ಅಪರಾಧ

ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ

ಬಂಟ್ವಾಳ : ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಆಗಮಿಸಿದ್ದ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾವೆಸೆಗಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಾವೂರು ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವಕ್ಕೆ ಮನೆಯವರ ಜೊತೆ ಆಗಮಿಸಿದ್ದ ಯುವತಿಯನ್ನು ಆರೋಪಿ ಕೊಠಡಿಯಲ್ಲಿ ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಾನೆ. ಯುವತಿ ನೀಡಿದ ದೂರಿನ ಅನ್ವಯ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯ ಮೇಲೆ ಅತ್ಯಾಚಾರ: ಆರೋಪಿಯ ಬಂಧನ Read More »

ಉತ್ತರ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಎನ್‌ಕೌಂಟರ್‌ಗೆ ಬಲಿ

ನಿಷೇಧಿತ ಖಲಿಸ್ಥಾನ್‌ ಕಮಾಂಡೊ ಫೋರ್ಸ್‌ಗೆ ಸೇರಿದ ಉಗ್ರರು ಲಖನೌ: ನಿಷೇಧಿತ ಖಲಿಸ್ತಾನ್‌ ಕಮಾಂಡೊ ಫೋರ್ಸ್‌ನ (ಖಲಿಸ್ತಾನ್‌ ಜಿಂದಾಬಾದ್‌ ಫೋರ್ಸ್‌) ಸಂಘಟನೆಯ ಮೂವರು ಭಯೋತ್ಪಾದಕರನ್ನು ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ಪೊಲೀಸರು ಎನ್‌ಕೌಂಟರ್‌ನಲ್ಲಿ ಸಾಯಿಸಿದ್ದಾರೆ. ಸೋಮವಾರ ಮುಂಜಾನೆ ಈ ಎನ್‌ಕೌಂಟರ್‌ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಹತರಾದ ಖಲಿಸ್ಥಾನಿ ಭಯೋತ್ಪಾದಕರನ್ನು ಗುರ್ವಿಂದರ್ ಸಿಂಗ್ (25), ವೀರೇಂದ್ರ ಸಿಂಗ್ ಅಲಿಯಾಸ್ ರವಿ (23), ಮತ್ತು ಜಸ್ಪ್ರೀತ್ ಸಿಂಗ್ ಅಲಿಯಾಸ್ ಪ್ರತಾಪ್ ಸಿಂಗ್ (18) ಎಂದು ಗುರುತಿಸಲಾಗಿದೆ. ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ

ಉತ್ತರ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಎನ್‌ಕೌಂಟರ್‌ಗೆ ಬಲಿ Read More »

ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ : 10 ಮಂದಿ ವಿರುದ್ಧ ಎಫ್‌ಐಆರ್‌

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಆಪ್ತ ಸೇರಿ 10 ಮಂದಿಯ ವಿರುದ್ಧ ಕೇಸ್‌ ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಬಿಜೆಪಿ ಎಂಎಲ್‌ಸಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಆಪ್ತ ಸೇರಿ 10 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸಿ.ಟಿ ರವಿ ಅಸಂವಿಧಾನಿಕ ಪದ ಬಳಕೆ ಆರೋಪ ಕೇಳಿಬಂದ ಬಳಿಕ ಸುವರ್ಣಸೌಧದಲ್ಲಿ ಭಾri ಹೈಡ್ರಾಮಾ ನಡೆದಿತ್ತು. ಲಕ್ಷ್ಮಿ ಹೆಬ್ಬಾಳ್ಕರ್‌ ಬೆಂಬಲಿಗರು ಸೌಧದೊಳಕ್ಕೆ ನುಗ್ಗಿ ಹಲ್ಲೆಗೆ ಯತ್ನಿಸಿದ್ದರು. ಹಿರೇಬಾಗೇವಾಡಿ ಪೊಲೀಸ್‌

ಸುವರ್ಣ ಸೌಧದಲ್ಲಿ ಸಿ.ಟಿ.ರವಿ ಮೇಲೆ ಹಲ್ಲೆಗೆ ಯತ್ನ : 10 ಮಂದಿ ವಿರುದ್ಧ ಎಫ್‌ಐಆರ್‌ Read More »

