ಅಪರಾಧ

ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ: ಆರೋಪಿಗಳು ಪೊಲೀಸರ ವಶಕ್ಕೆ

ಶಿವಮೊಗ್ಗ: ಮನೆಯ ಮುಂದೆ ಕಸ ಹಾಕದಂತೆ‌ ಸೂಚಿಸಿದ ‌ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ಸಾಗರದ ಗೌತಮಪುರ ಗ್ರಾಮದಲ್ಲಿ ನಡೆದಿದೆ. ಹಲ್ಲೆಗೊಳಗಾದ ಮಹಿಳೆಯನ್ನು ಹುಚ್ಚಮ್ಮ (67) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಪ್ರೇಮ, ಆಕೆಯ ಪತಿ ಮಂಜುನಾಥ್, ಪುತ್ರ  ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ. ಕಳೆದ ಜೂ. 24 ರಂದು ಹುಚ್ಚಮ್ಮ ಅವರು ತಮ್ಮ ಮನೆಯ ಮುಂದೆ ಕಸ ಎಸೆಯದಂತೆ ನೆರೆಮನೆಯ ಪ್ರೇಮ ಅವರಿಗೆ ಹೇಳಿದ್ದಾರೆ. ಇದರಿಂದ ಸಿಟ್ಟಾದ ಪ್ರೇಮ ಅವರು ಹುಚ್ಚಮ್ಮ ಅವರನ್ನು ಮನೆಯಿಂದ […]

ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ: ಆರೋಪಿಗಳು ಪೊಲೀಸರ ವಶಕ್ಕೆ Read More »

ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಎತ್ತಿನ ಭುಜ ಚಾರಣಕ್ಕೆ ನಿರ್ಬಂಧ

ಚಿಕ್ಕಮಗಳೂರು: ನಿರಂತರವಾಗಿ ಸುರಿಯುತ್ತಿರುವ ಮಳೆ ಮತ್ತು ಮಂಜು ಕವಿಯುತ್ತಿರುವ ಕಾರಣದಿಂದ ಎತ್ತಿನ ಭುಜ ಪ್ರವಾಸಿ ತಾಣಕ್ಕೆ ಜನರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಅರಣ್ಯ ಇಲಾಖೆ, ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದೆ. ದೇಶ ವಿದೇಶಗಳ ಪ್ರವಾಸಿಗರು ಎತ್ತಿನ ಭುಜಕ್ಕೆ ಚಾರಣಕ್ಕೆ ಬರುತ್ತಾರೆ. ಮಳೆಗಾಲದಲ್ಲಿ ಪ್ರವಾಸಿಗರಿಗೆ ಅನಾಹುತ ಎದುರಾದರೆ ಅವರನ್ನು ರಕ್ಷಣೆ ಮಾಡುವುದು ಕಷ್ಟಸಾಧ್ಯವಾಗುತ್ತದೆ. ಎತ್ತಿನ ಭುಜದ ಮೇಲ್ಭಾಗಕ್ಕೆ ಯಾವುದೇ ವಾಹನಗಳ ಸಂಚಾರ ಇಲ್ಲ. ಹಾಗಾಗಿ ಪ್ರವಾಸಿಗರಿಗೆ ಅಪಾಯವಾದರೆ

ಸುರಕ್ಷತಾ ದೃಷ್ಟಿಯಿಂದ ಪ್ರವಾಸಿಗರಿಗೆ ಎತ್ತಿನ ಭುಜ ಚಾರಣಕ್ಕೆ ನಿರ್ಬಂಧ Read More »

ಮಂಗಳೂರು: ತನ್ನದೇ ಬ್ಯಾಂಕಿನಿಂದ 6.5 ಕೆಜಿ ಚಿನ್ನ ಕದ್ದ ಮ್ಯಾನೇಜರ್‌

ಕದ್ದ ಚಿನ್ನವನ್ನು ಇನ್ನೊಂದು ಬ್ಯಾಂಕಿನಲ್ಲಿ ಅಡವಿಟ್ಟು ಸಾಲ ಪಡೆದು ವಂಚನೆ ಮಂಗಳೂರು : ಬ್ಯಾಂಕ್‌ ಮ್ಯಾನೇಜರ್‌ ಒಬ್ಬ ತನ್ನದೇ ಬ್ಯಾಂಕಿನಿಂದ 6.5 ಕೆಜಿಯಷ್ಟು ಚಿನ್ನ ಕದ್ದು ಅದನ್ನು ಇನ್ನೊಂದು ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ. ಶಕ್ತಿನಗರ ವ್ಯವಸಾಯ ಸೇವಾ ಸಹಕಾರಿ ಸಂಘದ ಮ್ಯಾನೇಜರ್‌ ಗ್ರಾಹಕರು ತನ್ನ ಬ್ಯಾಂಕಿನಲ್ಲಿ ಅಡವಿಟ್ಟಿದ್ದ 6.5 ಕೆಜಿ ಚಿನ್ನಾಭರಣಗಳನ್ನು ಕದ್ದು, ಕೋ-ಆಪರೇಟಿವ್‌ ಸೊಸೈಟಿ ಒಂದರಲ್ಲಿ ಅಡವಿಟ್ಟು 3.5 ಕೋಟಿ ರೂ. ಸಾಲ ಪಡೆದಿದ್ದಾನೆ. ಮಂಗಳೂರಿನ ಶಕ್ತಿನಗರದ ಪದುವಾ ವ್ಯವಸಾಯ

