ಅಪರಾಧ

ಎನ್‍ ಕೌಂಟರ್ ಗೆ ರಶೀದ್ ಕಾಲಿಯಾ ಬಲಿ

ಉತ್ತರಪ್ರದೇಶ: 40 ಕೊಲೆ ಪ್ರಕರಣ ಆರೋಪ ಎದುರಿಸುತ್ತಿದ್ದ ರಶೀದ್ ಕಾಲಿಯಾನನ್ನು  ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ ಶನಿವಾರ ಹತ್ಯೆ ಮಾಡಿದೆ. ಝಾನ್ಸಿ ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ರಶೀದ್‌ ಕಾಲಿಯಾನನ್ನು ಹತ್ಯೆ ಮಾಡಲಾಗಿದೆ. ಪೊಲೀಸರು ಆತನ ತಲೆಗೆ 1.25 ಲಕ್ಷ ರೂ. ಬಹುಮಾನ ಘೋಷಿಸಿದ್ದರು. ಉತ್ತರ ಪ್ರದೇಶ ಪೊಲೀಸ್ ಮೂಲಗಳ ಪ್ರಕಾರ, ಕಾಲಿಯಾ ಝಾನ್ಸಿ ಜಿಲ್ಲೆಯ ಮೌರಾನಿಪುರದಲ್ಲಿ ಸುಪಾರಿ ಹತ್ಯೆಗಾಗಿ ಆಗಮಿಸಿದ್ದ ವೇಳೆ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ. ಮೌರಾನಿಪುರದಲ್ಲಿ ಕಾಲಿಯಾ ಇರುವಿಕೆಯ ಬಗ್ಗೆ ಮಾಹಿತಿ […]

ಎನ್‍ ಕೌಂಟರ್ ಗೆ ರಶೀದ್ ಕಾಲಿಯಾ ಬಲಿ Read More »

ಪಿಸ್ತುಲ್ ತೋರಿಸಿ ಶೋ ಮಾಡಿದ ಭೂಪ : ಮುಂದೆ ಏನಾಯ್ತು ನೋಡಿ! !

ಉತ್ತರ ಪ್ರದೇಶ, ಘಝಿಯಾಬಾದ್: ವ್ಯಕ್ತಿ ಒಬ್ಬರು ತನ್ನ ಕಾರಿನ ಕಿಟಕಿ ಮೂಲಕ ನಗರದಲ್ಲಿ ಪಿಸ್ತುಲ್ ತೋರಿಸಿ ರೋಡ್ ಶೋ ಮಾಡಿರುವ ದೃಶ್ಯ ವೈರಲ್ ಆಗಿದೆ. ಉತ್ತರಪ್ರದೇಶದ NH 24 ಸಿದ್ದಾರ್ಥ್ ವಿಹಾರ ಪ್ರದೇಶದಲ್ಲಿ ಶುಕ್ರವಾರದಂದು ಟಾಟಾ ಪಂಚ್ ಕಾರ್ ನಲ್ಲಿ ಡ್ರೈವರ್ ಪಕ್ಕದ ಸೀಟ್ ನಲ್ಲಿ ಕೂತಿದ್ದ ವ್ಯಕ್ತಿ ಒಬ್ಬರು ಪಿಸ್ತುಲ್ ತೋರಿಸುವುದರ ಮೂಲಕ ತನ್ನ ಹುಚ್ಚಾಟವನ್ನು ಪ್ರದರ್ಶಿಸಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ವೀಡಿಯೋ ತಿಳಿದ ಪೊಲೀಸರು ಕೃತ್ಯ ಎಸಗಿದ ಟಾಟಾ ಪಂಚ್ ಕಾರನ್ನು ವಶಕ್ಕೆ

ಪಿಸ್ತುಲ್ ತೋರಿಸಿ ಶೋ ಮಾಡಿದ ಭೂಪ : ಮುಂದೆ ಏನಾಯ್ತು ನೋಡಿ! ! Read More »

ವಿಷ ಸೇವಿಸಿ ಆತ್ಮಹತ್ಯೆ!

