ಅಪರಾಧ

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ | ಇ ಮೇಲ್ ನಲ್ಲಿ ಬೆದರಿಕೆ ಸಂದೇಶ ರವಾನೆ

ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜೂನ್18 ರಂದು ಮಧ್ಯಾಹ್ನ 12.43 ಕ್ಕೆ ವಿಮಾನ ನಿಲ್ದಾಣದ ಇಮೇಲ್ ಐಡಿಗಳಿಗೆ ಅಪರಿಚಿತರು, ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟಿದ್ದು ಕೆಲವೇ ಕ್ಷಣದಲ್ಲಿ ಸ್ಪೋಟಗೊಳ್ಳಲಿದೆ ಎನ್ನುವ ಸಂದೇಶ ಕಳಿಸಿದ್ದಾರೆ. ಈ ಬಗ್ಗೆ ವಿಮಾನ ನಿಲ್ದಾಣದ ಮುಖ್ಯ ಸೆಕ್ಯುರಿಟಿ ಅಧಿಕಾರಿ ಮೋನಿಷ್ ವಿಮಾನ ನಿಲ್ದಾಣದ ಒಳಗಡೆ ಮತ್ತು ಆವರಣದಲ್ಲಿ ತಪಾಸಣೆ ನಡೆಸಿ, ಯಾವುದೇ ತೊಂದರೆ ಇಲ್ಲವೆಂದು ಖಚಿತಪಡಿಸಿದ ಬಳಿಕ ಬಜ್ಪೆ ಠಾಣೆಗೆ […]

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ | ಇ ಮೇಲ್ ನಲ್ಲಿ ಬೆದರಿಕೆ ಸಂದೇಶ ರವಾನೆ Read More »

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಬಾಲಕ ರಿಮಾಂಡ್ ಹೋಮ್ ಗೆ

ಉಪ್ಪಿನಂಗಡಿ: ಸಮೀಪದ ಪೆರ್ನೆ ಗ್ರಾಮ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬುವವರು ರವಿವಾರ ತಡ ರಾತ್ರಿ ಕೊಲೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಅಪ್ರಾಪ್ತ ವಯಸ್ಕ ಬಾಲಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು 15 ದಿನಗಳವರೆಗೆ ರಿಮಾಂಡ್ ಹೋಮ್ ಗೆ ಕಳುಹಿಸಿದೆ. ಹೇಮಾವತಿ ಅವರ ಮನೆಯಲ್ಲಿ ಘಟನೆಯ ರಾತ್ರಿ ತಂಗಿದ್ದ ಅವರ ಅಕ್ಕನ ಮಗ, ಹತ್ತನೇ ತರಗತಿ ವಿದ್ಯಾರ್ಥಿಯಾಗಿರುವ, ಅಪ್ರಾಪ್ತ ಬಾಲಕ ಹೇಮಾವತಿ ಮಲಗಿದ್ದಲ್ಲಿಗೆ ಹೋಗಿ ದೇಹ ಸುಖ ಬಯಸಿದ್ದು, ಇದಕ್ಕೆ ಹೇಮಾವತಿಯವರು ಪ್ರತಿರೋಧ ವ್ಯಕ್ತಪಡಿಸಿದ್ದರು. ಆಗ

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಬಾಲಕ ರಿಮಾಂಡ್ ಹೋಮ್ ಗೆ Read More »

ಕಣ್ಣುಕುಕ್ಕುವ ಹೆಡ್ ಲೈಟ್ ನಿಂದ ಹೈರಾಣಾದ ವಾಹನಸವಾರರು

ಬೆಂಗಳೂರು : ಕಾರು, ಬೈಕ್ ಹಾಗೂ ಇತರ ವಾಹನಗಳಲ್ಲಿ ಕಣ್ಣುಕುಕ್ಕುವಂಥ ಎಲ್ಇಡಿ ಲೈಟ್ ಗಳನ್ನು ಅಳವಡಿಸುವುದರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಈ ರೀತಿಯ ಲೈಟ್ ಗಳನ್ನು ಅಳವಡಿಸುವುದರಿಂದ ಎದುರಿನಿಂದ ಬರುವ ವಾಹನಗಳ ಚಾಲಕರಿಗೆ ತೊಂದರೆಯಾಗುತ್ತಿದ್ದು, ಅಪಘಾತಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಇಂಥ ಲೈಟ್ ಗಳನ್ನು ಅಳವಡಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಸಂಚಾರ ಪೊಲೀಸರು ಮುಂದಾಗಿದ್ದಾರೆ. ಉಲ್ಲಂಘಿಸಿದವರು ದಂಡ ಸೇರಿದಂತೆ ಇತರ ಕಾನೂನು ಕ್ರಮಗಳನ್ನು ಎದುರಿಸಬೇಕಾಗಲಿದೆ. ಈ ಕುರಿತು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ

