ಅಪರಾಧ

ಕಾಂಗ್ರೇಸ್‍ನ ಅತಿಯಾದ ಅಲ್ಪಸಂಖ್ಯಾತ ಓಲೈಕೆಯೇ ಆ್ಯಸಿಡ್ ದಾಳಿಗೆ ಕಾರಣ : ಪುತ್ತಿಲ ಪರಿವಾರ ಆರೋಪ

ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುತ್ತಿರುವ ಕಡಬದ ವಿದ್ಯಾರ್ಥಿನಿಗಳ ಮೇಲೆ ಅಬೀನ್ ಎಂಬಾತನಿಂದ ಆ್ಯಸಿಡ್ ದಾಳಿ ನಡೆದಿರುವುದು ನಾಗರಿಕ ಸಮಾಜವೇ ತಲೆತಗ್ಗಿಸುವ ವಿಷಯಾವಾಗಿದ್ದು ಈ ಕೃತ್ಯವನ್ನು ಪುತ್ತಿಲ ಪರಿವಾರ ಖಂಡಿಸುತ್ತದೆ. ಇಂದು ಬೆಳಗ್ಗೆ ಅಲೀನಾ, ಅರ್ಚನ, ಅಮೃತ ಎನ್ನುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರ ಮೇಲೆ ಅಬೀನ್ ಎಂಬಾತ ಆ್ಯಸಿಡ್ ದಾಳಿ ನಡೆಸಿದ್ದಾನೆ. ಒಬ್ಬಾಕೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿದ್ದರಾಮಯ್ಯ ಸರ್ಕಾರದ ಅತಿಯಾದ ಅಲ್ಪಸಂಖ್ಯಾತ ಓಲೈಕೆಯಿಂದ ಭಯವೇ ಇಲ್ಲದಂತಾಗಿದೆ. ದಕ್ಷಿಣ ಕನ್ನಡದಲ್ಲಂತು ಗಾಂಜಾ, ಕಳ್ಳತನ, ಕೊಲೆ ಪ್ರಕರಣಗಳು, ತಲವಾರು ದಾಳಿಗಳು, […]

ಕಾಂಗ್ರೇಸ್‍ನ ಅತಿಯಾದ ಅಲ್ಪಸಂಖ್ಯಾತ ಓಲೈಕೆಯೇ ಆ್ಯಸಿಡ್ ದಾಳಿಗೆ ಕಾರಣ : ಪುತ್ತಿಲ ಪರಿವಾರ ಆರೋಪ Read More »

ಅಪರಿಚಿತನಿಂದ ಆ್ಯಸಿಡ್ ದಾಳಿ  | ಮೂವರು ವಿದ್ಯಾರ್ಥಿನಿಯರು ಗಂಭೀರ

ಕಡಬ: ಅಪರಿಚಿತ ವ್ಯಕ್ತಿಯೋರ್ವ ಆ್ಯಸಿಡ್ ಎರಚಿದ ಪರಿಣಾಮ ಮೂವರು ವಿದ್ಯಾರ್ಥಿನಿಯರು ಗಂಭಿರ ಗಾಯಗೊಂಡ ಘಟನೆ ಕಡಬ ಸರಕಾರಿ ಕಾಲೇಜು ಆವರಣದಲ್ಲಿ ನಡೆಯಿತು. ಘಟನೆಯಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಅಲಿನ ಸಿಬಿ, ಅರ್ಚನ, ಅಮೃತ ಗಂಭೀರವಾಗಿ ಗಾಯಗೊಂಡಿದ್ದು, ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಅಬೀನ್ ರನ್ನು ಪೊಲೀಸ್‌ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ಅಪರಿಚಿತನಿಂದ ಆ್ಯಸಿಡ್ ದಾಳಿ  | ಮೂವರು ವಿದ್ಯಾರ್ಥಿನಿಯರು ಗಂಭೀರ Read More »

ಯುವತಿ ನೇಣು ಬಿಗಿದು ಆತ್ಮಹತ್ಯೆ !

