ಹೂಡಿಕೆ ನೆಪದಲ್ಲಿ ಕೋಟ್ಯಂತರ ರೂ. ವಂಚನೆ : ಗಂಡ-ಹೆಂಡತಿ ಸೆರೆ
ಮಂಗಳೂರು : ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ ಲಾಭ ಗಳಿಸಿಕೊಡುತ್ತೇವೆ ಎಂದು ನಂಬಿಸಿ ಕಿನ್ನಿಗೋಳಿ ಪರಿಸರದ ಪರಿಚಯಸ್ಥ ಜನರಿಗೆ ಕೋಟಿಗಟ್ಟಲೆ ರೂಪಾಯಿ ವಂಚಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಿನ್ನಿಗೋಳಿ ಸಮೀಪದ ಕವತ್ತಾರಿನ ರಿಚರ್ಡ್ ಡಿಸೋಜ ಮತ್ತು ಅವನ ಹೆಂಡತಿ ರಶ್ಮಿ ರೀಟಾ ಪಿಂಟೊ ಸೆರೆಯಾಗಿರುವ ಆರೋಪಿಗಳು. ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ಸಾರ್ವಜನಿಕರಿಗೆ ಹೂಡಿಕೆ ನೆಪದಲ್ಲಿ ಸುಮಾರು 1.5 ಕೋ. ರೂ. ವಂಚಿಸಿದ ಪ್ರಕರಣ ದಾಖಲಾಗಿತ್ತು. ಆರೋಪಿಗಳು ಸುಮಾರು ಒಂದೂವರೆ ವರ್ಷದಿಂದ ಮುಂಬೈಯಲ್ಲಿ ತಲೆಮರೆಸಿಕೊಂಡಿದ್ದರು. ಮೂಲ್ಕಿ […]
ಹೂಡಿಕೆ ನೆಪದಲ್ಲಿ ಕೋಟ್ಯಂತರ ರೂ. ವಂಚನೆ : ಗಂಡ-ಹೆಂಡತಿ ಸೆರೆ Read More »