ಕಣ್ಣುಕುಕ್ಕುವ ಹೆಡ್ ಲೈಟ್ ನಿಂದ ಹೈರಾಣಾದ ವಾಹನಸವಾರರು Read More »

ರೇಣುಕಾ ಸ್ವಾಮಿ ಕೊಲೆ ಪ್ರಕರಣ | ನ್ಯಾಯಾಲಯದ ಎದುರು ದರ್ಶನ್ ಹಾಗೂ ಗ್ಯಾಂಗ್ ನ್ನು ಹಾಜರುಪಡಿಸಲಿದ್ದಾರೆ ಪೊಲೀಸರು

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್ ನ ಆರೋಪಿಗಳಾಗಿ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಪವಿತ್ರಾ ಗೌಡ, ವಿನಯ್ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಪೊಲೀಸರು ವಿವಿಧ ರೀತಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಇಂದಿಗೆ 17 ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯವಾಗಲಿದೆ. ಇಂದು ಮಧ್ಯಾಹ್ನದ ನಂತರ ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಆಗಿದ್ದು, ಜೂನ್ 11ರ ಮುಂಜಾನೆಯೇ ದರ್ಶನ್ ಅವರನ್ನು ಬಂಧಿಸಲಾಯಿತು. ಆ ಬಳಿಕ ಪವಿತ್ರಾ ಗೌಡ ಸೇರಿ ಹಲವರ ಬಂಧನ ಆಯಿತು. ಅನುಮಾನ

ರೇಣುಕಾ ಸ್ವಾಮಿ ಕೊಲೆ ಪ್ರಕರಣ | ನ್ಯಾಯಾಲಯದ ಎದುರು ದರ್ಶನ್ ಹಾಗೂ ಗ್ಯಾಂಗ್ ನ್ನು ಹಾಜರುಪಡಿಸಲಿದ್ದಾರೆ ಪೊಲೀಸರು Read More »

ಸಿದ್ಧರಾಮಯ್ಯ ನೇತೃತ್ವದ ಸಂಪುಟ ಸಚಿವರಿಂದ ದರ್ಶನ್ ಬಿಡಿಸುವ ಪ್ರಯತ್ನ | ಗೃಹಸಚಿವರ ಕಾಲಿಗೆ ಬೀಳಲು ಮುಂದಾದ ಸಚಿವ

ಪುತ್ತೂರು: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಕೀಲರನ್ನು ಸಂಪರ್ಕಿಸಿ ದರ್ಶನ್‌ ಪರ ಜಾಮೀನು ಪಡೆಯಲು ಹೋರಾಡುತ್ತಿರುವ ವಿಚಾರ ಎಲ್ಲರಿಗೂ ಗೊತ್ತಿದೆ. ಆದರೆ ದರ್ಶನ್‌ ಆಪ್ತರೆನಿಸಿಕೊಂಡವರು ಏನೂ ಮಾಡುತ್ತಿಲ್ಲವೇ ಎನ್ನುವ ಪ್ರಶ್ನೆ ಹಲವರಲ್ಲಿದೆ. ಆದರೆ ಹಲವರು ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದ್ದರೆ, ಆದರೆ ಆ ಒಬ್ಬ ವ್ಯಕ್ತಿ ಮಾತ್ರ ದರ್ಶನ್‌ ಪರ ಹೋರಾಡುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕನ್ನಡ ಚಿತ್ರರಂಗದ ಖ್ಯಾತ ನಟ ದರ್ಶನ್‌ ಬಂಧನವಾಗಿ ಸಂಪೂರ್ಣ ಒಂದು ವಾರ ಕಳೆದಿದ್ದು ಕಳೆದ ಎಂಟು ದಿನಗಳಿಂದ ನಟ ಪೊಲೀಸ್‌ ಠಾಣೆಯಲ್ಲಿದ್ದಾರೆ.

