ಅಪರಾಧ

ತಾಯಿ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ

ಪುತ್ತೂರು: ತಾಯಿ ಮಗುವಿನೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಡ್ಯಾರ್ ಪದವು ನಿವಾಸಿ ಚೈತ್ರ, ಹಾಗೂ ಒಂದು ವರ್ಷದ ಮಗು ದಿಯಾಂಶ್‍ ಎಂಬವರ ಮೃತದೇಹ ಹರೇಕಳ ಸೇತುವೆ ಬಳಿ ಪತ್ತೆಯಾಗಿದೆ. ಶುಕ್ರವಾರ ಮಧ್ಯಾಹ್ನ ತಾಯಿ-ಮಗು ನಾಪತ್ತೆಯಾಗಿದ್ದ ಹಿನ್ನಲೆಯಲ್ಲಿ ಹುಡುಕಾಟಕ್ಕೆ ಸಂಬಂಧಿಕರು ಮನವಿ ಮಾಡಿದ್ದರು. ಈ ನಡುವೆ ಶುಕ್ರವಾರವೇ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ದೇರಳಕಟ್ಟೆ ಸೇವಾಶ್ರಮದಲ್ಲಿ ಆಚರಿಸಿದ್ದರು ಎನ್ನಲಾಗಿದೆ. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ.

ತಾಯಿ ಮಗುವಿನೊಂದಿಗೆ ನದಿಗೆ ಹಾರಿ ಆತ್ಮಹತ್ಯೆ Read More »

ಕಡಬದಲ್ಲಿ ಅಕ್ರಮ ಗೋ ವಧೆ ಮಾಡಿ ಮಾಂಸ ತಯಾರಿಕೆ | ಪೊಲೀಸರಿಂದ ದಾಳಿ

ಕಡಬ : ಅಕ್ರಮವಾಗಿ ಗೋವಧೆ ಮಾಡಿ ಮಾಂಸ ಮಾಡುತ್ತಿದ್ದ ಮನೆಯೊಂದಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಕಡಬ ತಾಲೂಕಿನ ಕೊಯಿಲಾ ಕೆಮ್ಮಾರ ಆಕೀರ ಎಂಬಲ್ಲಿ ನಡೆದಿದೆ. ಕಡಬ ತಾಲೂಕು ಕೊಯಿಲಾ ಗ್ರಾಮದ ಕೆಮ್ಮಾರ ಆಕೀರ ಎಂಬಲ್ಲಿ, ಇಲ್ಯಾಸ್ ಎಂಬಾತನ ಮನೆಯಲ್ಲಿ ಅಕ್ರಮವಾಗಿ ದನವನ್ನು ವಧೆ ಮಾಡಿ ಮಾಂಸ ಮಾಡುತ್ತಿರುವ ಕುರಿತು ಮಾಹಿತಿ ತಿಳಿಸಿದ ಕಡಬ ಪೊಲೀಸ್ ಠಾಣಾ ಪಿ.ಎಸ್.ಐ ಅಭಿನಂಧನ್ ಎಂ.ಎಸ್ ಹಾಗೂ ಸಿಬ್ಬಂದಿಗಳು ಮಾ.28 ರಂದು ಬೆಳಿಗ್ಗೆ ದಾಳಿ ಮಾಡಿದ್ದು, ಕೊಯಿಲ ಗ್ರಾಮದ ಇಲ್ಯಾಸ್ ಮತ್ತು

ಕಡಬದಲ್ಲಿ ಅಕ್ರಮ ಗೋ ವಧೆ ಮಾಡಿ ಮಾಂಸ ತಯಾರಿಕೆ | ಪೊಲೀಸರಿಂದ ದಾಳಿ Read More »

ರಾಮೇಶ್ವರಂ ಕೆಫೆ : ಪ್ರಮುಖ ಆರೋಪಿ ಬಂಧನ

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ. ಬಾಂಬ್ ತಯಾರಿಕೆಯ ಪ್ರಮುಖ ಆರೋಪಿ ಮುಜಾಮುಲ್ ಶರೀಫ್ ಬಂಧಿತ ಆರೋಪಿ. ಎನ್ ಐ ಎ ಅಧಿಕಾರಿಗಳು ಮೂರು ರಾಜ್ಯಗಳ ಹಲವು ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಇದೀಗ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಜ್ಯದ 12 ಸ್ಥಳಗಳಲ್ಲಿ, ತಮಿಳುನಾಡಿನ 5, ಉತ್ತರಪ್ರದೇಶದ 1 ಕಡೆ ಸೇರಿದಂತೆ 18 ಕಡೆಗಳಲ್ಲಿ ಎನ್ ಐ ಎ ತಂಡಗಳು ದಾಳಿ ನಡೆಸಿತ್ತು. ಈ ಹಿಂದೆ

