ಅಪರಾಧ

ಕೊಲ್ಲೂರು: ಸೌಪರ್ಣಿಕಾ ನದಿಗೆ ಈಜಲು ಇಳಿದ ಬೆಂಗಳೂರಿನ ಮಹಿಳೆ ನಾಪತ್ತೆ

ಕಾರು ದಡದಲ್ಲಿ ನಿಲ್ಲಿಸಿ ನದಿಯಲ್ಲಿ ಈಜಾಡುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಉಡುಪಿ : ಎರಡು ದಿನಗಳ ಹಿಂದೆ ಕೊಲ್ಲೂರಿಗೆ ಆಗಮಿಸಿದ್ದ ಬೆಂಗಳೂರಿನ ವಿವಾಹಿತ ಮಹಿಳೆಯೊಬ್ಬರು ಸೌಪರ್ಣಿಕಾ ನದಿಯಲ್ಲಿ ಈಜಲು ಇಳಿದು ನಾಪತ್ತೆಯಾಗಿದ್ದು, ಈ ಪ್ರಕರಣ ಅನೇಕ ಊಹಾಪೋಹಗಳಿಎಗ ಕಾರಣವಾಗಿದೆ. ನಾಪತ್ತೆಯಾದ ಮಹಿಳೆಯನ್ನು ಬೆಂಗಳೂರಿನ ತ್ಯಾಗರಾಜ ನಗರದ ನಿವಾಸಿ ಸಿ.ಆರ್. ಗೋವಿಂದರಾಜು ಎಂಬವರ ಪುತ್ರಿ ವಸುಧಾ ಚಕ್ರವರ್ತಿ (46) ಎಂದು ಗುರುತಿಸಲಾಗಿದೆ. ಆಗಸ್ಟ್ 28ರಂದು ಅವರು ಕೊಲ್ಲೂರಿಗೆ ಆಗಮಿಸಿ, ಖಾಸಗಿ ಲಾಡ್ಜ್ ಬಳಿ ತಮ್ಮ ಕಾರನ್ನು ನಿಲ್ಲಿಸಿ ದೇವಸ್ಥಾನಕ್ಕೆ […]

ಕೊಲ್ಲೂರು: ಸೌಪರ್ಣಿಕಾ ನದಿಗೆ ಈಜಲು ಇಳಿದ ಬೆಂಗಳೂರಿನ ಮಹಿಳೆ ನಾಪತ್ತೆ Read More »

ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಢವ ಢವ ಆಯಿತು: ಮಟ್ಟಣ್ಣವರ್‌ ಹೇಳಿಕೆ ವೈರಲ್‌

ಎಸ್‌ಐಟಿ ಮುಂದೆ ಸುದೀರ್ಘ ವಿಚಾರಣೆಗೆ ಹಾಜರಾದ ಮಟ್ಟಣ್ಣವರ್‌ ಬೆಳ್ತಂಗಡಿ: ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗಿರೀಶ್ ಮಟ್ಟಣ್ಣನವರ್ ಅವರನ್ನು ಶುಕ್ರವಾರ ಎಸ್‌ಐಟಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ವಿಚಾರಣೆ ಮುಗಿಸಿದ ಬಳಿಕ ಎಸ್‌ಐಟಿ ಕಚೇರಿಯಿಂದ ಹೊರಬಂದ ಅವರು ಮಾಧ್ಯಮದವರ ಜೊತೆ ಮಾತನಾಡಿ ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುತ್ತಿದ್ದಂತೆಯೇ ಎದೆ ಢವ ಢವ ಅಂತಾ ಬಡಿಕೊಳ್ಳಲು ಪ್ರಾರಂಭಿಸಿತು. ಜಗತ್ತಿನಲ್ಲಿ ಎಷ್ಟು ಮುಸ್ಲಿಂ, ಕ್ರಿಶ್ಚಿಯನ್ ರಾಷ್ಟ್ರಗಳಿವೆ ಎಂದು ಕೇಳಿದರು. ನಂತರ ಯಾವ ಯಾವ ಪಾದ್ರಿ, ಮೌಲಿ, ಶೇಟ್‌ಗಳಿಂದ