ಕಾಣಿಯೂರು: ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಣಿಯೂರಿನಲ್ಲಿ ನಡೆದಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಅನಿಲ ಮನೆಯ ಪದ್ಮಯ್ಯ ಗೌಡರ ಪುತ್ರಿ ದಿವ್ಯಾಶ್ರೀ (26) ಆತ್ಮಹತ್ಯೆ ಮಾಡಿಕೊಂಡವರು. ಅಪಪ್ರಚಾರಕ್ಕೆ ಮನನೊಂದು ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ತಕ್ಷಣ ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಯುವತಿ ಮೃತಪಟ್ಟರೆನ್ನಲಾಗಿದೆ. ಬೆಳ್ಳಾರೆ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ಯುವತಿ ನೇಣು ಬಿಗಿದು ಆತ್ಮಹತ್ಯೆ ! Read More »

ದ್ವಿಚಕ್ರ ವಾಹನ ಕಳವು : ಪ್ರಕರಣ ದಾಖಲು

ಬೆಳ್ತಂಗಡಿ: ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳವಿಗೆ ಸಂಬಂಧಿಸಿದಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ಬೇಕರಿಯೊಂದರ ಸಮೀಪದ ಹೊಂಡಾ ಯೂನಿಕಾರ್ನ್‍ ದ್ವಿಚಕ್ರ ವಾಹನವನ್ನು ಉಜಿರೆಯ ರಾಜು ಎಂಬವರು ನಿಲ್ಲಿಸಿದ್ದರು. ಒಂದು ಗಂಟೆ ಬಳಿಕ ಬಂದು ನೋಡಿದಾಗ ವಾಹನ ಕಳವಾಗಿರುವುದು ಬೆಳಕಿಗೆ ಬಂದಿದೆ. ಸುತ್ತಮುತ್ತಲು ಹುಡುಕಾಡಿದರೂ ಎಲ್ಲೂ ಸಿಗದಿದ್ದ ಹಿನ್ನಲೆಯಲ್ಲಿ ಬೆಳ್ತಂಗಡಿ ಠಾಣೆಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.

ದ್ವಿಚಕ್ರ ವಾಹನ ಕಳವು : ಪ್ರಕರಣ ದಾಖಲು Read More »

ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ | ಪ್ರಮುಖ ಆರೋಪಿಗಳ ಬಂಧನ

ಅಡ್ಯನಡ್ಕ: ಕರ್ನಾಟಕ ಬ್ಯಾಂಕ್‍ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ತನಿಖೆ ವೇಗ ಪಡೆದುಕೊಂಡಿದೆ. ಇದೀಗ ಪ್ರಮುಖ ಆರೋಪಿಯ ವಿಚಾರಣೆ ನಡೆಯುತ್ತಿದೆ. ತಾಂತ್ರಿಕ ತನಿಖೆ ಮೂಲಕ ಪ್ರಮುಖ ಮಾಹಿತಿಗಳನ್ನು ಸಂಗ್ರಹಿಸಿದ ಪೊಲೀಸರು ಪ್ರಮುಖ ಆರೋಪಿಗಳನ್ನು ಎರಡು ದಿನಗಳ ಹಿಂದೆ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಫೆ.7 ರಂದು ಬ್ಯಾಂಕ್ ಕಟ್ಟಡದ ಹಿಂಬಾಗಿಲಿನ ಕಿಟಕಿಯನ್ನು ತುಂಡರಿಸಿ ಒಳನುಗ್ಗಿದ ಕಳ್ಳರು ಭಾರೀ ಪ್ರಮಾಣದ ನಗ-ನಗದನ್ನು ದೋಚಿದ್ದರು. ಈ ಸಂದರ್ಭ ಕಾರ್ಯಪ್ರವೃತ್ತರಾದ ಪೊಲೀಸರು ಅನುಮಾನದ ಮೇಲೆ

ಅಡ್ಯನಡ್ಕ ಕರ್ನಾಟಕ ಬ್ಯಾಂಕ್ ದರೋಡೆ | ಪ್ರಮುಖ ಆರೋಪಿಗಳ ಬಂಧನ Read More »

ಕಾಂಗ್ರೇಸ್‍ನ ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದು ಖಂಡನೀಯ | ಹೋರಾಟಕ್ಕೆ ಪುತ್ತಿಲ ಪರಿವಾರ ಬೆಂಬಲ ಘೋಷಣೆ

