ಅಪರಾಧ

ಅಡ್ಯನಡ್ಕದಲ್ಲಿ ಹಲ್ಲೆ ಪ್ರಕರಣ: ಇತ್ತಂಡಗಳ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಅಡ್ಯನಡ್ಕದಲ್ಲಿ ಇತ್ತೀಚೆಗೆ ನಡೆದ ಯುವಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಇತ್ತಂಡಗಳ ವಿರುದ್ಧ ದೂರು ದಾಖಲಾಗಿದೆ. ಅಡ್ಯನಡ್ಕ ನಿವಾಸಿ ಮಹಮ್ಮದಾಲಿ ಎ. (36) ಎಂಬವರು ನೀಡಿದ ದೂರಿನಂತೆ ಗಣೇಶ್ ಎಂಬವರು ಮನೆಯ ಬಳಿ ಬಂದು ಹಣದ ವಿಚಾರದಲ್ಲಿ ತಕರಾರು ತೆಗೆದು ಅವ್ಯಾಚವಾಗಿ ನಿಂದಿಸಿ, ಕತ್ತಿಯಿಂದ ಹಲ್ಲೆ ನಡೆಸಲು ಮುಂದಾಗಿದ್ದು, ಸ್ಥಳೀಯರು ಬಂದಾಗ ಪರಾರಿಯಾಗಿರುತ್ತಾನೆ ಎಂದು ಪ್ರಕರಣ ದಾಖಲಾಗಿದೆ. ಈ ನಡುವೆ ಗಣೇಶ್ ಅವರು ಮಹಮ್ಮದಾಲಿ ಕತ್ತಿಯಿಂದ ಹಲ್ಲೆ ನಡೆಸಿ ಜೀವ ಬೆದರಿಕೆ ಒಡ್ಡಿದ್ದಾರೆಂದು […]

ಅಡ್ಯನಡ್ಕದಲ್ಲಿ ಹಲ್ಲೆ ಪ್ರಕರಣ: ಇತ್ತಂಡಗಳ ವಿರುದ್ಧ ಪ್ರಕರಣ ದಾಖಲು Read More »

ಸ್ಪೋಟಕ ಬಳಸಿ ಕಲ್ಲು ಸ್ಪೋಟ | ಮನೆಗೆ ಹಾನಿ : ಠಾಣೆಗೆ ದೂರು

ಕಡಬ: ಸ್ಪೋಟಕ ಬಳಸಿ ಕಲ್ಲು ಒಡೆಯುತ್ತಿರುವ ಪರಿಣಾಮ ಮನೆಗಳಿಗೆ ಹಾನಿಯುಂಟಾಗುವುದರ ಜತೆ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಎಂದು ಸ್ಪೋಟಕ ನಡೆಸುವವರ ವಿರುದ್ಧ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಕುಕ್ಕಿಪ್ಪನ ಮನೆ ನಿವಾಸಿ ಆನಂದ ಗೌಡ ಎಂಬವರು ಈ ಕುರಿತು ಠಾಣೆಗೆ ದೂರು ನೀಡಿದ್ದು, ಸಮೀಪದ ನಿವಾಸಿ ದಯಾನಂದ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಏನೆಕಲ್ಲು ಗ್ರಾಮದ ಅಜಿರುಪೊಲಿ ಎಂಬಲ್ಲಿ ಕಳೆದ ಎರಡು ತಿಂಗಳಿನಿಂದ ಅಕ್ರಮ ಸ್ಪೋಟಕಗಳನ್ನು ಬಳಸಿ ಕಲ್ಲುಗಳನ್ನು ಒಡೆದು ಸೈಜುಕಲ್ಲುಗಳನ್ನಾಗಿ

ಸ್ಪೋಟಕ ಬಳಸಿ ಕಲ್ಲು ಸ್ಪೋಟ | ಮನೆಗೆ ಹಾನಿ : ಠಾಣೆಗೆ ದೂರು Read More »