ಸೈಬರ್‌ ವಂಚಕರಿಗೆ 500 ಸಿಮ್‌ಕಾರ್ಡ್‌ ಪೂರೈಸಿದವ ಸೆರೆ

ಆನ್‌ಲೈನ್‌ ವಂಚನೆ ಪ್ರಕರಣಗಳ ತನಿಖೆಯಲ್ಲಿ ಮಂಗಳೂರು ಪೊಲೀಸರ ಮಹತ್ವದ ಸಾಧನೆ ಮಂಗಳೂರು: ಸೈಬರ್​ ವಂಚಕರಿಗೆ 500ಕ್ಕೂ ಅಧಿಕ ಸಿಮ್‌ಕಾರ್ಡ್‌ಗಳನ್ನು ಪೂರೈಕೆ ಮಾಡಿದ್ದ ವಂಚಕನೊಬ್ಬನನ್ನು ಮಂಗಳೂರು ಪೊಲೀಸರು ದಿಲ್ಲಿಯಲ್ಲಿ ಬಂಧಿಸಿದ್ದಾರೆ. ಮಂಗಳೂರಿನ ಸೆನ್ ಕ್ರೈಂ ಪೊಲೀಸರ ಕೈಗೆ ದಿಲ್ಲಿ ವಿಮಾನ ನಿಲ್ದಾಣದಲ್ಲಿ ವಂಚಕ ಸಿಕ್ಕಿಬಿದ್ದಿದ್ದಾನೆ. ಅವನನ್ನು ಒಡಿಶಾ ಮೂಲದ ಕಣಾತಲ ವಾಸುದೇವ ರೆಡ್ಡಿ (25) ಎಂದು ಗುರುತಿಸಲಾಗಿದೆ. ಸೈಬರ್ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ವೇಳೆ ಕಣಾತಲ ವಾಸುದೇವ ರೆಡ್ಡಿ ಸಿಮ್ ಪೂರೈಕೆ ಮಾಹಿತಿ ಮಂಗಳೂರಿನ ಸೆನ್ ಪೊಲೀಸರಿಗೆ

ಸೈಬರ್‌ ವಂಚಕರಿಗೆ 500 ಸಿಮ್‌ಕಾರ್ಡ್‌ ಪೂರೈಸಿದವ ಸೆರೆ Read More »

ಸಿಲಿಂಡರ್‌ ಸ್ಫೋಟ ; 9 ಅಯ್ಯಪ್ಪ ವ್ರತಧಾರಿಗಳಿಗೆ ಗಂಭೀರ ಗಾಯ

ಹುಬ್ಬಳ್ಳಿ: ಗ್ಯಾಸ್‌ ಸೋರಿಕೆಯಾಗಿ ಸಿಲಿಂಡರ್‌ ಸಿಡಿದ ಪರಿಣಾಮ ಒಂಬತ್ತು ಅಯ್ಯಪ್ಪ ವ್ರತಧಾರಿಗಳು ಗಂಭೀರವಾಗಿ ಗಾಯಗೊಂಡ ಘಟನೆ ಹುಬ್ಬಳ್ಳಿಯ ದೇವಸ್ಥಾನವೊಂದರಲ್ಲಿ ಭಾನುವಾರ ತಡರಾತ್ರಿ ಸಂಭವಿಸಿದೆ. ಹುಬ್ಬಳ್ಳಿಯ ಸಾಯಿನಗರದಲ್ಲಿರುವ ಈಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವ್ರತಧಾರಿಗಳ ಶಿಬಿರವಿದ್ದು, ಅಡುಗೆ ಮಾಡಲು ತಂದಿರಿಸಿದ್ದ ಸಿಲಿಂಡರ್‌ ಸ್ಫೋಟವಾಗಿದೆ.ಅಯ್ಯಪ್ಪ ವ್ರತಧಾರಿಗಳು ನಿದ್ರಿಸಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಿಲಿಂಡರ್‌ನಿಂದ ಗ್ಯಾಸ್‌ ಸೋರಿಕೆಯಾಗಿ ದೀಪದ ಬೆಂಕಿ ತಗುಲಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಗಾಯಗೊಂಡ 9 ಮಾಲಾಧಾರಿಗಳ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡ ಮಾಲಾಧಾರಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಲಿಂಡರ್‌ ಸ್ಫೋಟ ; 9 ಅಯ್ಯಪ್ಪ ವ್ರತಧಾರಿಗಳಿಗೆ ಗಂಭೀರ ಗಾಯ Read More »

ಸುಳ್ಯ : ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು! ಕದ್ದೋಯ್ಯುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ

