ಅಪರಾಧ

ವಿವಾಹಿತ ಮಹಿಳೆ ಆತ್ಮಹತ್ಯೆ !

ಕಾಣಿಯೂರು : ಪತಿಯ ಕಿರುಕುಳ ತಾಳಲಾರದೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಣಿಯೂರು ಗ್ರಾಮದ ಪಣ್ಚತ್ತಾರು ಸಮೀಪ ಉಪ್ಪಡ್ಕ ಎಂಬಲ್ಲಿ ಗುರುವಾರ ಸಂಜೆ ನಡೆದಿದೆ. ಉಪ್ಪಡ್ಕ ನಿವಾಸಿ ಪೂವಪ್ಪ ನಾಯ್ಕ ಎಂಬವರ ಪತ್ನಿ ಚಂದ್ರಾವತಿ (38) ಮೃತಪಟ್ಟವರು. ಚಂದ್ರಾವತಿ ಅವರನ್ನು 16 ವರ್ಷದ ಹಿಂದೆ ಪೂವಪ್ಪ ನಾಯ್ಕ ಅವರು ಮದುವೆಯಾಗಿದ್ದರು. ದಂಪತಿಗೆ ಪ್ರಖ್ಯಾತ್‌ (15)  ಹಾಗೂ ನಿಶಾಂತ್ (7) ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪೂವಪ್ಪ ನಾಯ್ಕ ಮದುವೆಯಾದ ಕೆಲವು ವರ್ಷಗಳ ಬಳಿಕ ಮದ್ಯ ವ್ಯಸನಿಯಾಗಿ, ಸರಿಯಾಗಿ […]

ವಿವಾಹಿತ ಮಹಿಳೆ ಆತ್ಮಹತ್ಯೆ ! Read More »

ಯುವಕ ಪುಷ್ಪರಾಜ್ ನೇಣು ಬಿಗಿದು ಆತ್ಮಹತ್ಯೆ !

ಪುತ್ತೂರು: ಯುವಕನೋರ್ವ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಡಿಪ್ಪಾಡಿಯಲ್ಲಿ ನಡೆದಿದೆ. ಕೊಡಿಪ್ಪಾಡಿ ಪಲ್ಲತ್ತಾರು ದಿ.ಚಂದ್ರಶೇಖರ್ ಆಚಾರ್ಯ ಅವರ ಮಗ ಪುಷ್ಪರಾಜ್ ಆತ್ಮಹತ್ಯೆ ಮಾಡಿಕೊಂಡವರು. ಪುಷ್ಪರಾಜ್ ಕಬಕ ಗ್ರಾಮದ ಪೋಳ್ಯದಲ್ಲಿರುವ ಬೇಕರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಏ.29ರಂದು ತಾಯಿಗೆ ದೂರವಾಣಿ ಕರೆ ಮಾಡಿ, ನಾನು ಮುಂಬೈಗೆ ಹೋಗುತ್ತೇನೆ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದ. ಮೇ 1ರಂದು ಮಧ್ಯಾಹ್ನ ನಾನು ಮನೆಗೆ ವಾವಸ್ಸು ಬಂದು ನೋಡಿದಾಗ ಮಗ ಪುಷ್ಪರಾಜ್ ಮನೆಯ ದೇವರ ಕೋಣೆಯಲ್ಲಿ ಮಾಡಿನ ಪಕ್ಕಾಸಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು

ಯುವಕ ಪುಷ್ಪರಾಜ್ ನೇಣು ಬಿಗಿದು ಆತ್ಮಹತ್ಯೆ ! Read More »

ಕೋವಿಶೀಲ್ಡ್ ಪಡೆದ ಬಳಿಕ ಇಬ್ಬರು ಹೆಣ್ಣು ಮಕ್ಕಳು ಮೃತ್ಯು | ಕಾನೂನು ಸಮರಕ್ಕೆ ಸಜ್ಜಾದ ಮಕ್ಕಳ ಹೆತ್ತವರು