ನಿಷೇಧಿತ ಕೇರಳ ರಾಜ್ಯ ಲಾಟರಿ ಮಾರಾಟ | ಓರ್ವ ಪೊಲೀಸ್ ವಶಕ್ಕೆ

ಪುತ್ತೂರು: ನಿಷೇಧಿತ ಕೇರಳ ಲಾರಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಪಡ್ನೂರು ನಿವಾಸಿ ಲಕ್ಷ್ಮಣ ಬಂಧಿತ ವ್ಯಕ್ತಿ ಇಂದು ಮಧ್ಯಾಹ್ನ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಲಿನೆಟ್ ಜಂಕ್ಷನ್ ಬಳಿ ಪಾನ್‍ ಬೀಡ ಅಂಗಡಿಯಲ್ಲಿ ಕೇರಳ ಲಾಟರಿ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿದ ಪುತ್ತೂರು ನಗರ ಪೊಲೀಸ್ ಠಾಣಾ ಉಪನಿರೀಕ್ಷಕ ನಂದಕುಮಾರ್ ಎಂ.ಎಂ. ಹಾಗೂ ಸಿಬ್ಬಂದಿಗಳು ಲಕ್ಷ್ಮಣ ಎಂಬಾತನನ್ನು ವಿಚಾರಿಸಿ 1,550 ಮೌಲ್ಯದ 31 ಲಾಟರಿ ಹಾಗೂ ಮಾರಾಟ ಮಾಡಿದ ಹಣ 1100 ರೂ.

ನಿಷೇಧಿತ ಕೇರಳ ರಾಜ್ಯ ಲಾಟರಿ ಮಾರಾಟ | ಓರ್ವ ಪೊಲೀಸ್ ವಶಕ್ಕೆ Read More »

ಕಾಪು ಮಹಿಳಾ ಪಿಸಿ ಆತ್ಮಹತ್ಯೆ : ಪತಿ ಬಂಧನ

ಕಾಪು: ಪೋಲಿಸ್ ಠಾಣೆಯ ಮಹಿಳಾ ಸಿಬಂದಿ ಜ್ಯೋತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಅವರ ಪತಿ ರವಿಕುಮಾರ್ (35) ಅವರನ್ನು  ಕಾಪು ಪೋಲಿಸರು ಬಂಧಿಸಿದ್ದಾರೆ. ಆತ್ಮಹತ್ಯೆಗೈದ ಬಳಿಕ ಜ್ಯೋತಿ ಅವರ ಕೊಠಡಿಯಲ್ಲಿ ಡೈರಿಯೊಂದು ಸಿಕ್ಕಿದ್ದು  ಅದರಲ್ಲಿ ಆಕೆ  ತನ್ನ ಆತ್ಮಹತ್ಯೆಗೆ ನನ್ನ ಗಂಡನ ಸಂಶಯ ಪ್ರವೃತ್ತಿಯೇ ಕಾರಣ ಎಂದು ಬರೆದುಕೊಂಡಿದ್ದಾಗಿ ಆಕೆಯ ತಾಯಿ ದೇವಮ್ಮ ವಿಟ್ಲಾಪುರ ಪೋಲಿಸರಿಗೆ ದೂರು ನೀಡಿದ್ದಾರೆ. ಈ  ಹಿನ್ನಲೆಯಲ್ಲಿ ಪೋಲೀಸರು ಶನಿವಾರ ತಡರಾತ್ರಿ ಆಕೆಯ ಪತಿಯನ್ನು ಬಂಧಿಸಿದ್ದಾರೆ.