ಸುಳ್ಯ: ವ್ಯಕ್ತಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕಿನ ಚೆಂಬು ಗ್ರಾಮದ ದೊಡ್ಡಜೆಯಲ್ಲಿ ನಡೆದಿದೆ. ಚೆಂಬು ಗ್ರಾಮದ ದೊಡ್ಡಜೆ ಉದಯ (38) ಆತ್ಮಹತ್ಯೆ ಮಾಡಿಕೊಂಡವರು. ರಾತ್ರಿ ಮನೆಯಲ್ಲಿ ವಿಷ ಸೇವಿಸಿದ್ದರು. ಮನೆಯವರು ಕೂಡಲೇ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ವಿಷ ಸೇವಿಸಿ ಆತ್ಮಹತ್ಯೆ! Read More »

ಅಮಲಿನ ನಶೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ: ಪ್ರಕರಣ ದಾಖಲು

ಪುತ್ತೂರು: ಅಮಲು ಪದಾರ್ಥದ ನಶೆಯಲ್ಲಿದ್ದ ವ್ಯಕ್ತಿಯೋರ್ವ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಘಟನೆ ಪುತ್ತೂರು ತಾಲೂಕು ಆಡಳಿತ ಸೌಧದ ಸಮೀಪ ಗುರುವಾರ ಸಂಜೆ ನಡೆದಿದೆ. ಇದೀಗ ಶಿವಪ್ರಸಾದ್ ನೀಡಿದ ದೂರಿನಂತೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ಹರೀಶ್ ಎಂದು ಗುರುತಿಸಲಾಗಿದೆ. ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಸಂಚಾರ ಠಾಣೆಯ ಸಿಬ್ಬಂದಿ ಶಿವಪ್ರಸಾದ್, ಇಲಾಖಾ ವಾಹನ ಚಾಲಕ ಹನುಮಂತ ಅವರು ಹೊಯ್ಸಳ ವಾಹನದಲ್ಲಿ ಸ್ಥಳಕ್ಕೆ ತೆರಳಿದ್ದರು. ಆರೋಪಿಯು ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿದ್ದಲ್ಲದೇ, ಮುಷ್ಟಿ ಗಾತ್ರದ ಜಲ್ಲಿ ಕಲ್ಲಿನಿಂದ

ಅಮಲಿನ ನಶೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಹಲ್ಲೆ: ಪ್ರಕರಣ ದಾಖಲು Read More »

ತಲವಾರು ಝಳಪಿಸಿದ ಆರೋಪಿಗಳಿಗೆ ಶರತ್ತುಬದ್ಧ ಜಾಮೀನು

ಪುತ್ತೂರು: ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿ ಮುಂಭಾಗದಲ್ಲಿ ತಲುವಾರು ಝುಳಪಿಸಿದ ಪ್ರಕರಣದ 7 ಮಂದಿ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ. ನ.10ರಂದು ಪುತ್ತೂರು ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರದ ಕಚೇರಿ ಮುಂಭಾಗ ತಂಡವೊಂದು ತಲುವಾರು ತಂದು ಅವಾಚ್ಯ ಶಬ್ದಗಳಿಂದ ನಿಂಧಿಸಿದ ಪ್ರಕರಣದಲ್ಲಿ ಶಾಂತಿಗೋಡು ಗ್ರಾಮದ ದಿನೇಶ್ ಪಂಜಿಗ, ನರಿಮೊಗರು ಗ್ರಾಮದ ಭವಿತ್, ಬೊಳುವಾರು ನಿವಾಸಿ ಮನ್ವಿತ್, ಚಿಕ್ಕಮುಡ್ನೂರು ನಿವಾಸಿ ಜಯಪ್ರಕಾಶ್, ಚರಣ್, ಬನ್ನೂರು ಗ್ರಾಮದ ಮನೀಶ್, ಕಬಕದ ವಿನೀತ್ ಮತ್ತು ಇಬ್ಬರು ಅಪ್ರಾಪ್ತರ ವಿರುದ್ಧ ಪ್ರಕರಣ

ತಲವಾರು ಝಳಪಿಸಿದ ಆರೋಪಿಗಳಿಗೆ ಶರತ್ತುಬದ್ಧ ಜಾಮೀನು Read More »