ಮಂಗಳೂರು: ತನ್ನದೇ ಬ್ಯಾಂಕಿನಿಂದ 6.5 ಕೆಜಿ ಚಿನ್ನ ಕದ್ದ ಮ್ಯಾನೇಜರ್‌ Read More »

ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ

ಮಂಗಳೂರು: ಬಂಟ್ವಾಳದಲ್ಲಿ ಹಾಡಹಗಲೇ ನಡೆದ ಅಬ್ದುಲ್ ರಹಿಮಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದಾರೆ. ಬಂಟ್ವಾಳ ತುಂಬೆ ಗ್ರಾಮದ ನಿವಾಸಿ ಶಿವಪ್ರಸಾದ್ (33) ಬಂಧಿತ ಆರೋಪಿ. ಈಗಾಗಲೇ ಪ್ರಕರಣ ಸಂಬಂಧ ಬಂಟ್ವಾಳದ ಕುರಿಯಾಳ ನಿವಾಸಿ ದೀಪಕ್ (21), ಅಮ್ಮುಂಜೆ ನಿವಾಸಿ ಪೃಥ್ವಿರಾಜ್ (21), ಅಮ್ಮುಂಜೆ ನಿವಾಸಿ ಚಿಂತನ್ (19), ಸುಮಿತ್, ರವಿರಾಜ್ ಸೇರಿ 9 ಆರೋಪಿಗಳನ್ನು ಬಂಧಿಸಲಾಗಿದೆ. ಬಂಟ್ವಾಳದ ರಾಯಿ ಎಂಬಲ್ಲಿ ಆರೋಪಿ ಶಿವಪ್ರಸಾದ್‌ನನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಕೋರ್ಟ್

ಅಬ್ದುಲ್‌ ರಹಿಮಾನ್‌ ಹತ್ಯೆ ಪ್ರಕರಣ : ಇನ್ನೋರ್ವ ಆರೋಪಿ ಸೆರೆ Read More »

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಜು.3 ಕ್ಕೆ

ಪುತ್ತೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ನಡೆಸಿ ಯುವತಿಯನ್ನು ಗರ್ಭ ವತಿಯನ್ನಾಗಿಸಿ ವಂಚಿಸಿರುವ ಪ್ರಕರಣದ ಅರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜು.3ಕ್ಕೆ ಮುಂದೂಡಲಾಗಿದೆ ಪುತ್ತೂರು ಬಪ್ಪಳಿಗೆ ನಿವಾಸಿ ಶ್ರೀಕೃಷ್ಣ ಜಿ. ರಾವ್ (21) ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಯಾರೂ ಇಲ್ಲದ ವೇಳೆ ಆತನ ಮನೆಗೆ ಕರೆಸಿಕೊಂಡು ಬಲವಂತದ ದೈಹಿಕ ಸಂಪರ್ಕ ಬೆಳೆಸಿ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವುದಾಗಿ ಸಂತ್ರಸ್ತ ನೀಡಿದ್ದ ದೂರಿನ ಮೇರೆಗೆ ಆರೋಪಿ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ | ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಜು.3 ಕ್ಕೆ Read More »