ಸಿದ್ಧರಾಮಯ್ಯ ನೇತೃತ್ವದ ಸಂಪುಟ ಸಚಿವರಿಂದ ದರ್ಶನ್ ಬಿಡಿಸುವ ಪ್ರಯತ್ನ | ಗೃಹಸಚಿವರ ಕಾಲಿಗೆ ಬೀಳಲು ಮುಂದಾದ ಸಚಿವ Read More »

ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿನ ದಾಳಿ | ಕರ್ತವ್ಯ ನಿರತ ಎಸ್ಎಸ್ಎಫ್ ಯೋಧ ಮೃತ್ಯು

ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ಭದ್ರತೆಗೆ ನಿಯೋಜನೆಗೊಂಡಿದ್ದ ಎಸ್ಎಸ್ಎಫ್ ಯೋಧ ಗುಂಡಿಗೆ ಬಲಿಯಾಗಿದ್ದಾರೆ. ಬುಧವಾರ ಬೆಳಗ್ಗೆ 5.25ಕ್ಕೆ ಈ ಘಟನೆ ನಡೆದಿದ್ದು, ಗುಂಡಿಗೆ ಬಲಿಯಾದ ಯೋಧ ಅಂಬೇಡ್ಕರ್ ನಗರದ ನಿವಾಸಿ ಶತ್ರುಘ್ನ ವಿಶ್ವಕರ್ಮ(25) ಎಂದು ತಿಳಿದು ಬಂದಿದೆ. ಮಂದಿರದ ಆವರಣದಲ್ಲಿ ಗುಂಡಿನ ಸದ್ದು ಕೇಳಿದ ಸಹ ಸಿಬ್ಬಂದಿ ಅಲ್ಲಿಗೆ ಓಡಿ ಬಂದಿದ್ದಾರೆ, ಅಷ್ಟರಲ್ಲಾಗಲೆ ಯೋಧ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು. ಯೋಧನ ಸಾವು

ಅಯೋಧ್ಯೆ ರಾಮ ಮಂದಿರದಲ್ಲಿ ಗುಂಡಿನ ದಾಳಿ | ಕರ್ತವ್ಯ ನಿರತ ಎಸ್ಎಸ್ಎಫ್ ಯೋಧ ಮೃತ್ಯು Read More »

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಹತ್ತನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು

ಉಪ್ಪಿನಂಗಡಿ: ಪೆರ್ನೆ ಗ್ರಾಮದ ಬಿಳಿಯೂರಿನ ದರ್ಖಾಸು ನಿವಾಸಿ ಹೇಮಾವತಿ (37) ಎಂಬುವವರು ರವಿವಾರ ತಡ ರಾತ್ರಿ ಕೊಲೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಆರೋಪಿ ಹತ್ತನೇ ತರಗತಿಯ ಬಾಲಕನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಬಾಲಕ ಹೇಮಾವತಿ ಅವರ ಮನೆಯ ತಂಗಿದ್ದು, ಈತ ಅವರ ಅಕ್ಕನ ಮಗನಾಗಿದ್ದು, ಹತ್ತನೇ ತರಗತಿ ವಿದ್ಯಾರ್ಥಿ. ಬಾಲಕ ಹೇಮಾವತಿ ಅವರು ಮಲಗಿದ್ದಲ್ಲಿ ಹೋಗಿ ದೇಹ ಸುಖ ಬಯಸಿದ್ದಾನೆ. ಇದಕ್ಕೆ ಹೇಮಾವತಿ ಪ್ರತಿರೋದ ಮಾಡಿದ್ದು, ಈ ವೇಳೆ ಆರೋಪಿ ಬಾಲಕ ಕತ್ತು ಹಿಸುಕಿ ಕೊಲೆ

ಉಪ್ಪಿನಂಗಡಿ ಹೇಮಾವತಿ ಕೊಲೆ ಪ್ರಕರಣ | ಹತ್ತನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಿದ ಪೊಲೀಸರು Read More »

ರೈಲಿಗೆ ಸಿಲುಕಿ ಯುವತಿ ಮೃತ್ಯು !