ಕಾರಾಗೃಹದಿಂದ ಬಿಡುಗಡೆಯಾದ ಮುರುಘಾಶ್ರೀ

ಚಿತ್ರದುರ್ಗ: ಫೋಕ್ಸೋ ಪ್ರಕರಣದಲ್ಲಿ ಬಂಧಿತರಾಗಿದ್ದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರು ಗುರುವಾರ ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆ ಹೊಂದಿದರು. ನ್ಯಾಯಾಲಯ ನೀಡಿದ್ದ ಬಿಡುಗಡೆ ಆದೇಶವನ್ನು ಬುಧವಾರ ಚಿತ್ರದುರ್ಗ ಕಾರಾಗೃಹಕ್ಕೆ ವಕೀಲರು ತಲುಪಿಸಿದ್ದರು. ಆದರೆ ಸಮಯ ಮೀರಿದ್ದರಿಂದ, ಬುಧವಾರ ಬಿಡುಗಡೆ ಮಾಡಿರಲಿಲ್ಲ. ಹಾಗಾಗಿ ಗುರುವಾರ ಮಧ್ಯಾಹ್ನದ ಸಂದರ್ಭ ಬಿಡುಗಡೆ ಮಾಡಲಾಗಿದೆ. ಮುರುಘಾ ಶರಣರ ಪಾಸ್ ಪೋರ್ಟನ್ನು ನ್ಯಾಯಾಲಯ ವಶಕ್ಕೆ ಪಡೆದುಕೊಂಡಿದೆ. ಮಾತ್ರವಲ್ಲ ಇಬ್ಬರ ಜಾಮೀನು ಪಡೆದುಕೊಂಡಿದ್ದು, ಸಾಕ್ಷ್ಯ ನಾಶ ಮಾಡುವಂತಿಲ್ಲ ಎಂಬ ಷರತ್ತು ವಿಧಿಸಿದೆ. ಮಾತ್ರವಲ್ಲ, ಸಾಕ್ಷಿಗಳನ್ನು

ಕಾರಾಗೃಹದಿಂದ ಬಿಡುಗಡೆಯಾದ ಮುರುಘಾಶ್ರೀ Read More »

ತಾಯಿ, ಮಕ್ಕಳ ಹತ್ಯೆಗೆ  3 ಕಾರಣ ಕೊಟ್ಟ ಆರೋಪಿ: ಎಸ್ಪಿ ಡಾ. ಅರುಣ್

ಉಡುಪಿ: ನೇಜಾರಿನಲ್ಲಿ ನಡೆದ ತಾಯಿ, ಮಕ್ಕಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಬಂಧನಕ್ಕೊಳಗಾದ ಆರೋಪಿ ಪ್ರವೀಣ್ ಚೌಗಲೆ (39) ತಾನೇ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಹಿನ್ನಲೆಯಲ್ಲಿ ಆತನ ಬಂಧನವಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ. ಉಡುಪಿ ಎಸ್ಪಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ತಾಂತ್ರಿಕ ಹಾಗೂ ಇತರ ಸಾಕ್ಷ್ಯಾಧಾರಗಳಿಂದ ಈತನೆ ಕೊಲೆ ಮಾಡಿರುವುದು ದೃಢಪಟ್ಟಿದೆ. ಕೃತ್ಯಕ್ಕೆ ಬಳಸಿದ ಆಯುಧವನ್ನು ಇನ್ನಷ್ಟೇ ವಶಪಡಿಸಿಕೊಳ್ಳಬೇಕಾಗಿದೆ ಎಂದರು. ಮಂಗಳೂರು ಏರ್ ಇಂಡಿಯಾದಲ್ಲಿ ಕ್ಯಾಬಿನ್ ಕ್ರೂ ಮೆಂಬರ್

ತಾಯಿ, ಮಕ್ಕಳ ಹತ್ಯೆಗೆ  3 ಕಾರಣ ಕೊಟ್ಟ ಆರೋಪಿ: ಎಸ್ಪಿ ಡಾ. ಅರುಣ್ Read More »

