ಅಪರಾಧ

ಒಂದೂವರೆ ವರ್ಷದ ಮಗುವನ್ನು ನೇಣಿಗೆ ಹಾಕಿ ಪಕ್ಕದಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಗಂಡನನ್ನು ಪೊಲೀಸರು ಬಂಧಿಸುತ್ತಾರೆ ಎಂಬ ಭೀತಿಯಲ್ಲಿ ಎಸಗಿದ ಕೃತ್ಯ ಉಡುಪಿ: ಮಹಿಳೆಯೊಬ್ಬರು ಒಂದೂವರೆ ವರ್ಷ ಪ್ರಾಯದ ಮಗುವನ್ನು ನೇಣಿಗೆ ಹಾಕಿ ಸಾಯಿಸಿ ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಹೃದಯವಿದ್ರಾವಕ ಘಟನೆಯೊಂದು ಸೋಮವಾರ ಉಡುಪಿ ಸಮೀಪ ಬ್ರಹ್ಮಾವರದಲ್ಲಿ ಸಂಭವಿಸಿದೆ. ಗಲಾಟೆ ಪ್ರಕರಣವೊಂದರಲ್ಲಿ ಪತಿಯ ಬಂಧನಕ್ಕೆ ನ್ಯಾಯಾಲಯ ಆದೇಶಿಸಿದ ಹಿನ್ನೆಲೆಯಲ್ಲಿ ಮಹಿಳೆ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರದ ಹೇರಂಜೆ ಸಮೀಪ ಆರೂರಿನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯನ್ನು ಸುಶ್ಮಿತಾ (23) ಎಂದು ಗುರುತಿಸಲಾಗಿದೆ. ಮನೆಯ ಚಾವಡಿಯಲ್ಲೇ […]

ಒಂದೂವರೆ ವರ್ಷದ ಮಗುವನ್ನು ನೇಣಿಗೆ ಹಾಕಿ ಪಕ್ಕದಲ್ಲೇ ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ Read More »

ಮಂಗಳೂರು : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ವೀಡಿಯೊ ಹಂಚಿಕೊಂಡ ದುರುಳರು

ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾದವಳನ್ನು ನಂಬಿಸಿ ದುಷ್ಕೃತ್ಯ; ಏಳು ಯುವಕರು ಸೆರೆ ಮಂಗಳೂರು : ಅಪ್ರಾಪ್ತ‌ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ವೀಡಿಯೊ ಮಾಡಿ ಅದನ್ನು ಹರಿಬಿಟ್ಟ ಪ್ರಕರಣ ಆಘಾತಕಾರಿ ಪ್ರಕರಣ ಬಜಪೆಯಲ್ಲಿ ಸಂಭವಿಸಿದ್ದು, ಈ ಸಂಬಂಧ ಏಳು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪರಿಚಿತಳಾದ ಕಾಲೇಜು ವಿದ್ಯಾರ್ಥಿನಿಯನ್ನು ಪ್ರೇಮಿಸುವ ನೆಪದಲ್ಲಿ ಅತ್ಯಾಚಾರ ಎಸಗಲಾಗಿದೆ ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ. ಬಂಧಿತರನ್ನು ಕಾರ್ತಿಕ್, ರಾಕೇಶ್‌ ಸಲ್ಡಾನ, ಜೀವನ್‌, ಸಂದೀಪ್‌, ರಕ್ಷಿತ್, ಶ್ರವಣ್, ಸುರೇಶ್ ಎಂದು ಗುರುತಿಲಾಗಿದೆ. ಅಪ್ರಾಪ್ತ ವಯಸ್ಸಿನ

ಮಂಗಳೂರು : ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ವೀಡಿಯೊ ಹಂಚಿಕೊಂಡ ದುರುಳರು Read More »

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯ 4.5 ಲ.ರೂ. ಮೌಲ್ಯದ ಚಿನ್ನಾಭರಣ ಕಳವು

