ಅಪರಾಧ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ಯುವಕನ ವಿರುದ್ಧಪ್ರಕರಣ ದಾಖಲು

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ಯುವತಿಯನ್ನು ಗರ್ಭವತಿಯನ್ನಾಗಿಸಿದ ಹಿನ್ನಲೆ ಯುವತಿ ನೀಡಿದ ದೂರಿನಂತೆ ಬಪ್ಪಳಿಗೆ ನಿವಾಸಿ ಕೃಷ್ಣ ಎಂಬವರ ವಿರುದ್ಧ ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಕೃಷ್ಣ ಹಾಗೂ ಯುವತಿಗೆ ಹೈ ಸ್ಕೂಲ್ ನಿಂದಲೇ ಪರಿಚಯವಿದ್ದು ಬಳಿಕ ಪರಸ್ಪರ ಪ್ರೀತಿಸುತ್ತಿದ್ದು 2024 ರ ಅಕ್ಟೋಬರ್ ತಿಂಗಳಲ್ಲಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮನೆಗೆ ಬರ ಹೇಳಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ಬಳಿಕ 2025 ಜನವರಿಯಲ್ಲಿ ಮನೆಗೆ ಬರಲು ಹೇಳಿ […]

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ಯುವಕನ ವಿರುದ್ಧಪ್ರಕರಣ ದಾಖಲು Read More »

ಕ್ರೈಸ್ತ ದಫನ ಭೂಮಿಯ ಸಮಾಧಿ ಹಾನಿಗೊಳಿಸಿದ ದುಷ್ಕರ್ಮಿಗಳು : ಪ್ರಕರಣ ದಾಖಲು

ಪುತ್ತೂರು: ಕ್ರೈಸ್ತ ದಫನ ಭೂಮಿಯ ಸಮಾಧಿಯೊಂದನ್ನು ದುಷ್ಕರ್ಮಿಗಳು ಒಡೆದು ಹಾನಿ ಮಾಡಿದ ಘಟನೆ ಜೂನ್‍ 14 ರಂದು ನಡೆದಿದ್ದು, ಈ ಕುರಿತು ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬನ್ನೂರಿನ ಆನೆಮಜಲು ಪರಿಸರದಲ್ಲಿ ಜೂನ್ ಈ ಘಟನೆ ನಡೆದಿದೆ ಎನ್ನಲಾಗಿದೆ. ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕ್ರೈಸ್ತ ದಫನ ಭೂಮಿಯ ಸಮಾಧಿ ಹಾನಿಗೊಳಿಸಿದ ದುಷ್ಕರ್ಮಿಗಳು : ಪ್ರಕರಣ ದಾಖಲು Read More »

ಮದುಗೆ ಒಪ್ಪದಿದ್ದಕ್ಕೆ ಅನ್ಯ ಕೋಮಿನ ವ್ಯಕ್ತಿಯಿಂದ ಹಿಂದೂ ಯುವತಿಯ ಹತ್ಯೆ

ನವದೆಹಲಿ : ಮದುವೆಗೆ ಒಪ್ಪದ ಹಿನ್ನಲೆ ಅನ್ಯಕೋಮಿ ವ್ಯಕ್ತಿಯೋರ್ವ ಬುರ್ಖಾ ಧರಿಸಿಕೊಂಡು ಮನೆಗೆ ನುಗ್ಗಿ ಯುವತಿಯನ್ನು 5ನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ನಡೆದಿದೆ. ನೇಹಾ ಮಹಡಿಯಿಂದ ಬಿದ್ದು ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ. ಕಳೆದ ಮೂರು ವರ್ಷದ ಹಿಂದೆ ಉತ್ತರ ಪ್ರದೇಶ ಮೂಲದ ತೌಫಿಕ್ ಎಂಬಾತನ ಪರಿಚಯವಾಗಿತ್ತು. ಅಲ್ಲದೇ ಆರೋಪಿ ತೌಫಿಕ್ ದೆಹಲಿಯ ಮಂಡೋಲಿಯಲ್ಲಿ ಕೆಲಸ ಮಾಡುತ್ತಿದ್ದ. ನೇಹಾ ಹಾಗೂ ತೌಫಿಕ್ ಆಗಾಗ ಭೇಟಿಯಾಗುತ್ತಿದ್ದರು, ಅಲ್ಲದೇ ತೌಫಿಕ್ ನನ್ನು ಅಣ್ಣ ಎಂದು ಕರೆಯುತ್ತಿದ್ದಳು ಅಷ್ಟೇ