ನೀರು ಪಾಲಾದ ವ್ಯಕ್ತಿಯ ಶವ ಪತ್ತೆ

ನೆಲ್ಯಾಡಿ: ಹೊಳೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಾಲು ಜಾರಿ ನೀರು ಪಾಲಾಗಿದ್ದ ಪಾಲಾಗಿದ್ದ ಸಿರಿಬಾಗಿಲು ಗ್ರಾಮದ ಬರ್ಚಿನಾಳ ನಿವಾಸಿ ಸೋಮಶೇಖರ (34) ಅವರ ಮೃತದೇಹ ಬುಧವಾರ ಪತ್ತೆಯಾಗಿದೆ. ನ.14ರಂದು ಸಂಜೆ ಗುಂಡ್ಯ ಹೊಳೆಗೆ ಸ್ನಾನಕ್ಕೆ ಹೋಗಿದ್ದ ವೇಳೆ ಸೋಮಶೇಖರ ಅವರು ಕಾಲು ಜಾರಿ ನೀರು ಪಾಲಾಗಿದ್ದರು. ಬಳಿಕ ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಬುಧವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಹಾಗೂ ಶೌರ್ಯ ವಿಪತ್ತು ತಂಡದವರು ಮೃತ ದೇಹ ಪತ್ತೆ ಹಚ್ಚಿದ್ದಾರೆ ಎಂದು ತಿಳಿದು ಬಂದಿದೆ.

ನೀರು ಪಾಲಾದ ವ್ಯಕ್ತಿಯ ಶವ ಪತ್ತೆ Read More »

‘ಡಿಕೆ ಸಹೋದರರನ್ನು ಕೊಲ್ಲು’ – ಪೋಸ್ಟ್: ಬಂಧನ

ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಅವರ ಸಹೋದರ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಅವರನ್ನು ಕೊಲ್ಲುವಂತೆ ಜನರನ್ನು ಒತ್ತಾಯಿಸುವ ಸಾಮಾಜಿಕ ಮಾಧ್ಯಮ ಪೋಸ್ಟ್ ಹಾಕಿದ್ದಕ್ಕಾಗಿ ಬುಧವಾರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ರಂಜಿತ್ ಆರ್‌.ಎಂ. ಎಂದು ಗುರುತಿಸಲಾಗಿದೆ. ಈ ಸಂಬಂಧ ಬೆಂಗಳೂರಿನ ಜಯನಗರ ಬ್ಲಾಕ್‌ನ ಯುವ ಕಾಂಗ್ರೆಸ್ ಅಧ್ಯಕ್ಷ ಶರತ್ ದೂರು ದಾಖಲಿಸಿದ್ದಾರೆ. ‘ಡಿಕೆ ಸಹೋದರರನ್ನು ಕೊಲ್ಲು’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿ ಪೋಸ್ಟ್ ಹಾಕಿದ್ದ ಎಂದು ಹೇಳಲಾಗಿದೆ.

‘ಡಿಕೆ ಸಹೋದರರನ್ನು ಕೊಲ್ಲು’ – ಪೋಸ್ಟ್: ಬಂಧನ Read More »

ಬಾಲಕಿ ಮೇಲೆ ಅತ್ಯಾಚಾರ

ಬೆಳ್ಳಾರೆ: ಮೂತ್ರ ವಿಸರ್ಜನೆಗೆ ತೆರಳಿದ್ದ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ನಾಗೇಶ (24) ಈ ಕೃತ್ಯ ಎಸಗಿ ಬಂಧಿತನಾದ ಆರೋಪಿ. ಮಹಾರಾಷ್ಟ್ರದ ಕೂಲಿ ಕಾರ್ಮಿರರೋರ್ವರ ಏಳು ವರ್ಷದ ಮಗಳು ಮೂತ್ರ ವಿಸರ್ಜನೆಗೆ ತೆರಳಿದ್ದ ವೇಳೆ ಅತ್ಯಾಚಾರ ನಡೆಸಿದ್ದಾನೆ ಎನ್ನಲಾಗಿದೆ. ಅತ್ಯಾಚಾರದ ಬಳಿಕ ಬಾಲಕಿಗೆ ರಕ್ತಸ್ರಾವವಾಗಿ ತೀವ್ರವಾಗಿ ಅಸ್ವಸ್ಥಗೊಂಡಿದ್ದಾಳೆ. ಈ ವೇಳೆ ಪ್ರಕರಣ ಬಯಲಾಗಿದೆ. ಈ ಕುರಿತು ಬಾಲಕಿಯ ಪೋಷಕರು ಬೆಳ್ಳಾರೆ ಠಾಣೆಗೆ

ಬಾಲಕಿ ಮೇಲೆ ಅತ್ಯಾಚಾರ Read More »

error: Content is protected !!
Scroll to Top