ಅಪರಾಧ

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು

ಕಲಿಯಲು ಬಂದಿದ್ದ ಸ್ನೇಹಿತನ ಮಗಳ ಮೇಲೆಯೇ ಅತ್ಯಾಚಾರ ಎಸಗಿದ್ದ ಪಾಪಿ ಮಂಗಳೂರು: ಕಾರ್ಕಳ ತಾಲೂಕಿನ ಇನ್ನಾದಲ್ಲಿ ಎರಡು ವರ್ಷದ ಹಿಂದೆ ಕಾಲೇಜು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ್ದ ಅಪರಾಧಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೊ ವಿಶೇಷ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದೆ. ಮೂಲ್ಕಿ ತಾಲೂಕು ಏಳಿಂಜೆಯ ರವಿ (35) ಎಂಬಾತ ಶಿಕ್ಷೆಗೊಳಗಾದ ಅಪರಾಧಿ.ಅಪರಾಧಿ ರವಿ 2023ರ ಜೂನ್‌ನಿಂದ ಡಿಸೆಂಬರ್‌ವರೆಗೆ ಇನ್ನಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. […]

ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ : ಅಪರಾಧಿಗೆ 20 ವರ್ಷ ಜೈಲು Read More »

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ

ರಾತ್ರಿ ಅಜ್ಞಾತ ವ್ಯಕ್ತಿಗಳ ಗುಂಡಿಗೆ ಬಲಿಯಾದ ಉಗ್ರ ಸಂಘಟನೆಯ ಕಮಾಂಡರ್‌ ಇಸ್ಲಾಮಾಬಾದ್‌ : ಪಾಕಿಸ್ಥಾನದ ಉಗ್ರ ಸಂಘಟನೆ ಲಷ್ಕರ್‌ ಇ ತಯ್ಯಬದ ಕಮಾಂಡರ್‌, ಮೋಸ್ಟ್‌ ವಾಂಟೆಡ್‌ ಲಿಸ್ಟ್‌ನಲ್ಲಿದ್ದ ಉಗ್ರನೊಬ್ಬನನ್ನು ಅಜ್ಞಾತ ವ್ಯಕ್ತಿಗಳು ನಿನ್ನೆ ರಾತ್ರಿ ಸಾಯಿಸಿದ್ದಾರೆ. ಕೊಲೆಯಾಗಿರುವ ಅಬ್ದುಲ್‌ ಖತಲ್‌ ಜಮ್ಮು-ಕಾಶ್ಮೀರದಲ್ಲಿ ನಡೆದ ಹಲವು ಉಗ್ರ ದಾಳಿಗಳ ರೂವಾರಿಯಾಗಿದ್ದ. ಭಾರತದ ಪಾಲಿಗೆ ಅವನು ತಲೆನೋವಾಗಿದ್ದ. ಶನಿವಾರ ರಾತ್ರಿ ಅವನನ್ನು ಅಜ್ಞಾತ ವ್ಯಕ್ತಿಗಳು ಗುಂಡಿಕ್ಕಿ ಸಾಯಿಸಿದ್ದಾರೆ ಎಂದು ವರದಿಯಾಗಿದೆ.ಲಷ್ಕರ್‌ನ ಸ್ಥಾಪಕ ಹಾಗೂ ಮುಂಬಯಿ ಮೇಲೆ ನಡೆದ ಭಯೋತ್ಪಾದಕ ದಾಳಿಯ

ಲಷ್ಕರ್‌ನ ಮೋಸ್ಟ್‌ ವಾಂಟೆಡ್‌ ಉಗ್ರ ಅಬ್ದುಲ್‌ ಖತಲ್‌ನ ಹತ್ಯೆ Read More »