ಸಿಬ್ಬಂದಿಯ ಮೇಲೆ ಅನುಮಾನ, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಟ್ರೋಲಿ ಬ್ಯಾಗ್ ತೆರೆದು ಬೆಲೆಬಾಳುವ ಚಿನ್ನಾಭರಣ ಕಳವುಗೈದಿರುವ ಆರೋಪದಲ್ಲಿ ನಾಲ್ಕು ಮಂದಿ ಸಿಬ್ಬಂದಿಯನ್ನು ಬಜ್ಪೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ‌. ವಶಕ್ಕೆ ಪಡೆದುಕೊಂಡವರು ವಿಮಾನ‌ ನಿಲ್ದಾಣದಲ್ಲಿ ಲಗೇಜ್ ಲೋಡ್- ಅನ್‌ಲೋಡ್ ಮಾಡುತ್ತಿದ್ದವರು ಎಂದು ತಿಳಿದು ಬಂದಿದೆ. ಸಿಆರ್‌ಪಿಎಫ್ ಜವಾನ ಹರಿಕೇಶ್ ಎಂಬವರ ಪತ್ನಿ ರಾಜೇಶ್ವರಿ ಪದ್ಮಶಾಲಿ ಅವರು ಸಂಬಂಧಿಕರ ಮದುವೆಗಾಗಿ ಶನಿವಾರ ಬೆಳಗ್ಗೆ 8.45ರ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಹಿಳೆಯ 4.5 ಲ.ರೂ. ಮೌಲ್ಯದ ಚಿನ್ನಾಭರಣ ಕಳವು Read More »

ಮಂಗಳೂರು: ಅಕ್ರಮ ಮದ್ಯ ತಯಾರಿ ಘಟಕ ಪತ್ತೆ; ಇಬ್ಬರ ಬಂಧನ

ಗೋವಾ ಮದ್ಯ ತಯಾರಿಸುತ್ತಿದ್ದ ಆರೋಪಿಗಳು ಮಂಗಳೂರು: ತೊಕ್ಕೊಟ್ಟಿನ ದೇರಳಕಟ್ಟೆ ಸಮೀಪ ಅಕ್ರಮ ಮದ್ಯ ತಯಾರಿ ನಡೆಸುತ್ತಿದ್ದ ಮನೆಗೆ ದಾಳಿ ಮಾಡಿದ ಕೊಣಾಜೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಕಾಸರಗೋಡು ನಿವಾಸಿ ಪ್ರಣವ್ ವಿ ಶೆಣೈ (24) ಮತ್ತು ತಾಳಿಪಡ್ಪು ನಿವಾಸಿ ಅನೂಷ್ ಆರ್ (24)‌ ಎಂದು ಗುರುತಿಸಲಾಗಿದೆ. ಆರೋಪಿಗಳು ಕೊಣಾಜೆ ಠಾಣಾ ವ್ಯಾಪ್ತಿಯ ಪಜೀರು ಗ್ರಾಮದ ಕಂಬಳಪದವು ಶ್ರೀ ದುರ್ಗಾಕಾಳಿ ದೇವಸ್ಥಾನದ ರಸ್ತೆಯಲ್ಲಿರುವ ಮನೆಯಲ್ಲಿ ಥೋಮಸ್ ಮತ್ತು ಮಣಿಕುಟ್ಟನ್ ಜೊತೆ ಸೇರಿಕೊಂಡು ಅಕ್ರಮವಾಗಿ ಮದ್ಯ ತಯಾರಿ

ಮಂಗಳೂರು: ಅಕ್ರಮ ಮದ್ಯ ತಯಾರಿ ಘಟಕ ಪತ್ತೆ; ಇಬ್ಬರ ಬಂಧನ Read More »