ರಾಮೇಶ್ವರಂ ಕೆಫೆ : ಪ್ರಮುಖ ಆರೋಪಿ ಬಂಧನ Read More »

ಯುವಕ ನೇಣು ಬಿಗಿದು ಆತ್ಮಹತ್ಯೆ

ವಿಟ್ಲ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಳ ಗ್ರಾಮದ ಕರ್ಗಲ್ಲು ಎಂಬಲ್ಲಿ ಇಂದು ನಡೆದಿದೆ. ವಿಟ್ಲ ಕರ್ಗಲ್ಲು ನಿವಾಸಿ ವೆಂಕಪ್ಪ ಎಂಬವರ ಪುತ್ರ ಮಿಥುನ್ (34) ಆತ್ಮಹತ್ಯೆ ಮಾಡಿಕೊಂಡವರು. ಆತ್ಮಹತ್ಯೆಗೆ ಕಾರಣಗಳು ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ,.

ಯುವಕ ನೇಣು ಬಿಗಿದು ಆತ್ಮಹತ್ಯೆ Read More »

ನಿನ್ನೆ ಕೂಜಿಮಲೆ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಮಹಿಳೆ ನಕ್ಸಲ್ ಅಲ್ಲ / ಮಹಿಳೆ ಪೊಲೀಸರ ವಶಕ್ಕೆ! ವಿಚಾರಣೆ ವೇಳೆ ರಾಜಸ್ಥಾನ್ ಮೂಲ ಎಂಬುದು ಬಹಿರಂಗ

ಸುಳ್ಯ:  ಸುಳ್ಯ ತಾಲೂಕಿನ ಕೂಜಿಮಲೆಯಲ್ಲಿ ಅಪರಿಚಿತ ಮಹಿಳೆ ನಿನ್ನೆ ಪತ್ತೆಯಾಗಿದ್ದು ಈಕೆ ನಕ್ಸಲ್ ಗುಂಪಿಗೆ ಸೇರಿದವರು ಎಂದು ಸುದ್ದಿಯಾಗಿತ್ತು. ಆದರೆ ಈಕೆ ನಕ್ಸಲ್ ಗುಂಪಿಗೆ ಸೇರಿದವರಲ್ಲ ಬದಲಾಗಿ ಈಕೆ ರಾಜಸ್ಥಾನ್ ಮೂಲದವಳಾಗಿದ್ದು ಆಕೆಯನ್ನು ಪೊಲೀಸರು ವಶಪಡಿಸಿಕೊಂಡು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೊಳಪಡಿಸಿ ಇದೀಗ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ನಂತರ ಆಶ್ರಮಕ್ಕೆ ಸೇರ್ಪಡೆಗೊಳಿಸಲಾಗುವುದೆಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.              ಕೂಜಿಮಲೆ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಮಹಿಳೆ ನಕ್ಸಲ್ ಎಂಬ ಸುದ್ದಿ ತಿಳಿದ ಎ.ಎನ್.ಎಫ್

ನಿನ್ನೆ ಕೂಜಿಮಲೆ ಎಸ್ಟೇಟ್ ನಲ್ಲಿ ಕಾಣಿಸಿಕೊಂಡ ಮಹಿಳೆ ನಕ್ಸಲ್ ಅಲ್ಲ / ಮಹಿಳೆ ಪೊಲೀಸರ ವಶಕ್ಕೆ! ವಿಚಾರಣೆ ವೇಳೆ ರಾಜಸ್ಥಾನ್ ಮೂಲ ಎಂಬುದು ಬಹಿರಂಗ Read More »

ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ | ನೈಜ ಪರಿಶಿಷ್ಟ ಜಾತಿಯವರಿಂದ ರಾಜ್ಯವ್ಯಾಪಿ ಉಗ್ರ ಹೋರಾಟದ ಎಚ್ಚರಿಕೆ