ಮದುಗೆ ಒಪ್ಪದಿದ್ದಕ್ಕೆ ಅನ್ಯ ಕೋಮಿನ ವ್ಯಕ್ತಿಯಿಂದ ಹಿಂದೂ ಯುವತಿಯ ಹತ್ಯೆ Read More »

ವಿವಿಧ ಆ್ಯಪ್‍ ಗಳಿಂದ ಸಾಲ : ಆರ್ಥಿಕ ಸಮಸ್ಯೆಯಿಂದ ಯುವಕ ಆತ್ಮಹತ್ಯೆ

ಮಂಗಳೂರು: ವಿವಿಧ ಆ್ಯಪ್‌ ಗಳ ಸಾಲಗಳಿಂದ ಬೇಸತ್ತು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕೋಡಿಕಲ್ ನಲ್ಲಿ ನಡೆದಿದೆ. ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಆತ್ಮಹತ್ಯೆ ಮಾಡಿಕೊಂಡವರು. ಸೋಮವಾರ ಬೆಳಗ್ಗೆ ತನ್ನ ಮನೆಯಲ್ಲಿ ಉಪಹಾರ ಸೇವಿಸಿದ ನಿಖಿಲ್ ಪೂಜಾರಿ ಕೋಣೆ ಸೇರಿದ್ದ. ಸಂಜೆಯವರೆಗೆ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದ ಕಾರಣ ಮನೆಮಂದಿ ನಿಖಿಲ್ ಪೂಜಾರಿಯ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ ಎನ್ನಲಾಗಿದೆ. ಸಂಜೆ ಬಳಿಕ ಬಾಗಿಲು ಬಡಿದರೂ ತೆಗೆಯದ್ದರಿಂದ ಫೋನ್ ಕರೆ ಮಾಡಿದರೂ ಆತ

ವಿವಿಧ ಆ್ಯಪ್‍ ಗಳಿಂದ ಸಾಲ : ಆರ್ಥಿಕ ಸಮಸ್ಯೆಯಿಂದ ಯುವಕ ಆತ್ಮಹತ್ಯೆ Read More »

ಇಸ್ರೇಲ್‌ಗೆ ನೆರವಾದ ಮೂವರನ್ನು ನೇಣಿಗೇರಿಸಿದ ಇರಾನ್‌

ಸಮರ ವಿರಾಮದ ಬೆನ್ನಿಗೆ ದೇಶದ್ರೋಹಿಗಳ ಬೇಟೆ; 700 ಮಂದಿ ಸೆರೆ ಟೆಹ್ರಾನ್‌ : ಸಮರ ವಿರಾಮ ಜಾರಿಗೆ ಬಂದ ಮರುದಿನವೇ ಇರಾನ್‌ ತನ್ನಲ್ಲಿರುವ ದೇಶದ್ರೋಹಿಗಳ ವಿರುದ್ಧ ಕಾರ್ಯಾಚರಣೆ ಶುರುಮಾಡಿದ್ದು, ಇಸ್ರೇಲ್‌ ಪರ ಬೇಹುಗಾರಿಕೆ ಮಾಡಿದ ಆರೋಪದಲ್ಲಿ ಮೂವರನ್ನು ನೇಣಿಗೇರಿಸಿದೆ. ಇಸ್ರೇಲ್‌ ಮತ್ತು ಇರಾನ್‌ ನಡುವೆ 12 ದಿನಗಳಿಂದ ನಡೆಯುತ್ತಿದ್ದ ಭೀಕರ ಯುದ್ಧ ಶಾಂತಿ ಮಾತುಕತೆಯ ಬಳಿಕ ನಿನ್ನೆ ಕೊನೆಗೊಂಡಿದೆ. ಇದರ ಬೆನ್ನಿಗೆ ಇರಾನ್‌ ಸರ್ಕಾರ ಇಸ್ರೇಲ್‌ಗೆ ನೆರವಾಗಿರುವವರ ಬೇಟೆಯಾಡಲು ಪ್ರಾರಂಭಿಸಿದೆ. ನಿನ್ನೆಯೇ ಇಸ್ರೇಲ್‌ನ ಬೇಹುಪಡೆ ಮೊಸಾದ್‌ಗೆ ನೆರವಾದ

ಇಸ್ರೇಲ್‌ಗೆ ನೆರವಾದ ಮೂವರನ್ನು ನೇಣಿಗೇರಿಸಿದ ಇರಾನ್‌ Read More »

