ಅಪರಾಧ

ಸಿಧು ಮೂಸೆವಾಲಾ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲ್‌ನ್ನೇ ಅತೀಕ್, ಅಶ್ರಫ್ ಹತ್ಯೆಗೆ ಬಳಸಲಾಗಿದೆ

ಲಖನೌ : ಮಾಫಿಯಾ ಡಾನ್ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಹತ್ಯೆಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಹತ್ಯೆಗೆ ಬಳಸಲಾಗಿದ್ದ ಜಿಗಾನಾ ಮೇಡ್ ಪಿಸ್ತೂಲ್ ಅನ್ನೇ ಇಬ್ಬರೂ ಸಹೋದರ ಹತ್ಯೆಗೆ ಬಳಸಲಾಗಿದೆ. ಜಿಗಾನಾ ಮೇಡ್ ಪಿಸ್ತೂಲ್ ಅನ್ನು ಟರ್ಕಿಯಲ್ಲಿ ತಯಾರಿಸಲಾಗುತ್ತದೆ. ಗುಂಡಿನ ದಾಳಿ ನಡೆಸಿದ್ದ ಲವಲೇಶ್ ತಿವಾರಿ, ಸನ್ನಿ ಮತ್ತು ಅರುಣ್ ಮೌರ್ಯ ಎಂಬ ಮೂವರು ದಾಳಿಕೋರರನ್ನು ಬಂಧಿಸಿದ್ದು ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ […]

ಸಿಧು ಮೂಸೆವಾಲಾ ಹತ್ಯೆಗೆ ಬಳಸಲಾಗಿದ್ದ ಪಿಸ್ತೂಲ್‌ನ್ನೇ ಅತೀಕ್, ಅಶ್ರಫ್ ಹತ್ಯೆಗೆ ಬಳಸಲಾಗಿದೆ Read More »

ಆನ್‌ಲೈನ್‌ ಮೂವಿ ಟಿಕೆಟ್‌ ರೇಟಿಂಗ್‌ ಕೆಲಸದ ಕುರಿತು 1.14 ಲಕ್ಷ ರೂ. ವಂಚನೆ – ದೂರು ದಾಖಲು

ಮಂಗಳೂರು : ಪಾರ್ಟ್‌ಟೈಂ ಕೆಲಸದ ಕುರಿತು ಟೆಲಿಗ್ರಾಂ ಖಾತೆಯಲ್ಲಿ ಬಂದ ಸಂದೇಶವನ್ನು ನಂಬಿ ವ್ಯಕ್ತಿಯೊಬ್ಬರು 1,14,901 ರೂ. ಮೋಸ ಹೋಗಿರುವ ಕುರಿತು ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಫಲ್ಗುಣಿ ಎಂಬ ಹೆಸರಿನಿಂದ ಪಾರ್ಟ್‌ ಟೈಂ ಕೆಲಸದ ಬಗ್ಗೆ ಸಂದೇಶ ಬಂದಿದ್ದು, ಈ ಕುರಿತು ವಿಚಾರಿಸಿದಾಗ, ಆನ್‌ಲೈನ್‌ ಮೂವಿ ಟಿಕೆಟ್‌ ರೇಟಿಂಗ್‌ ಉದ್ಯೋಗ ಎಂದು ತಿಳಿಸಿದ್ದಾರೆ. ಇನ್ನು ಲಿಂಕ್‌ ಕಳುಹಿಸಿ ಆ್ಯಪ್‌ ಇನ್‌ಸ್ಟಾಲ್‌ ಮಾಡಿ ಖಾತೆ ತೆರೆದು ಅದರಲ್ಲಿ ಪ್ರಸಾರವಾಗುವ ವೀಡಿಯೋ ನೋಡಿ ರೇಟಿಂಗ್‌ ಹಾಕಿ ಕಮೀಷನ್‌ ಹಣ

ಆನ್‌ಲೈನ್‌ ಮೂವಿ ಟಿಕೆಟ್‌ ರೇಟಿಂಗ್‌ ಕೆಲಸದ ಕುರಿತು 1.14 ಲಕ್ಷ ರೂ. ವಂಚನೆ – ದೂರು ದಾಖಲು Read More »

