ಅಪರಾಧ

ಮಣಿಪುರ : 10 ಉಗ್ರರು ಎನ್‌ಕೌಂಟರ್‌ನಲ್ಲಿ ಸಾವು

ಅಪಾರ ಶಸ್ತ್ರಾಸ್ತ್ರ ವಶ; ಮುಂದುವರಿದ ಕಾರ್ಯಾಚರಣೆ ಇಂಫಾಲ: ಮಣಿಪುರದ ಚಾಂದೆಲ್‌ ಜಿಲ್ಲೆಯಲ್ಲಿ ಬುಧವಾರ ಅಸ್ಸಾಂ ರೈಫಲ್ಸ್ ಘಟಕದ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ 10 ಉಗ್ರರು ಸಾವನ್ನಪ್ಪಿದ್ದಾರೆ. ಕಾರ್ಯಾಚರಣೆ ಇನ್ನೂ ಮುಂದುವರಿದಿದೆ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತ-ಮ್ಯಾನ್ಮಾರ್ ಗಡಿಗೆ ಸಮೀಪವಿರುವ ಚಾಂದೆಲ್ ಜಿಲ್ಲೆಯ ಖೆಂಗ್‌ಜಾಯ್ ತಹಸಿಲ್‌ನ ನ್ಯೂ ಸಮ್ತಾಲ್ ಗ್ರಾಮದ ಬಳಿ ಸಶಸ್ತ್ರ ಹೊಂದಿದ್ದ ವ್ಯಕ್ತಿಗಳ ಚಲನವಲನಗಳ ಬಗ್ಗೆ ನಿರ್ದಿಷ್ಟ ಗುಪ್ತಚರ ಮಾಹಿತಿಯ ಮೇರೆಗೆ ಸ್ಪಿಯರ್ ಕಾರ್ಪ್ಸ್ ಅಡಿಯಲ್ಲಿ ಅಸ್ಸಾಂ ರೈಫಲ್ಸ್ ಘಟಕ ಮೇ 14ರಂದು […]

ಮಣಿಪುರ : 10 ಉಗ್ರರು ಎನ್‌ಕೌಂಟರ್‌ನಲ್ಲಿ ಸಾವು Read More »

ಇನ್ನೋರ್ವ ಉಗ್ರನ ಬಲಿ : ನಸುಕಿನ ಹೊತ್ತು ನಡೆದ ಎನ್‌ಕೌಂಟರ್‌

ಮೂವರು ಭಯೋತ್ಪಾದಕರ ಬೇಟೆಗೆ ತೀವ್ರ ಕಾರ್ಯಾಚರಣೆ ಶ್ರೀನಗರ : ಭದ್ರತಾ ಪಡೆಗಳು ಕಾಶ್ಮೀರದಲ್ಲಿ ಇನ್ನೋರ್ವ ಉಗ್ರನನ್ನು ಬೇಟೆಯಾಡಿವೆ. ಗುರುವಾರ ನಸುಕಿನ ಹೊತ್ತು ನಡೆದ ಗುಂಡಿನ ಕಾಳದಗದಲ್ಲಿ ಓರ್ವ ಉಗ್ರ ಸತ್ತಿದ್ದು, ಹೋರಾಟ ನಡೆಯುತ್ತಿದೆ. ಪುಲ್ವಾಮ ಜಿಲ್ಲೆಯ ತ್ರಾಲ್‌ನ ನಾದಿರ್‌ ಎಂಬಲ್ಲಿ ಎನ್‌ಕೌಂಟರ್‌ ನಡೆಯುತ್ತಿದೆ. ಜೈಶ್‌ ಇ ಮೊಹಮ್ಮದ್‌ ಉಗ್ರ ಸಂಘಟನೆಯ ಮೂವರು ಉಗ್ರರು ಇಲ್ಲಿ ಅಡಗಿರುವ ಮಾಹಿತಿ ಸಿಕ್ಕಿ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಓರ್ವ ಸತ್ತಿದ್ದು, ಇನ್ನಿಬ್ಬರ ಬೇಟೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಭದ್ರತಾ ಪಡೆ ಮೂಲಗಳು ತಿಳಿಸಿವೆ.