ಕಾಪು ಮಹಿಳಾ ಪಿಸಿ ಆತ್ಮಹತ್ಯೆ : ಪತಿ ಬಂಧನ Read More »

ಮುಡಿಪು ರಸ್ತೆಯಲ್ಲಿ ಇಫ್ತಾರ್ ಕೂಟ | ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂಜಾವೇಯಿಂದ ಚುನಾವಣಾ ಆಯುಕ್ತರಿಗೆ ದೂರು

ಮಂಗಳೂರು: ಮುಡಿಪು ರಸ್ತೆಯಲ್ಲಿ ಇಫ್ತಾರ್ ಕೂಟ ಆಯೋಜಿಸಿದ್ದನ್ನು ಹಿಂದೂ ಜಾಗರಣ ವೇದಿಕೆ ಖಂಡಿಸಿದ್ದು, ಈ ಕುರಿತು ಚುನಾವಣಾ ಆಯೋಗ ಹಾಗೂ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಅದನ್ನು ಉಲ್ಲಂಘಿಸಿ ಮುಡಿಪು ರಸ್ತೆಯಲ್ಲಿ ಒಂದು ಭಾಗವನ್ನು ತಡೆಮಾಡಿ ಒಂದು ಸಮುದಾಯ ಅನ್ಯರಾಜ್ಯಗಳ ವ್ಯಕ್ತಿಗಳನ್ನು ಸೇರಿಸಿ ಇಫ್ತಾರ್ ಕೂಟ ಮಾಡಿರುವುದು ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಇದರಿಂದ ಚುನಾವಣಾ ನೀತಿ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ತಕ್ಷಣ ಈ ಕುರಿತು ಮೊಕದ್ದಮೆ ದಾಖಲಿಸಿ

ಮುಡಿಪು ರಸ್ತೆಯಲ್ಲಿ ಇಫ್ತಾರ್ ಕೂಟ | ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂಜಾವೇಯಿಂದ ಚುನಾವಣಾ ಆಯುಕ್ತರಿಗೆ ದೂರು Read More »

ಸಾಕು ನಾಯಿಗಳಿಗೆ ವಿಷವಿಕ್ಕಿದ ನೀಚರು | 10 ಕ್ಕೂ ಅಧಿಕ ನಾಯಿಗಳ ಸಾವು

ಮುಂಡಾಜೆ : ಸಾಕು ನಾಯಿಗಳಿಗೆ ವಿಷವಿಕ್ಕಿದ ಪರಿಣಾಮ 10 ಕ್ಕೂ ಅಧಿಕ ನಾಯಿಗಳು ಸಾವನ್ನಪ್ಪಿದ ಘಟನೆ ಮುಂಡಾಜೆ ಗ್ರಾಮದ ಸೋಮಂತಡ್ಕದ ಅಗರಿ- ಹುರ್ತಾಜೆ ರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಶನಿವಾರ ರಾತ್ರಿ ಈ ರಸ್ತೆಯುದ್ದಕ್ಕೂ ಆಹಾರದಲ್ಲಿ ವಿಷವನ್ನು ಬೆರೆಸಿ ಅಲ್ಲಲ್ಲಿ ಎಸೆದು ಹೋಗಿದ್ದಾರೆ. ಇದನ್ನು ತಿಂದಿರುವ ನಾಯಿಗಳು ಸಾವನ್ನಪ್ಪಿದೆ ಎನ್ನಲಾಗಿದೆ. ತಡರಾತ್ರಿ ಈಸ್ಟರ್ ಹಬ್ಬದಿಂದ ತೆರಳುತ್ತಿದ್ದ ಮಂದಿ ಇದನ್ನು ಗಮನಿಸಿ ತಕ್ಷಣ ಪಂಚಾಯಿತಿ ಅಧ್ಯಕ್ಷ ಗಣೇಶ್ ಬಂಗೇರ ಅವರ ಗಮನಕ್ಕೆ ತಂದರು. ಪರಿಶೀಲನೆ ನಡೆಸಿದಾಗ ಕೆಲವು ಮನೆಗಳ

ಸಾಕು ನಾಯಿಗಳಿಗೆ ವಿಷವಿಕ್ಕಿದ ನೀಚರು | 10 ಕ್ಕೂ ಅಧಿಕ ನಾಯಿಗಳ ಸಾವು Read More »