ಪುತ್ತೂರು: ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರು ರಾಜಕೀಯ ಒತ್ತಡದಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ ನಡೆಸುತ್ತಿದ್ದು, ಈ ಕುರಿತು ಜೆ.ಸಿ.ಪ್ರಕಾಶ್ ನೀಡಿದ ವರದಿಯನ್ನು ತಿರಸ್ಕರಿಸಬೇಕು. ರಾಜ್ಯ ಸರಕಾರ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಮುಂದಾದಲ್ಲಿ ನಾವು ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಲಿದ್ದೇವೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಅಶೋಕ್ ಕೊಂಚಾಡಿ ತಿಳಿಸಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರಿಗೆ ಪರಿಶಿಷ್ಟ ಜಾತಿಯ ಪ್ರಮಾಣ ಪತ್ರ ನೀಡುವ ಪ್ರಯತ್ನ

ಅಸ್ಪೃಶ್ಯರಲ್ಲದ ಮೀನುಗಾರ ಮೊಗೇರರಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆಯಲು ಹುನ್ನಾರ | ನೈಜ ಪರಿಶಿಷ್ಟ ಜಾತಿಯವರಿಂದ ರಾಜ್ಯವ್ಯಾಪಿ ಉಗ್ರ ಹೋರಾಟದ ಎಚ್ಚರಿಕೆ Read More »

ಪಾದ್ರಿಯಿಂದ ಹಲ್ಲೆಗೊಳಗಾದ ದಂಪತಿಗೆ ಸಮುದಾಯದಿಂದ ಬಹಿಷ್ಕಾರ | ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಗ್ರೆಗೊರಿ ಮೊಂಥೆರೊ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪರಿಯಾಲತಡ್ಕ ಗ್ರಾಮದಲ್ಲಿ ಮಾರ್ಚ್ ಮೊದಲ ವಾರದಲ್ಲಿ ನಡೆದ ಚರ್ಚ್‌ನ ಪಾದ್ರಿಯೊಬ್ಬರಿಂದ ಹಲ್ಲೆಗೊಳಗಾದ ವೃದ್ಧ ದಂಪತಿಯನ್ನು ಗ್ರಾಮದ ಕ್ರೈಸ್ತ ಸಮುದಾಯ ಬಹಿಷ್ಕರಿಸಿದೆ ಎಂದು ಆರೋಪಿಸಲಾಗಿದೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ  ಹಲ್ಲೆಗೊಳಗಾದ ಗ್ರೆಗೊರಿ ಮೊಂಥೆರೊ ಹಾಗೂ ಫಿಲೋಮಿನಾ ಕೊಯೆಲೊ ಚರ್ಚ್ ಪಾದ್ರಿ ಫಾದರ್ ನೆಲ್ಸನ್ ಒಲಿವೆರಾ, ಹಲ್ಲೆ ನಡೆಸಿದವರ ವಿರುದ್ಧ ದೂರು ನೀಡಿದ ಕೂಡಲೇ ಕಿರುಕುಳ ಆರಂಭವಾಗಿದೆ. ಮೊದಲಿಗೆ ಚರ್ಚ್‌ಗೆ ಸಂಪರ್ಕ ಹೊಂದಿದ ಎಲ್ಲ ವಾಟ್ಸಾಪ್ ಗುಂಪುಗಳಿಂದ ನಮ್ಮನ್ನು ತೆಗೆದುಹಾಕಲಾಯಿತು. ನಂತರ

ಪಾದ್ರಿಯಿಂದ ಹಲ್ಲೆಗೊಳಗಾದ ದಂಪತಿಗೆ ಸಮುದಾಯದಿಂದ ಬಹಿಷ್ಕಾರ | ಪತ್ರಿಕಾಗೋಷ್ಠಿಯಲ್ಲಿ ಸಂತ್ರಸ್ತ ಗ್ರೆಗೊರಿ ಮೊಂಥೆರೊ Read More »

ತಿರುಪತಿ ದೇಗುಲದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ | ಚುನಾವಣೆ- ಅವ್ಯವಹಾರ ಲಿಂಕ್ ಆರೋಪ