ಮಟ್ಟಣ್ಣವರ್‌, ತಿಮರೋಡಿ ವಿರುದ್ಧ ಇನ್ನೊಂದು ಕೇಸ್‌ ದಾಖಲು

ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ದೂರು ಮಂಗಳೂರು: ಕೊಲೆ, ಕೊಲೆಯತ್ನ ಸೇರಿದಂತೆ ಹಲವು ಆರೋಪಗಳಿದ್ದ ರೌಡಿಶೀಟರ್‌ ಒಬ್ಬನನ್ನು ಕೋಟು ತೊಡಿಸಿ ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿ ಸುಳ್ಳು ಮಾಹಿತಿ ನೀಡಿದ ಆರೋಪದ ಮೇಲೆ ಗಿರೀಶ್‌ ಮಟ್ಟಣ್ಣನವರ್‌ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮಸ್ಥಳ ಕ್ಷೇತ್ರದ ಭಕ್ತ ಪ್ರವೀಣ್ ಕೆ.ಆರ್ ಎಂಬವರು ನೀಡಿದ ದೂರಿನಡಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಮಟ್ಟಣ್ಣನವರ್, ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ರೌಡಿಶೀಟರ್‌ ಮದನ್ ಬುಗುಡಿ ವಿರುದ್ಧ ಕೇಸ್‌

ಮಟ್ಟಣ್ಣವರ್‌, ತಿಮರೋಡಿ ವಿರುದ್ಧ ಇನ್ನೊಂದು ಕೇಸ್‌ ದಾಖಲು Read More »

ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ ಪೊಲೀಸರು : ಜನರಿಂದ ಭಾರಿ ಆಕ್ರೋಶ ವ್ಯಕ್ತ

ಪಬ್‌, ಡಿಜೆ ನಡುರಾತ್ರಿವರೆಗೆ ನಡೆಯುತ್ತದೆ, ಕಲೆಗೆ ಏಕಿಲ್ಲ ಅವಕಾಶ ಎಂದು ಪ್ರಶ್ನೆ ಮಂಗಳೂರು: ಬಂಟ್ವಾಳದ ಪಾಣೆಮಂಗಳೂರು ಸಮೀಪದ ಸಜೀಪಮುನ್ನೂರು ಎಂಬಲ್ಲಿ ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನವನ್ನು ಪೊಲೀಸರು ಅರ್ಧದಲ್ಲಿಯೇ ನಿಲ್ಲಿಸಿದ ಕ್ರಮಕ್ಕೆ ಕರಾವಳಿಯಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸುವಂತಿಲ್ಲ ಎಂಬ ನಿಯಮದ ನೆಪದಲ್ಲಿ ಯಕ್ಷಗಾನ, ನಾಟಕ ಮತ್ತಿತರ ಸಾಂಸ್ಕೃತಿಕ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ನಿಲ್ಲಿಸುವ ಘಟನೆಗಳು ಕರವಾಳಿಯಲ್ಲಿ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಯಕ್ಷಗಾನ ಮತ್ತು ನಾಟಕ ಪ್ರದರ್ಶನಗಳನ್ನು ಅರ್ಧದಲ್ಲಿಯೇ

ಯಕ್ಷಗಾನವನ್ನು ಅರ್ಧಕ್ಕೆ ನಿಲ್ಲಿಸಿದ ಪೊಲೀಸರು : ಜನರಿಂದ ಭಾರಿ ಆಕ್ರೋಶ ವ್ಯಕ್ತ Read More »