ಎಸ್‌ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಢವ ಢವ ಆಯಿತು: ಮಟ್ಟಣ್ಣವರ್‌ ಹೇಳಿಕೆ ವೈರಲ್‌ Read More »

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ : ಮತ್ತೆ ಕೆಲವರ ಬಂಧನ

ಸೋಷಿಯಲ್‌ ಮೀಡಿಯಾದಲ್ಲಿ ಅಸಭ್ಯ ಕಮೆಂಟ್‌ ಹಾಕಿ ತೇಜೋವಧೆ ಮಾಡಿದ ಪ್ರಕರಣ ಬೆಂಗಳೂರು: ನಟಿ ರಮ್ಯಾಗೆ ಸಾಮಾಜಿಕ ಜಾಲಾತಾಣದಲ್ಲಿ ಅಶ್ಲೀಲ ಸಂದೇಶ ಕಳಿಸಿದ್ದ ಮತ್ತಷ್ಟು ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದಾರೆ‌. ನಟಿಗೆ ಅಶ್ಲೀಲ ಸಂದೇಶ ಮಾಡಿ ಸಿಕ್ಕಿ ಬಿದ್ದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಬಿಜಾಪುರ, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ಬೇರೆ ಬೇರೆ ಜಿಲ್ಲೆಗಳಿಂದ 9 ಆರೋಪಿಗಳನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು ಮತ್ತೆ ಇಬ್ಬರು ಉತ್ತರ ಕರ್ನಾಟಕದ ಮೂಲದ ಯುವಕರನ್ನು ಬಂಧಿಸಿದ್ದಾರೆ. ಬಂಧಿತರಿಬ್ಬರು ಸಣ್ಣಪುಟ್ಟ

ನಟಿ ರಮ್ಯಾಗೆ ಅಶ್ಲೀಲ ಕಮೆಂಟ್‌ : ಮತ್ತೆ ಕೆಲವರ ಬಂಧನ Read More »

ಪುತ್ತೂರು : ಇನ್‌ಸ್ಟಾಗ್ರಾಂನಲ್ಲಿ ದ್ವೇಷದ ಸಂದೇಶ ಹಾಕಿದ ಕುರಿತು ದೂರು ದಾಖಲು

ಕಾಲೇಜಿನಲ್ಲಿ ನಡೆದ ನೃತ್ಯ ಕಾರ್ಯಕ್ರಮವನ್ನು ಆಕ್ಷೇಪಿಸಿ ಕೋಮು ದ್ವೇಷದ ಸಂದೇಶ ಪುತ್ತೂರು: ಇನ್‌ಸ್ಟಾಗ್ರಾಮ್‌ನಲ್ಲಿ ಕೋಮು ವೈಮನಸ್ಸು ಉಂಟು ಮಾಡುವ ಹಾಗೂ ಸುಳ್ಳು ಮಾಹಿತಿಯನ್ನು ಹೊಂದಿರುವ ಸಂದೇಶವನ್ನು ಪ್ರಸಾರ ಮಾಡಿರುವ ಆರೋಪದಲ್ಲಿ ಶುಕ್ರವಾರ Instagram ಖಾತೆ ಬಳಕೆದಾರ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕ ಜಾನ್ಸನ್ ಡೇವಿಡ್‌ ಸಿಕ್ವೇರ ಎಂಬವರು ನೀಡಿರುವ ದೂರಿನಂತೆ @tm_bad_karma_990 ಎಂಬ Instagram ಖಾತೆಯ ಬಳಕೆದಾರ ವ್ಯಕ್ತಿಯ ವಿರುದ್ಧ ದೂರು ದಾಖಲಿಸಲಾಗಿದೆ. ಶುಕ್ರವಾರ ತನ್ನ

ಪುತ್ತೂರು : ಇನ್‌ಸ್ಟಾಗ್ರಾಂನಲ್ಲಿ ದ್ವೇಷದ ಸಂದೇಶ ಹಾಕಿದ ಕುರಿತು ದೂರು ದಾಖಲು Read More »

ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಯುವಕ ಸೆರೆ

11 ಲಕ್ಷ ರೂ. ಮೌಲ್ಯದ ಮಾದಕವಸ್ತು, ಮೊಬೈಲ್‌ ವಶ ಮಂಗಳೂರು: ನಗರದ ಪ್ರತಿಷ್ಠಿತ ಕಾಲೇಜುಗಳಿಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಓರ್ವ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಆರೋಪಿ ಮೊಹಮ್ಮದ್ ಅರ್ಷದ್ ಖಾನ್ (29) ಕೇರಳದ ಎರ್ನಾಕುಲಂ ಜಿಲ್ಲೆಯ ಕೊಚ್ಚಿಯ ಮಟ್ಟಂಚೇರಿಯ ಮೌಲಾನಾ ಆಜಾದ್ ರಸ್ತೆಯವನಾಗಿದ್ದು, ಮಂಗಳೂರಿನ ದೇರಳಕಟ್ಟೆಯಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ. ನಿಷೇದಿತ ಮಾದಕ ವಸ್ತು ಎಂಡಿಎಂಎನ್ನು ಬೆಂಗಳೂರಿನಿಂದ ಖರೀದಿಸಿಕೊಂಡು ಮಂಗಳೂರು ನಗರದ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದ. ಅವನಿಂದ ಸುಮಾರು 53.29 ಗ್ರಾಂ ಎಂಡಿಎಂಎ ಮತ್ತು 2.33

ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಯುವಕ ಸೆರೆ Read More »

ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾದ ಮಹೇಶ್‌ ಶೆಟ್ಟಿ ತಿಮರೋಡಿ

ಕೆಲ ದಿನಗಳಿಂದ ಯಾರಿಗೂ ಸಿಗದಿದ್ದ ತಿಮರೋಡಿ ಇಂದು ದಿಢೀರ್‌ ಹಾಜರು ಮಂಗಳೂರು: ಕೆಲ ದಿನಗಳಿಂದ ಯಾರಿಗೂ ಕಾಣಿಸದಿದ್ದ ಮಹೇಶ್‌ ಶೆಟ್ಟಿ ತಿಮರೋಡಿ ಇಂದು ದಿಢೀರ್‌ ಬೆಳ್ತಂಗಡಿ ಠಾಣೆಗೆ ಆಗಮಿಸಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ಇಂದು ಹಾಜರಾಗಿದ್ದರು. ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರನ್ನು ನಿಂದಿಸಿದ ಆರೋಪದಲ್ಲಿ ಬ್ರಹ್ಮಾವರ ಠಾಣೆಯಲ್ಲಿ ದಾಖಲಾದ ಕೇಸ್‌ಗೆ ಸಂಬಂದಿಸಿ ಆಗಸ್ಟ್‌ 21ರಂದು ಉಜಿರೆಯ ತಿಮರೋಡಿ ನಿವಾಸಕ್ಕೆ ಪೊಲೀಸರು ಆಗಮಿಸಿ ಮಹೇಶ್‌ ಶೆಟ್ಟಿಯನ್ನು ಬಂಧಿಸಿದ್ದರು. ಬಂಧನದ ವೇಳೆ

ಬೆಳ್ತಂಗಡಿ ಪೊಲೀಸ್‌ ಠಾಣೆಗೆ ಹಾಜರಾದ ಮಹೇಶ್‌ ಶೆಟ್ಟಿ ತಿಮರೋಡಿ Read More »