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ

ನಶೆ ಏರಿದ ಬಳಿಕ ರಾಡ್‌, ದೊಣ್ಣೆಯಿಂದ ಬಡಿದಾಡಿಕೊಂಡ ಸ್ನೇಹಿತರು ಬೆಂಗಳೂರು: ಹೋಳಿ ಗಮ್ಮತ್ತಿನಲ್ಲಿ ಕಂಠಮಟ್ಟ ಶರಾಬು ಕುಡಿದು ನಶೆ ತಲೆಗೇರಿಸಿಕೊಂಡಿದ್ದ ಬಿಹಾರ ಮೂಲದ ಆರು ಕಾರ್ಮಿಕರು ಪರಸ್ಪರ ಹೊಡೆದಾಡಿಕೊಂಡ ಪರಿಣಾಮ ಮೂವರು ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ಸಂಭವಿಸಿದೆ. ಓರ್ವನಿಗೆ ಗಂಭೀರ ಗಾಯವಾಗಿದ್ದು, ಇಬ್ಬರು ಪರಾರಿ ಆಗಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಸರ್ಜಾಪುರದ ನಿರ್ಮಾಣ ಹಂತದ ಫೋರ್‌ವಾಲ್ ಅವೆನ್ಯೂ ಅಪಾರ್ಟ್​ಮೆಂಟ್​ನ​ 3ನೇ ಮಹಡಿಯಲ್ಲಿ ಘಟನೆ ನಡೆದಿದೆ. ಕೊಲೆಯಾದ ಇಬ್ಬರನ್ನು ಅನ್ಸು(19) ಮತ್ತು ರಾಧೆ ಶ್ಯಾಮ್(20) ಎಂದು

ಹೋಳಿ ಗಮ್ಮತ್ತಿನಲ್ಲಿ ಹೊಡೆದಾಟ : ಮೂವರ ಹತ್ಯೆ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ನೀಡಿದ ಸರಕಾರ

ಪ್ರಭಾವಿ ನಾಯಕರೊಬ್ಬರ ಜರ್ಮನಿ ಟೂರ್‌ ಬಗ್ಗೆ ಅನುಮಾನ ವ್ಯಕ್ತಪಡಿಸಿದ ತನಿಖಾಧಿಕಾರಿಗಳು ಬೆಂಗಳೂರು: ಕನ್ನಡ ನಟಿ ರನ್ಯಾ ರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದ ತನಿಖೆ ತೀವ್ರಗೊಂಡಿರುವಂತೆ ಸರಕಾರ ಆಕೆಯ ಮಲತಂದೆ ಡಿಜಿಪಿ ದರ್ಜೆಯ ಐಪಿಎಸ್‌ ಅಧಿಕಾರಿ ಡಾ.ರಾಮಚಂದ್ರ ರಾವ್‌ ಅವರನ್ನು ಕಡ್ಡಾಯ ರಜೆಯಲ್ಲಿ ಕಳಿಸಿದೆ. ಡಾ.ರಾಮಚಂದ್ರ ರಾವ್‌ ಪ್ರಸ್ತುತ ಪೊಲೀಸ್‌ ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.ರನ್ಯಾ ರಾವ್‌ ಕಳೆದ ಮಾ.3ರಂದು ದುಬೈಯಿಂದ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ಚಿನ್ನವನ್ನು ಕಳ್ಳ ಮಾರ್ಗದಿಂದ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ಡಿಜಿಪಿ ರಾಮಚಂದ್ರ ರಾವ್‌ಗೆ ಕಡ್ಡಾಯ ರಜೆ ನೀಡಿದ ಸರಕಾರ Read More »

