ಅಪರಾಧ

ಹಿಂದು ಮುಖಂಡರ ಮನೆ ಮಧ್ಯರಾತ್ರಿ ತಪಾಸಣೆ : ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌

ಉಪ್ಪಿನಂಗಡಿಯ ಹಿರಿಯ ನಾಗರಿಕ ಯು.ಜಿ. ರಾಧಾ ಮನೆ ಶೋಧಿಸಿದ ಪ್ರಕರಣ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದ್ದ ದಿನಗಳಲ್ಲಿ ಮಧ್ಯರಾತ್ರಿ ಹಿಂದು ಮುಖಂಡರ ಮನೆಗಳಿಗೆ ಹೋಗಿ ತಪಾಸಣೆ ಮಾಡಿದ್ದ ಪೊಲೀಸರಿಗೆ ಹೈಕೋರ್ಟ್‌ ನೋಟಿಸ್‌ ನೀಡಿದೆ. ಯಾವುದೇ ಕಾರಣವಿಲ್ಲದೆ ಮಧ್ಯರಾತ್ರಿ ವೇಳೆ ಆರ್​ಎಸ್​​ಎಸ್ ನಾಯಕರೊಬ್ಬರ ಮನೆಗೆ ಪೊಲೀಸರು ಹೋಗಿ ಫೋಟೊ ತೆಗೆದು ಜಿಪಿಎಸ್ ಅಪ್‌ಲೋಡ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಕ್ಷಿಣ ಕನ್ನಡ ಜಿಲ್ಲಾ ಎಸ್​​ಪಿ ಅರುಣ್​ಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿ ಸೂಕ್ತ ದಾಖಲೆ […]

ಹಿಂದು ಮುಖಂಡರ ಮನೆ ಮಧ್ಯರಾತ್ರಿ ತಪಾಸಣೆ : ಎಸ್‌ಪಿಗೆ ಹೈಕೋರ್ಟ್‌ ನೋಟಿಸ್‌ Read More »

ಮಂಗಳೂರು : ಹೆಡ್‌ಕಾನ್‌ಸ್ಟೆಬಲ್‌ ರಶೀದ್‌ ಸೇರಿ 56 ಪೊಲೀಸ್‌ ಸಿಬ್ಬಂದಿಯ ವರ್ಗಾವಣೆ

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕರಿಂದ ಆರೋಪಕ್ಕೊಳಗಾಗಿದ್ದ ಹೆಡ್‌ಕಾನ್‌ಸ್ಟೆಬಲ್‌ ರಶೀದ್‌ ಮಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದಲ್ಲಿ ಹೆಸರು ಕೇಳಿಬಂದಿದ್ದ ಬಜ್ಪೆ ಪೊಲೀಸ್‌ ಠಾಣೆಯ ಹೆಡ್‌ಕಾನ್‌ಸ್ಟೆಬಲ್ ರಶೀದ್ ಸೇರಿ ಹಲವು ಪೊಲೀಸರನ್ನು ಮಂಗಳೂರು ಕಮಿಷನರೇಟ್‌ ವಲಯ ವರ್ಗಾಯಿಸಿದೆ. ಬಜ್ಪೆ ಠಾಣೆ ಹೆಡ್‌ಕಾನ್ಸ್‌ಟೇಬಲ್ ರಶೀದ್​ರನ್ನು ಮಂಗಳೂರು ಮಹಿಳಾ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ. ಸುಹಾಸ್‌ ಶೆಟ್ಟಿ ಹತ್ಯೆಗೆ ರಶೀದ್‌ ಪರೋಕ್ಷವಾಗಿ ನೆರವು ನೀಡಿದ್ದಾರೆಂದು ಕೆಲವು ಹಿಂದು ಮುಖಂಡರು ಮತ್ತು ಬಿಜೆಪಿ ನಾಯಕರು ನೇರವಾಗಿ

ಮಂಗಳೂರು : ಹೆಡ್‌ಕಾನ್‌ಸ್ಟೆಬಲ್‌ ರಶೀದ್‌ ಸೇರಿ 56 ಪೊಲೀಸ್‌ ಸಿಬ್ಬಂದಿಯ ವರ್ಗಾವಣೆ Read More »

ಗಂಡ – ಹೆಂಡತಿ  ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ | ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