ಸುಳ್ಯ :  ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕರೊಬ್ಬರ  ಬ್ಯಾಗ್ ಮತ್ತು ಶೂ ಕಳ್ಳತನ ಮಾಡಿದ ಘಟನೆ ಸುಳ್ಯದಲ್ಲಿ ನಡೆದಿದೆ.  ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದು, ಮಲಗಿದ್ದ ವೇಳೆ ಪ್ರಯಾಣಿಕ ನಿದ್ದೆಯಲ್ಲಿದ್ದಾಗ ಕಳ್ಳ ಶೂ ಮತ್ತು ಬ್ಯಾಗನ್ನು  ಕದ್ದು ತಪ್ಪಿಸಿಕೊಂಡಿದ್ದಾನೆ. ಕದಿಯುತ್ತಿದ್ದ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ ಎನ್ನಲಾಗಿದೆ. ಈ ಘಟನಾನುಸಾರವಾಗಿ ರಾತ್ರಿ ಪಾಳಿಯಲ್ಲಿ ವಾಚ್ ಮ್ಯಾನ್ ಇಲ್ಲದಿರುವುದರಿಂದ ನಿರಂತರವಾಗಿ ಕದಿಯುತ್ತಿದ್ದಾರೆ ಎಂದು ಪ್ರಯಾಣಿಕರು ದೂರಿದ್ದು, ಬಸ್ ನಿಲ್ದಾಣದ ಅಂಗಡಿ ಮಾಲಕರು

ಸುಳ್ಯ : ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು! ಕದ್ದೋಯ್ಯುವ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆ Read More »

ಅಪ್ರಾಪ್ತೆ ಯುವತಿಯ ಮೇಲೆ ಅತ್ಯಾಚಾರ | ಆರೋಪಿಗೆ ಶರತ್ತುಬದ್ಧ ಜಾಮೀನು

ಕಾಣಿಯೂರು: ಅಪ್ರಾಪ್ತೆ ಯುವತಿಯೋರ್ವಳ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬನಿಗೆ ಪುತ್ತೂರು ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆ ಮಾಡುವಂತೆ ಆದೇಶಿಸಿದೆ. ಕಡಬ ಪೋಲೀಸ್ ಠಾಣಾ ವ್ಯಾಪ್ತಿಗೊಳಪಟ್ಟ ಅಪ್ರಾಯಸ್ಥ ಯುವತಿಯೋರ್ವಳ ಮೇಲೆ ಅದೇ ಗ್ರಾಮದ ನಂದನ್ ಎಂ.ಇ ಎಂಬ ಯುವಕ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧಅ. 8ರಂದು ಕಡಬ ಪೋಲೀಸ್ ಠಾಣೆಯಲ್ಲಿ Crime No :79/2024  ರಂತೆ ಭಾರತೀಯ ದಂಡ ಸಂಹಿತೆಯ ಕಲಂ 376 (3), 376(2)(n), 506 IPC  ಮತ್ತು POCSO

ಅಪ್ರಾಪ್ತೆ ಯುವತಿಯ ಮೇಲೆ ಅತ್ಯಾಚಾರ | ಆರೋಪಿಗೆ ಶರತ್ತುಬದ್ಧ ಜಾಮೀನು Read More »

ಸಾಫ್ಟ್‌ವೇರ್‌ ಇಂಜಿನಿಯರನ್ನೇ ಡಿಜಿಟಲ್‌ ಅರೆಸ್ಟ್‌ ಮಾಡಿ 11.83 ಕೋ ರೂ. ಲೂಟಿ

ಒಂದೇ ಪ್ರಕರಣದಲ್ಲಿ ಅತಿ ಹೆಚ್ಚು ಮೊತ್ತ ಲೂಟಿಯಾದ ಪ್ರಕರಣ ಬೆಂಗಳೂರು : ನಗರದ 39 ವರ್ಷದ ಸಾಫ್ಟ್‌ವೇರ್‌ ಇಂಜಿನಿಯರ್‌ ಒಬ್ಬರನ್ನು ಒಂದು ತಿಂಗಳ ಕಾಲ ಡಿಜಿಟಲ್‌ ಅರೆಸ್ಟ್‌ ಮಾಡಿ ಸೈಬರ್‌ ವಂಚಕರು ಬರೋಬ್ಬರಿ 11.83 ಕೋಟಿ ರೂ.ಲೂಟಿ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವ್ಯಕ್ತಿಯೊಬ್ಬರು ಡಿಜಿಟಲ್‌ ಅರೆಸ್ಟ್‌ ವಂಚನೆಯಲ್ಲಿ ಅತ್ಯಧಿಕ ಮೊತ್ತ ಕಳೆದುಕೊಂಡ ದೇಶದ ಮೊದಲ ಪ್ರಕರಣ ಇದಾಗಿದೆ. ಈ ಕುರಿತು ಸಂತ್ರಸ್ತ ಟೆಕ್ಕಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಈಶಾನ್ಯ ವಿಭಾಗದ ಸೈಬರ್‌ ಠಾಣೆ

