ಅಪರಾಧ

ಬೈಕ್‍ಗೆ ಲಾರಿ ಡಿಕ್ಕಿ | ಬೈಕ್‍ ಸವಾರ ಸ್ಥಳದಲ್ಲೇ ಮೃತ್ಯು

ಪುತ್ತೂರು: ತರಕಾರಿ ತುಂಬಿದ ಲಾರಿಯೊಂದು ಬೈಕ್‍ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ ಸವಾರ ಸ್ಥಳದಲ್ಲೇ ಮೃತಪಟ್ಟ ‍ಘಟನೆ ಮೂಡಿಗೆರೆ ತಾಲೂಕಿನ ಬಿದರಹಳ್ಳಿಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಕೆಂಜಿಗೆ ಸಮೀಪದ ಬಾಳೆಹಳ್ಳಿ ನಿವಾಸಿ ಮಂಜುನಾಥ್ (30) ಮೃತಪಟ್ಟ ಬೈಕ್ ಸವಾರ. ತಂದೆಯ ಜತೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭ ತರಕಾರಿ ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜುನಾಥ್ ಲಾರಿಯಡಿ ಸಿಲುಕಿ ದೂರ ಎಳೆದೊಯ್ದಿದೆ. ಮೂಡಿಗೆರೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‍ಗೆ ಲಾರಿ ಡಿಕ್ಕಿ | ಬೈಕ್‍ ಸವಾರ ಸ್ಥಳದಲ್ಲೇ ಮೃತ್ಯು Read More »

ಅಪ್ರಾಪ್ತೆಯ ಮಾನಭಂಗ ಯತ್ನ | ಆರೋಪಿ ಬಂಧನ

ಪುತ್ತೂರು: ಮಾನಭಂಗ ಯತ್ನ ಪ್ರಕರಣ ಸಂಬಂಧಿಸಿದಂತೆ ಯುವನೋರ್ವನನ್ನು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ. ಅಪ್ರಾಪ್ತೆ ಯುವತಿಯ ಮಾನಭಂಗ ಯತ್ನದಲ್ಲಿ ಆರೋಪಿ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ಕುರಿತು ಡಿವೈಎಸ್‍ಪಿ ಡಾ.ಗಾನ ಪಿ.ಕುಮಾರ್, ಇನ್‍ಸ್ಪೆಕ್ಟರ್ ಎಂ.ಎನ್.ರಾವ್ ಅವರ ಮಾರ್ಗದರ್ಶನದಂತೆ ಪುತ್ತೂರು ಮಹಿಳಾ ಠಾಣೆಯ ಎಸ್‍.ಐ. ಭವಾನಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕುಮಾರಸ್ವಾಮಿ ಹಾಗೂ ಸುಚಿನ್ ಅವರು ಆರೋಪಿಯನ್ನು ಕೇರಳದ ಕೊಚ್ಚಿ ಸಮೀಪದ ರೈಲ್ವೇ ನಿಲ್ದಾಣವೊಂದರಲ್ಲಿ ಬಂಧಿಸಿರುವುದಾಗಿ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.

ಅಪ್ರಾಪ್ತೆಯ ಮಾನಭಂಗ ಯತ್ನ | ಆರೋಪಿ ಬಂಧನ Read More »

ಚೈತ್ರಾ ಕುಂದಾಪುರ ಮೇಲೆ ಹಲ್ಲೆ!!

ಬೆಂಗಳೂರು: ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಚೈತ್ರಾ ಕುಂದಾಪುರ ಅವರಿಗೆ ಜೈಲಿನಲ್ಲಿದ್ದರೂ ಸಂಕಷ್ಟ ಮಾತ್ರ ತಪ್ಪಿಲ್ಲ. ಪರಪ್ಪನ ಅಗ್ರಹಾರದಲ್ಲಿ ಚೈತ್ರಾ ಕುಂದಾಪುರ ಮೇಲೆ ಹಲ್ಲೆ ಮಾಡಲಾಗಿದೆ. ಮಹಿಳಾ‌ ವಿಚಾರಣಾಧೀನ ಕೈದಿಗಳ ಬ್ಯಾರಕ್‌ನಲ್ಲಿ ಆಫ್ರಿಕನ್ ಮಹಿಳಾ ಕೈದಿಗಳು ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರ ಮಧ್ಯಾಹ್ನ ರಾಷ್ಟ್ರಗೀತೆ ವಿಚಾರಕ್ಕೆ ಆಫ್ರಿಕನ್ ಮಹಿಳಾ ಕೈದಿಗಳು ಹಾಗೂ ಚೈತ್ರಾ ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಚೈತ್ರಾ ಮೇಲೆ ಅಟ್ಯಾಕ್ ಮಾಡಿದ್ದಾರೆ ಆಫ್ರಿಕನ್ ಮಹಿಳಾ ಕೈದಿಗಳು. ಚೈತ್ರಾ