ತಿರುಪತಿ: ತಿರುಪತಿ ದೇಗುಲದಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿರುವ ಆರೋಪ ಕೇಳಿಬಂದಿದ್ದು, ಸರಕಾರದ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಎಂಜಿನಿಯರಿಂಗ್ ಕಾಮಗಾರಿ ಆರ್ಡರ್ ಗಳನ್ನು ನೀಡಲಾಗಿದೆ ಎಂದು ಆರೋಪ ಕೇಳಿ ಬರುತ್ತಿದೆ. ತೆಲುಗು ದೇಶಂ ಪಾರ್ಟಿ ವಕ್ತಾರ ನೀಲಾಯಪಾಲೆಂ ವಿಜಯ್ ಕುಮಾರ್, ದೇವಸ್ಥಾನದ ಟ್ರಸ್ಟ್ ಬೋರ್ಡ್ ಅಧ್ಯಕ್ಷ ಭೂಮನ ಕರುಣಾಕರ್ ರೆಡ್ಡಿ ಮತ್ತು ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮಾ ರೆಡ್ಡಿ ವಿರುದ್ಧ ಈ ಗಂಭೀರ ಆರೋಪ ಮಾಡಲಾಗಿದೆ. ಕರುಣಾಕರ್ ರೆಡ್ಡಿ ಮತ್ತು ಧರ್ಮಾ ರೆಡ್ಡಿ ಉಸ್ತುವಾರಿಯಲ್ಲಿ

ತಿರುಪತಿ ದೇಗುಲದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ | ಚುನಾವಣೆ- ಅವ್ಯವಹಾರ ಲಿಂಕ್ ಆರೋಪ Read More »

ಶಾಂತಿಯುತ ಮತದಾನ ಹಿನ್ನಲೆ | ದ.ಕ.ಜಿಲ್ಲೆಯಿಂದ 13 ಮಂದಿ ಗಡಿಪಾರು, ನಾಲ್ವರ ಮೇಲೆ ಗೂಂಡಾ ಕಾಯ್ದೆ

ಮಂಗಳೂರು: ಲೋಕಸಭೆ ಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಹಿನ್ನಲೆಯಲ್ಲಿ ಮಂಗಳೂರು ನಗರದಲ್ಲಿ ನಾಲ್ವರು ರೌಡಿಗಳ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದ್ದು, ಮತ್ತೆ 13 ಮಂದಿಯನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ. ಉಳ್ಳಾಲ ಅಂಬ್ಲಮೊಗರು ನಿವಾಸಿ ಹೇಮಚಂದ್ರ ಅಲಿಯಾಸ್ ಪ್ರಜ್ವಲ್ ಪೂಜಾರಿ (29), ಉಳ್ಳಾಲ ಕೈರಂಗಳ ನಿವಾಸಿ ನವಾಜ್ ಅಲಿಯಾಸ್ (36), ಕುದ್ರೋಳಿ ನಿವಾಸಿ ಅನೀಶ್ ಅಶ್ರಫ್ (26) ಹಾಗೂ ಬೋಳೂರು ನಿವಾಸಿ ಚರಣ್ ಶೇಟ್ ಅಲಿಯಾಸ್ ಚರಣ್ ಪಾಲ್ (39) ಎಂಬವರ ವಿರುದ್ಧ ಗೂಂಡಾ ಕಾಯ್ದೆ ಹೇರಲಾಗಿದೆ. ಈ ನಾಲ್ವರು

ಶಾಂತಿಯುತ ಮತದಾನ ಹಿನ್ನಲೆ | ದ.ಕ.ಜಿಲ್ಲೆಯಿಂದ 13 ಮಂದಿ ಗಡಿಪಾರು, ನಾಲ್ವರ ಮೇಲೆ ಗೂಂಡಾ ಕಾಯ್ದೆ Read More »

ಕಡಬ ತಾಲೂಕು ಪಂಚಾಯಿತಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು

ಕಡಬ:  ತಾಲೂಕು ಪಂಚಾಯಿತಿ ಗೆ ಬುಧವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಿ. ವಿ. ಜಯಣ್ಣ ಅವರನ್ನು ಲೋಕಾಯುಕ್ತ ಅಧಿಕಾರಿಗಳು ತನಿಖೆಗೆ ಒಳಡಿಸಿದ್ದಾರೆ. ಈ ಹಿಂದೆ ಸೋಮವಾರಪೇಟೆ ತಾಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿದ್ದ ಬಿ.ವಿ.ಜಯಣ್ಣ ಅವರು ಅಕ್ರಮ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆಗಾಗಿ ಬುಧವಾರ ಬೆಳ್ಳಂಬೆಳಗ್ಗೆ ಆಗಮಿಸಿದ್ದಾರೆ ಎಂದು ತಿಳಿದು ಬಂದಿದೆ. ಜಯಣ್ಣ ಅವರು ವಾಸ್ತವ್ಯ

ಕಡಬ ತಾಲೂಕು ಪಂಚಾಯಿತಿ ಕಚೇರಿಗೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು Read More »

error: Content is protected !!
Scroll to Top