ಸಾಫ್ಟ್‌ವೇರ್‌ ಇಂಜಿನಿಯರನ್ನೇ ಡಿಜಿಟಲ್‌ ಅರೆಸ್ಟ್‌ ಮಾಡಿ 11.83 ಕೋ ರೂ. ಲೂಟಿ Read More »

ಡಾಗ್‌ ಫೈಟಿಂಗ್‌ ಮೇಲೆ ಬೆಟ್ಟಿಂಗ್‌!

ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿತ್ತು ನಾಯಿಗಳ ಕಾದಾಟದ ವಿಲಕ್ಷಣ ಪಂದ್ಯ ಜೈಪುರ: ಕೋಳಿಅಂಕ, ಕುದುರೆ ರೇಸ್‌ನಲ್ಲಿ ಬೆಟ್ಟಿಂಗ್‌ ನಡೆಯುವುದು ಗೊತ್ತು, ಆದರೆ ಇಲ್ಲಿ ನಾಯಿಗಳ ಕಾದಾಟದ ಮೇಲೆ ಬೆಟ್ಟಿಂಗ್‌ ಕಟ್ಟುವ ವಿಚಿತ್ರ ಪಂದ್ಯವೊಂದು ನಡೆಯುತ್ತಿದೆ. ರಾಜಸ್ಥಾನದ ಜೈಪುರ ಸಮೀಪ ಇಂಥದ್ದೊಂದು ವಿಲಕ್ಷಣ ಮತ್ತು ಕ್ರೂರ ಪಂಂದ್ಯ ನಡೆದು ಅದರ ಮೇಲೆ ಲಕ್ಷಗಟ್ಟಲೆ ಬೆಟ್ಟಿಂಗ್‌ ನಡೆಸಲಾಗುತ್ತಿತ್ತು. ಈ ಸಂಬಂಧ 80ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.ಜೈಪುರ ಹನುಮಾನ್‌ಗಢ ಎಂಬಲ್ಲಿ ಫಾರ್ಮ್‌ ಹೌಸ್‌ ಒಂದರಲ್ಲಿ ಡಾಗ್‌ ಫೈಟ್‌ ನಡೆಯುತ್ತಿತ್ತು ಎಂದು ಪೊಲೀಸರು

ಡಾಗ್‌ ಫೈಟಿಂಗ್‌ ಮೇಲೆ ಬೆಟ್ಟಿಂಗ್‌! Read More »

ಚಿನ್ನಾಭರಣ ಕಳ್ಳತನ ಪ್ರಕರಣ l ಮೂವರು ಕಳ್ಳಿಯರ ಬಂಧನ

ಪುತ್ತೂರು: ಪುತ್ತೂರು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಗೋಳ್ತಮಜಲು ಗ್ರಾಮದ ನಿವಾಸಿ ಸರಸ್ವತಿ ಎಂಬವರ ಬ್ಯಾಗಿನಿಂದ ಚಿನ್ನಾಭರಣಗಳನ್ನು ಡಿ.19ರಂದು ಅಪರಿಚಿತರು ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 120/2024 ಕಲಂ: 303(2) ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಲಾಗಿತ್ತು, ಪ್ರಕರಣ ಪ್ರಕಾರ ತನಿಖೆ ನಡೆಸಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿತೆಯರಾದ ರಾಜಾಜಿನಗರ ಬೆಂಗಳೂರು ನಿವಾಸಿಗಳಾದ ಜ್ಯೋತಿ ಹಾಗೂ  ಯಶೋದರವರನ್ನು ದಸ್ತಗಿರಿ ಮಾಡಿ, ಅವರಿಂದ ಕಳವಾದ ರೂ 25,000/- ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮತ್ತೊಂದು ಪ್ರಕರಣವಾದ

ಚಿನ್ನಾಭರಣ ಕಳ್ಳತನ ಪ್ರಕರಣ l ಮೂವರು ಕಳ್ಳಿಯರ ಬಂಧನ Read More »

error: Content is protected !!
Scroll to Top