ಚೈತ್ರಾ ಕುಂದಾಪುರ ಮೇಲೆ ಹಲ್ಲೆ!! Read More »

ಚೆನ್ನಾಗಿ ಕಾಣುತ್ತಿಲ್ಲವೆಂದು 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೈದರೇ ವೈದ್ಯಕೀಯ ವಿದ್ಯಾರ್ಥಿನಿ?

ಮಂಗಳೂರು: ನಗರದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಎಂಬಿಬಿಎಸ್ ಕಲಿಯುವ ವಿದ್ಯಾರ್ಥಿನಿಯೊಬ್ಬರು ಹಾಸ್ಟೆಲ್ ಕಟ್ಟಡದಿಂದ ಹಾರಿ ಆತ್ಮಹತ್ಯೆಗೈದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಆತ್ಮಹತ್ಯೆಗೈದ ವಿದ್ಯಾರ್ಥಿನಿಯನ್ನು ಪ್ರಕೃತಿ ಶೆಟ್ಟಿ (20) ಎಂದು ಗುರುತಿಸಲಾಗಿದೆ. ಈ ವಿದ್ಯಾರ್ಥಿನಿಯು ಮೆಡಿಕಲ್ ಕಾಲೇಜಿಗೆ ಸಂಬಂಧಿಸಿದ ಹಾಸ್ಟೆಲ್‌ನಲ್ಲಿದ್ದರು‌‌‌. “ತಾನು ತುಂಬಾ ತೋರ ಇದ್ದು, ಚೆನ್ನಾಗಿ ಕಾಣುತ್ತಿಲ್ಲ. ಇದರಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ” ಎಂದು ಡೆತ್ ನೋಟಿನಲ್ಲಿ ಬರೆದಿದ್ದಾರೆ. ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ಹಾಸ್ಟೆಲ್ ಕಟ್ಟಡದ 6ನೆ ಮಹಡಿಯಿಂದ ಹಾರಿ

ಚೆನ್ನಾಗಿ ಕಾಣುತ್ತಿಲ್ಲವೆಂದು 6ನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೈದರೇ ವೈದ್ಯಕೀಯ ವಿದ್ಯಾರ್ಥಿನಿ? Read More »

ಫೋಟೊ ಶೂಟ್ ವೇಳೆ ಯುವಕನಿಗೆ ಅಪರಿಚಿತರಿಂದ ಚೂರಿ ಇರಿತ | ಯುವಕ ಮೃತ್ಯು

ಬೆಂಗಳೂರು: ಅಪರಿಚಿತರ ಗುಂಪೊಂದು ಯುವಕನೊಬ್ಬನಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ರಾಮೇಶ್ವರ ಸಮೀಪ ರೆಸ್ಟೋರೆಂಟ್ ಒಂದರಲ್ಲಿ ನಡೆದಿದೆ. ಸೂರ್ಯ (22) ಹತ್ಯೆಯಾದ ಯುವಕ. ಭಾನುವಾರ ರಾಮೇಶ್ವರ ಸಮೀಪದ ರೆಸ್ಟೋರೆಂಟ್ ಒಂದಲ್ಲಿ ಸೂರ್ಯ ನಾಲ್ವರು ಸ್ನೇಹಿತರೊಂದಿಗೆ ಫೋಟೊ ಶೂಟ್ ಮಾಡುತ್ತಿದ್ದ ವೇಳೆ ಅಪರಿಚಿತರ ಗುಂಪೊಂದು ಅವರ ಜತೆ ಕಿರಿಕ್ ತೆಗೆದಿದೆ. ಅಪರಿಚಿತರ ತಂಡ ಫೋಟೋ ತೆಗೆದಿದ್ದ ಕ್ಯಾಮೆರಾ ಕಿತ್ತುಕೊಂಡು ನಾಲ್ವರು ಯುವಕರ ಮೇಲೆ ಹಲ್ಲೆ ಮಾಡಿ, ಸೂರ್ಯನಿಗೆ ಚಾಕುವಿನಿಂದ ಇರಿದಿದ್ದಾರೆ.