ಪುತ್ತೂರು: ಕಾಂಗ್ರೇಸ್ ಸರ್ಕಾರದ ತನ್ನ ಪಕ್ಷದ 5 ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಒತ್ತಡದ ಮೂಲಕ ಬಳಸಿಕೊಳ್ಳುತ್ತಿರುವುದನ್ನು ಪುತ್ತಿಲ ಪರಿವಾರ ತೀವ್ರವಾಗಿ ಖಂಡಿಸುತ್ತದೆ. ಈಗಾಗಲೇ ಅಂಗನವಾಡಿ ಕಾರ್ಯಕರ್ತೆಯರಿಗೆ ಚುನಾವಣೆಯ ಕೆಲಸ, ಮಕ್ಕಳಿಗೆ, ಬಾಣಂತಿ, ಗರ್ಭಿಣಿಯರಿಗೆ ಮನೆಗೆ ಆಹಾರ ಸಾಗಟ, ಪಲ್ಸ್ ಪೊಲೀಯೋ,  ಪೋಷಣ್ ಟ್ರ್ಯಾಕರ್,  ಮತದಾನ  ಸೇರ್ಪಡೆ-ರದ್ದು ತಿದ್ದುಪಡಿ ಮೊದಲಾದ ಕೆಲಸಗಳಿದ್ದು ಅದರ ತೀವ್ರ ಒತ್ತಡದ ನಡುವೆ ಪುಟಾಣಿ ಮಕ್ಕಳಿಗೆ ಪಾಠದ ಸಮಯವೇ ಇಲ್ಲದಂತಾಗಿದೆ. ಇದರ ನಡುವೆ ಕಳೆದ ಎರಡು ತಿಂಗಳಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ

ಕಾಂಗ್ರೇಸ್‍ನ ಗ್ಯಾರಂಟಿ ಯೋಜನೆಯ ಸಮೀಕ್ಷೆಗೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಬಳಸಿಕೊಳ್ಳುವುದು ಖಂಡನೀಯ | ಹೋರಾಟಕ್ಕೆ ಪುತ್ತಿಲ ಪರಿವಾರ ಬೆಂಬಲ ಘೋಷಣೆ Read More »

ಮಾದಕ ಸೇವನೆ ಮಾಡಿ ಅನುಚಿತ ವರ್ತನೆ | ಇಬ್ಬರ ಬಂಧನ

ಉಪ್ಪಿನಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕದ್ರವ್ಯ ಸೇವನೆ ಮಾಡಿ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸವಣೂರು ನಿವಾಸಿ ಪಿ. ಹನೀಫ್, ಮಹಮ್ಮದ್ ಶಾಫಿ ಬಂಧಿತರು. ಉಪ್ಪಿನಂಗಡಿ ಠಾಣಾ ಉಪನಿರೀಕ್ಷಕರಾದ ಅವಿನಾಶ್ ಹೆಚ್ ಹಾಗೂ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕದ್ರವ್ಯ ಸೇವನೆ ಮಾಡಿರುವುದು ದೃಢಪಟ್ಟಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾದಕ ಸೇವನೆ ಮಾಡಿ ಅನುಚಿತ ವರ್ತನೆ | ಇಬ್ಬರ ಬಂಧನ Read More »