ಕೊರೊನಾ ಸಮಯದಲ್ಲಿ ಭಾರೀ ಸುದ್ದಿಯಲ್ಲಿದ್ದ ಔಷಧಿಗಳ ತಯಾರಿಕಾ ಸಂಸ್ಥೆ Oxford-AstraZeneca, ಆಘಾತಕಾರಿ ಮಾಹಿತಿ ಒಂದನ್ನು ಕೊನೆಗೂ ಕೋರ್ಟ್ ಮುಂದೆ ಒಪ್ಪಿಕೊಂಡಿರುವ ಬೆನ್ನಲ್ಲೇ ಭಾರತದಲ್ಲಿ ಹೆಣ್ಣು ಮಕ್ಕಳನ್ನು ಕಳೆದುಕೊಂಡ ಪೋಷಕರು ಕಾನೂನು ಸಮರಕ್ಕೆ ಸಜ್ಜಾಗಿದ್ದಾರೆ. ಔಷಧಿ ತಯಾರಿಕಾ ಕಂಪೆನಿಯು ತಾನು ಅಭವೃದ್ಧಿಪಡಿಸಿ ಕೋಟ್ಯಾಂತರ ಜನರಿಗೆ ನೀಡಿರುವ ಕೊರೊನಾ ಲಸಿಕೆಯು ಗಂಭೀರ ಅಡ್ಡಪರಿಣಾಮ ಉಂಟುಮಾಡಬಹುದು ಎಂದು ಲಂಡನ್ ಕೋರ್ಟ್‌ನಲ್ಲಿ ಹೇಳಿದೆ. ಇದೀಗ ಭಾರತದ ಇಬ್ಬರು ಹೆಣ್ಮಕ್ಕಳ ಪೋಷಕರು ಕೋವಿಶೀಲ್ಡ್ ಲಸಿಕೆಯನ್ನು ಒದಗಿಸಿದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ವಿರುದ್ಧ

ಕೋವಿಶೀಲ್ಡ್ ಪಡೆದ ಬಳಿಕ ಇಬ್ಬರು ಹೆಣ್ಣು ಮಕ್ಕಳು ಮೃತ್ಯು | ಕಾನೂನು ಸಮರಕ್ಕೆ ಸಜ್ಜಾದ ಮಕ್ಕಳ ಹೆತ್ತವರು Read More »

ಮನೆಗೆ ಕಲ್ಲು ತೂರಾಟ : ಗ್ರಾಮಾಂತರ ಪೊಲೀಸರಿಂದ ತನಿಖೆ

ಪುತ್ತೂರು : ಬೆಟ್ಟಂಪಾಡಿ ಗ್ರಾಮದ ಗುಮ್ಮಟಗದ್ದೆ ಎಂಬಲ್ಲಿ ಕಿಡಿಗೇಡಿಗಳು ಮನೆಯೊಂದಕ್ಕೆ ಕಲ್ಲು ತೂರಾಟ ನಡೆಸಿ ಪರಾರಿಯಾದ ಘಟನೆ ನಡೆದಿದೆ. ಗುಮ್ಮಟಗದ್ದೆ ಸೂರಪ್ಪ ಗೌಡ ಎಂಬವರ ಮನೆಗೆ ಕಲ್ಲು ತೂರಾಟ ನಡೆದಿದೆ. ಮೇ.1 ರಂದು ರಾತ್ರಿ 8.30ರ ವೇಳೆಗೆ ಮನೆ ಮಂದಿ ಮನೆಯೊಳಗಡೆ ಇರುವ ಸಂದರ್ಭದಲ್ಲಿ ಕಲ್ಲು ಬಿಸಾಡಿದ್ದಾರೆ. ಕಲ್ಲು ಮನೆ ಸಿಮೆಂಟ್ ಶೀಟ್ ಛಾವಣಿ ಮೇಲೆ ಬಿದ್ದ ಶಬ್ದ ಕೇಳಿ ಹೊರಗಡೆ ಬಂದಾಗ ಕಿಡಿಗೇಡಿಗಳು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ಸಂಪ್ಯ ಠಾಣಾ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮನೆಗೆ ಕಲ್ಲು ತೂರಾಟ : ಗ್ರಾಮಾಂತರ ಪೊಲೀಸರಿಂದ ತನಿಖೆ Read More »

ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ | ತನಿಖಾ ತಂಡದಲ್ಲಿ ಪುತ್ತೂರಿನ ಧನ್ಯಾ ನಾಯಕ್

ಪುತ್ತೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕುರಿತು ತನಿಖೆಗೆ ರಚಿಸಲಾಗಿರುವ 18 ಮಂದಿ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡಿರುವ ವಿಶೇಷ ತನಿಖಾ ತಂಡದಲ್ಲಿ ಪುತ್ತೂರಿನ ಧನ್ಯಾ ನಾಯಕ್ ಅವರನ್ನು ನೇಮಕ ಮಾಡಲಾಗಿದೆ. ಧನ್ಯಾ ನಾಯಕ್ ಅವರು ಈ ಹಿಂದೆ ಪುತ್ತೂರಿನಲ್ಲಿ ಪ್ರೊಬೆಷನರಿ ಡಿವೈಎಸ್‌ಪಿಯಾಗಿದ್ದು, ಉಪ್ಪಿನಂಗಡಿ ಪೊಲೀಸ್ ಠಾಣೆ, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಐಪಿಎಸ್ ಅಧಿಕಾರಿ ಬಿ.ಕೆ.

ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋ | ತನಿಖಾ ತಂಡದಲ್ಲಿ ಪುತ್ತೂರಿನ ಧನ್ಯಾ ನಾಯಕ್ Read More »

ಮತದಾನ ಪ್ರಕ್ರಿಯೆ ಸಂಪೂರ್ಣ ದೃಶ್ಯದ ವೆಬ್‍ ಕ್ಯಾಮರಾ ಕಳವು | ಪೊಲೀಸರಿಂದ ತನಿಖೆ

ಪುತ್ತೂರು: ಮತದಾನ ಪ್ರಕ್ರಿಯೆ ರೆಕಾರ್ಡ್ ಆಗಿದ್ದ ವೆಬ್ ಕ್ಯಾಮರಾವೊಂದನ್ನು ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ತೆಕ್ಕಾರುನಲ್ಲಿ ನಡೆದಿದೆ. ತೆಕ್ಕಾರು ಗ್ರಾಮದ ಗೋಪಾಲಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 228ರಲ್ಲಿ ಅಳವಡಿಸಿದ್ದ ವೆಬ್ ಕ್ಯಾಮರಾವನ್ನು ಸಿಮ್, ಮೆಮೊರಿ ಕಾರ್ಡ್ ಸಮೇತ ಕಳವು ಮಾಡಲಾಗಿದೆ ಎಂದು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ. ಏ.24ರಂದು ಈ ವೆಬ್ ಕ್ಯಾಮರಾವನ್ನು ಅಳವಡಿಸಲಾಗಿದ್ದು, 26ರಂದು ರಾತ್ರಿ 8 ಗಂಟೆಯವರೆಗಿನ ಅಂದರೆ ಮತದಾನ ಪ್ರಕ್ರಿಯೆ ದೃಶ್ಯಗಳು ಇದರಲ್ಲಿ ಸೇವ್ ಆಗಿತ್ತು. ಕ್ಯಾಮರಾ ಹಾಗೂ

ಮತದಾನ ಪ್ರಕ್ರಿಯೆ ಸಂಪೂರ್ಣ ದೃಶ್ಯದ ವೆಬ್‍ ಕ್ಯಾಮರಾ ಕಳವು | ಪೊಲೀಸರಿಂದ ತನಿಖೆ Read More »

ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣವನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸಮರ್ಥಿಸಿಕೊಳ್ಳುವುದಿಲ್ಲ: ಅಮಿತ್ ಶಾ | ಎನ್ ಡಿ ಎ ಸರಕಾರ ನಾರಿಶಕ್ತಿಗೆ ಉನ್ನತ ಗೌರವ ನೀಡುತ್ತದೆ

ಗುವಾಹಟಿ: ಕರ್ನಾಟಕದ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಪ್ರಕರಣವನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸಮರ್ಥಿಸಿಕೊಳ್ಳುವುದಿಲ್ಲ. ಆದರೆ ರಾಜ್ಯ ಸರ್ಕಾರ ಈವರೆಗೂ ಏಕೆ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ. ದೇಶದ ಕಾನೂನಿನ ಮುಂದೆ ನಾನೇ ಇರಲಿ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗನೇ ಇರಲಿ. ಎಲ್ಲರೂ ಒಂದೇ. ತಪ್ಪು ಮಾಡಿದ ಮೇಲೆ ಕಾನೂನಿನ ಪ್ರಕಾರ ಶಿಕ್ಷೆಯಾಗಬೇಕು. ಪ್ರಕರಣವನ್ನು ಬಿಜೆಪಿ ಸಮರ್ಥಿಸಿಕೊಳ್ಳುವುದಿಲ್ಲ ಎಂದು ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರಮೋದಿ ನೇತೃತ್ವದ ಎನ್

ಪ್ರಜ್ವಲ್ ರೇವಣ್ಣ ಲೈಂಗಿಕ ಪ್ರಕರಣವನ್ನು ಯಾವುದೇ ಕಾರಣಕ್ಕೂ ಬಿಜೆಪಿ ಸಮರ್ಥಿಸಿಕೊಳ್ಳುವುದಿಲ್ಲ: ಅಮಿತ್ ಶಾ | ಎನ್ ಡಿ ಎ ಸರಕಾರ ನಾರಿಶಕ್ತಿಗೆ ಉನ್ನತ ಗೌರವ ನೀಡುತ್ತದೆ Read More »