ಬೆಂಗಳೂರಿನ ಲಾಡ್ಜ್‌ನಲ್ಲಿ ಎಸ್‌ಐಟಿ ಶೋಧ

ಬುರುಡೆ ಗ್ಯಾಂಗ್‌ನ ಮೀಟಿಂಗ್‌ ನಡೆಯುತ್ತಿದ್ದ ಲಾಡ್ಜ್‌ ಬೆಂಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿದ್ಯಾರಣ್ಯಪುರದ ತಿಂಡ್ಲು ಸರ್ಕಲ್ ಬಳಿಯ ಲಾಡ್ಜ್ ಒಂದರಲ್ಲಿ ವಿಶೇಷ ತನಿಖಾ ತಂಡ ಮಹಜರು ಪ್ರಕ್ರಿಯೆ ನಡೆಸುತ್ತಿದೆ. ಆರೋಪಿ ಚಿನ್ನಯ್ಯನನ್ನು ಕರೆದುಕೊಂಡು ಬಂದ ಪೊಲೀಸರು ತಡರಾತ್ರಿಯಿಂದ ಲಾಡ್ಜ್‌ನಲ್ಲಿ ಮಹಜರು ಮಾಡುತ್ತಿದ್ದಾರೆ. ಈ ಲಾಡ್ಜ್‌ನಲ್ಲಿ ಬುರುಡೆ ಗ್ಯಾಂಗ್‌ ಸದಸ್ಯರು ಸೇರಿ ಷಡ್ಯಂತ್ರ ರೂಪಿಸಿದ್ದಾರೆ ಎನ್ನಲಾಗುತ್ತಿದೆ. ಬುರುಡೆ ತೆಗೆದುಕೊಂಡು ಬರುವ ಮೊದಲು ಇದೇ ಲಾಡ್ಜ್‌ನಲ್ಲಿ ಹಲವರನ್ನು ಭೇಟಿಯಾಗಿದ್ದ ಬಗ್ಗೆ ಎಸ್‌ಐಟಿ ಚಿನ್ನಯ್ಯ ಬಾಯಿಬಿಟ್ಟಿದ್ದಾನೆ. ಹೀಗಾಗಿ ಎಸ್‌ಪಿ

ಬೆಂಗಳೂರಿನ ಲಾಡ್ಜ್‌ನಲ್ಲಿ ಎಸ್‌ಐಟಿ ಶೋಧ Read More »

ಮಗುವಿಗೆ ಜನ್ಮ ನೀಡಿದ 9ನೇ ತರಗತಿ ಬಾಲಕಿ

ಅಣ್ಣನೇ ಎಸಗಿದನೆ ಈ ದುಷ್ಕೃತ್ಯ? ಬೆಂಗಳೂರು: ಒಂಬತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಮಗುವಿಗೆ ಜನ್ಮ ನೀಡಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ಸಂಭವಿಸಿದೆ. 14 ವರ್ಷದ ಬಾಲಕಿ ಹೊಟ್ಟೆನೋವೆಂದು ಕೆಲದಿನಗಳಿಂದ ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದಳು. ಎರಡು ದಿನಗಳ ಬಳಿಕ ಬಾಲಕಿ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಕೂಡಲೇ ತಂದೆ ತಾಯಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವಧಿ ಪೂರ್ವವಾಗಿ ಏಳು ತಿಂಗಳಲ್ಲೇ ಹೆರಿಗೆಯಾಗಿದ್ದು, ಸದ್ಯ ತಾಯಿ ಮತ್ತು ಆರೋಗ್ಯದಿಂದ ಇದ್ದಾರೆ ಎಂದು ತಿಳಿದುಬಂದಿದೆ. ತನ್ನ ಅಣ್ಣನಿಂದಲೇ ಅತ್ಯಾಚಾರಕ್ಕೊಳಗಾಗಿ ಬಾಲಕಿ

ಮಗುವಿಗೆ ಜನ್ಮ ನೀಡಿದ 9ನೇ ತರಗತಿ ಬಾಲಕಿ Read More »