ಇನ್ನೋರ್ವ ಉಗ್ರನ ಬಲಿ : ನಸುಕಿನ ಹೊತ್ತು ನಡೆದ ಎನ್‌ಕೌಂಟರ್‌ Read More »

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ : ಮತ್ತೆ ಮೂವರು ಆರೋಪಿಗಳ ಬಂಧನ

ಹತ್ಯೆಯಲ್ಲಿ ನೇರವಾಗಿ ಭಾಗಿಯಾದ ಆರೋಪಿಗಳು ಮಂಗಳೂರು: ಬಜ್ಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ಕಳವಾರು ನಿವಾಸಿ ಅಜರುದ್ದೀನ್ ಅಲಿಯಾಸ್​ ಅಜರ್ ಅಲಿಯಾಸ್​ ಅಜ್ಜು(29), ಬಜಪೆ ನಿವಾಸಿ ಅಬ್ದುಲ್ ಖಾದರ್ ಅಲಿಯಾಸ್​ ನೌಫಲ್(24), ವಾಮಂಜೂರು ನಿವಾಸಿ ನೌಷದ್ ಅಲಿಯಾಸ್​ ವಾಮಂಜೂರು ನೌಷದ್ ಅಲಿಯಾಸ್​ ಚೊಟ್ಟೆ ನೌಷದ್(39) ಬಂಧಿತರು. ಅಜರುದ್ದೀನ್ ವಿರುದ್ಧ ಈ ಹಿಂದೆ ಪಣಂಬೂರು, ಸುರತ್ಕಲ್, ಮುಲ್ಕಿ ಪೊಲೀಸ್ ರಾಣೆಗಳಲ್ಲಿ ಮೂರು ಕಳವು

ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣ : ಮತ್ತೆ ಮೂವರು ಆರೋಪಿಗಳ ಬಂಧನ Read More »

ಹೋಟೆಲ್ ಪಾರ್ಕಿಂಗ್’ಗೆ ಪೊಲೀಸ್ ಬ್ಯಾರಿಕೇಡ್

ಪುತ್ತೂರು: ಪುತ್ತೂರು ಕೆ.ಎಸ್.ಆರ್‍.ಟಿ.ಸಿ ಬಸ್ ನಿಲ್ದಾಣದ ಬಳಿ ಇರುವ  ಹೋಟೆಲ್‍ ಪಾರ್ಕಿಂಗಿಗೆ ಪೊಲೀಸ್‍ ಬ್ಯಾರಿಕೇಡ್‍ ಇಡಲಾಗಿದೆ. ಪೊಲೀಸ್ ಬ್ಯಾರಿಕೇಡ್ ಇಟ್ಟಿರುವುದು ಇದೀಗ ಚರ್ಚೆಗೆ ದಾರಿ ಮಾಡಿದೆ ಎಂದರೆ ತಪ್ಪಾಗಲಾರದು. ಸಾಮಾನ್ಯವಾಗಿ ಪೊಲೀಸ್ ಬ್ಯಾರಿಕೇಡ್ ಬಳಕೆಯಾಗುವುದು ಎಲ್ಲಿ? ಸಾರ್ವಜನಿಕ ಸ್ಥಳದಲ್ಲಿ ಮತ್ತು ಸಾರ್ವಜನಿಕ ಬಳಕೆಗಾಗಿ. ಆದರೆ ಇಲ್ಲಿ ಖಾಸಗಿ ಸಂಸ್ಥೆಯೊಂದರ ಪಾರ್ಕಿಂಗ್’ಗೆ ಬ್ಯಾರಿಕೇಡ್ ಬಳಸಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಮೂಡಿದೆ. ಪೊಲೀಸ್ ಇಲಾಖೆಯೇ ಈ ಬ್ಯಾರಿಕೇಡ್ ಇಟ್ಟಿದೆಯೋ ಅಥವಾ ಪೊಲೀಸ್ ಇಲಾಖೆಯ ಗಮನಕ್ಕೆ ಬಾರದೇ ಈ ಬ್ಯಾರಿಕೇಡ್

ಹೋಟೆಲ್ ಪಾರ್ಕಿಂಗ್’ಗೆ ಪೊಲೀಸ್ ಬ್ಯಾರಿಕೇಡ್ Read More »

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್‍ ಬುಕ್‍ ನಲ್ಲಿ ಅವಹೇಳನಕಾರಿ ಪೋಸ್ಟ್ | ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರ ವಿರುದ್ಧ ಬಿಜೆಪಿಯಿಂದ ನಗರ ಠಾಣೆಗೆ ದೂರು

