ಅಪರಾಧ

ನಟಿಗೆ ಕಿರುಕುಳ : ಖ್ಯಾತ ಉದ್ಯಮಿ ಬಂಧನ

ಸೋಷಿಯಲ್‌ ಮೀಡಿಯಾದಲ್ಲಿ ಅಸಭ್ಯ ಕಮೆಂಟ್‌ಗಳನ್ನು ಹಾಕಿ ವರ್ಷದಿಂದ ಕಿರುಕುಳ ತಿರುವನಂತಪುರಂ: ಮಲಯಾಳಂ ನಟಿ ಹನಿರೋಸ್‌ಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ಖ್ಯಾತ ಉದ್ಯಮಿ ಬಾಬಿ ಚೆಮ್ಮನೂರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ನಟಿ ಹನಿ ರೋಸ್ ಅವರ ದೂರಿನ ಮೇರೆಗೆ ಮಂಗಳವಾರ ದಾಖಲಿಸಿದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಬೋಬಿ ಚೆಮ್ಮನೂರ್ ಅಲಿಯಾಸ್ ‘ಬೋಚೆ’ ಅವರನ್ನು ಕೊಚ್ಚಿ ನಗರ ಪೊಲೀಸರು ಬಂಧಿಸಿದ್ದಾರೆ. ಬುಧವಾರ ವಯನಾಡಿನಿಂದ ಚೆಮ್ಮನೂರ್‌ ಅವರನ್ನು ಬಂಧಿಸಿ ಕೊಚ್ಚಿಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ […]

ನಟಿಗೆ ಕಿರುಕುಳ : ಖ್ಯಾತ ಉದ್ಯಮಿ ಬಂಧನ Read More »

ತಿರುಪತಿಯಲ್ಲಿ ಕಾಲ್ತುಳಿತ : ಮೃತರ ಸಂಖ್ಯೆ 7ಕ್ಕೇರಿಕೆ

ವೈಕುಂಠ ಏಕಾದಶಿ ಟೋಕನ್‌ ಪಡೆಯಲು ನೂಕುನುಗ್ಗಲು ಉಂಟಾಗಿ ದುರಂತ ತಿರುಮಲ : ತಿರುಪತಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ತಡರಾತ್ರಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. 25ಕ್ಕೂ ಹೆಚ್ಚುಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಏರ್‌ಲಿಫ್ಟ್‌ ಮಾಡಲು ಆಂಧ್ರ ಪ್ರದೇಶ ಸರಕಾರ ಆದೇಶಿಸಿದೆ.ವೈಕುಂಠ ಏಕಾದಶಿ ಪ್ರಯುಕ್ತ ತಿರುಪತಿಯ ವಿಷ್ಣು ನಿವಾಸಂನಲ್ಲಿ ಶುಕ್ರವಾರದಿಂದ 10 ದಿನಗಳ ಕಾಲ ವೈಕುಂಠ ದ್ವಾರ ಸರ್ವದರ್ಶನಕ್ಕಾಗಿ ಟೋಕನ್ ವಿತರಣೆಯ ಸಂದರ್ಭದಲ್ಲಿ ಕಾಲ್ತುಳಿತ ಸಂಭವಿಸಿದೆ. ಭಾರಿ ಸಂಖ್ಯೆಯಲ್ಲಿ ಭಕ್ತರು

ತಿರುಪತಿಯಲ್ಲಿ ಕಾಲ್ತುಳಿತ : ಮೃತರ ಸಂಖ್ಯೆ 7ಕ್ಕೇರಿಕೆ Read More »

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ | ಆರೋಪಿ ಮೊಹಮ್ಮದ್  ಜಾಬೀರ್ ಜಾಮೀನು ಅರ್ಜಿ ತಿರಸ್ಕೃತ