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ : ಹೆತ್ತ ಮಗಳನ್ನೇ ಕೊಂದ ತಾಯಿ

ಬೆಂಗಳೂರು: ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಪಡೆದ ಮಗಳನ್ನು ತಾಯಿಯೇ ಕೊಲೆ ಮಾಡಿದ ಘಟನೆ ಬೆಂಗಳೂರು ಬನಶಂಕರಿ ಪೊಲೀಶ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಹಿತಿ (18) ಮೃತಪಟ್ಟ ಯುವತಿ. ತಾಯಿ ಮೇಲೆ ಮಗಳು ಕೂಡ ಚಾಕುವಿನಿಂದ ದಾಳಿ ಮಾಡಿದ್ದು, ಗಾಯಗೊಂಡ ತಾಯಿ ಆಸ್ಪತ್ರೆ ಪಾಲಾಗಿದ್ದಾರೆ. ಸೆಕಂಡ್ ಪಿಯುಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ತಾಯಿ ಮಗಳ ನಡುವೆ ಜಗಳ ನಡೆದಿದೆ. ಪರೀಕ್ಷೆಗೆ ಕಾಲೇಜಿಗೆ ಹೋಗ್ತಿನಿ ಎಂದು ಮನೆಯಿಂದ ಹೊರಡುತ್ತಿದ್ದ ಮಗಳು ಪರೀಕ್ಷೆಗೆ ಗೈರು ಹಾಜರಾಗಿದ್ದ ವಿಚಾರ ಸೋಮವಾರ

ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ : ಹೆತ್ತ ಮಗಳನ್ನೇ ಕೊಂದ ತಾಯಿ Read More »

ಬನ್ನೂರು ನಿವಾಸಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು: ಬನ್ನೂರಿನ ಮೇಲ್ಮಜಿಲು ನಿವಾಸಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ  ಸೋಮವಾರ ನಡೆದಿದೆ. ಸೀತಾರಾಮ ಶೆಟ್ಟಿ (45) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಡವರು. ಖಾಸಗಿ ಗ್ಯಾಸ್ ಕಂಪೆನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿದ್ದ ಇವರು, ಮನೆಮನೆಗೆ ಗ್ಯಾಸ್ ಪೂರೈಕೆ ಮಾಡುತ್ತಿದ್ದರು. ಮನೆಯ ಒಳಗಡೆ ಫ್ಯಾನ್ ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಂ ಮಾಡಲಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೃತರು ಪತ್ನಿ

ಬನ್ನೂರು ನಿವಾಸಿ ನೇಣು ಬಿಗಿದು ಆತ್ಮಹತ್ಯೆ Read More »

ಭೋಜ್ ಪುರಿ ನಟಿ ಅಮೃತಾ ಪಾಂಡೆ ನೇಣಿಗೆ ಶರಣು !

ಬಿಹಾರ್ :  ಬಿಹಾರದ ಭಾಗಲ್‌ಪುರದಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಭೋಜ್‌ಪುರಿ ನಟಿ ಅಮೃತಾ ಪಾಂಡೆ ಶವವಾಗಿ ಪತ್ತೆಯಾಗಿದ್ದಾರೆ. ಅಮೃತಾ ತನ್ನ ಸೀರೆಯಿಂದ ತಮ್ಮ ನಿವಾಸದ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಮೃತಾ ಪಾಂಡೆ ಅವರು ತನ್ನ ಪತಿಯೊಂದಿಗೆ ನೆಲೆಸಿದ್ದರು. ಕೆಲ ದಿನಗಳ ಹಿಂದೆ ಸಂಬಂಧಿಕರ ಮದುವೆಯ ಹಿನ್ನೆಲೆಯಲ್ಲಿ ಬಿಹಾರದ ಭಾಗಲ್‌ಪುರಕ್ಕೆ ಭೇಟಿ ನೀಡಿದ್ದರು. ಆದರೆ ಭಾಗಲ್‌ಪುರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸಾವನ್ನಪ್ಪಿದ್ದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಆದರೆ, ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಿಂತ ಕೆಲವೇ ಗಂಟೆ ಮುಂಚೆ ಅಮೃತಾ ಪಾಂಡೆ ವಾಟ್ಸ್‌

ಭೋಜ್ ಪುರಿ ನಟಿ ಅಮೃತಾ ಪಾಂಡೆ ನೇಣಿಗೆ ಶರಣು ! Read More »

error: Content is protected !!
Scroll to Top