ಪುತ್ತೂರು: ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ  ವಿರುದ್ಧ ಫೇಸ್ ಬುಕ್ ನಲ್ಲಿ ಅವಹೇಳನಕಾರಿಯಾಗಿ ಪೋಸ್ಟ್ ಮಾಡಿದ್ದಾರೆ ಎಂದು ಆರೋಪಿಸಿ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಅವರ ವಿರುದ್ಧ ಪುತ್ತೂರು ಬಿಜೆಪಿಯಿಂದ ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಅವರ ನೇತೃತ್ವದಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನಿಯೋಗ ತೆರಳಿ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್‌ ಸ್ಪೆಕ್ಟರ್ ಜಾನ್ಸನ್ ಡಿಸೋಜ ಅವರಿಗೆ ದೂರು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಫೇಸ್‍ ಬುಕ್‍ ನಲ್ಲಿ ಅವಹೇಳನಕಾರಿ ಪೋಸ್ಟ್ | ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರರ ವಿರುದ್ಧ ಬಿಜೆಪಿಯಿಂದ ನಗರ ಠಾಣೆಗೆ ದೂರು Read More »

ಕರ್ನಲ್‌ ಸೋಫಿಯಾ ಖುರೇಷಿ ಮನೆ ಮೇಲೆ ದಾಳಿಯಾಗಿದೆ ಎಂದು ಸುದ್ದಿ ಹಬ್ಬಿಸಿದ ಕಿಡಿಗೇಡಿ

ಬೆಳಗಾವಿಯ ಬಾಗೇವಾಡಿಯಲ್ಲಿರುವ ಮನೆಗೆ ಪೊಲೀಸರ ಬಿಗು ಭದ್ರತೆ ಬೆಳಗಾವಿ: ಆಪರೇಷನ್ ಸಿಂದೂರ ಕಾರ್ಯಾಚರಣೆಯ ಬಗ್ಗೆ ಜಗತ್ತಿಗೆ ಮಾಹಿತಿ ನೀಡುತ್ತಿದ್ದ ಸೇನೆಯ ಉನ್ನತ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ಅವರ ಗಂಡನ ಮನೆ ಮೇಲೆ ದಾಳಿ ಮಾಡಲಾಗಿದೆ ಎಂಬ ಸುಳ್ಳು ಸುದ್ದಿ ಹಬ್ಬಿದ ಆರೋಪಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಈ ಬಗ್ಗೆ ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ್ ಸ್ಪಷ್ಟನೆ ಕೊಟ್ಟಿದ್ದು, ಯಾವುದೇ ಕಾರಣಕ್ಕೂ ಸುಳ್ಳು ಸುದ್ದಿಗಳಿಗೆ ಆಸ್ಪದ ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. ಅನೀಸ್ ಉದ್ದೀನ್ ಎಂಬ

ಕರ್ನಲ್‌ ಸೋಫಿಯಾ ಖುರೇಷಿ ಮನೆ ಮೇಲೆ ದಾಳಿಯಾಗಿದೆ ಎಂದು ಸುದ್ದಿ ಹಬ್ಬಿಸಿದ ಕಿಡಿಗೇಡಿ Read More »

ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಬಂಟ್ವಾಳ: ಮಗನ ಮದುವೆಗೆಂದು ಖರೀದಿಸಿ ಬ್ಯಾಗಿನಲ್ಲಿಟ್ಟಿದ್ದ ಚಿನ್ನಾಭರಣ ದೇವಸ್ಥಾನಕ್ಕೆ ಹೋಗಿ ಬರುವಷ್ಟರಲ್ಲಿ ಕಳವಾಗಿರುವ ಘಟನೆ ಪೊಳಲಿ ದೇವಸ್ಥಾನ ವಠಾರದಲ್ಲಿ ನಡೆದಿದೆ. ಅಮ್ಮಾಡಿ ಗ್ರಾಮದ ಕಾಯರ್ ಮಾರ್ ನಿವಾಸಿ ಗೀತಾ (63)  ಮೇ 18 ರಂದು ಮಗನ ಮದುವೆ ಇರುವ ಪ್ರಯುಕ್ತ ಶನಿವಾರ 3,99,500/- ರೂಪಾಯಿ ಮೌಲ್ಯದ 41.800 ಗ್ರಾಂ ತೂಕದ ಪದಕ ಇರುವ ಕರಿಮಣಿ ಸರ ಹಾಗೂ 1 ಲಕ್ಷ ರೂಪಾಯಿ ಮೌಲ್ಯದ 9.820 ಗ್ರಾಂ ತೂಕದ ಚಿನ್ನದ ಬಳೆ ಖರೀದಿಸಿ ಸಂಪ್ರದಾಯದಂತೆ ದೇವರಲ್ಲಿ ಚಿನ್ನ ಇಟ್ಟು

