ಅಪರಾಧ

ಪೋಕ್ಸೊ ಕೇಸ್‌ : ಯಡಿಯೂರಪ್ಪಗೆ ಕೋರ್ಟ್‌ನಿಂದ ರಿಲೀಫ್‌

ಖುದ್ದು ಹಾಜರಾತಿ, ಸಮನ್ಸ್‌ಗೆ ಹೈಕೋರ್ಟಿನಿಂದ ತಡೆ ಬೆಂಗಳೂರು: ಪೋಕ್ಸೊ ಪ್ರಕರಣದ ಸಂಬಂಧ ಮಾರ್ಚ್​ 15ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂಪ್ಪರಿಗೆ 1ನೇ ತ್ವರಿತಗತಿ ನ್ಯಾಯಾಲಯ ಜಾರಿ ಮಾಡಿದ್ದ ಸಮನ್ಸ್​ಗೆ ಹೈಕೋರ್ಟ್​ ತಡೆ ನೀಡಿದೆ. ಯಡಿಯೂರಪ್ಪ ಖುದ್ದು ಹಾಜರಾತಿಗೂ ವಿನಾಯಿತಿ ನೀಡಿದೆ. ಈ ಮೂಲಕ ಪ್ರಕರಣದಲ್ಲಿ ಬಿ.ಎಸ್​ ಯಡಿಯೂಪ್ಪ ಅವರಿಗೆ ರಿಲೀಫ್​ ಸಿಕ್ಕಿದೆ.2024ರ ಫೆ‌ಬ್ರವರಿ 2ರಂದು ನಡೆದಿದೆ ಎನ್ನಲಾದ ಘಟನೆ ಕುರಿತು 1 ತಿಂಗಳು 12 ದಿನ ತಡವಾಗಿ ಪೋಕ್ಸೊ ಕೇಸ್ ದಾಖಲಿಸಲಾಗಿದೆ. ಘಟನೆ […]

ಪೋಕ್ಸೊ ಕೇಸ್‌ : ಯಡಿಯೂರಪ್ಪಗೆ ಕೋರ್ಟ್‌ನಿಂದ ರಿಲೀಫ್‌ Read More »

ಡಿಕ್ಕಿಯ ಬಿರುಸಿಗೆ ಕಾಂಪೌಂಡ್‌ನ ಬೇಲಿಯಲ್ಲಿ ಸಿಲುಕಿ ನೇತಾಡಿದ ಮಹಿಳೆ

ಮಂಗಳೂರಿನಲ್ಲಿ ಸಂಭವಿಸಿದ ಎದೆ ಝಲ್‌ ಎನಿಸುವ ಅಪಘಾತದ ವೀಡಿಯೊ ಭಾರಿ ವೈರಲ್‌ ಮಂಗಳೂರು: ಬೈಕ್ ಸವಾರನನ್ನು ಗುದ್ದಿ ಸಾಯಿಸಲೆಂದು ಧಾವಿಸಿ ಬಂದ ಕಾರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದು, ಈ ಮಹಿಳೆ ಪಕ್ಕದ ಕಂಪೌಂಡ್‌ಗೆ ಎಸೆಯಲ್ಪಟ್ಟು ಕಬ್ಬಿಣದ ಬೇಲಿಯಲ್ಲಿ ಸಿಲುಕಿಕೊಂಡು ನೇತಾಡಿದ ವಿಲಕ್ಷಣ ಅಪಘಾತವೊಂದು ನಿನ್ನೆ ಸಂಜೆ ಮಂಗಳೂರಿನ ಕಾಪಿಕಾಡ್‌ನಲ್ಲಿ ಸಂಭವಿಸಿದ್ದು, ಇದರ ವೀಡಿಯೊ ಎಲ್ಲೆಡೆ ಹರಿದಾಡಿ ಭಾರಿ ವೈರಲ್‌ ಆಗಿದೆ. ಕಾರು ಗುದ್ದಿದ ರಭಸಕ್ಕೆ ಮಹಿಳೆ ಕಾಂಪೌಂಡ್​ ಮೇಲೆ ನೇತಾಡಿರುವ ದೃಶ್ಯ ಎದೆ

ಡಿಕ್ಕಿಯ ಬಿರುಸಿಗೆ ಕಾಂಪೌಂಡ್‌ನ ಬೇಲಿಯಲ್ಲಿ ಸಿಲುಕಿ ನೇತಾಡಿದ ಮಹಿಳೆ Read More »