ಧರ್ಮಸ್ಥಳ ಪ್ರಕರಣ : ಬುರುಡೆ ದಿಲ್ಲಿ ಪ್ರಯಾಣ ನಿಜ

ಜಯಂತ್‌ ಟಿ. ಮನೆಯಲ್ಲಿ ಎಸ್‌ಐಟಿ ಶೋಧ ವೇಳೆ ಬಯಲಾಯಿತು ಹಲವು ರಹಸ್ಯ ಧರ್ಮಸ್ಥಳ : ಧರ್ಮಸ್ಥಳದಲ್ಲಿ ನೂರಾರು ಶವ ಹೂತು ಹಾಕಿದ್ದೇನೆ ಎಂದು ಹೇಳಿಕೊಂಡು ಮಾಸ್ಕ್‌ಮ್ಯಾನ್‌ ಚಿನ್ನಯ್ಯ ತಂದಿದ್ದ ತಲೆಬುರುಡೆ ದಿಲ್ಲಿವರೆಗೂ ಪ್ರಯಾಣಿಸಿತ್ತು ಎಂಬುದು ಈಗ ದೃಢಪಟ್ಟಿದೆ. ಸ್ವತಹ ಜಯಂತ್‌ ಟಿ. ವಿಚಾರವನ್ನು ಒಪ್ಪಿಕೊಂಡಿದ್ದಾರೆ. ಶನಿವಾರ ಬೆಂಗಳೂರಿನಲ್ಲಿರುವ ಜಯಂತ್‌ ಟಿ. ಅವರ ಬಾಡಿಗೆ ಮನೆಗೆ ಎಸ್‌ಐಟಿ ತಂಡ ಚಿನ್ನಯ್ಯನನ್ನು ಕರೆದುಕೊಂಡು ಹೋಗಿ ಶೋಧ ನಡೆಸಿದೆ. ಈ ಸಂದರ್ಭದಲ್ಲಿ ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಈ ದಾಳಿಯ

ಧರ್ಮಸ್ಥಳ ಪ್ರಕರಣ : ಬುರುಡೆ ದಿಲ್ಲಿ ಪ್ರಯಾಣ ನಿಜ Read More »

ಮಾನವ ಜಿಪಿಎಸ್‌ ಕುಖ್ಯಾತಿಯ ಉಗ್ರ ಬಾಗು ಖಾನ್‌ ಎನ್‌ಕೌಂಟರ್‌ಗೆ ಬಲಿ

100ಕ್ಕೂ ಅಧಿಕ ಉಗ್ರರಿಗೆ ಒಳ ನುಸುಳುಲು ಸಹಾಯ ಮಾಡಿದ್ದ ಪಾತಕಿ ಶ್ರೀನಗರ: ನೂರಕ್ಕೂ ಅಧಿಕ ಉಗ್ರರಿಗೆ ಒಳನುಸುಳಲು ಸಹಾಯ ಮಾಡಿದ್ದ, ಉಗ್ರರ ಲೋಕದಲ್ಲಿ ಮಾನವ ಜಿಪಿಎಸ್‌ ಎಂದೇ ಕುಖ್ಯಾತನಾಗಿದ್ದ ಬಾಗು ಖಾನ್‌ ಎಂಬಾತನನ್ನು ಭದ್ರತಾ ಪಡೆ ಶನಿವಾರ ಎನ್‌ಕೌಂಟರ್‌ನಲ್ಲಿ ಸಾಯಿಸಿದೆ. ಇವನ ಜೊತೆಗೆ ಇನ್ನೂ ಓರ್ವ ಉಗ್ರ ಸತ್ತಿದ್ದಾನೆ. ಸಮಂದರ್‌ ಚಾಚಾ ಎಂಬ ಇನ್ನೊಂದು ಹೆಸರನ್ನು ಹೊಂದಿರುವ ಬಾಗು ಖಾನ್‌ 1995ರಿಂದೀಚೆಗೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ನೆಲೆ ಮಾಡಿಕೊಂಡಿದ್ದ. ನೌಶೇರಾದಲ್ಲಿ ಇಂದು ಬೆಳಗ್ಗೆ ಅವನನ್ನು ಭದ್ರತಾ ಪಡೆ

ಮಾನವ ಜಿಪಿಎಸ್‌ ಕುಖ್ಯಾತಿಯ ಉಗ್ರ ಬಾಗು ಖಾನ್‌ ಎನ್‌ಕೌಂಟರ್‌ಗೆ ಬಲಿ Read More »

error: Content is protected !!
Scroll to Top