ತೆಲಂಗಾಣ ಕಾರ್ಖಾನೆ ಸ್ಫೋಟ : ಮೃತರ ಸಂಖ್ಯೆ 35ಕ್ಕೇರಿಕೆ

ಫಾರ್ಮಾ ಕಂಪನಿಯ ರಿಯಾಕ್ಟರ್‌ ಸ್ಫೋಟಿಸಿ ಭೀಕರ ದುರಂತ ಹೈದರಾಬಾದ್: ಸಿಗಾಚಿ ಇಂಡಸ್ಟ್ರೀಸ್‌ನ ಪಾಶಮೈಲಾರಂನಲ್ಲಿರುವ ಔಷಧ ಘಟಕದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸಾವನ್ನಪ್ಪಿದವರ ಸಂಖ್ಯೆ 35ಕ್ಕೆ ಏರಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳವಾರ ದೃಢಪಡಿಸಿದ್ದಾರೆ. ಅವಶೇಷಗಳಿಂದ 31 ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಮೂವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಿತೋಷ್ ಪಂಕಜ್ ತಿಳಿಸಿದ್ದಾರೆ. ಪಾಶಮೈಲಾರಂ ಕೈಗಾರಿಕಾ ಪ್ರದೇಶದಲ್ಲಿರುವ ಸಿಗಾಚಿ ಫಾರ್ಮಾ ಕಂಪನಿಯ ರಿಯಾಕ್ಟರ್‌ನಲ್ಲಿ ನಿನ್ನೆ ರಾಸಾಯನಿಕ ವಸ್ತುವಿಗೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ.

ತೆಲಂಗಾಣ ಕಾರ್ಖಾನೆ ಸ್ಫೋಟ : ಮೃತರ ಸಂಖ್ಯೆ 35ಕ್ಕೇರಿಕೆ Read More »

ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ ಎದೆ ಒಣಗಿ ಸತ್ತ ಪಾಕಿಸ್ತಾನದ ಯುವ ಜೋಡಿ

ಅಕ್ರಮವಾಗಿ ನುಸುಳಿ ಬರುವ ದುಸ್ಸಾಹಸ ಪ್ರಾಣಕ್ಕೆ ಎರವಾಯಿತು ಜೈಪುರ: ಪಾಕಿಸ್ತಾನ ಮೂಲದ ಹಿಂದೂ ಧರ್ಮದ ಯುವಕ ಮತ್ತು ಯುವತಿಯ ಮೃತದೇಹ ಭಾರತ-ಪಾಕ್‌ ಅಂತಾರಾಷ್ಟ್ರೀಯ ಗಡಿ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ. ಮೃತದೇಹದ ಪಕ್ಕದಲ್ಲಿ ಗುರುತಿನ ಚೀಟಿಯೂ ಕಂಡು ಬಂದಿದೆ. ಜೈಸಲ್ಮೇರ್‌ನ ಭಾರತ-ಪಾಕಿಸ್ತಾನ ಗಡಿಯ ಬಳಿಯ ಮರಳು ದಿಬ್ಬಗಳಲ್ಲಿ ಪತ್ತೆಯಾದ ಯುವಕ ಮತ್ತು ಅಪ್ರಾಪ್ತೆಯ ಮೃತದೇಹಗಳು ಕೊಳೆತ ಸ್ಥಿತಿಯಲ್ಲಿದ್ದವು. ಶವದ ಸ್ಥಿತಿ ನೋಡಿದರೆ ಇವರು ಮೃತಪಟ್ಟು ವಾರ ಕಳೆದಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕುಡಿಯಲು

ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ ಎದೆ ಒಣಗಿ ಸತ್ತ ಪಾಕಿಸ್ತಾನದ ಯುವ ಜೋಡಿ Read More »

ರಸ್ತೆಯಲ್ಲಿ ಗೋವಿನ ರುಂಡ ಪತ್ತೆ ಪ್ರಕರಣ : ಆರು ಆರೋಪಿಗಳು ಸೆರೆ

ಗೋಮಾಂಸ ಸಾಗಿಸಲು ಬಳಸಿದ್ದ ಕಾರು, ಸ್ಕೂಟಿ ವಶ ಉಡುಪಿ : ಬ್ರಹ್ಮಾವರ ತಾಲೂಕಿನ ಕುಂಜಾಲುವಿನಲ್ಲಿ ಹಸುವಿನ ರುಂಡ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬ್ರಹ್ಮಾವರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲೆಮೆರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಕೇಶವ, ರಾಮಣ್ಣ, ನವೀನ್, ಪ್ರಸಾದ್, ರಾಜೇಶ್, ಸಂದೇಶ್‌ ಬಂಧಿತರು. ಕುಂಜಾಲು ರಾಮ ಮಂದಿರದ ಬಳಿ ಶನಿವಾರ ತಡರಾತ್ರಿ ಗೋವಿನ ರುಂಡ ಪತ್ತೆಯಾದ ಘಟನೆ ಜಿಲ್ಲೆಯಲ್ಲಿ ಭಾರಿ ಸಂಚಲನವುಂಟು ಮಾಡಿತ್ತು. ಹಿಂದು ಸಂಘಟನೆಗಳು ಹೋರಾಟದ ಎಚ್ಚರಿಕೆ ನೀಡಿದ

ರಸ್ತೆಯಲ್ಲಿ ಗೋವಿನ ರುಂಡ ಪತ್ತೆ ಪ್ರಕರಣ : ಆರು ಆರೋಪಿಗಳು ಸೆರೆ Read More »