ನಾಪತ್ತೆಯಾದ ನಿತೇಶ್‌ ಬೆಳ್ಚಾಡ  ಪತ್ತೆ

ಮಂಗಳೂರು :  ಪ್ಯಾರಾಮೆಡಿಕಲ್ ವಿದ್ಯಾರ್ಥಿ ನಿತೇಶ್‌ ಬೆಳ್ಚಾಡ  ಸುಮಾರು  ದಿನಗಳಿಂದ ಮನೆಗೆ ಬಾರದೆ ನಾಪತ್ತೆಯಾಗಿದ್ದ. ಮೂಡುಪೆರಾರ ನಿವಾಸಿ ನಿತೇಶ್ ಗೋವಾದಲ್ಲಿ ಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ. ಫೆಬ್ರವರಿ 13 ಕ್ಕೆ ನಾಪತ್ತೆಯಾಗಿದ್ದ ಈತನ ಸುಳಿವಿಗೆ ಪೊಲೀಸರು ವಿಶೇಷ ತಂಡ ರಚಿಸಿ ಅನೇಕ ಕಡೆ ತನಿಖೆ ನಡೆಸಿದ್ದರು ಮಾಹಿತಿ ಲಭಿಸಿರಲಿಲ್ಲ. ಆದರೆ ನಿತೇಶ್‍ ಎಂಬವನು ಗೋವಾದಲ್ಲಿ ಸಿಕ್ಕಿದ್ದಾನೆ ಎನ್ನಲಾಗಿದೆ.

ನಾಪತ್ತೆಯಾದ ನಿತೇಶ್‌ ಬೆಳ್ಚಾಡ  ಪತ್ತೆ Read More »

ತಾರಕಕ್ಕೇರಿದ ನೆರೆಹೊರೆಯವರ ಜಗಳ | ಕಾರನ್ನು ಬೈಕ್‍ಗೆ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನ

ಮಂಗಳೂರು: ನೆರಮನೆ ನಿವಾಸಿಗಳ ಜಗಳದಿಂದ ಕಾರನ್ನು ಬೈಕ್ ಗೆ ಡಿಕ್ಕಿ ಹೊಡೆಸಿ, ಕೊಲೆ ಮಾಡುವ ಯತ್ನಿಸಿದ ಘಟನೆ ಮಂಗಳೂರು ನಗರದ ಬಿಜೈ ಕಾಪಿಕಾಡ್ ನಲ್ಲಿ ನಡೆದಿದೆ. ಅಕ್ಕಪಕ್ಕದ ಮನೆನಿವಾಸಿಗಳ ಸತೀಶ್ ಮತ್ತು ಮುರಳಿ ಪ್ರಸಾದ್ ನಡುವೆ ಆಗಾಗ ಜಗಳ ಉಂಟಾಗುತ್ತಿದ್ದು ಮುರಳಿ ಪ್ರಸಾದ್ ಅವರು ಚಲಾಯಿಸುತ್ತಿದ್ದ ಬೈಕ್ ಗೆ ತನ್ನ ಕಾರನ್ನು ಡಿಕ್ಕಿ ಹೊಡೆಸಿ ಸತೀಶ್ ಕೊಲೆಗೆ ಯತ್ನಿಸಿದ್ದಾನೆ. ಸತೀಶ್ ಮಾರುತಿ 800 ಕಾರನ್ನು ಬೈಕ್ ಗೆ ಡಿಕ್ಕಿ ಹೊಡೆಸಿದ ರಭಸಕ್ಕೆ ಪಾದಾಚಾರಿ ಮಹಿಳೆಯೊಬ್ಬರಿಗೂ ಡಿಕ್ಕಿ ಹೊಡೆದಿದ್ದು

ತಾರಕಕ್ಕೇರಿದ ನೆರೆಹೊರೆಯವರ ಜಗಳ | ಕಾರನ್ನು ಬೈಕ್‍ಗೆ ಡಿಕ್ಕಿ ಹೊಡೆಸಿ ಕೊಲೆಗೆ ಯತ್ನ Read More »

ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಾಲಕ | ಬಿಜೆಪಿ ಮುಖಂಡರಿಂದ ಸೂಕ್ತ ಕ್ರಮಕ್ಕೆ ಆಗ್ರಹ