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ನರು ಅವರ ಹತ್ಯೆ ಪ್ರಕರಣದಲ್ಲಿ 21ನೇ ಆರೋಪಿಯಾಗಿರುವ ಮೊಹಮ್ಮದ್ ಜಾಬೀರ್ ಎಂಬಾತನಿಗೆ ಜಾಮೀನು ನೀಡಲು ಸುಪ್ರಿಂ ಕೋರ್ಟ್ ನಿರಾಕರಿಸಿದೆ. ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಜಾಬಿರ್ (32) ತನ್ನ ಕಸ್ಟಡಿ ವಿಸ್ತರಿಸಿ ಡೀಫಾಲ್ ಜಾಮೀನು ತಿರಸ್ಕರಿಸಿ ವಿಶೇಷ ಎನ್‌ ಐಎ ನ್ಯಾಯಾಲಯ 2023ರ ಫೆ.9 ರಂದು ಮಾಡಿದ್ದ ಆದೇಶ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದನು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‍ ಕುಮಾರ್, ಮತ್ತು

ಪ್ರವೀಣ್‍ ನೆಟ್ಟಾರು ಹತ್ಯೆ ಪ್ರಕರಣ | ಆರೋಪಿ ಮೊಹಮ್ಮದ್  ಜಾಬೀರ್ ಜಾಮೀನು ಅರ್ಜಿ ತಿರಸ್ಕೃತ Read More »

ಕೊನೇ ಕ್ಷಣದಲ್ಲಿ ಬದಲಾಯಿತು ನಕ್ಸಲರ ಶರಣಾಗತಿ ಪ್ಲಾನ್‌

ಅರ್ಧದಾರಿಯಲ್ಲಿರುವಾಗ ಬಂದ ಫೋನ್‌ ಕಾಲ್‌ ಇಡೀ ಯೋಜನೆಯನ್ನು ಬದಲಾಯಿಸಿತು ಬೆಂಗಳೂರು: ಇಂದು ಚಿಕ್ಕಮಗಳೂರಿನಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಶಸ್ತ್ರತ್ಯಾಗ ಮಾಡಬೇಕಿದ್ದ ನಕ್ಸಲರು ಕೊನೇಕ್ಷಣದಲ್ಲಿ ಪ್ಲಾನ್‌ ಬದಲಾಯಿಸಿದ್ದಾರೆ. ಚಿಕ್ಕಮಗಳೂರು ಬದಲಾಗಿ ಬೆಂಗಳೂರಿಗೆ ಶರಣಾಗತಿ ಕಾರ್ಯಕ್ರಮವನ್ನು ಸ್ಥಳಾಂತರ ಮಾಡಲಾಗಿದೆ. ಚಿಕ್ಕಮಗಳೂರಿನಲ್ಲಿ ಶರಣಾಗತಿ ಕಾರ್ಯಕ್ರಮಕ್ಕೆ ಸಕಲ ತಯಾರಿಯನ್ನೂ ಮಾಡಲಾಗಿತ್ತು. ನಕ್ಸಲರು ಕೂಡ ಹೊರಟು ಅರ್ಧ ದಾರಿ ತಲುಪಿದ್ದರು. ಅಷ್ಟರಲ್ಲಿ ಬೆಂಗಳೂರಿನಿಂದ ಬಂದ ಕರೆಯೊಂದು ಯೋಜನೆಯನ್ನು ಬದಲಾಯಿಸಿದೆ ಎಂದು ಮೂಲವೊಂದು ತಿಳಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಕ್ಸಲರನ್ನು ಭೇಟಿ ಮಾಡಲು ಬಯಸಿದ್ದಾರೆ. ಅವರ ಸಮ್ಮುಖದಲ್ಲೇ ನಕ್ಸಲರು

ಕೊನೇ ಕ್ಷಣದಲ್ಲಿ ಬದಲಾಯಿತು ನಕ್ಸಲರ ಶರಣಾಗತಿ ಪ್ಲಾನ್‌ Read More »