ಗಾಂಜಾ ಮಾರಾಟ ಯತ್ನ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು

ಪುತ್ತೂರು: ಗಾಂಜಾ ಎಲೆ ಹಾಗೂ ಹೂ ಮಾರಾಟ ಮಾಡಲು ಯತ್ನಿಸಿ ನ್ಯಾಯಾಂಗ ಬಂಧನದಲ್ಲಿದ್ದ  ಆರೋಪಿಗೆ ಪುತ್ತೂರಿನ 5ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ತಾಲೂಕಿನ ಬಲ್ನಾಡು, ಬೆಳಿಯೂರುಕಟ್ಟೆ ನಿವಾಸಿ ಇಕ್ಬಾಲ್ ಯಾನೆ ಇಕ್ಕುಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪ್ಲಾಸ್ಟಿಕ್ ಕವರ್ ನಲ್ಲಿ ಗಾಂಜಾ ಎಲೆ ಹಾಗೂ ಹೂ ಮಾರಾಟ ಮಾಡುತ್ತಿದ್ದ ಸಂದರ್ಭ ಪು್ತ್ತೂರು ನಗರ ಪೊಲೀಸರು ಆತನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಪುತ್ತೂರಿನ 5ನೇ ಜಿಲ್ಲಾ ಮತ್ತು

ಗಾಂಜಾ ಮಾರಾಟ ಯತ್ನ ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಮಂಜೂರು Read More »

ಕಾರು-ಸರಕಾರಿ ಬಸ್ ಮುಖಾಮುಖಿ ಡಿಕ್ಕಿ | ಕಾರಿನಲ್ಲಿದ್ದ ಆರು ಮಂದಿ ದುರ್ಮರಣ | ಇಬ್ಬರಿಗೆ ಗಂಭೀರ ಗಾಯ

ಸುಳ್ಯ: ಸರಕಾರಿ ಬಸ್ ಮತ್ತು ಕಾರು ನಡುವೆ  ಭೀಕರ ಅಪಘಾತ ಸಂಭವಿಸಿದ ಪರಿಣಾಮ ಆರು ಮಂದಿ ಮೃತಪಟ್ಟು ಇಬ್ಬರು ಗಂಭೀರ ಗಾಯಗೊಂಡ ಘಟನೆ ಮಡಿಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಸಂಪಾಜೆಯಲ್ಲಿ ಶುಕ್ರವಾರ ನಡೆದಿದೆ. ಕೊಡಗು ಸಂಪಾಜೆಯ ಪೆಟ್ರೋಲ್ ಪಂಪ್ ಬಳಿ ಅಪಘಾತ ನಡೆದಿದ್ದು, ಕಾರಿನಲ್ಲಿದ್ದ ಇಬ್ಬರು ಮಹಿಳೆಯರು, ಮೂರು ಮಕ್ಕಳು ಹಾಗೂ ಓರ್ವ ಗಂಡಸು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ. ಮಗು ಹಾಗೂ ಗಂಡಸು ಸಹಿತ ಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮೃತದೇಹಗಳನ್ನು  ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಯ

ಕಾರು-ಸರಕಾರಿ ಬಸ್ ಮುಖಾಮುಖಿ ಡಿಕ್ಕಿ | ಕಾರಿನಲ್ಲಿದ್ದ ಆರು ಮಂದಿ ದುರ್ಮರಣ | ಇಬ್ಬರಿಗೆ ಗಂಭೀರ ಗಾಯ Read More »

ಗಡ್ಕರಿಗೆ ಬೆದರಿಕೆ : ಪಿಎಫ್ಐ ಗೆ ಸಂಬಂಧಿಸಿದ ವ್ಯಕ್ತಿ ಬಂಧನ

ಕಚೇರಿಗೆ ಕರೆ ಮಾಡಿ 100 ಕೋ. ರೂ. ಕೇಳಿದ್ದ ಆರೋಪಿ ದೆಹಲಿ : ಕೇಂದ್ರ ರಸ್ತೆ, ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬೆದರಿಕೆ ಕರೆಗಳನ್ನು ಮಾಡಿದ್ದ ವ್ಯಕ್ತಿ ದಾವೂದ್ ಇಬ್ರಾಹಿಂ ಗ್ಯಾಂಗ್, ಲಷ್ಕರ್-ಎ-ತೊಯ್ಬಾ, ಪಿಎಫ್ಐ ಗಳೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಕರೆ ಮಾಡಿದ ವ್ಯಕ್ತಿ ಜಯೇಶ್ ಪೂಜಾರಿ ಅಲಿಯಾಸ್ ಕಂಥಾ, ಅಲಿಯಾಸ್ ಸಲೀಮ್ ಶಾಹಿರ್ ಕಾಂತ ಎಂದು ಗುರುತಿಸಲಾಗಿದ್ದು, ಈತ ಕೊಲೆಯ ಪ್ರಕರಣದ ಅಪರಾಧಿಯಾಗಿದ್ದಾನೆ. ಜನವರಿ ಹಾಗೂ ಮಾರ್ಚ್ ತಿಂಗಳಲ್ಲಿ