ಅಕ್ರಮ ಗೋಸಾಗಾಟ ಕಾರು ಪಾದಚಾರಿಗೆ ಡಿಕ್ಕಿ | ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ವಶಕ್ಕೆ

ಪುತ್ತೂರು: ಅಕ್ರಮ ಗೋ ಸಾಗಾಟದ ಕಾರು ಡಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಶನಿವಾರ ತಡರಾತ್ರಿ ವಿಠಲ ರೈ ಎಂಬವರು ತನ್ನ ಕಾರನ್ನು ಮರ್ದಾಳ ಪೇಟೆಯಲ್ಲಿ ರಸ್ತೆ ಬದಿ ನಿಲ್ಲಿಸಿ ರಸ್ತೆ ದಾಟುತಿದ್ದ ಸಂದರ್ಭ ಸುಬ್ರಹ್ಮಣ್ಯ ಕಡೆಯಿಂದ ಅಕ್ರಮ ಗೋಸಾಗಾಟ ಮಾಡಿಕೊಂಡು ಬರುತ್ತಿದ್ದ ಮಾರುತಿ 800 ಕಾರು ಡಿಕ್ಕಿ ಹೊಡೆದು ಪರಾರಿಯಾಗಿತ್ತು. ತಕ್ಷಣ ಅವರನ್ನು ಕಡಬ ಸರಕಾರಿ ಆಸ್ಪತ್ರೆಗೆ ಕರೆತಂದಾಗ ಆದಾಗಲೇ ಮೃತಪಟ್ಟಿದ್ದರು.

ಅಕ್ರಮ ಗೋಸಾಗಾಟ ಕಾರು ಪಾದಚಾರಿಗೆ ಡಿಕ್ಕಿ | ಘಟನೆಗೆ ಸಂಬಂಧಿಸಿ ಇಬ್ಬರು ಪೊಲೀಸ್ ವಶಕ್ಕೆ Read More »

ಅಕ್ರಮ ದನ ಸಾಗಾಟದ ಕಾರು ಪಾದಚಾರಿಗೆ ಡಿಕ್ಕಿ | ಸ್ಥಳದಲ್ಲೇ ಪಾದಚಾರಿ ಮೃತ್ಯು | ಹಿಂದೂ ಸಂಘಟನೆಗಳಿಂದ ಆರೋಪಿಗಳನ್ನು ಬಂಧಿಸುವಂತೆ ತಡರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ

ಕಡಬ: ಅಕ್ರಮ ದನ ಸಾಗಾಟದ ಕಾರೊಂದು ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟ ಘಟನೆಯನ್ನು ಖಂಡಿಸಿ ಆರೋಪಿಗಳ ಬಂಧನಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಕಡಬದ ಮರ್ದಾಳದ ನೆಕ್ಕಿತ್ತಡ್ಕ ಸಮೀಪ ಅಚ್ಚಿಲ ಪಟ್ಟೆ ನಿವಾಸಿ ವಿಠಲ ರೈ ಅವರು ರಾತ್ರಿ ವೇಳೆ ತನ್ನ ಕಾರನ್ನು ನಿಲ್ಲಿಸಿ  ರಸ್ತೆ ದಾಟುತ್ತಿದ್ದ ಸಂದರ್ಭ ಸುಬ್ರಹ್ಮಣ್ಯ ಕಡೆಯಿಂದ ಬಂದ ಅಕ್ರಮ ದನ ಸಾಗಾಟದ ಮಾರುತಿ 800 ಡಿಕ್ಕಿ ಹೊಡೆದು

ಅಕ್ರಮ ದನ ಸಾಗಾಟದ ಕಾರು ಪಾದಚಾರಿಗೆ ಡಿಕ್ಕಿ | ಸ್ಥಳದಲ್ಲೇ ಪಾದಚಾರಿ ಮೃತ್ಯು | ಹಿಂದೂ ಸಂಘಟನೆಗಳಿಂದ ಆರೋಪಿಗಳನ್ನು ಬಂಧಿಸುವಂತೆ ತಡರಾತ್ರಿ ಹೆದ್ದಾರಿ ತಡೆದು ಪ್ರತಿಭಟನೆ Read More »

ಕಾಪು ಠಾಣಾ ಮಹಿಳಾ ಪೇದೆ ಆತ್ಮಹತ್ಯೆ !