ಮಗನ ಮದುವೆಗೆ ಖರೀದಿಸಿದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು Read More »

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದನ ಕಳ್ಳರು

ಚಿಕ್ಕಮಗಳೂರಿನ ಕಡೂರಿನಲ್ಲಿ ಸಂಭವಿಸಿದ ಕೃತ್ಯಕ್ಕೆ ಭಾರಿ ಆಕ್ರೋಶ ಚಿಕ್ಕಮಗಳೂರು : ಬೆಂಗಳೂರು ಮಾದರಿಯಲ್ಲೇ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ದನದ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಘಟನೆ ಬೆಳಕಿಗೆ ಬಂದಿದ್ದು, ವಿಪರೀತ ರಕ್ತ ಸೋರಿಕೆಯಾಗಿ ದನ ಮೃತಪಟ್ಟಿದೆ. ಚಿಕ್ಕಮಗಳೂರಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ಎಸಗಲಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಹಸು ಮೃತಪಟ್ಟಿದೆ.ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ತಮ್ಮಿಹಳ್ಳಿಯಲ್ಲಿ ಶೇಖರಪ್ಪ ಎಂಬವರಿಗೆ ಸೇರಿದ ಹಸುವನ್ನು ರಾತ್ರೋರಾತ್ರಿ ಕಳವು ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಆದರೆ ಕಳ್ಳತನ ಯತ್ನ ವಿಫಲವಾದಾಗ ರೋಷದಿಂದ

ಹಸುವಿನ ಕೆಚ್ಚಲು ಕೊಯ್ದು ವಿಕೃತಿ ಮೆರೆದ ದನ ಕಳ್ಳರು Read More »

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸೆರೆ

ಉಡುಪಿ: ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಘಟನೆ ಬಲಾಯಿಪಾದೆ ಜಂಕ್ಷನ್ ಬಳಿ ನಡೆದಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರಶಾಂತ್ ಹಾಗೂ ಪ್ರವೀಣ್ ಎಂದು ಪತ್ತೆಹಚ್ಚಲಾಗಿದೆ. ಆರೋಪಿಗಳಿಬ್ಬರ ಬಳಿ ಇದ್ದ ವಿವಿಧ ಬ್ಯಾಂಡ್‌ನ ಮದ್ಯದ ಸಾಚೇಟ್, ಬೀಯರ್ ಬಾಟಲ್, ನೀರಿನ ಬಾಟಲ್‌ಗಳು ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಸೆರೆ Read More »

ಭದ್ರತಾ ಪಡೆ ಗುಂಡಿಗೆ ಓರ್ವ ಉಗ್ರ ಬಲಿ

ಶೋಪಿಯಾನ್‌ನಲ್ಲಿ ಭದ್ರತಾ ಪಡೆಗೆ ಮುಖಾಮುಖಿಯಾದ ಉಗ್ರರ ತಂಡ ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ಜಿನ್‌ಪತೆರ್‌ ಎಂಬಲ್ಲಿ ಭದ್ರತಾ ಪಡೆಗೆ ಭಯೋತ್ಪಾದಕರು ಇಂದು ಬೆಳಗ್ಗೆ ಮುಖಾಮುಖಿಯಗಿದ್ದು, ಈ ಸಂದರ್ಭದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಸತ್ತಿದ್ದಾನೆ. ಇನ್ನೂ ಹಲವು ಉಗ್ರರು ಇಲ್ಲಿದ್ದು, ತೀವ್ರ ಗುಂಡಿನ ಕಾಳಗ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಉಗ್ರರು ಲಷ್ಕರ್‌ ಎ ತೈಬಾ ಸಂಘಟನೆಗೆ ಸೇರಿದವರು. ಇಬ್ಬರು ಉಗ್ರರನ್ನು ಭದ್ರತಾ ಪಡೆ ಸುತ್ತುವರಿದಿದೆ. ಎನ್‌ಕೌಂಟರ್‌ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿವರವಾದ ಮಾಹಿತಿ

ಭದ್ರತಾ ಪಡೆ ಗುಂಡಿಗೆ ಓರ್ವ ಉಗ್ರ ಬಲಿ Read More »

error: Content is protected !!
Scroll to Top