ತುಮಕೂರು : ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ವಿದ್ಯಾರ್ಥಿನಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆ ತಿಪಟೂರು ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ವರ್ಷಿಣಿ (19) ಮೃತ ವಿದ್ಯಾರ್ಥಿನಿ ಎಂದು ಗುರುತಿಸಲಾಗಿದೆ. ವರ್ಷಿಣಿ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ದೇವರಹಳ್ಳಿ ಗ್ರಾಮದ ಸುರೇಶ್ ಎಂಬುವವರ ಪುತ್ರಿ. ತಿಪಟೂರಿನ ಕಲ್ಪತರು ಕಾಲೇಜಿನಲ್ಲಿ ಎರಡನೇ ವರ್ಷದ ಬಿಎ ಓದುತ್ತಿದ್ದಳು. ತನ್ನ ಊರಿನಿಂದ ಕಾಲೇಜಿಗೆ ಪ್ರತಿದಿನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದಳು. ನಿನ್ನೆ ಕಾಲೇಜು ಮುಗಿಸಿ ಮನೆಗೆ ತೆರಳುವಾಗ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ

ರೈಲಿಗೆ ಸಿಲುಕಿ ಯುವತಿ ಮೃತ್ಯು ! Read More »

ಪುರುಷತ್ವ ಪರೀಕ್ಷೆ ತುಂಬಾ ಮುಜುಗರವಾಗುತ್ತೆ | ಜಡ್ಜ್ ಮುಂದೆ ಅಳಲು ತೋಡಿಕೊಂಡ ಪ್ರಜ್ವಲ್ ರೇವಣ್ಣ

ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿಚಾರಣೆ ಮುಂದುವರಿದಿದ್ದು, ಇಂದು ಪ್ರಜ್ವಲ್ ರೇವಣ್ಣ ಅವರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಮತ್ತೊಮ್ಮೆ ಪುರುಷತ್ವ ಪರೀಕ್ಷೆಗೆ ಮನವಿ ಮಾಡಿಕೊಂಡಿದ್ದಕ್ಕೆ ಪ್ರಜ್ವಲ್ ರೇವಣ್ಣ ತನ್ನ ಅಳಲು ತೋಡಿಕೊಂಡಿದ್ದಾರೆ. ಕೋರ್ಟ್ ವಿಚಾರಣೆ ವೇಳೆ ಆರೋಪಿ ಪ್ರಜ್ವಲ್ ರೇವಣ್ಣ ಅವರು ನಾನು ಎರಡು ಕೇಸ್‌ನಲ್ಲಿ ಒಪ್ಪಿಕೊಂಡು ಮೆಡಿಕಲ್ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಪುರುಷತ್ವ ಪರೀಕ್ಷೆ ತುಂಬಾ ಮುಜುಗರ ಆಗುತ್ತೆ. ಎರಡು ಸಲ ಕೇಳಿದಕ್ಕೆ

ಪುರುಷತ್ವ ಪರೀಕ್ಷೆ ತುಂಬಾ ಮುಜುಗರವಾಗುತ್ತೆ | ಜಡ್ಜ್ ಮುಂದೆ ಅಳಲು ತೋಡಿಕೊಂಡ ಪ್ರಜ್ವಲ್ ರೇವಣ್ಣ Read More »

ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಹುಡುಗಿ : ತಡೆದ ಹಿಂದೂ ಕಾರ್ಯಕರ್ತರು

ಸುಳ್ಯ: ಅನ್ಯಕೋಮಿನ ಇಬ್ಬರು ಯುವಕರೊಂದಿಗೆ ಹಿಂದೂ ಹುಡುಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಿಂದೂ ಕಾರ್ಯಕರ್ತರು ತಡೆದ ಘಟನೆ ಸುಳ್ಯದಲ್ಲಿ ನಡೆದಿದೆ. ಕೇರಳ ಮೂಲದ ಅನ್ಯ ಕೋಮಿನ ಇಬ್ಬರು ಯುವಕರೊಂದಿಗೆ ಹಿಂದು ಹುಡುಗಿ ಇದ್ದಳೆಂದು ಅವರ ಪ್ರಯಾಣಿಸುತ್ತಿದ್ದ ಕಾರನ್ನು ಹಿಂದೂ ಕಾರ್ಯಕರ್ತರು ತಡೆದಿದ್ದಾರೆ. ಘಟನೆಗೆ ಸಂಬಂಧಿಸಿ ಮೂವರನ್ನು ಠಾಣೆಗೆ ಕರೆದೊಯ್ದಿರುವುದಾಗಿ ತಿಳಿದು ಬಂದಿದೆ. ಮಾರುತಿ ಶಿಫ್ಟ್ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದರು ಎನ್ನಲಾಗಿದೆ. ಇದೀಗ ಪೋಲಿಸರು ವಿಚಾರಿಸುತ್ತಿದ್ದು, ಹೆಚ್ಚಿನ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.

ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಹುಡುಗಿ : ತಡೆದ ಹಿಂದೂ ಕಾರ್ಯಕರ್ತರು Read More »

error: Content is protected !!
Scroll to Top