ಕಾಪು : ಮಹಿಳಾ ಪೇದೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಾವು ಠಾಣೆಯ ಪೇದೆ ಜ್ಯೋತಿ (29) ಆತ್ಮಹತ್ಯೆ ಮಾಡಿಕೊಂಡವರು. ಮೂಲತಃ ಬಾಗಲಕೋಟೆಯವರಾಗಿರುವ ಜ್ಯೋತಿ ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ಎಂದಿನಂತೆ ಕರ್ತವ್ಯ ನಿರ್ವಹಿಸಿದ್ದ ಅವರು ರಾತ್ರಿ ಕ್ವಾಟ್ರಸ್ ಗೆ ಮರಳಿದ್ದು ಶನಿವಾರ ಬೆಳಿಗ್ಗೆ ಕ್ವಾಟ್ರಸ್‍ ನಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎನ್ನಲಾಗಿದೆ. ಮೃತ ಪೊಲೀಸ್ ಸಿಬಂದಿಯ ಪತಿ ಕೆ.ಎಸ್.ಆರ್.ಟಿ.ಸಿ ಸಿಬಂದಿಯಾಗಿದ್ದು ಪತಿ ಬೆಳಿಗ್ಗೆ ಕರ್ತವ್ಯಕ್ಕೆ ಹೋಗಿದ್ದರು.

ಕಾಪು ಠಾಣಾ ಮಹಿಳಾ ಪೇದೆ ಆತ್ಮಹತ್ಯೆ ! Read More »

ಆನ್ಲೈನ್ ಮೂಲಕ ವೈದ್ಯರಿಗೆ ಲಕ್ಷಾಂತರ ರೂ. ವಂಚನೆ | ದೂರು ದಾಖಲು

ಪುತ್ತೂರು: ಆನ್ಲೈನ್ ಮೂಲಕ ವೈದ್ಯರೊಬ್ಬರಿಗೆ ಕರೆ ಮಾಡಿ ಲಕ್ಷಾಂತರ ರೂ. ದೋಚಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಬೊಳ್ವಾರು ನಿವಾಸಿ ಡಾ.ಚಿದಂಬರ ಅಡಿಗ ವಂಚನೆಗೊಳಗಾದವರು. ಈ ಕುರಿತು ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ಮಾ.28 ರಂದು ಅಡಿಗ ಅವರಿಗೆ ದೂರವಾಣಿ ಮೂಲಕ ಫೋನ್ ಕರೆ ಬಂದಿದ್ದು, ಫೋನ್ ಸ್ವೀಕರಿಸಿ ಮಾತನಾಡಿದಾಗ, ನಾನು ದೆಹಲಿಯಿಂದ ಪೊಲೀಸ್ ಮಾತನಾಡುತ್ತಿರುವುದು. ನಿಮ್ಮ ಮೇಲೆ ಅಕ್ರಮ ಮಾದಕ ವಸ್ತು ಸಹಿತ ಹಣ ಹೊಂದಿರುವ ಕುರಿತು ಪ್ರಕರಣ ದಾಖಲಾಗಿದೆ. ಅರೆಸ್ಟ್ ಮಾಡಲು ಕೋರ್ಟ್‍

ಆನ್ಲೈನ್ ಮೂಲಕ ವೈದ್ಯರಿಗೆ ಲಕ್ಷಾಂತರ ರೂ. ವಂಚನೆ | ದೂರು ದಾಖಲು Read More »

error: Content is protected !!
Scroll to Top