ಬಿ.ಸಿ.ರೋಡ್: ಗಂಡ- ಹೆಂಡತಿ  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ. ತಿಮ್ಮಪ್ಪ ಮೂಲ್ಯ (50) ಹಾಗೂ ಆತನ ಪತ್ನಿ ಜಯಂತಿ (40) ಇಬ್ಬರು ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನ;ಲಾಗಿದೆ. ಜಯಂತಿ ಅವರ ಮೃತದೇಹ ಕೋಣೆಯಲ್ಲಿ ಮಲಗಿದ ಸ್ಥಿತಿಯಲ್ಲಿ ಕಂಡು ಬಂದರೆ,  ತಿಮ್ಮಪ್ಪ ಅವರು ನೇಣು ಬಿಗಿದು ಆತ್ಮಹತ್ಯೆ ‌ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜಯಂತಿ ಅವರು ಗರ್ಭಿಣಿ ಯಾಗಿದ್ದು, ಜುಲೈ 2 ರಂದು ಸೀಮಂತ ದಿನ ನಿಗದಿಯಾಗಿತ್ತು.

ಗಂಡ – ಹೆಂಡತಿ  ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ | ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು Read More »

ಜಮೀನಿನ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸಿದ ಸರ್ವೆಯರ್‌, ದಲ್ಲಾಳಿ ಲೋಕಾಯುಕ್ತ ಬಲೆಗೆ

ಎರಡು ತುಂಡು ಜಮೀನುಗಳ ನಕ್ಷೆ, ಪ್ರಾಪರ್ಟಿ ಕಾರ್ಡ್‌ಗೆ 41,500 ರೂ.ಲಂಚ ಪಡೆದಿದ್ದ ಸರ್ವೆಯರ್‌ ಮಂಗಳೂರು: ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಕೊಡಲು ಲಂಚ ಸ್ವೀಕರಿಸಿದ ಭೂಮಾಪನ ಇಲಾಖೆಯ ಸರ್ವೆಯರ್‌ ಮತ್ತು ಈತನಿಗೆ ಸಹಕರಿಸಿದ ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣ ಪಡೆಯುತ್ತಿರುವಾಗಲೇ ಬಲೆಬೀಸಿ ಬಂಧಿಸಿದ್ದಾರೆ. ವ್ಯಕ್ತಿಯೊಬ್ಬರು ತನ್ನ ಹಾಗೂ ತನ್ನ ತಾಯಿಯ ಹೆಸರಿನಲ್ಲಿರುವ ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು ಕಳೆದ ಫೆಬ್ರವರಿಯಲ್ಲಿ

ಜಮೀನಿನ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸಿದ ಸರ್ವೆಯರ್‌, ದಲ್ಲಾಳಿ ಲೋಕಾಯುಕ್ತ ಬಲೆಗೆ Read More »

ಅಕ್ರಮ ಜೂಜಾಟ ಅಡ್ಡೆಗೆ ದಾಳಿ : 9 ಮಂದಿಯ ಬಂಧನ

ಬೆಳ್ತಂಗಡಿ: ಮನೆಯೊಂದರಲ್ಲಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಅಡ್ಡೆಗೆ  ಬೆಳ್ತಂಗಡಿ ಪೊಲೀಸರು ದಾಳಿ ನಡೆಸಿ ಆಟದಲ್ಲಿ ನಿರತರಾಗಿದ್ದ 9 ಮಂದಿಯನ್ನು ಬಂಧಿಸಿದ ಘಟನೆ ಓಡಿಲ್ನಾಳ ಗ್ರಾಮದ ಪಣೆಜಾಲು ಎಂಬಲ್ಲಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಇನ್ಸೆಕ್ಟರ್ ಸುಬ್ಬಾಪುರ್ ಮಠ ಮತ್ತು ಸಿಬ್ಬಂದಿಗಳು ದಾಳಿ ನಡೆಸಿದ್ದು, ಸ್ಥಳದಲ್ಲಿ ಜೂಜಾಟಕ್ಕೆ ಬಳಸಲಾಗಿದ್ದ ಎಲೆಗಳು, 6 ಮೊಬೈಲ್ ಫೋನ್, 2 ಬೈಕ್, 1 ಆಟೋ ರಿಕ್ಷಾ ಹಾಗೂ 26,778 ರೂಪಾಯಿ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ

ಅಕ್ರಮ ಜೂಜಾಟ ಅಡ್ಡೆಗೆ ದಾಳಿ : 9 ಮಂದಿಯ ಬಂಧನ Read More »

ವಂಚನೆ ಪ್ರಕರಣ ಸುಳಿಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್‌: ಜೂ.23ರಂದು ಇ.ಡಿ.ವಿಚಾರಣೆ