40 ಲಕ್ಷ ರೂ. ಮೌಲ್ಯದ ಗಾಂಜಾ ವಶ : ಇಬ್ಬರ ಸೆರೆ

ಪೆರ್ಲ: ಪೆರ್ಲ ಚೆಕ್‍ ಪೋಸ್ಟ್ ಬಳಿ ಕಾಸರಗೋಡು ಅಬಕಾರಿ ಇಲಾಖೆಯ ವಿಶೇಷ ತನಿಖಾ ದಳ ನಡೆಸಿದ ತಪಾಸಣೆಯಲ್ಲಿ ಪಿಕಪ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಭಾರಿ ಪ್ರಮಾಣದ ಗಾಂಜ ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಕರ್ನಾಟಕ ಭಾಗದಿಂದ ಬಂದ ಕೆ ಎಲ್ 14 ಎಸಿ 0211 ನೋಂದಣಿಯ ಪಿಕಪ್ ವಾಹನದಲ್ಲಿ ಪ್ಯಾಕೆಟ್ ಗಳಲ್ಲಿ ಗಾಂಜಾ ಸಾಗಿಸುವ ಪ್ರಯತ್ನ ನಡೆದಿತ್ತು. ಅನಾಮಧೇಯ ಮಾಹಿತಿ ಮೇರೆಗೆ ಎಕ್ಸೈಸ್ ಎನ್ಫೋರ್ಸ್ ಮೆಂಟ್ ನಾರ್ಕೋಟಿವ್ ಸ್ಪೇಷಲ್ ಸೆಲ್ ಸಿಐ ಅಮಲ್ ರಾಜ್, ಡಿಸಿ ಜಯರಾಜ್, ಸಾಜನ್,

40 ಲಕ್ಷ ರೂ. ಮೌಲ್ಯದ ಗಾಂಜಾ ವಶ : ಇಬ್ಬರ ಸೆರೆ Read More »

ವೀರಮಂಗಲ ಕುಮಾರಧಾರ ನದಿಯಲ್ಲಿ ಮರಳು ದಂಧೆ | ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವರು ಅವಬೃತ ಸ್ನಾನಕ್ಕೆ ತೆರಳುವ ವೀರಮಂಗಲ ಕುಮಾರಧಾರ ನದಿಯಲ್ಲಿ ಅವ್ಯಾಹತವಾಗಿ ಮರಳು ತೆಗೆದು ರಾಶಿ ಹಾಕಲಾಗಿದ್ದು, ಇದೀಗ ಸ್ಥಳೀಯ ಜನರ ವಿರೋಧಕ್ಕೆ ಕಾರಣವಾಗಿದೆ. ಶ್ರೀ ಮಹಾಲಿಂಗೇಶ್ವರ ದೇವರು ಜಳಕ ಮಾಡುವ ಸ್ಥಳದಿಂದಲೇ ಮರಳುಗಳು ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು, ನದಿಯ ಎರಡೂ ಬದಿಗಳಲ್ಲಿ ಲೋಡುಗಟ್ಟಲೆ ಮರಳು ರಾಶಿ ಹಾಕಲಾಗಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮರಳು ರಾಶಿ ಹಾಕಿದರೂ ಸಂಬಂಧ ಪಟ್ಟ ಅಧಿಕಾರಿಗಳು ಇನ್ನೂ ಗಮನಹರಿಸದಿರುವುದು ದುರಾದೃಷ್ಟ. ಈ ಕುರಿತು ಭೂವಿಜ್ಞಾನ ಮತ್ತು ಗಣಿ ಇಲಾಖೆಯ

ವೀರಮಂಗಲ ಕುಮಾರಧಾರ ನದಿಯಲ್ಲಿ ಮರಳು ದಂಧೆ | ಎಚ್ಚೆತ್ತುಕೊಳ್ಳದ ಅಧಿಕಾರಿಗಳು Read More »

ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ | ಆರೋಪಿ ಬಂಧನ !

ಬಂಟ್ವಾಳ : ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ ನೀಡಿದ ಆರೋಪದ ಮೇಲೆ ಹೊಟೇಲ್ ಮಾಲಕರೊಬ್ಬರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ. ಸಜೀಪನಡು ಗ್ರಾಮದ ಅಬ್ದುಲ್ಲಾ ಎಂಬಾತನ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಅಪ್ರಾಪ್ತ ಶಾಲಾ ಬಾಲಕಿಗೆ ದೈಹಿಕ ಹಿಂಸೆ ನೀಡಿದ್ದಾನೆ ಎಂದು ಬಾಲಕಿಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಠಾಣಾ ಎಸ್‍.ಐ. ಮೂರ್ತಿ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಅಪ್ರಾಪ್ತ ಬಾಲಕಿಗೆ ದೈಹಿಕ ಹಿಂಸೆ | ಆರೋಪಿ ಬಂಧನ ! Read More »

error: Content is protected !!
Scroll to Top