ಸಿಬಿಐಯವರು ಎಂದು ಹೇಳಿ ಮಹಿಳೆ ಖಾತೆಯಿಂದ 24 ಲ.ರೂ. ಲಪಟಾಯಿಸಿದ ವಂಚಕರು

ಪೊಲೀಸ್ ಸಮವಸ್ತ್ರ ಧರಿಸಿ ವೀಡಿಯೊ ಕಾಲ್‌ ಮಾಡಿದ್ದ ಆರೋಪಿ ಕಾರ್ಕಳ : ಸಿಬಿಐ ಅಧಿಕಾರಿ ಹೆಸರಿನಲ್ಲಿ ಆನ್‌ಲೈನ್ ಮುಖಾಂತರ ಮಹಿಳೆಗೆ 24 ಲಕ್ಷ ರೂ. ವಂಚಿಸಿದ ಘಟನೆ ಜ. 7ರಂದು ಕಾರ್ಕಳದಲ್ಲಿ ಸಂಭವಿಸಿದೆ. ಪ್ರೀಮ ಶರಿಲ್ ಡಿಸೋಜ ವಂಚನೆಗೊಳಗಾದವರು. ಇವರ ಮೊಬೈಲ್‌ಗೆ ಜ. 7ರಂದು ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿ ತಾನು ದಿಲ್ಲಿ ಟೆಲಿಕಾಂ ಇಲಾಖೆಯಿಂದ ಕಾಲ್ ಮಾಡುತ್ತಿದ್ದು ನಿಮ್ಮ ಆಧಾರ್ ನಂಬರ್‌ನಿಂದ ಉತ್ತರ ಪ್ರದೇಶದಲ್ಲಿ ಬೇರೆ ಸಿಮ್ ಖರೀದಿಸಿ ಬೇರೆ ಬೇರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿ

ಸಿಬಿಐಯವರು ಎಂದು ಹೇಳಿ ಮಹಿಳೆ ಖಾತೆಯಿಂದ 24 ಲ.ರೂ. ಲಪಟಾಯಿಸಿದ ವಂಚಕರು Read More »

ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್‌

ನಕ್ಸಲರ ಪುನರ್‌ವಸತಿಗಾಗಿ ಲಕ್ಷಗಟ್ಟಲೆ ವ್ಯಯಿಸಲಿದೆ ಸರಕಾರ ಬೆಂಗಳೂರು: ಆರು ನಕ್ಸಲರು ಇಂದು ಶಸ್ತ್ರತ್ಯಾಗ ಮಾಡಿ ಶರಣಾಗುವುದು ಬಹುತೇಕ ಖಚಿತವಾಗಿದ್ದು, ಶರಣಾಗತಿಗಾಗಿ ಚಿಕ್ಕಮಗಳೂರು ಪೊಲೀಸರು ಮತ್ತು ಜಿಲ್ಲಾಡಳಿತ ತಯಾರಿ ಮಾಡಿಕೊಂಡಿದೆ. ಎಲ್ಲವೂ ಯೋಜನೆ ಪ್ರಕಾರ ನಡೆದು ನಕ್ಸಲರು ಶರಣಾದರೆ ಅದು ರಾಜ್ಯದ ನಕ್ಸಲ್‌ ನಿಗ್ರಹ ಹೋರಾಟದ ಇತಿಹಾದಲ್ಲೇ ಒಂದು ಮೈಲುಗಲ್ಲು ಆಗಲಿದೆ. ಶರಣಾಗುವ ನಕ್ಸಲರಿಗೆ ಸರಕಾರ ಏನೆಲ್ಲ ಸೌಲಭ್ಯ ಕೊಡಲಿದೆ ಎಂಬ ಕುತೂಹಲ ಇದೆ. ಶರಣಾಗಲು ಬಯಸಿರುವ ನಕ್ಸಲರು ಈಗಾಗಲೇ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದೆ ಇಟ್ಟಿದ್ದಾರೆ. ಸರಕಾರ

ಶರಣಾಗುವ ನಕ್ಸಲರಿಗೆ ಸಿಗಲಿದೆ ಸರಕಾರದ ಭರ್ಜರಿ ಪ್ಯಾಕೇಜ್‌ Read More »

ಅಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ | ಆರೋಪಿ ಬಶೀರ್ ಅರೆಸ್ಟ್

ಪುತ್ತೂರು :  ಅಂಗನವಾಡಿಗೆ ಮಗುವನ್ನು ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಮಹಿಳೆಯೊಂದಿಗೆ ಕಾಮುಕ ವ್ಯಕ್ತಿಯೋರ್ವ ಆಶ್ಲೀಲವಾಗಿ ವರ್ತಿಸಿದ ಘಟನೆ ಪುತ್ತೂರಿನ ಕುಂಜುರುಪಂಜದಲ್ಲಿ ನಡೆದಿದೆ. ಅಸಭ್ಯ ವರ್ತನೆ ತೋರಿದ ವ್ಯಕ್ತಿ ಬಶೀರ್‍ ಎಂದು ಪತ್ತೆ ಹಚ್ಚಲಾಗಿದೆ. ಕಾಮುಕ ಬಶೀರ್  ಮಹಿಳೆಯನ್ನು ತಾಗಿಕೊಂಡು ಹೋಗಿದ್ದು, ನಂತರ ಆಕೆಯನ್ನು ಮನೆ ತನಕ ಹಿಂಬಾಲಿಸಿದ್ದಾನೆ. ಬಳಿಕ ಮನೆಯ ಎದುರು ಭಾಗದಲ್ಲೇ ಮರ್ಮಾಂಗವನ್ನು ತೋರಿಸಿ, ಆಶ್ಲೀಲವಾಗಿ ನಡೆದುಕೊಂಡಿದ್ದಾನೆ ಎಂದು ತಿಳಿದು ಬಂದಿದೆ. ಈ ವೇಳೆ ಮಹಿಳೆಯು ಗಾಬರಿಗೊಂಡು ಜೋರಾಗಿ ಬೊಬ್ಬೆ ಹಾಕಿದ್ದಾಳೆ. ಕಿರುಚಿದ ಶಬ್ದಕ್ಕೆ

ಅಶ್ಲೀಲವಾಗಿ ವರ್ತಿಸಿದ ಕಾಮುಕ ಬಶೀರ್ | ಆರೋಪಿ ಬಶೀರ್ ಅರೆಸ್ಟ್ Read More »

ಬೀಡಿ ಉದ್ಯಮಿ ಮನೆಯಲ್ಲಿ ದರೋಡೆ : ವದಂತಿಗಳದ್ದೇ ಕಾರುಬಾರು

ಸುಳಿವಿಗಾಗಿ ತಡಕಾಡುತ್ತಿರುವ ಪೊಲೀಸರು ವಿಟ್ಲ: ಇಲ್ಲಿಗೆ ಸಮೀಪದ ಬೋಳಂತೂರು ನಾರ್ಶದ ಬೀಡಿ ಉದ್ಯಮಿ ಸುಲೈಮಾನ್ ಹಾಜಿ ಅವರ ಮನೆಯಿಂದ ಸಿನಿಮೀಯ ರೀತಿಯಲ್ಲಿ ನಡೆದ ದರೋಡೆ ಪ್ರಕರಣದ ಸುಳಿವಿಗಾಗಿ ಪೊಲೀಸರು ಇನ್ನೂ ತಡಕಾಡುತ್ತಿದ್ದಾರೆ. ಬಾಲಿವುಡ್‌ನ ಸ್ಪೆಷಲ್‌ 26 ಸಿನೆಮಾ ಮಾದರಿಯಲ್ಲಿ ಕಳೆದ ಶುಕ್ರವಾರ ರಾತ್ರಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗು ಹಾಕಿಕೊಂಡು ಬಂದ ಆರು ಮಂದಿ ಚಾಲಾಕಿ ದರೋಡೆಕೋರರು ಸುಮಾರು ಎರಡೂವರೆ ತಾಸು ಇಡೀ ಮನೆಯನ್ನು ಜಾಲಾಡಿ ನಗದು ಹಣವನ್ನು ಮೂಟೆಕಟ್ಟಿ ಕಾರಿಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ದರೋಡೆ

ಬೀಡಿ ಉದ್ಯಮಿ ಮನೆಯಲ್ಲಿ ದರೋಡೆ : ವದಂತಿಗಳದ್ದೇ ಕಾರುಬಾರು Read More »