ಮನೆಗೆ ಕರೆಸಿ ಬಲವಂತವಾಗಿ ದೈಹಿಕ ಸಂಪರ್ಕ | ಮಗುವಿಗೆ ಜನ್ಮ ನೀಡಿದ ಯುವತಿ | ಪತ್ರಿಕಾಗೋಷ್ಠಿಯಲ್ಲಿ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದ ಸಂತ್ರಸ್ತೆಯ ತಾಯಿ

ಪುತ್ತೂರು: ನಮಗೆ ನ್ಯಾಯ ದೊರಕಿಸಿಕೊಡುವಂತೆ ಹಿಂದೂ ಮುಖಂಡರು ಸೇರಿದಂತೆ ಪುತ್ತೂರು ಮಹಿಳಾ ಠಾಣೆಗೂ ನಾವು ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ನಮ್ಮ ಮಗಳಿಗೆ ಆದ ಅನ್ಯಾಯಕ್ಕೆ ಯಾರು ತಲೆಕೆಡಿಸುತ್ತಿಲ್ಲ. ನಮಗೆ ನ್ಯಾಯ ದೊರೆಯದಿದ್ದಲ್ಲಿ ನಾವು ಯಾವುದೇ ಆಮಿಷಗಳಿಗೆ ಬಗ್ಗುವುದಿಲ್ಲ, ಎಲ್ಲಾ ರೀತಿಯ ಹೋರಾಟಕ್ಕೂ ಸಿದ್ಧ ಎಂದು ಇತ್ತೀಚೆಗೆ ಬಿಜೆಪಿ ಮುಖಂಡರೊಬ್ಬರ ಪುತ್ರನಿಂದ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ್ದ ಸಂತ್ರಸ್ತೆಯ ತಾಯಿ ತಿಳಿಸಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೂ ಮುಖಂಡರೊಬ್ಬರು 10 ಲಕ್ಷ ರೂ.

ಮನೆಗೆ ಕರೆಸಿ ಬಲವಂತವಾಗಿ ದೈಹಿಕ ಸಂಪರ್ಕ | ಮಗುವಿಗೆ ಜನ್ಮ ನೀಡಿದ ಯುವತಿ | ಪತ್ರಿಕಾಗೋಷ್ಠಿಯಲ್ಲಿ ನಮಗೆ ನ್ಯಾಯ ದೊರಕಿಸಿ ಕೊಡಿ ಎಂದ ಸಂತ್ರಸ್ತೆಯ ತಾಯಿ Read More »

ಗೋವಿನ ರುಂಡ ನಡುರಸ್ತೆಯಲ್ಲಿ ಎಸೆದ ಕಟುಕರು : ಹಿಂದೂ ಸಂಘಟನೆಗಳಿಂದ ಆಕ್ರೋಶ

ಉಡುಪಿ ಸಮೀಪ ಬ್ರಹ್ಮಾವರದ ಕುಂಜಾಲಿನಲ್ಲಿ ನಡೆದ ಘಟನೆ ಉಡುಪಿ: ಜಿಲ್ಲೆಯ ಬ್ರಹ್ಮಾವರ ಕುಂಜಾಲು ಮುಖ್ಯರಸ್ತೆಯಲ್ಲಿ ದನವನ್ನು ಕಡಿದು ರುಂಡ ಎಸೆದು ಹೋಗಿರುವ ಅಮಾನವೀಯ ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಉಡುಪಿ ಶಾಸಕ ಯಶ್‌ಪಾಲ್‌ ಸುವರ್ಣ ಮತ್ತು ಹಲವು ಹಿಂದೂ ಮುಖಂಡರು ಈ ಘಟನೆಯ ಬಗ್ಗೆ ತನಿಖೆ ನಡೆಸಲು ಆಗ್ರಹಿಸಿದ್ದಾರೆ. ಶನಿವಾರ ರಾತ್ರಿ ಸುಮಾರು 11.30 ಸಮಯದಲ್ಲಿ ಗೋವಿನ ರುಂಡ ಹಾಗೂ ದೇಹದ ಭಾಗಗಳು ಬ್ರಹ್ಮಾವರ ಕುಂಜಾಲು ಮುಖ್ಯರಸ್ತೆಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸಲು

ಗೋವಿನ ರುಂಡ ನಡುರಸ್ತೆಯಲ್ಲಿ ಎಸೆದ ಕಟುಕರು : ಹಿಂದೂ ಸಂಘಟನೆಗಳಿಂದ ಆಕ್ರೋಶ Read More »

error: Content is protected !!
Scroll to Top