ಫೋಟೊ ಶೂಟ್ ವೇಳೆ ಯುವಕನಿಗೆ ಅಪರಿಚಿತರಿಂದ ಚೂರಿ ಇರಿತ | ಯುವಕ ಮೃತ್ಯು Read More »

ವಿಷ ಸೇವಿಸಿ ಆತ್ಮಹತ್ಯೆ | ಸಾವಿಗೆ ಶರಣಾದ ಲೋಕಯ್ಯ

ಕಾಣಿಯೂರು: ವ್ಯಕ್ತಿಯೊಬ್ಬರು ವಿಪರೀತ ಮದ್ಯ ಸೇವನೆಯಿಂದ ಮೃತಪಟ್ಟ ಘಟನೆ ಕಾಣಿಯೂರಿನಲ್ಲಿ ನಡೆದಿದೆ. ಕಡಬ ತಾಲೂಕಿನ ಕಾಣಿಯೂರು ಗ್ರಾಮದ ಅಬ್ಬಡದ ಲೋಕಯ್ಯ (43 ವರ್ಷ) ಮೃತಪಟ್ಟವರು. ಕಳೆದ 20 ವರ್ಷಗಳ ಹಿಂದೆ ಅವರು ಶೋಭಾ ಎಂಬವರ ಜೊತೆ ವಿವಾಹವಾಗಿದ್ದರು. ಆದರೆ ಸಂತಾನ ಭಾಗ್ಯ ಒಲಿದು ಬಂದಿರಲಿಲ್ಲ. ಇದರಿಂದ ನೊಂದು ಮದ್ಯ ಸೇವನೆ ಮಾಡಲು ಶುರು ಮಾಡಿಕೊಂಡಿದ್ದರು. ಇತ್ತೀಚೆಗೆ ಸುಮಾರು 4 ವರ್ಷಗಳಿಂದ ಲೋಕಯ್ಯ ಗೌಡರು ಕೂಲಿ ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇದ್ದು, ಮದ್ಯ ಸೇವನೆ ಅಧಿಕವಾಗಿ ಸಮಯಕ್ಕೆ ಸರಿಯಾಗಿ

ವಿಷ ಸೇವಿಸಿ ಆತ್ಮಹತ್ಯೆ | ಸಾವಿಗೆ ಶರಣಾದ ಲೋಕಯ್ಯ Read More »

ಒಂದೇ ಕುಟುಂಬದ ನಾಲ್ವರ ಹತ್ಯೆ | ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ಮಲ್ಪೆ: ದುಷ್ಮರ್ಮಿಗಳು ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದಿದೆ. ಹತ್ಯೆಯಾದವರನ್ನು ಹಸೀನಾ (46), ಮಕ್ಕಳಾದ ಅಫ್ನಾನ್ (23), ಆಯ್ಣಾಝ್ (21)  ಹಾಗೂ ಅಸೀಮ್ (14) ಎಂದು ತಿಳಿದು ಬಂದಿದ್ದು, ಇನ್ನೋರ್ವ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿರುವುದಾಗಿ ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿಗಳು ಮಾಸ್ಕ್   ಧರಿಸಿ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ ಎನ್ನಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ., ಡಿವೈಎಸ್‍ ಪಿ ಸ್ಥಳಕ್ಕೆ ಆಗಮಿಸಿ

ಒಂದೇ ಕುಟುಂಬದ ನಾಲ್ವರ ಹತ್ಯೆ | ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು Read More »

ದುಷ್ಕರ್ಮಿಗಳಿಂದ ನಾಲ್ವರ ಹತ್ಯೆ | ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು

ಮಲ್ಪೆ: ದುಷ್ಮರ್ಮಿಗಳು ನಾಲ್ವರನ್ನು ಕೊಲೆ ಮಾಡಿದ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರಿನಲ್ಲಿ ನಡೆದಿದೆ. ಮುಸ್ಲಿ ಸಮುದಾಯದ ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ಹತ್ಯೆ ಮಾಡಿರುವುದಾಗಿ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