ದ್ವಿ ಚಕ್ರ ವಾಹನ – ರಿಕ್ಷಾ ಡಿಕ್ಕಿ

ವಿಟ್ಲ: ಸುಬ್ರಹ್ಮಣ್ಯ ಮಂಜೇಶ್ವರ ಹೆದ್ದಾರಿಯ ಪುಣಚದಲ್ಲಿ ರಿಕ್ಷಾವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂದಕಕ್ಕೆ ಬಿದ್ದ ಘಟನೆ ಸೋಮವಾರ ನಡೆದಿದೆ. ಪುಣಚ ಪೇಟೆಯಿಂದ ಗರಡಿ ಕಡೆಗೆ ಹೋಗುತ್ತಿದ್ದ ದ್ವಿಚಕ್ರವಾಹನಕ್ಕೆ ಬುಳೇರಿಕಟ್ಟೆ ಕಡೆಯಿಂದ ಬಂದ ರಿಕ್ಷಾ ಗುದ್ದಿದೆ. ಗುದ್ದಿದ ಪರಿಣಾಮ ರಿಕ್ಷಾ ಚಾಲಕ ನಿಯಂತ್ರಣ ಕಳೆದುಕೊಂಡು ಬಲ ಬದಿಗೆ ಹೋಗಿ ಚರಂಡಿಗೆ ಬಿದ್ದಿದೆ. ರಿಕ್ಷಾ ಹಾಗೂ ದ್ವಿಚಕ್ರವಾಹನ ಜಖಂಗೊಂಡಿದೆ. ಅಪಘಾತದ ತೀವ್ರತೆಗೆ ದ್ವಿಚಕ್ರವಾಹನದಿಂದ ಬಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದು. ಕೆಲ ಕಾಲ ಆತಂಕ ಮೂಡಿಸಿತ್ತು. ರಿಕ್ಷಾ ಚಾಲಕ ಅತಿಯಾದ

ದ್ವಿ ಚಕ್ರ ವಾಹನ – ರಿಕ್ಷಾ ಡಿಕ್ಕಿ Read More »

ವಿಕ್ರಂ ಗೌಡ ಎನ್‌ಕೌಂಟರ್‌ನ ನ್ಯಾಯಾಂಗ ತನಿಖೆ, ಗೌರವಯುತವಾದ ಬದುಕಿಗೆ ವ್ಯವಸ್ಥೆ…

ಶರಣಾಗಲು ನಕ್ಸಲರು ಇಟ್ಟಿದ್ದಾರೆ ಬೇಡಿಕೆಗಳ ದೀರ್ಘ ಪಟ್ಟಿ ಬೆಂಗಳೂರು: ನಿರುದ್ಯೋಗಿಗಳಿಗೆ ಉದ್ಯೋಗ, ತಮ್ಮ ಮೇಲಿನ ಸುಳ್ಳು ಕೇಸ್​ಗಳನ್ನು ಖುಲಾಸೆಗೊಳಿಸುವುದು ಮತ್ತು ವಿಕ್ರಂ ಗೌಡ ಎನ್​​ಕೌಂಟರ್​​ ಪ್ರಕರಣವನ್ನು ನ್ಯಾಯಾಂಗ ತನಿಖೆ…ಹೀಗೆ ಶರಣಾಗಲು ಬಯಸಿರುವ ನಕ್ಸಲರು ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ. ಮುಖ್ಯವಾಹಿನಿಗೆ ಬರುವ ಪ್ರಕ್ರಿಯೆ ಘನತೆಯಿಂದ ನಡೆಯಬೇಕು. ನಮ್ಮ ಆತ್ಮಗೌರವ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ಆಗುವ ಯಾವುದೇ ರೀತಿಯ ಒತ್ತಡ ಹೇರಬಾರದು. ಕೇಸ್‌ಗಳ ನೆಪದಲ್ಲಿ ವರ್ಷಗಟ್ಟಲೆ ಜೈಲಿನಲ್ಲಿ ಕೊಳೆಸಬಾರದು, ಸಮಾಜದಲ್ಲಿ ಗೌರವಯುತವಾದ ಜೀವನ ನಡೆಸಲು ವ್ಯವಸ್ಥೆ ಕಲ್ಪಿಸಬೇಕೆಂಬ

ವಿಕ್ರಂ ಗೌಡ ಎನ್‌ಕೌಂಟರ್‌ನ ನ್ಯಾಯಾಂಗ ತನಿಖೆ, ಗೌರವಯುತವಾದ ಬದುಕಿಗೆ ವ್ಯವಸ್ಥೆ… Read More »

error: Content is protected !!
Scroll to Top