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ

ಮಂಗಳೂರು: ನಗರದ ಸಮೀಪ ಹಳೆಯ ದ್ವೇಷಕ್ಕೆ ಸಂಬಂಧಿಸಿ ಬಿಜೈ ಕಾಪಿಕಾಡ್ 6ನೇ ಕ್ರಾಸ್‌ನಲ್ಲಿ ಬೈಕಿಗೆ ಕಾರು ಢಿಕ್ಕಿ ಹೊಡೆಸಿ ಬೈಕ್ ಸವಾರನನ್ನು ಕೊಲೆ ಮಾಡಲು ಯತ್ನಿಸಿದ ಘಟನೆಗೆ ಸಂಬಂಧಿಸಿದಂತೆ ಬಂಧಿತ ಆರೋಪಿ ಸತೀಶ್ ಕುಮಾರ್‌ಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಪಾದಚಾರಿ ಮಹಿಳೆ ಯಲ್ಲವ್ವ ಉಪ್ನಾಳ ಮತ್ತು ಬೈಕ್ ಸವಾರ ಮುರಳಿ ಪ್ರಸಾದ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹಿಳೆಯು ಗುರುವಾರ ಬೆಳಗ್ಗೆ ಕೆಲಸಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿತ್ತು ಎಂದು ತಿಳಿದು ಬಂದಿದೆ. ಪೊಲೀಸರು

ಬೈಕ್‍ ಗೆ ಕಾರು ಡಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿದ  ಆರೋಪಿಗೆ  ನ್ಯಾಯಾಂಗ  ಬಂಧನ Read More »

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ರಾವ್‌ ತಂತ್ರಗಳು ಒಂದೊಂದಾಗಿ ಬಯಲು

ಸರಕಾರಿ ಕಾರಲ್ಲೇ ಚಿನ್ನ ಕಳ್ಳ ಸಾಗಾಟ ಬೆಂಗಳೂರು : ದುಬೈಯಿಂದ ಚಿನ್ನ ಕಳ್ಳ ಸಾಗಾಟ ಮಾಡಿ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್‌ ಕಳ್ಳ ಸಾಗಾಟಕ್ಕೆ ಬಳಸಿದ ತಂತ್ರವನ್ನು ಪತ್ತೆಹಚಿದ್ದಾರೆ. ರನ್ಯಾ ಕಳ್ಳ ಮಾರ್ಗದಲ್ಲಿ ತಂದ ಚಿನ್ನವನ್ನು ವಿಮಾನ ನಿಲ್ದಾಣದಿಂದ ಸಾಗಿಸಲು ಕರ್ನಾಟಕ ಸರಕಾರದ ಕಾರನ್ನೇ ಬಳಸುತ್ತಿದ್ದಳು ಎಂದು ಡಿಆರ್‌ಐ ಅಧಿಕಾರಿಗಳು ತಿಳಿಸಿದ್ದಾರೆ.ರನ್ಯಾ ರಾವ್‌ ಮಲತಂದೆ ರಾಮಚಂದ್ರ ರಾವ್‌ ಐಪಿಎಸ್‌ ದರ್ಜೆಯ ಪೊಲೀಸ್‌ ಅಧಿಕಾರಿಯಾಗಿದ್ದು, ಡಿಜಿಪಿ ಹುದ್ದೆಯಲ್ಲಿದ್ದರು. ತಂದೆಯ ಅಧಿಕಾರವನ್ನು ರನ್ಯಾ ರಾವ್‌ ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಂಡಿರುವುದು ಡಿಆರ್‌ಐ

ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ : ರನ್ಯಾ ರಾವ್‌ ತಂತ್ರಗಳು ಒಂದೊಂದಾಗಿ ಬಯಲು Read More »