ಪುತ್ತೂರು : ಅನ್ಯಕೋಮಿನ ಅಪ್ರಾಪ್ತ ಯುವಕನೋರ್ವ ಹಿಂದೂ ಯುವತಿಗೆ ಅಸಹ್ಯ ರೀತಿ ನಡೆದುಕೊಂಡ ಘಟನೆ ಪುತ್ತೂರಿನಲ್ಲಿ ನಡೆದಿದೆ. ಈ ವೇಳೆ  ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಲಾಗಿದೆ. ಮಾಜಿ ಶಾಸಕ ಸಂಜೀವ ಮಠಂದೂರು ,ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ಮುರುಳಿಕೃಷ್ಣ ಹಂಸತಡ್ಕ ಸಹಿತ ಹಲವು ಬಿಜೆಪಿ ಮುಖಂಡರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಠಾಣೆಗೆ ಬೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಹಿಂದೂ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಬಾಲಕ | ಬಿಜೆಪಿ ಮುಖಂಡರಿಂದ ಸೂಕ್ತ ಕ್ರಮಕ್ಕೆ ಆಗ್ರಹ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ಜೊತೆ ಸಿದ್ದರಾಮಯ್ಯ, ಪರಮೇಶ್ವರ್‌ ಇರುವ ಫೋಟೊ ಹಾಕಿ ಕಾಲೆಳೆದ ಬಿಜೆಪಿ

ಸಿಐಡಿ ತನಿಖೆ ದಿಢೀರ್‌ ಹಿಂದೆಗೆದುಕೊಂಡ ಕುರಿತು ನಾನಾ ಅನುಮಾನ ಬೆಂಗಳೂರು : ಕನ್ನಡ ಚಿತ್ರನಟಿ ರನ್ಯಾ ರಾವ್‌ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ ದಿನದಿಂದ ದಿನಕ್ಕೆ ತಿರುವು ಪಡೆಯುತ್ತಿದೆ. ಇಬ್ಬರ ಸಚಿವರ ಹೆಸರು ಈ ಪ್ರಕರಣದಲ್ಲಿ ತುಳುಕು ಹಾಕುತ್ತಿರುವ ಬೆನ್ನಲ್ಲೆ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಒಂದು ಫೋಟೊ ಕಾಂಗ್ರೆಸ್‌ನ ಆಕ್ರೋಶಕ್ಕೆ ಕಾರಣವಾಗಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ.ಪರಮೇಶ್ವರ್‌ ಆರೋಪಿ ರನ್ಯಾ ರಾವ್‌ ಜೊತೆ ಇರುವ ಫೋಟೊವನ್ನು ಬಿಜೆಪಿಯ ಸೋಷಿಯಲ್‌ ಮೀಡಿಯಾ ವಿಭಾಗ ಅಪ್‌ಲೋಡ್‌ ಮಾಡಿ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ಜೊತೆ ಸಿದ್ದರಾಮಯ್ಯ, ಪರಮೇಶ್ವರ್‌ ಇರುವ ಫೋಟೊ ಹಾಕಿ ಕಾಲೆಳೆದ ಬಿಜೆಪಿ Read More »

ದರೋಡೆ ಪ್ರಕರಣ : ಹಾಸನದಲ್ಲಿ ಇಸಾಕ್‌ ಸಹಿತ ನಾಲ್ವರ ಬಂಧನ | ಪೊಲೀಸರಿಂದ ತಪ್ಪಿಸಿಕೊಳ್ಳಲೆತ್ನಿಸಿದ ಇಸಾಕ್‌ ಕಾಲಿಗೆ ಪೊಲೀಸರಿಂದ ಗುಂಡೇಟು