2.5 ಕೋಟಿ ರೂ. ಕಾರಿಗೆ 50 ಲ.ರೂ. ಮೌಲ್ಯ ತೋರಿಸಿ ನೋಂದಾಯಿಸಿ ತೆರಿಗೆ ವಂಚನೆ

ಮನಪಾ ಬಳಿಕ ಮಂಗಳೂರು ಆರ್‌ಟಿಒ ಕಚೇರಿಯ ಅವ್ಯವಹಾರ ಬಯಲಿಗೆ ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ದಾಳಿಯಾದ ಬಳಿಕ ಅಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದು ಬುದ್ಧಿವಂತರ ಮತ್ತು ಪ್ರಜ್ಞಾವಂತರ ಜಿಲ್ಲೆ ಎಂಬ ಖ್ಯಾತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗಕ್ಕೆ ಕಳಂಕ ಅಂಟಿಕೊಂಡಿದೆ. ಈಗ ಸಾರಿಗೆ ಕಚೇರಿಯ ಸರದಿ. ಮಂಗಳೂರಿನ ಸಾರಿಗೆ ಕಚೇರಿಯಲ್ಲಿ ವಾಹನ ನೋಂದಣಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಹಗರಣ ಮಂಗಳೂರು ಸಾರಿಗೆ ಅಧಿಕಾರಿ

2.5 ಕೋಟಿ ರೂ. ಕಾರಿಗೆ 50 ಲ.ರೂ. ಮೌಲ್ಯ ತೋರಿಸಿ ನೋಂದಾಯಿಸಿ ತೆರಿಗೆ ವಂಚನೆ Read More »

ಮೂವರು ಡಾಬಾ ಮಾಲೀಕರನ್ನು ಕೊಚ್ಚಿ ಕೊಂದ ಗ್ಯಾಂಗ್‌

ಬೆಂಗಳೂರು: ಡಾಬಾ ಮಾಲಕರನ್ನು ಕೊಚ್ಚಿ ಕೊಲೆ ಮಾಡಿರುವ ಭೀಕರ ಕೃತ್ಯ ಕಲಬುರಗಿ ಜಿಲ್ಲೆಯಲ್ಲಿ ಸಂಭವಿಸಿದೆ. ಕಲಬುರಗಿಯ ಹೊರವಲಯದ ಪಟ್ನಾ ಗ್ರಾಮದಲ್ಲಿರುವ ಡಾಬಾದಲ್ಲಿ ಮಂಗಳವಾರ ತಡರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಮೂವರನ್ನು ಬರ್ಬರವಾಗಿ ಹತ್ಯೆಗೈಯ್ಯಲಾಗಿದೆ. ಹತ್ಯೆಗೀಡಾದವರನ್ನು ಸಿದ್ದಾರೂಢ (32), ಜಗದೀಶ್ (25) ಮತ್ತು ರಾಮಚಂದ್ರ (35) ಎಂದು ಗುರುತಿಸಲಾಗಿದೆ. ಮೂರು ಜನ ಸಂಬಂಧಿಕರಾಗಿದ್ದು, ಡಾಬಾ ನಡೆಸುತ್ತಿದ್ದರು. ಡಾಬಾದಲ್ಲಿ ಕೆಲಸ ಮಾಡುತ್ತಿದ್ದಾಗ ದುಷ್ಕರ್ಮಿಗಳು ಡಾಬಾಕ್ಕೆ ನುಗ್ಗಿ ಮೂವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಹಳೆಯ ವೈಷಮ್ಯದಿಂದ ಕೊಲೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ

ಮೂವರು ಡಾಬಾ ಮಾಲೀಕರನ್ನು ಕೊಚ್ಚಿ ಕೊಂದ ಗ್ಯಾಂಗ್‌ Read More »

ಶಿವರಾಜ್‍ ಮತ್ತಿಲ್ಲ ಆತ್ಮಹತ್ಯೆ

ಬೆಳ್ತಂಗಡಿ : ಉಜಿರೆ, ಧರ್ಮಸ್ಥಳ ಭಾಗದಲ್ಲಿ ಸದಾ ತನ್ನ ಬೈಕ್ ನಲ್ಲಿ ನಾಯಿಯೊಂದನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ಶಿವರಾಜ್ ಮತ್ತಿಲ್ಲ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಟೋಯಿಂಗ್ ವಾಹನ, ಕೃಷಿ, ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಅವರಿಗೆ ತನ್ನ ಪ್ರೀತಿಯ ಶ್ವಾನವೇ ಎಲ್ಲಾ. ಬೆಳಗ್ಗೆ ಹಾಗೂ ಸಂಜೆ ಎರಡು ಹೊತ್ತು ತನ್ನ ಪ್ರೀತಿಯ ನಾಯಿಯೊಂದಿಗೆ ನಗರವನ್ನು ಒಂದೆರಡು ರೌಂಡ್ ಹಾಕಿಲ್ಲ ಎಂದರೆ ಸಮಾಧಾನ ಇರುತ್ತಿರಲಿಲ್ಲ. ಅಷ್ಟೇ ಅಲ್ಲದೆ ನಾಯಿಯೊಂದಿಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ

ಶಿವರಾಜ್‍ ಮತ್ತಿಲ್ಲ ಆತ್ಮಹತ್ಯೆ Read More »

ಪಂಡರಾಪುರ ಭಕ್ತರ ಮೆರವಣಿಗೆ ಮೇಲೆ ಮಾಂಸ, ಮೂಳೆ ಚೂರು ಎಸೆದ ಮಹಿಳೆ

ಆಷಾಢಿ ವಾರ್ಕರಿ ಯಾತ್ರೆಯ ಸಂದರ್ಭ ನಡೆದ ಅಹಿತಕರ ಘಟನೆ ಪುಣೆ : ಪಂಡರಾಪುರದ ವಿಠ್ಠಲನ ಕ್ಷೇತ್ರಕ್ಕೆ ಸಾಗುತ್ತಿದ್ದ ವಾರ್ಕರಿಗಳ ಮೆರವಣಿಗೆಯ ಮೇಲೆ ಮುಸ್ಲಿಂ ಮಹಿಳೆಯೊಬ್ಬಳು ಮಾಂಸ ಮತ್ತು ಮೂಳೆ ಚೂರುಗಳನ್ನು ಎಸೆದು ಅಪವಿತ್ರಗೊಳಿಸಿದ ಘಟನೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪುಣೆಯ ಕ್ಯಾಂಪ್‌ ಏರಿಯಾದಲ್ಲಿ ಈ ಘಟನೆ ನಡೆದಿದೆ. ಮಾಂಸ ಎಸೆದ ಮಹಿಳೆಯನ್ನು ನಾಸಿಮ್‌ ಶೇಖ್‌ (57) ಎಂದು ಗುರುತಿಸಲಾಗಿದೆ. ಜೂನ್‌ 21ರಂದು ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಆಷಾಢಿ ವಾರಿ

ಪಂಡರಾಪುರ ಭಕ್ತರ ಮೆರವಣಿಗೆ ಮೇಲೆ ಮಾಂಸ, ಮೂಳೆ ಚೂರು ಎಸೆದ ಮಹಿಳೆ Read More »

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಜ್ಜಿಯನ್ನು ಕಸದ ತೊಟ್ಟಿಗೆ ಎಸೆದ ಮೊಮ್ಮಗ!

ಅರೆಪ್ರಜ್ಞಾವಸ್ಥೆಯಲ್ಲಿದ್ದ ವೃದ್ಧೆಯನ್ನು ರಕ್ಷಿಸಿದ ಪೊಲೀಸರು ಮುಂಬೈ: ಕ್ಯಾನ್ಸರ್‌ ರೋಗದಿಂದ ಬಳಲುತ್ತಿರುವ ಅಜ್ಜಿಯನ್ನು ಮೊಮ್ಮಗನೇ ಕಸದ ತೊಟ್ಟಿಗೆ ಎಸೆದುಹೋದ ಅಮಾನವೀಯ ಘಟನೆಯೊಂದು ಮುಂಬಯಿ ಮಹಾನಗರದಲ್ಲಿ ಸಂಭವಿಸಿದೆ. 60 ವರ್ಷದ ಯಶೋದಾ ಗಾಯಕ್ವಾಡ್ ಎಂಬ ಹಿರಿಯ ಮಹಿಳೆ ಕಸದ ತೊಟ್ಟಿಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ನರಳುತ್ತಿರುವುದನ್ನು ನೋಡಿ ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ. ಯಶೋದಾ ಚರ್ಮದ ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಕಳೆದ ಶನಿವಾರ ಬೆಳಗ್ಗೆ ಗೋರೆಗಾಂವ್‌ ಸಮೀಪ ಆರೆ​ ಕಾಲನಿಯ ರಸ್ತೆಬದಿಯ ಕಸದ ರಾಶಿಯ ಮೇಲೆ ವೃದ್ಧೆ ಅರೆ ಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದನ್ನು ಅಲ್ಲೇ ಹೋಗುತ್ತಿದ್ದವರು

ಕ್ಯಾನ್ಸರ್‌ನಿಂದ ಬಳಲುತ್ತಿರುವ ಅಜ್ಜಿಯನ್ನು ಕಸದ ತೊಟ್ಟಿಗೆ ಎಸೆದ ಮೊಮ್ಮಗ! Read More »

error: Content is protected !!
Scroll to Top