ಐಶ್ವರ್ಯಾ ಗೌಡ ಜುವೆಲ್ಲರಿ ಅಂಗಡಿ ಮಾಲೀಕನಿಗೆ 9 ಕೋ.ರೂ. ವಂಚಿಸಿದ ಪ್ರಕರಣ ಬೆಂಗಳೂರು: ಐಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಮಾಜಿ ಸಂಸದ ಡಿ.ಕೆ. ಸುರೇಶ್‌ ಅವರನ್ನು ಜೂ.23ರಂದು ವಿಚಾರಣೆಗೊಳಪಡಿಸಲಿದೆ. ಇ.ಡಿ.ಯಿಂದ ಸಮನ್ಸ್‌ ಜಾರಿಯಾಗಿರುವುದು ನಿಜ. ಅದರಂತೆ ಜೂ. 23ರಂದು ವಿಚಾರಣೆಗೆ ಹಾಜರಾಗುತ್ತೇನೆ ಎಂದು ಡಿ.ಕೆ. ಸುರೇಶ್‌ ಹೇಳಿದ್ದಾರೆ. ಅಧಿಕಾರಿಗಳು ಮನೆಗೆ ಬಂದು ಸಮನ್ಸ್‌ ನೀಡಿದಾಗ ನಾನು ಮನೆಯಲ್ಲಿ ಇರಲಿಲ್ಲ. ಅನಂತರ ಮನೆಗೆ ಬಂದು ಯಾವ ವಿಚಾರವಾಗಿ ಸಮನ್ಸ್‌ ಎಂದು ನೋಡಿದಾಗ ಐಶ್ವರ್ಯ

ವಂಚನೆ ಪ್ರಕರಣ ಸುಳಿಯಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್‌: ಜೂ.23ರಂದು ಇ.ಡಿ.ವಿಚಾರಣೆ Read More »

ಬಾಡಿಗೆಗೆಂದು ತೆಗೆದುಕೊಂಡ ಲಾರಿಯನ್ನು ಚಾಲಕನೇ ಅಡವಿಟ್ಟ | ವಿಚಾರಿಸಲು ಹೋದ ಮಾಲೀಕನಿಗೆ ಜೀವ ಬೆದರಿಕೆ | ಪ್ರಕರಣ ದಾಖಲು

ಪುತ್ತೂರು: ಬಾಡಿಗೆಗೆಂದು ತೆಗೆದುಕೊಂಡು ಹೋದ ಲಾರಿಯನ್ನು ಚಾಲಕನೇ ಅಡವಿಟ್ಟು ಈ ಬಗ್ಗೆ ವಿಚಾರಿಸಲು ಹೋದ ಮಾಲಕನಿಗೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ನಿವಾಸಿ ಫರ್ವೀಝ್‍ ಎಂ. ಎಂಬವರು ನಗರ ಠಾಣೆಗೆ ದೂರು ನೀಡಿದ್ದು, ಲಾರಿ ಚಾಲಕ ಅಸಾಸುದ್ದೀನ್ ಫೈರೋಝ್ ಮತ್ತು ಮಂಗಳೂರಿನ ಕಿರಣ್ ಪ್ರಕರಣದ ಆರೋಪಿಗಳು ಎಂದು ತಿಳಿದು ಬಂದಿದೆ. ತಮ್ಮ ಮಾಲಕತ್ವದ ಲಾರಿಗೆ  ಅಸಾಸುದ್ದೀನ್ ಫೈರೋಝ್ ನನ್ನು ಚಾಲಕನಾಗಿ ನೇಮಿಸಿದ್ದು, ಮಾ.29ರಂದು ಸರಕು ಸಾಗಾಟದ ಉದ್ದೇಶಕ್ಕಾಗಿ ಲಾರಿಯನ್ನು ಪಡೆದ ಆತ

ಬಾಡಿಗೆಗೆಂದು ತೆಗೆದುಕೊಂಡ ಲಾರಿಯನ್ನು ಚಾಲಕನೇ ಅಡವಿಟ್ಟ | ವಿಚಾರಿಸಲು ಹೋದ ಮಾಲೀಕನಿಗೆ ಜೀವ ಬೆದರಿಕೆ | ಪ್ರಕರಣ ದಾಖಲು Read More »

ದ್ವೇಷ ಭಾಷಣ : ಹಿಂದಿನ ಪೊಲೀಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ ಸ್ಪೀಕರ್‌ ಖಾದರ್‌

