ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ: ಆರೋಪಿಯ ವಿರುದ್ದ ದೂರು ದಾಖಲು
ಉಪ್ಪಿನಂಗಡಿ: ನೆಲ್ಯಾಡಿ ಸಮೀಪದ ಕಟ್ಟೆಮಜಲಿನಲ್ಲಿ ಅಪ್ರಾಪ್ತ ಬಾಲಕಿಯ ಮಾನಭಂಗಕ್ಕೆ ಪ್ರಯತ್ನ ನಡೆಸಿದ ಆರೋಪದಲ್ಲಿ ಚಂದ್ರಶೇಖರ್ ಎಂಬವರ ವಿರುದ್ಧ ಉಪ್ಪಿನಂಗಡಿ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಬಗ್ಗೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿರುವುದಾಗಿದೆ. ನೇಮೋತ್ಸವ ಒಂದಕ್ಕೆ ಹೋಗಿದ್ದ ವೇಳೆ ಬಾಲಕಿಯ ಕೈ ಹಿಡಿದು ಆರೋಪಿ ಮಾನಭಂಗ ಮಾಡಲು ಪ್ರಯತ್ನ ನಡೆಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಲಕಿ ಮೇಲೆ ಮಾನಭಂಗಕ್ಕೆ ಯತ್ನ: ಆರೋಪಿಯ ವಿರುದ್ದ ದೂರು ದಾಖಲು Read More »