ವಸತಿ ಶಾಲೆಯಿಂದ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆ

ರಜೆ ಸಿಕ್ಕಿಲ್ಲ ಎಂದು ವಸತಿ ಶಾಲೆಯ ಗೋಡೆ ಹಾರಿ ಪಲಾಯನ ಮಾಡಿದ್ದ ಮಕ್ಕಳು ಮಂಗಳೂರು: ಚಿಕ್ಕಮಗಳೂರಿನ ತೇಗೂರು ಗ್ರಾಮದ ಡಾ. ಅಬ್ದುಲ್​ ಕಲಾಂ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶುಕ್ರವಾರ ರಾತ್ರಿ ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ವಸತಿ ಶಾಲೆಯ 9ನೇ ತರಗತಿಯ ಬಾಳೆಹೊನ್ನೂರು ಮೂಲದ ಯಶ್ವಿತ್ ಸಾಲಿಯಾನ್​​​ ಮತ್ತು ಬೆಂಗಳೂರು ಮೂಲದ ತರುಣ್‌ ಮಾರ್ಚ್​ 3ರಂದು ನಾಪತ್ತೆಯಾಗಿದ್ದರು. ಮಂಗಳೂರಿನ ಹೋಟೆಲ್​ವೊಂದರಲ್ಲಿ ಕೆಲಸಕ್ಕೆ ಸೇರಲು ಯತ್ನಿಸಿ ಸಿಕ್ಕಿಬಿದ್ದಿದ್ದಾರೆ.ಯಶ್ವಿತ್ ಮತ್ತು ತರುಣ್ ಉತ್ತಮ ಸ್ನೇಹಿತರಾಗಿದ್ದು, ಓದಿನಲ್ಲಿ ಆಸಕ್ತಿ ಇಲ್ಲದಿದ್ದರೂ ವಸತಿ

ವಸತಿ ಶಾಲೆಯಿಂದ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿಗಳು ಮಂಗಳೂರಿನಲ್ಲಿ ಪತ್ತೆ Read More »

ಡೆಪ್ಯುಟಿ ಸ್ಪೀಕರ್‌ ರುದ್ರಪ್ಪ ಲಮಾಣಿ ದಿಢೀರ್‌ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್‌

ಚಿತ್ರದುರ್ಗ ಬಳಿ ಬೈಕ್‌ ಗುದ್ದಿ ಗಾಯಗೊಂಡಿದ್ದ ಲಮಾಣಿ ಬೆಂಗಳೂರು : ನಿನ್ನೆ ರಸ್ತೆ ಅಪಘಾತದಲ್ಲಿ ಗಾಯಗೊಂಡಿರುವ ವಿಧಾನಸಭೆ ಡೆಪ್ಯೂಟಿ ಸ್ಪೀಕರ್​ ರುದ್ರಪ್ಪ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿದೆ. ನಿನ್ನೆ ಬಜೆಟ್​​ ಅಧಿವೇಶನ ಮುಗಿಸಿಕೊಂಡು ಬೆಂಗಳೂರಿನಿಂದ ಹಾವೇರಿಗೆ ತೆರಳುವ ಮಾರ್ಗ ಮಧ್ಯೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜೆ.ಜೆ.ಹಳ್ಳಿ ಗ್ರಾಮದ ಬಳಿ ಅಪಘಾತ ಸಂಭವಿಸಿ ಲಮಾಣಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ದಾವಣಗೆರೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈಗ ಏಕಾಏಕಿ ರುದ್ರಪ್ಪ ಲಮಾಣಿ

ಡೆಪ್ಯುಟಿ ಸ್ಪೀಕರ್‌ ರುದ್ರಪ್ಪ ಲಮಾಣಿ ದಿಢೀರ್‌ ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್‌ Read More »

ಹೋಳಿ ನೆಪದಲ್ಲಿ ವಿಕೃತಿ : ವಿದ್ಯಾರ್ಥಿನಿಯರ ಮೇಲೆ ರಾಸಾಯನಿಕ ಮಿಶ್ರಿತ ಬಣ್ಣ ಎರಚಿದ ದುಷ್ಕರ್ಮಿಗಳು