ಹಿಂದಿನ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಗೃಹ ಸಚಿವ ಪರಮೇಶ್ವರ್‌ಗೆ ಪತ್ರ ಮಂಗಳೂರು: ದ್ವೇಷ ಭಾಷಣಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳದ ದಕ್ಷಿಣ ಕನ್ನಡದ ಹಿಂದಿನ ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿ ಗೃಹ ಸಚಿವರಿಗೆ ಸ್ಪೀಕರ್‌ ಯು.ಟಿ.ಖಾದರ್‌ ಪತ್ರ ಬರೆದಿದ್ದಾರೆ. ಇತ್ತೀಚೆಗೆ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ದ್ವೇಷಭರಿತ ಭಾಷಣಗಳು, ಪ್ರಚೋದನಾತ್ಮಕ ಹೇಳಿಕೆಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಸಮಾಜ ಘಾತುಕ ವದಂತಿಗಳು ಸಾರ್ವಜನಿಕ ಶಾಂತಿ ಮತ್ತು ಸೌಹಾರ್ದತೆಗೆ ಭಾರಿ ಧಕ್ಕೆ ಉಂಟುಮಾಡುವಂತಹ ಅಪಾಯಕಾರಿ ಸ್ಥಿತಿಯನ್ನು

ದ್ವೇಷ ಭಾಷಣ : ಹಿಂದಿನ ಪೊಲೀಸ್‌ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ ಸ್ಪೀಕರ್‌ ಖಾದರ್‌ Read More »

ಹಿಂದೂ ಮುಖಂಡರ ಮನೆಗಳಲ್ಲಿ ಮಧ್ಯರಾತ್ರಿ ಪೊಲೀಸ್‌ ತಪಾಸಣೆ ಕುರಿತು ಸಮಗ್ರ ತನಿಖೆಗೆ ಆದೇಶ

ತನಿಖೆ ನಡೆಸಿ ಎರಡು ವಾರದಲ್ಲಿ ವರದಿ ನೀಡಲು ಡಿಜಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶ ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೆ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಪೊಲೀಸರು ಕಾನೂನು ಸುವ್ಯವಸ್ಥೆ ಪಾಲಿಸುವ ನೆಪದಲ್ಲಿ ಪುತ್ತೂರು ಸೇರಿದಂತೆ ವಿವಿಧೆಡೆ ಹಿಂದೂ ಮುಖಂಡರ, ಕಾರ್ಯಕರ್ತರ ಮನೆಗಳಿಗೆ ರಾತ್ರೋರಾತ್ರಿ ತೆರಳಿ ವಿಚಾರಣೆ ನಡೆಸಿದ್ದ ಕುರಿತು ಸಮಗ್ರ ತನಿಖೆ ನಡೆಸಿ ಎರಡು ವಾರಗಳಲ್ಲಿ ವರದಿ ಸಲ್ಲಿಸುವಂತೆ ತನಿಖಾ ವಿಭಾಗದ ಡಿಜಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಆದೇಶ ಮಾಡಿದೆ. ಹಿಂದೂ

ಹಿಂದೂ ಮುಖಂಡರ ಮನೆಗಳಲ್ಲಿ ಮಧ್ಯರಾತ್ರಿ ಪೊಲೀಸ್‌ ತಪಾಸಣೆ ಕುರಿತು ಸಮಗ್ರ ತನಿಖೆಗೆ ಆದೇಶ Read More »

ಬಂಟ್ವಾಳ : ಹೊಂಡಕ್ಕೆ ಬಿದ್ದು ಯುವಕ ಸಾವು

ಬಂಟ್ವಾಳ : ನಾಪತ್ತೆಯಾಗಿದ್ದ ಯುವಕನ ಮೃತದೇಹ ರಸ್ತೆ ಬದಿಯ ಕೃಷಿ ಹೊಂಡದಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ಯುವಕನನ್ನು ಅಮ್ಮುಂಜೆ ಗ್ರಾಮದ ಬೆಂಜನಪದವು ಕಂಬಳ ಮನೆಯ ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಸಾಗರ್ (28) ಎಂದು ಗುರುತಿಸಲಾಗಿದೆ. ಕಾಲುಜಾರಿ ಹೊಂಡಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಸಂಶಯಿಸಲಾಗಿದೆ. ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ತಾಯಿಯ ಜೊತೆ ಬಿ.ಸಿ.ರೋಡಿಗೆ ಔಷಧಿ ತರಲೆಂದು ಅಟೋರಿಕ್ಷಾದಲ್ಲಿ ತೆರಳಿದ್ದರು. ವಾಪಾಸು ಬರುವಾಗ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಸಾಗರ್ ಇಳಿದಿದ್ದು, ಬಳಿಕ ಮನೆಗೆ

ಬಂಟ್ವಾಳ : ಹೊಂಡಕ್ಕೆ ಬಿದ್ದು ಯುವಕ ಸಾವು Read More »

error: Content is protected !!
Scroll to Top