ಉಡುಪಿ: ಪೊಲೀಸರಿಗೆ ಅಪಘಾತ ನಡೆಸಿ ಪರಾರಿಯಾಗಿದ್ದವರನ್ನು ಹಾಸನದಲ್ಲಿ ಬಂಧಿಸಿ ಮಣಿಪಾಲಕ್ಕೆ ಕರೆತರುತ್ತಿದ್ದ ಗರುಡ ಗ್ಯಾಂಗ್‌ ನ ಇಸಾಕ್‌ ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ವೇಳೆ ಇಸಾಕ್ ಕಾಲಿಗೆ ಗುಂಡೇಟು ತಗಲಿದ್ದು, ಇಬ್ಬರು ಪೊಲೀಸರು ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ನೆಲಮಂಗಲದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಮಣಿಪಾಲದಲ್ಲಿ ಇತ್ತೀಚೆಗೆ ನಡೆದ ಪೊಲೀಸ್ ಕಾರ್ಯಾಚರಣೆ ವೇಳೆ ತಪ್ಪಿಸಿಕೊಂಡು ಪರಾರಿಯಾಗಿದ್ದ ಇಸಾಕ್ ಹಾಗೂ ಇತರರ ಬಂಧನಕ್ಕಾಗಿ ಮಣಿಪಾಲ ಪೊಲೀಸ್ ಠಾಣಾ ನಿರೀಕ್ಷಕ, ಮಲ್ಪೆ ವೃತ್ತ ನಿರೀಕ್ಷಕರು ಹಾಗೂ ಇತರ ಅಧಿಕಾರಿ

ದರೋಡೆ ಪ್ರಕರಣ : ಹಾಸನದಲ್ಲಿ ಇಸಾಕ್‌ ಸಹಿತ ನಾಲ್ವರ ಬಂಧನ | ಪೊಲೀಸರಿಂದ ತಪ್ಪಿಸಿಕೊಳ್ಳಲೆತ್ನಿಸಿದ ಇಸಾಕ್‌ ಕಾಲಿಗೆ ಪೊಲೀಸರಿಂದ ಗುಂಡೇಟು Read More »

ಪಾಕ್‌ ರೈಲು ಹೈಜಾಕ್‌ : ರಕ್ಷಣಾ ಕಾರ್ಯಾಚರಣೆ ಮುಕ್ತಾಯ, 33 ಬಂಡುಕೋರರ ಹತ್ಯೆ

500 ಪ್ರಯಣಿಕರಿದ್ದ ಪ್ಯಾಸೆಂಜರ್‌ ರೈಲನ್ನು ಅಪಹರಿಸಿದ್ದ ಬಲೂಚಿಸ್ಥಾನ ಬಂಡುಕೋರರು ಇಸ್ಲಾಮಾಬಾದ್‌ : ಬಲೂಚಿಸ್ಥಾನದಲ್ಲಿ ಜಾಫರ್‌ ಎಕ್ಸ್‌ಪ್ರೆಸ್‌ ಪ್ಯಾಸೆಂಜರ್‌ ರೈಲು ಅಪಹರಿಸಿ ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟಿದ್ದ ಎಲ್ಲ 33 ಬಂಡುಕೋರರನ್ನು ಸಾಯಿಸಿ, ಪ್ರಯಾಣಿಕರನ್ನು ರಕ್ಷಿಸಲಾಗಿದೆ ಎಂದು ಪಾಕಿಸ್ಥಾನದ ಸೇನೆ ಹೇಳಿಕೊಂಡಿದೆ.ಮಂಗಳವಾರ ಕ್ವೆಟ್ಟಾದಿಂದ ಪೇಷಾವರಕ್ಕೆ ಬರುತ್ತಿದ್ದ ರೈಲನ್ನು ಬಲೂಚಿಸ್ಥಾನದ ಬಲೂನ್‌ ಎಂಬಲ್ಲಿ ಹಳಿಯನ್ನು ಸ್ಫೋಟಿಸಿ ಅಪಹರಿಸಿದ್ದ ಬಂಡುಕೋರರು ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟು, ಸೆರೆಮನೆಗಳಲ್ಲಿರುವ ಬಲೂಚಿಸ್ಥಾನದ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಿ ಬಲೂಚಿಸ್ಥಾನವನ್ನು ಸ್ವತಂತ್ರ ದೇಶವಾಗಿ ಘೋಷಿಸಬೇಕೆಂಬ ಬೇಡಿಕೆ ಇಟ್ಟಿದ್ದರು.ಾಪಹರಿಸಿದ ರೈಲಿನಲ್ಲಿ ಸುಮಾರು 500 ಪ್ರಯಾಣಿಕರು

ಪಾಕ್‌ ರೈಲು ಹೈಜಾಕ್‌ : ರಕ್ಷಣಾ ಕಾರ್ಯಾಚರಣೆ ಮುಕ್ತಾಯ, 33 ಬಂಡುಕೋರರ ಹತ್ಯೆ Read More »