ದುಷ್ಕರ್ಮಿಗಳಿಂದ ನಾಲ್ವರ ಹತ್ಯೆ | ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು Read More »

ಜೀವ ಬೆದರಿಕೆ | ಅಜಿತ್ ರೈ ಹೊಸಮನೆ ವಿರುದ್ಧ ಪ್ರಕರಣ ದಾಖಲು

ಪುತ್ತೂರು: ತನ್ನ ಮನೆಗೆ ಅಕ್ರಮ ಪ್ರವೇಶ ಮಾಡಿ ಮಗನಿಗೆ ಹಲ್ಲೆಯತ್ನ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವಬೆದರಿಕೆಯೊಡ್ಡಿರುವುದಾಗಿ ಆರೋಪಿಸಿ ಅಜಿತ್ ರೈ ಹೊಸಮನೆ ಎಂಬವರ ವಿರುದ್ಧ ಮನೀಷ್ ಕುಲಾಲ್ ಅವರ ತಂದೆ ಆನಂದ ಎಸ್.ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಜುಲೈ 10ರಂದು ಮಧ್ಯಾಹ್ನ 3 ಗಂಟೆ ಸಮಯದಲ್ಲಿ ಆರೋಪಿತ ಅಜಿತ್ ರೈ ಹೊಸಮನೆ ಅವರು ಮನೆಗೆ ಅಕ್ರಮವಾಗಿ ಪ್ರವೇಶಿಸಿ ನನ್ನ ಮಗ ಮನೀಶ್ ಕುಲಾಲ್ ಮಲೆ ಹಲ್ಲೆ ಮಾಡಲು ಪ್ರಯತ್ನಿಸಿ ಅವಾಚ್ಯ ಶಬ್ದಗಳಿಂದ

ಜೀವ ಬೆದರಿಕೆ | ಅಜಿತ್ ರೈ ಹೊಸಮನೆ ವಿರುದ್ಧ ಪ್ರಕರಣ ದಾಖಲು Read More »

ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ಆನೆ ಪ್ರತ್ಯಕ್ಷ | ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡ ಬೈಕ್ ಸವಾರ

ಜಾಲ್ಸೂರು: ಜಾಲ್ಲೂರು- ಕಾಸರಗೋಡು ಅಂತರಾಜ್ಯ ರಸ್ತೆಯಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದ್ದು, ತಿರುವಿನಲ್ಲಿ ಎದುರಿನಿಂದ ಬಂದ ಬೈಕ್ ಸವಾರ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾದ ಘಟನೆ ಸುಳ್ಯ ಸಮೀಪದ ಪಂಜಿಕಲ್ಲಿನಲ್ಲಿ ಶನಿವಾರ ನಡೆದಿದೆ. ದೇಲಂಪಾಡಿ ಗ್ರಾಮದ ಬೆಳ್ಳಿಪಾಡಿ ಗ್ರಾಮ ಸುತ್ತ ಮುತ್ತ ಕಾಡಿನಿಂದ  ಆವರಿಸಿದ್ದು, ಈ ಪರಿಸರದಲ್ಲಿ ರಾತ್ರಿ, ಹಗಲೆನ್ನದೆ ಆನೆಗಳು ಓಡಾಡುತ್ತಿರುತ್ತವೆ. ಇಲ್ಲಿನ ಜನ ಪ್ರತಿ ದಿನ ಆತಂಕದಲ್ಲೇ ಬದುಕುವಂತಾಗಿದೆ. ಹಲವು ದಿನಗಳಿಂದ ನಿರಂತರವಾಗಿ ಕಾಡಾನೆಗಳು ಕೃಷಿಕರ ತೋಟಗಳಿಗೆ ದಾಳಿ ಇಡುತ್ತಿದ್ದು, ಕೃಷಿಯನ್ನು ಹಾನಿ ಮಾಡುತ್ತಿವೆ. ಕಾಸರಗೋಡು

ಜಾಲ್ಸೂರು-ಕಾಸರಗೋಡು ರಸ್ತೆಯಲ್ಲಿ ಆನೆ ಪ್ರತ್ಯಕ್ಷ | ಕೂದಲೆಳೆ ಅಂತರದಿಂದ ತಪ್ಪಿಸಿಕೊಂಡ ಬೈಕ್ ಸವಾರ Read More »

error: Content is protected !!
Scroll to Top