ಅಪರಾಧ

ಮಹಾಕುಂಭಮೇಳದಲ್ಲಿ ಬೆಂಕಿ ಅವಘಡ : ಉನ್ನತ ತನಿಖೆಗೆ ಆದೇಶ

ಸಿಲಿಂಡರ್‌ಗಳು ಸ್ಫೋಟಿಸಿ ಕನಿಷ್ಠ 25 ಟೆಂಟ್‌ಗಳು ಭಸ್ಮ ಪ್ರಯಾಗ್‌ರಾಜ್‌: ಮಹಾಕುಂಭಮೇಳ ನಡೆಯುವ ಸ್ಥಳದಲ್ಲಿ ಸಾಧುಗಳಿಗೆ ತಂಗಲು ನಿರ್ಮಿಸಿದ್ದ ಕನಿಷ್ಠ 25 ಟೆಂಟ್‌ಗಳು ನಿನ್ನೆ ಮಧ್ಯಾಹ್ನ ಸಂಭವಿಸಿದ ಭೀಕರ ಬೆಂಕಿ ದುರಂತದಲ್ಲಿ ಭಸ್ಮವಾಗಿವೆ. ಮಹಾಕುಂಭಮೇಳದ ಸೆಕ್ಟರ್ 19ರಲ್ಲಿ 2-3 ಸಿಲಿಂಡರ್‌ಗಳು ಸ್ಫೋಟಗೊಂಡು ಟೆಂಟ್‌ಗಳಿಗೆ ಬೆಂಕಿ ಹತ್ತಿಕೊಂಡಿತ್ತು. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ. ಟೆಂಟ್​ಗಳು ಮಾತ್ರ ಬೆಂಕಿಗೆ ಆಹುತಿಯಾಗಿವೆ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಯಾರಿಗೂ ಕೂಡ ಗಾಯಗಳಾಗಿಲ್ಲ. ಪರಿಸ್ಥಿತಿ ಹತೋಟಿಗೆ ತರಲಾಗಿದೆ ಎಂದು ಪ್ರಯಾಗ್​ರಾಜ್​​ ಎಡಿಜಿಪಿ ಭಾನು ಭಾಸ್ಕರ್ ತಿಳಿಸಿದ್ದಾರೆ. ಅಗ್ನಿ […]

ಮಹಾಕುಂಭಮೇಳದಲ್ಲಿ ಬೆಂಕಿ ಅವಘಡ : ಉನ್ನತ ತನಿಖೆಗೆ ಆದೇಶ Read More »

ಕೋಟೆಕಾರು ಬ್ಯಾಂಕ್‌ ದರೋಡೆ : ಸ್ಥಳೀಯ ವ್ಯಕ್ತಿಯ ಕೈವಾಡ ಶಂಕೆ

ಪಕ್ಕಾ ಪ್ಲಾನ್‌ ಮಾಡಿ ನಡೆಸಿದ ಪರ್ಫೆಕ್ಟ್‌ ದರೋಡೆ ಮಂಗಳೂರು: ಇಡೀ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿರುವ ಕೋಟೆಕಾರು ಸಹಕಾರಿ ಬ್ಯಾಂಕ್‌ ದರೋಡೆ ಕೃತ್ಯದ ಹಿಂದೆ ಸ್ಥಳೀಯರ ಕೈವಾಡವಿರುವ ಬಲವಾದ ಶಂಕೆ ವ್ಯಕ್ತವಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದು ಬಹಳ ವ್ಯವಸ್ಥಿತವಾಗಿ ಪ್ಲಾನ್‌ ರೂಪಿಸಿ ಮಾಡಿದ ದರೋಡೆ. ಸ್ಥಳೀಯ ಎಲ್ಲ ವಿಚಾರಗಳನ್ನು ತಿಳಿದುಕೊಂಡು ಹಾಡಹಗಲೇ ದರೋಡೆ ಮಾಡಲಾಗಿದೆ. ಬ್ಯಾಂಕ್‌ ಇರುವ ಸ್ಥಳ, ಬ್ಯಾಂಕಿನಲ್ಲಿರುವ ಚಿನ್ನ ಮತ್ತು ನಗದು ಹಣದ ಮಾಹಿತಿ ಮತ್ತು ತಪ್ಪಿಸಿಕೊಳ್ಳುವ ದಾರಿ ತಿಳಿದವರು ಯಾರೋ