7 ವಿದ್ಯಾರ್ಥಿನಿಯರು ಅಸ್ವಸ್ಥ; ನಾಲ್ಕು ಮಂದಿ ಗಂಭೀರ ಬೆಂಗಳೂರು: ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶುಕ್ರವಾರ ಹೋಳಿ ಆಚರಿಸುತ್ತಿದ್ದಾಗ ದುಷ್ಕರ್ಮಿಗಳ ಗುಂಪೊಂದು ರಾಸಾಯನಿಕ ಮಿಶ್ರಿತ ಬಣ್ಣವನ್ನು ಎರಚಿದ್ದರಿಂದ ಏಳು ಶಾಲಾ ವಿದ್ಯಾರ್ಥಿನಿಯರು ಗಂಭೀರವಾಗಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಆಘಾತಕಾರಿ ಘಟನೆ ನಡೆದಿದೆ. ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಸಿರಾಟದ ತೊಂದರೆ ಮತ್ತು ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್)ಗೆ ಸ್ಥಳಾಂತರಿಸಲಾಗಿದೆ. ಉಳಿದ ಬಾಲಕಿಯರು ಲಕ್ಷ್ಮೇಶ್ವರದ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ

ಹೋಳಿ ನೆಪದಲ್ಲಿ ವಿಕೃತಿ : ವಿದ್ಯಾರ್ಥಿನಿಯರ ಮೇಲೆ ರಾಸಾಯನಿಕ ಮಿಶ್ರಿತ ಬಣ್ಣ ಎರಚಿದ ದುಷ್ಕರ್ಮಿಗಳು Read More »

ಹೈಜಾಕ್‌ ಮಾಡಿದ ರೈಲಿನಲ್ಲಿದ್ದ 214 ಪ್ರಯಾಣಿಕರ ಹತ್ಯೆ : ಬಂಡುಕೋರರ ಹೇಳಿಕೆ

ಪಾಕ್‌ ಸೇನೆ ಸುಳ್ಳು ಹೇಳಿ ಜಗತ್ತಿನ ದಿಕ್ಕುತಪ್ಪಿಸಿದೆ ಎಂದು ಆರೋಪ ಇಸ್ಲಾಮಾಬಾದ್: ಜಾಫರ್‌ ಎಕ್ಸ್‌ಪ್ರೆಸ್‌ ಅಪಹರಿಸಿ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲ 214 ಪ್ರಯಾಣಿಕರನ್ನು ಹತ್ಯೆ ಮಾಡಲಾಗಿದೆ ಎಂದು ಬಲೂಚ್‌ ಲಿಬರೇಶನ್‌ ಆರ್ಮಿ (ಬಿಎಲ್‌ಎ) ಹೇಳಿಕೊಂಡಿದೆ.ನಮ್ಮ ಹೋರಾಟಗಾರರಿಂದ ಒತ್ತೆಯಾಳುಗಳಾಗಿದ್ದ ಎಲ್ಲ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಪಾಕಿಸ್ಥಾನಿ ಭದ್ರತಾ ಪಡೆಗಳೊಂದಿಗೆ ಇನ್ನೂ ಎನ್‌ಕೌಂಟರ್ ನಡೆಯುತ್ತಿದೆ ಎಂದು ತಿಳಿಸಿದೆ. ಬಿಎಲ್‌ಎ ಪ್ರತ್ಯೇಕತಾವಾದಿಗಳನ್ನು ಸದೆಬಡಿದು ಜನರ ರಕ್ಷಣೆ ಮಾಡಿರುವುದಾಗಿ ಪಾಕಿಸ್ಥಾನ ಹೇಳಿಕೆ ನೀಡಿತ್ತು. ಆದರೆ, ಈ ಹೇಳಿಕೆಗೆ ತದ್ವಿರುದ್ಧವಾದ ಹೇಳಿಕೆಯನ್ನು ಬಿಎಲ್‌ಎ ನೀಡಿದೆ.

ಹೈಜಾಕ್‌ ಮಾಡಿದ ರೈಲಿನಲ್ಲಿದ್ದ 214 ಪ್ರಯಾಣಿಕರ ಹತ್ಯೆ : ಬಂಡುಕೋರರ ಹೇಳಿಕೆ Read More »

error: Content is protected !!
Scroll to Top