ಗಡ್ಕರಿಗೆ ಬೆದರಿಕೆ : ಪಿಎಫ್ಐ ಗೆ ಸಂಬಂಧಿಸಿದ ವ್ಯಕ್ತಿ ಬಂಧನ Read More »

ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಸೆರೆ

ಯುವಕನ ವಿರುದ್ಧ ಪೋಕ್ಸೊ ಅಡಿ ಪ್ರಕರಣ ದಾಖಲು ಬೆಳ್ತಂಗಡಿ : ಕಾಲೇಜು ವಿದ್ಯಾರ್ಥಿನಿ ಜತೆ ಲೈಂಗಿಕ ಸಂಬಂಧ ಬೆಳೆಸಿ ಆಕೆಯನ್ನು ಗರ್ಭ ಧರಿಸುವಂತೆ ಮಾಡಿದ್ದ ನಾರಾವಿಯ ಮಂಜುನಗರದ ಸಂದೇಶ್‌ (23) ಎಂಬ ಯುವಕನನ್ನು ಪೋಕ್ಸೊ ಕಾಯಿದೆಯಡಿ ಬಂಧಿಸಲಾಗಿದೆ.ದ್ವಿತೀಯ ಪಿಯುಸಿ ಕಲಿಯುತ್ತಿದ್ದ ವಿದ್ಯಾರ್ಥಿನಿಯ ಸ್ನೇಹ ಬೆಳೆಸಿ ಬುಟ್ಟಿಗೆ ಹಾಕಿಕೊಂಡಿದ್ದ ಆರೋಪಿ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಹೋಗಿ ಮದುವೆಯಾಗುವ ಭರವಸೆ ನೀಡಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಯುವತಿಯ ಆರೋಗ್ಯದಲ್ಲಿ ವ್ಯತ್ಯಾಸವಾದಾಗ ಪೋಷಕರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.

ಕಾಲೇಜು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಯ ಸೆರೆ Read More »

ಕೊಡಗು : ವಿ.ಹಿಂ.ಪ. ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ | ಹತ್ಯೆಗೆ ಯತ್ನ

ಕೊಡಗು : ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷರ ಕಾರಿನ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸುವ ಮೂಲಕ ಹತ್ಯೆಗೆ ಯತ್ನಿಸಿದ ರುವ ಘಟನೆ ಬುಧವಾರ ತಡರಾತ್ರಿ ನಡೆದಿದೆ. ವಿಶ್ವ ಹಿಂದೂ ಪರಿಷದ್ ಕೊಡಗು ಜಿಲ್ಲಾಧ್ಯಕ್ಷ, ವಕೀಲ ಕೃಷ್ಣಮೂರ್ತಿ ಅವರು ಬುಧವಾರ ಕುಶಾಲನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚೆಟ್ಟಳ್ಳಿ ಮಾರ್ಗವಾಗಿ ಮನೆಗೆ ಹಿಂತಿರುಗುವಾಗ ಹತ್ಯೆಗೆ ಯತ್ನ ನಡೆದಿದೆ.  ದುಷ್ಕರ್ಮಿಗಳು ಹಾರಿಸಿದ ಗುಂಡು ಕೃಷ್ಣಮೂರ್ತಿ ಅವರು ಚಲಾಯಿಸುತ್ತಿದ್ದ ಕಾರಿಗೆ ತಗುಲಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಬಳಿಕ ಮಡಿಕೇರಿಗೆ ಬಂದ

ಕೊಡಗು : ವಿ.ಹಿಂ.ಪ. ಜಿಲ್ಲಾಧ್ಯಕ್ಷರ ಕಾರಿನ ಮೇಲೆ ಗುಂಡಿನ ದಾಳಿ | ಹತ್ಯೆಗೆ ಯತ್ನ Read More »