ಕೋಟೆಕಾರು ಬ್ಯಾಂಕ್‌ ದರೋಡೆ : ಸ್ಥಳೀಯ ವ್ಯಕ್ತಿಯ ಕೈವಾಡ ಶಂಕೆ Read More »

ಸೈಫ್‌ಗೆ ಇರಿದ ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರ

ಹಿಂದು ಹೆಸರು ಇಟ್ಟುಕೊಂಡು ನೌಕರಿಗೆ ಸೇರುತ್ತಿದ್ದ ಆರೋಪಿ ಮುಂಬಯಿ: ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಹತ್ಯಾಯತ್ನ ಮಾಡಿದ ವ್ಯಕ್ತಿಯನ್ನು ಘಟನೆ ನಡೆದ 70 ಗಂಟೆಗಳ ಬಳಿಕ ಮುಂಬಯಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳ್ಳಂಬೆಳಗ್ಗೆ ಥಾಣೆಯಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ವಿಚಾರಣೆಯಿಂದ ಈತ ಬಾಂಗ್ಲಾದೇಶದ ಅಕ್ರಮ ನುಸುಳುಕೋರ ಎಂಬ ಮಾಹಿತಿ ಹೊರಬಿದ್ದಿದೆ.ಬಂಧಿತ ಆರೋಪಿ ಭಾರತೀಯನಲ್ಲ, ಬದಲಿಗೆ ಬಾಂಗ್ಲಾದೇಶದ ನುಸುಳುಕೋರ ಎಂಬ ಅನುಮಾನವಿದೆ ಎಂದು ಡಿಸಿಪಿ ದೀಕ್ಷಿತ್ ಗೆಡಾಮ್‌ ತಿಳಿಸಿದ್ದಾರೆ. ಆರೋಪಿ ಬಳಿ ಭಾರತಕ್ಕೆ ಸಂಬಂಧಿಸಿದ ಆಧಾರ್ ಕಾರ್ಡ್

ಸೈಫ್‌ಗೆ ಇರಿದ ಆರೋಪಿ ಬಾಂಗ್ಲಾದೇಶದ ಅಕ್ರಮ ನುಸುಳುಕೋರ Read More »

ಥೈರಾಯ್ಡ್‌, ಬಿಪಿ, ಶುಗರ್‌ನಿಂದ ಬಳಲುತ್ತಿದ್ದಾರೆ ಶರಣಾದ ನಕ್ಸಲರು

ವೈದ್ಯಕೀಯ ಪರೀಕ್ಷೆ ವೇಳೆ ತೀವ್ರ ಆರೋಗ್ಯ ಸಮಸ್ಯೆಯಿರುವುದು ಪತ್ತೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಇತ್ತೀಚೆಗೆ ಶರನಾಗಿರುವ ಮಲೆನಾಡಿನ ಆರು ನಕ್ಸಲರು ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಆರು ನಕ್ಸಲರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆಗೆ ಒಳಪಡಿಸಲಾಗಿದೆ. ಈ ವೇಳೆ ಅವರು ವೈದ್ಯರ ಬಳಿ ತಮ್ಮ ಅನಾರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ತನಿಖಾಧಿಕಾರಿ ಕೊಪ್ಪದ ಡಿವೈಎಸ್ಪಿ ಬಾಲಾಜಿ ಸಿಂಗ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತಿನಲ್ಲಿ ನಕ್ಸಲರನ್ನು ಗುರುವಾರ ರಾತ್ರಿಯೇ

ಥೈರಾಯ್ಡ್‌, ಬಿಪಿ, ಶುಗರ್‌ನಿಂದ ಬಳಲುತ್ತಿದ್ದಾರೆ ಶರಣಾದ ನಕ್ಸಲರು Read More »

ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ : ಎಸ್‌ಐ ವಿರುದ್ಧ ಪತ್ನಿ ದೂರು

ಕಾಪು ಠಾಣೆಯಲ್ಲಿರುವಾಗ ಅನೈತಿಕ ಸಂಬಂಧವಿತ್ತು ಎಂದು ಆರೋಪಿಸಿದ ಪತ್ನಿ ಚಿಕ್ಕಮಗಳೂರು: ಕಳಸ ಪಿಎಸ್‌ಐ ನಿತ್ಯಾನಂದ ಗೌಡ ವಿರುದ್ಧ ಅವರ ಪತ್ನಿ ವರದಕ್ಷಿಣೆ ಕಿರುಕುಳ ಮತ್ತು ಅನೈತಿಕ ಸಂಬಂಧದ ಕುರಿತು ದೂರು ನೀಡಿದ್ದಾರೆ. ನ್ಯಾಯ ಕೇಳಿಕೊಂಡು ಪೊಲೀಸ್ ಠಾಣೆಗೆ ಬರುವ ಮಹಿಳೆಯರನ್ನು ನಿತ್ಯಾನಂದ ಗೌಡ ಶೋಷಿಸುತ್ತಾರೆ. ತನಗೆ50 ಲಕ್ಷ ರೂ. ವರದಕ್ಷಿಣೆ ತರಲು ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ಈ ದೂರಿನ ಆಧಾರದ ಮೇಲೆ ಎಸ್‌ಐ ನಿತ್ಯಾನಂದ ಗೌಡ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ

ವರದಕ್ಷಿಣೆ ಕಿರುಕುಳ, ಅನೈತಿಕ ಸಂಬಂಧ : ಎಸ್‌ಐ ವಿರುದ್ಧ ಪತ್ನಿ ದೂರು Read More »

ಸೈಫ್‌ ಅಲಿಖಾನ್‌ ಹಲ್ಲೆ ಪ್ರಕರಣ: ಕೊನೆಗೂ ನಿಜವಾದ ಆರೋಪಿ ಸೆರೆ

ಮುಂಬಯಿಯ ಪಕ್ಕದಲ್ಲೇ ಇದ್ದ ಆರೋಪಿ ಮುಂಬಯಿ: ಬಾಲಿವುಡ್‌ ನಟ ಸೈಫ್ ಅಲಿ ಖಾನ್‌ ಮನೆಗೆ ನುಗ್ಗಿ ನಟನಿಗೆ ಇರಿದು ಪಲಾಯನ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಕ್ಕದ ಥಾಣೆಯಲ್ಲೇ ಇದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ಬಾಂದ್ರಾ ಪೊಲೀಸ್‌ ಠಾಣೆಗೆ ತಂದು ಪ್ರಶ್ನಿಸಿದ್ದು, ಈ ವೇಳೆ ಆತ ತಾನು ಸೈಫ್‌ ಅಲಿ ಖಾನ್‌ ಮನೆಗೆ ನುಗ್ಗಿದ್ದನ್ನು ಒಪ್ಪಿಕೊಂಡಿದ್ದಾನೆ. ಮೂಲತಃ ಪಶ್ಚಿಮ ಬಂಗಾಳದವನಾದ ಆತ ಮುಂಬಯಿಯಲ್ಲಿ ಬೇರೆ ಬೇರೆ ಹೆಸರಿಟ್ಟುಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತ ಆರೋಪಿಯನ್ನು

ಸೈಫ್‌ ಅಲಿಖಾನ್‌ ಹಲ್ಲೆ ಪ್ರಕರಣ: ಕೊನೆಗೂ ನಿಜವಾದ ಆರೋಪಿ ಸೆರೆ Read More »

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಪುತ್ತೂರು : ಮಹಿಳೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂಬ್ರದ ಶೇಖಮಲೆಯಲ್ಲಿ ನಡೆದಿದೆ. ಶೇಖಮಲೆ ಚೆಕ್ಕನಡ್ಕ ದರ್ಖಾಸ್ ನಿವಾಸಿ ದೀಪಕ್ ಎಂಬವರ ಪತ್ನಿ ಲಲಿತ ರೈ (37) ಮೃತಪಟ್ಟವರು. ಮೃತರು ಒರ್ವ ಪುತ್ರನನ್ನು ಆಗಲಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಗ್ನಿಶಾಮಕದಳದವರು ಆಗಮಿಸಿ ಮೃತದೇಹವನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ. ಮೃತರ ಪತಿ ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ Read More »

ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಪತಿ

ಸುಳ್ಯ:  ಪತಿಯು ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಘಟನೆ ಜ.I7ರ ತಡ ರಾತ್ರಿ ಸುಳ್ಯ ತಾಲೂಕಿನ ದೊಡ್ಡ ತೋಟ ಸಮೀಪದ ನೆಲ್ಲೂರು ಕೆಮ್ರಾಜಿ ಗ್ರಾಮದ ಕೊಡಿಮಜಲು ಎಂಬಲ್ಲಿ ನಡೆದಿದೆ. ನೆಲ್ಲೂರು ಕೆಮ್ರಾಜಿ ಗ್ರಾಮದ ಕೋಡಿಮಜಲು ರಾಮಚಂದ್ರ ಕೊಲೆ ಆರೋಪಿ. ಆತನ ಪತ್ನಿ ವಿನೋದ ಹತ್ಯೆಯಾದವರು. ರಾಮಚಂದ್ರ ಪತ್ನಿಯನ್ನು ಕೋವಿಯಿಂದ ಗುಂಡಿಕ್ಕಿ ಕೊಂದು ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಹೇಳಲಾಗಿದೆ. ಕೌಟುಂಬಿಕ ಕಲಹವೇ ಕೃತಕ್ಕೆ ಕಾರಣ ಎಂದು ಶಂಕಿಸಲಾಗಿದೆ. ನಿನ್ನೆ ರಾತ್ರಿ ಮದ್ಯ ಸೇವಿಸಿ ಬಂದು

ಪತ್ನಿಯನ್ನು ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆಗೈದ ಪತಿ Read More »

ದಕ್ಷಿಣ ಕನ್ನಡದಲ್ಲಿ ಬೆನ್ನುಬೆನ್ನಿಗೆ ಎರಡು ದೊಡ್ಡ ದರೋಡೆ : ಆತಂಕದಲ್ಲಿ ಜನ

ಇನ್ನೂ ಸಿಕ್ಕಿಲ್ಲ ಸಿಂಗಾರಿ ಬೀಡಿ ಉದ್ಯಮಿಯ ದರೋಡೆ ಆರೋಪಿಗಳ ಸುಳಿವು ಪೊಲೀಸ್‌ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ತರಾಟೆ ಮಂಗಳೂರು: ಉಳ್ಳಾಲ ಸಮೀಪದ ಕೆ.ಸಿ.ರೋಡ್‌ನಲ್ಲಿರುವ ಕೋಟೆಕಾರ್ ಸಹಕಾರಿ ಬ್ಯಾಂಕ್‌ನಲ್ಲಿ ನಿನ್ನೆ ಹಾಡಹಗಲೇ ನಡೆದಿರುವ ದರೋಡೆ ಪ್ರಕರಣ ಇಡೀ ರಾಜ್ಯವನ್ನು ಬೆಚ್ಚಿ ಬೀಳಿಸಿದೆ. 10 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ದರೋಡೆ ಮಾಡಿರುವ ಡಕಾಯಿತರು ಸುಮಾರು 6 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಬಿಟ್ಟು ಕೇರಳ ಗಡಿ ಮೂಲಕ ಪರಾರಿಯಾಗಿದ್ದಾರೆ. ಎಷ್ಟು ಚಿನ್ನಾಭರಣ ಕಳವಾಗಿದೆ ಎಂದು ಇನ್ನೂ ಸರಿಯಾಗಿ

ದಕ್ಷಿಣ ಕನ್ನಡದಲ್ಲಿ ಬೆನ್ನುಬೆನ್ನಿಗೆ ಎರಡು ದೊಡ್ಡ ದರೋಡೆ : ಆತಂಕದಲ್ಲಿ ಜನ Read More »

ವಿಟ್ಲ ಶಾಲೆಯೊಂದರ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕಳ

ವಿಟ್ಲ : ವಿಟ್ಲದಲ್ಲಿ ವೀರಕಂಬ ವ್ಯಾಪ್ತಿಯ ಶಾಲೆಯೊಂದರಲ್ಲಿ  ಶಿಕ್ಷಕ ಶಾಲಾ ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ನಡೆದಿದೆ. ಈ ಬಗ್ಗೆ  ದೂರಿನ ಆಧಾರದಲ್ಲಿ ಶಿಕ್ಷಕನನ್ನು ವಿಚಾರಿಸಲಾಗಿದೆ. ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಈತ, ಉತ್ತಮ ಶಿಕ್ಷಕ ಎಂಬ ಪ್ರಶಸ್ತಿಯನ್ನು ಪಡೆದಿದ್ದ ಎನ್ನಲಾಗಿದೆ. ಶಾಲೆಯ 10ಕ್ಕೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಇತರ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆರೋಪ ಕೇಳಿ ಬಂದಿದ್ದು, ಶಿಕ್ಷಕನ  ವಿರುದ್ದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ತನಿಖೆ ನಡೆಸಲಾಗುತ್ತಿದೆ. ಕೇವಲ ವಿಟ್ಲದ

ವಿಟ್ಲ ಶಾಲೆಯೊಂದರ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕಳ Read More »

error: Content is protected !!
Scroll to Top