ಪಾಕಿಸ್ಥಾನ ರೈಲು ಹೈಜಾಕ್‌ : 155 ಪ್ರಯಾಣಿಕರನ್ನು ರಕ್ಷಿಸಿದ ಭದ್ರತಾ ಪಡೆ

27 ಬಂಡುಕೋರರ ಹತ್ಯೆ, 200ಕ್ಕೂ ಅಧಿಕ ಪ್ರಯಾಣಿಕರು ಒತ್ತೆಸೆರೆಯಲ್ಲಿ ಇಸ್ಲಾಮಾಬಾದ್‌ : ಪಾಕಿಸ್ಥಾನದಲ್ಲಿ ಬಲೂಚಿಸ್ಥಾನದ ಪ್ರತ್ಯೇಕವಾದಿಗಳು ಒಂದಿಡೀ ರೈಲನ್ನು ಅಪಹರಿಸಿ ನೂರಾರು ಪ್ರಯಾಣಿಕರನ್ನು ಒತ್ತೆಸೆರೆಯಲ್ಲಿಟ್ಟುಕೊಂಡಿದ್ದು, ಪ್ರಯಾಣಿಕರನ್ನು ರಕ್ಷಿಸಲು ಭದ್ರತಾ ಪಡೆಗಳು ತೀವ್ರ ಕಾರ್ಯಾಚರಣೆ ನಡೆಸುತ್ತಿವೆ. ಮಂಗಳವಾರ ಕ್ವೆಟ್ಟಾದಿಂದ ಪೇಷಾವರಕ್ಕೆ ಬರುತ್ತಿದ್ದ ಜಾಫರ್‌ ಎಕ್ಸ್‌ಪ್ರೆಸ್‌ ಪ್ಯಾಸೆಂಜರ್‌ ರೈಲನ್ನು ʼದ ಬಲೂಚಿಸ್ಥಾನ್‌ ಲಿಬರೇಶನ್‌ ಆರ್ಮಿʼಯ ಬಂಡುಕೋರರು ಪ್ರಯಾಣಿಕರು ಮತ್ತು ಭದ್ರತಾ ಸಿಬ್ಬಂದಿ ಸಮೇತ ಅಪಹರಿಸಿಕೊಂಡು ಹೋಗಿದ್ದಾರೆ.ರಾತ್ರಿಗಾಗುವಾಗ ಮಹಿಳೆಯರು ಮತ್ತು ಮಕ್ಕಳು ಸೇರಿ 155 ಪ್ರಯಾಣಿಕರನ್ನು ರಕ್ಷಿಸಲಾಗಿದೆ, ಹಾಗೂ ಈ ಕಾರ್ಯಾಚರಣೆಯಲ್ಲಿ

ಪಾಕಿಸ್ಥಾನ ರೈಲು ಹೈಜಾಕ್‌ : 155 ಪ್ರಯಾಣಿಕರನ್ನು ರಕ್ಷಿಸಿದ ಭದ್ರತಾ ಪಡೆ Read More »

ದಾರಿ ಕೇಳುವ ನೆಪದಲ್ಲಿ ಚಿನ್ನ ಕದ್ದು ಪರಾರಿ

ಪುತ್ತೂರು : ದಾರಿ ಕೇಳುವ ನೆಪದಲ್ಲಿ ಚಿನ್ನದ ಉಂಗುರವನ್ನು  ಎಳೆದು ಕದ್ದೊಯ್ದು ಪರಾರಿಯಾಗಿರುವ ಘಟನೆ ಪುತ್ತೂರಿನ ರಾಗಿಕುಮೇರ್ ಬಳಿಯ ಅಂದ್ರಟ್ಟ ಎಂಬಲ್ಲಿ ನಡೆದಿದೆ. ರಾತ್ರಿ ವೇಳೆ ಬೈಕ್ ನಲ್ಲಿ ಅಪರಿಚಿತ ವ್ಯಕ್ತಿಯೋರ್ವ ದಾರಿ ಕೇಳಿದ್ದಾನೆ. ಈ ಸಂದರ್ಭ ದಾರಿ ಹೇಳಲು ಬಂದ ವ್ಯಕ್ತಿಯ ಕೈಯಲ್ಲಿದ್ದ ಉಂಗುರವನ್ನು ಕಿತ್ತು ಬೈಕ್ ನಲ್ಲಿ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

ದಾರಿ ಕೇಳುವ ನೆಪದಲ್ಲಿ ಚಿನ್ನ ಕದ್ದು ಪರಾರಿ Read More »

error: Content is protected !!
Scroll to Top