ಕೆಎಸ್.ಆರ್.ಟಿ.ಸಿ. ಬಸ್ ದ್ವಿಚಕ್ರ ವಾಹಕ್ಕೆ ಡಿಕ್ಕಿ : ದ್ವಿಚಕ್ರ ಸವಾರ ಬಲಿ

ಬಂಟ್ವಾಳ :  ಕೆಎಸ್.ಆರ್.ಟಿ.ಸಿ.ಬಸ್ಸೊಂದು ದ್ವಿಚಕ್ರಕ್ಕೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪದ ಜಕ್ರಿಬೆಟ್ಟು ಎಂಬಲ್ಲಿ ನಡೆದಿದೆ. ಮೃತ ಯುವಕನನ್ನು ಇಲ್ಲಿನ ಸಮೀಪದ ಸರಪಾಡಿ ನಿವಾಸಿ  ಸೇಸಪ್ಪ ಯಾನೆ ಶ್ರೇಯಸ್ (30) ಎಂದು ಗುರುತಿಸಲಾಗಿದೆ. ಖಾಸಗಿ ಕಂಪೆನಿಯೊಂದರಲ್ಲಿ ಚಾಲಕ ವೃತ್ತಿ ಮಾಡುತ್ತಿದ್ದ ಈತ ಸಂಜೆ ವೇಳೆ ಕೆಲಸ ಮುಗಿಸಿ ಮನೆಗೆ ದ್ವಿಚಕ್ರದಲ್ಲಿ ಹೋಗುವ ವೇಳೆ ಅಪಘಾತ ಸಂಭವಿಸಿದೆ. ಬಿಸಿರೋಡು ಕಡೆಯಿಂದ ಧರ್ಮಸ್ಥಳ ಹೆದ್ದಾರಿಯಲ್ಲಿ ಶ್ರೇಯಸ್ ಸರಪಾಡಿಯಲ್ಲಿರುವ ತನ್ನ ಮನೆಗೆ ದ್ವಿಚಕ್ರದಲ್ಲಿ

ಕೆಎಸ್.ಆರ್.ಟಿ.ಸಿ. ಬಸ್ ದ್ವಿಚಕ್ರ ವಾಹಕ್ಕೆ ಡಿಕ್ಕಿ : ದ್ವಿಚಕ್ರ ಸವಾರ ಬಲಿ Read More »

ರೇಶನ್ ಮಾಫಿಯಾ : ಗೋಣಿ ಚೀಲ ಬದಲಿಸಿ ಅಕ್ರಮ ಪಡಿತರ ಅಕ್ಕಿ ಸಾಗಾಟ

ವಿಟ್ಲ : ಗೋಣಿ ಚೀಲ ಬದಲಿಸಿ ಅಕ್ರಮವಾಗಿ ಪಡಿತರ ಅಕ್ಕಿಯನ್ನು‌ ಜೀತೋ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಉಕ್ಕುಡ ಸಮೀಪ ವಿಟ್ಲ ಪೋಲಿಸರು ಬಂಧಿಸಿದ್ದು, ವಾಹನ ಸಹಿತ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.ಬಂಧಿತನಾಗಿರುವ ವಾಹನದ ಚಾಲಕ ಕುದ್ದುಪದವು ಸುರುಳಿಮೂಲೆ ನಿವಾಸಿ ಅಲಿ ಎಂಬಾತನ ವಿಚಾರಣೆ ವೇಳೆ ಪಡಿತರ ಅಕ್ಕಿಯ ಮಾಫಿಯಾ ದಂಧೆ ಬಯಲಾಗಿದೆ.ಆರೋಪಿಯನ್ನು ವಿಚಾರಣೆ ನಡೆಸಿ ಆ ಬಳಿಕ ಅಕ್ರಮ ಪಡಿತರ ಅಕ್ಕಿ ದಾಸ್ತಾನು ಅಡ್ಡೆಗೆ ವಿಟ್ಲ ಪೊಲೀಸರು ದಾಳಿ ನಡೆಸಿದ್ದಾರೆ. ಅಡ್ಯನಡ್ಕ ಸಮೀಪದ ಮರಕ್ಕಿಣಿ ನಿವಾಸಿ JSW

ರೇಶನ್ ಮಾಫಿಯಾ : ಗೋಣಿ ಚೀಲ ಬದಲಿಸಿ ಅಕ್ರಮ ಪಡಿತರ ಅಕ್ಕಿ ಸಾಗಾಟ Read More »

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ : 126.14 ಕೋಟಿ ರೂ. ಜಪ್ತಿ

ಬೆಂಗಳೂರು : ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದಲ್ಲಿ ಮಾ.29 ರಿಂದ ಜಾರಿಯಲ್ಲಿರುವ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣದಲ್ಲಿ 1,000 ಎಫ್ಐಆರ್ ದಾಖಲಾಗಿದೆ. ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹಗಳು ಹಾಗೂ ಉಚಿತ ಕೊಡುಗೆಗಳನ್ನು ನೀಡುವ ಪ್ರಕರಣಗಳಿಗೆ ಸಂಬಂಧಿಸಿದ ಎಫ್ಐಆರ್ ಗಳು ಇದಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದಲ್ಲಿ ಈ ವರೆಗೂ ಒಟ್ತು 126.14 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಲಾಗಿದೆ. ಈ ಪೈಕಿ 47 ಕೋಟಿ ರೂಪಾಯಿಗಳ ನಗದು, 29 ಕೋಟಿ ರೂಪಾಯಿ ಮೌಲ್ಯದ

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ : 126.14 ಕೋಟಿ ರೂ. ಜಪ್ತಿ Read More »

error: Content is protected !!
Scroll to Top