್ತಿದ್ದ ವೃದ್ಧ ದಂಪತಿಯ ಬರೋಬ್ಬರಿ 84 ಲ.ರೂ. ಉಳಿದಿದೆ. ಕಿನ್ನಿಗೋಳಿಯ ಸಮೀಪದ ದಾಮಸ್‌ಕಟ್ಟೆ ವೃದ್ಧ ದಂಪತಿಯನ್ನು ಸೈಬರ್‌ ವಂಚಕರು ಡಿಜಿಟಲ್‌ ಅರೆಸ್ಟ್‌ ಮಾಎಡಿ ಬೆದರಿಸಿ ಹಣ ಲೂಟಿ ಮಾಡಲು ಯತ್ನಿಸಿದ್ದರು. ಡಿಸೆಂಬರ್ 1ರಂದು ಸಂಜೆ ವಂಚಕರ ತಂಡವೊಂದು ಕಿನ್ನಿಗೋಳಿಯ ದಾಮಸ್ ಕಟ್ಟೆಯ ವೃದ್ಧ ದಂಪತಿಗೆ ಕರೆ ಮಾಡಿ ನೀವು ಯಾರದ್ದೋ ಖಾತೆಯಿಂದ

ವಂಚಕರ ಪಾಲಾಗುತ್ತಿದ್ದ ವೃದ್ಧ ದಂಪತಿಯ ಲಕ್ಷಗಟ್ಟಲೆ ಹಣ ಉಳಿಸಿದ ಬ್ಯಾಂಕ್‌ ಮ್ಯಾನೇಜರ್‌ Read More »

ಕಡಬ : ತಡರಾತ್ರಿ ಮನೆಗೆ ನುಗ್ಗಿದ ಹೆಡ್‌ಕಾನ್‌ಸ್ಟಬಲ್‌ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಊರವರು

ಮನೆಯವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನ ಕಡಬ : ತಡರಾತ್ರಿ ಮನೆಯೊಂದಕ್ಕೆ ಅಕ್ರಮ ಪ್ರವೇಶಗೈದ ಕಡಬ ಠಾಣಾ ಹೆಡ್‌ಕಾನ್‌ಸ್ಟೇಬಲ್‌ನನ್ನು ಊರವರೇ ಹಿಡಿದು ಧರ್ಮದೇಟು ಬಿಗಿದು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಕಡಬ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ರಾಜು ನಾಯ್ಕ್ ಆರೋಪಿ. ಮನೆಯವರ ಕೈಗೆ ಸಿಕ್ಕಿಬಿದ್ದಾಗ ಸ್ಥಳದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಮನೆಯ ಸದಸ್ಯರೊಬ್ಬರಿಗೆ ಈತ ಹಲ್ಲೆ ನಡೆಸಿದ್ದಾನೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಎಂಬಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಈತ

ಕಡಬ : ತಡರಾತ್ರಿ ಮನೆಗೆ ನುಗ್ಗಿದ ಹೆಡ್‌ಕಾನ್‌ಸ್ಟಬಲ್‌ನನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಊರವರು Read More »

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಪೋಕ್ಸೋ ಆರೋಪಿಯ ಬಂಧನ

ಕಾಸರಗೋಡು: ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪೋಕ್ಸೋ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನೆಕ್ರಾಜೆ ಕೊರೆಕ್ಕಾನದ ಅಶ್ವಥ್(19) ಎಂಬವನೇ ಪರಾರಿಯಾಗಿದ್ದ ಆರೋಪಿ. ಪೊಲೀಸರ ಕಸ್ಟಡಿಯಲ್ಲಿದ್ದ ಈತ ಕೆಲಕಾಲ ತಪ್ಪಿಸಿಕೊಂಡಿದ್ದು, ಆತನನ್ನು ಆನೆಬಾಗಿಲು ಬಳಿಯ ಪೊದೆಯೊಂದರಿಂದ ಮತ್ತೆ ಬಂಧಿಸಲಾಗಿದೆ. ಕಾಸರಗೋಡು ನಗರ ಠಾಣೆಗೆ ಕರೆದುಕೊಂಡು ಬಂದ ಸಂದರ್ಭದಲ್ಲಿ ಪೊಲೀಸರ ಕಣ್ತಪ್ಪಿಸಿ ಈತ ಪರಾರಿಯಾಗಿದ್ದ. ತಕ್ಷಣವೇ ಕಾರ್ಯ ಪ್ರವೃತ್ತರಾದ ಪೊಲೀಸರು ಆತನನ್ನು ಮತ್ತೆ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪೊಲೀಸರ ಕಸ್ಟಡಿಯಿಂದ ತಪ್ಪಿಸಿಕೊಂಡ ಪೋಕ್ಸೋ ಆರೋಪಿಯ ಬಂಧನ Read More »

error: Content is protected !!
Scroll to Top