ಬೆಂಗಳೂರು : ಸಿಖ್‌ ಗುರುದ್ವಾರಕ್ಕೆ ಬಾಂಬ್‌ ಬೆದರಿಕೆ

ಆರ್‌ಡಿಎಕ್ಸ್‌ ಇಟ್ಟು ಗುರುದ್ವಾರವನ್ನು ಸ್ಫೋಟಿಸುವುದಾಗಿ ಬೆದರಿಕೆ ಬೆಂಗಳೂರು : ಬೆಂಗಳೂರಿನ ಹಲಸೂರು ಕೆರೆ ಸಮೀಪ ಇರುವ ಗುರುಸಿಂಗ್ ಸಭಾ ಸಿಖ್ ಗುರುದ್ವಾರಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದೆ. ನಾಲ್ಕು ದಿನಗಳ ಹಿಂದೆ ಗುರುದ್ವಾರಕ್ಕೆ ಬೆದರಿಕೆ ಇ-ಮೇಲ್ ಬಂದಿದ್ದು, ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಲ್ಕು ಆರ್​​ಡಿಎಕ್ಸ್ ಸ್ಫೋಟಿಸುವುದಾಗಿ ರಾಜಗಿರಿ ಎಂಬಾತನ ಹೆಸರಿನಲ್ಲಿ ಕಳುಹಿಸಲಾದ ಬೆದರಿಕೆ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು. ಸಿಖ್ ಗುರುದ್ವಾರದ ಶೌಚಾಲಯದಲ್ಲಿ ಬಾಂಬ್ ಇಟ್ಟಿದ್ದಾಗಿ ಸಂದೇಶದಲ್ಲಿ ತಿಳಿಸಲಾಗಿತ್ತು. ಋಷಿಪಾಲ್ ಸಿಂಗ್ ಎಂಬವರು ನೀಡಿದ ದೂರು

ಬೆಂಗಳೂರು : ಸಿಖ್‌ ಗುರುದ್ವಾರಕ್ಕೆ ಬಾಂಬ್‌ ಬೆದರಿಕೆ Read More »

ಬಂಟ್ವಾಳ : 13 ವರ್ಷದ ಬಾಲಕನಿಂದ ಮಹಿಳೆಯರಿಗೆ ಕಿರುಕುಳ!

ರಾತ್ರಿ ಹೊತ್ತು ಸ್ಕೂಟರ್‌ನಲ್ಲಿ ಬಂದು ಕೆಲಸ ಬಿಟ್ಟು ಮನೆಗೆ ಹೋಗುತ್ತಿದ್ದ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದ ಬಾಲಕ ಬಂಟ್ವಾಳ : ಪಾಣೆಮಂಗಳೂರು ಪೇಟೆಯಲ್ಲಿ 13 ವರ್ಷ ಪ್ರಾಯದ ಬಾಲಕನೊಬ್ಬ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಬಂಟ್ವಾಳ ನಗರ ಠಾಣಾ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಾಣೆಮಂಗಳೂರು ಪೇಟೆ ಪ್ರದೇಶದಲ್ಲಿ ಕೆಲ ದಿನಗಳ ಹಿಂದೆ ರಾತ್ರಿ ಸುಮಾರು 7.30-8 ಗಂಟೆಯ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಮಹಿಳೆಯರಿಗೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಕಿರುಕುಳ

ಬಂಟ್ವಾಳ : 13 ವರ್ಷದ ಬಾಲಕನಿಂದ ಮಹಿಳೆಯರಿಗೆ ಕಿರುಕುಳ! Read More »

ಪುತ್ತೂರು : ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ನ್ಯಾಯಾಂಗ ಬಂಧನ

ಸೋಷಿಯಲ್‌ ಮೀಡಿಯಾದಲ್ಲಿ ಪರಿಚಿತನಾದ ಯುವಕನಿಂದ ಕೃತ್ಯ ಪುತ್ತೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಯುವಕನ ವಿರುದ್ಧ ಪುತ್ತೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರಿನ ರೈಲ್ವೆ ಹಳಿ ಪಕ್ಕದ ಗುಡ್ಡಗಾಡು ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ಮೇಲೆ ಪದೇಪದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಅಪ್ರಾಪ್ತ ವಯಸ್ಸಿನ ಬಾಲಕಿ ನೀಡಿದ ದೂರಿನ ಮೇರೆಗೆ ದಕ್ಷಿಣ ಕನ್ನಡ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಸಂತ್ರಸ್ತೆ ಕಳೆದ ಎರಡು

ಪುತ್ತೂರು : ಅಪ್ರಾಪ್ತ ವಯಸ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ನ್ಯಾಯಾಂಗ ಬಂಧನ Read More »

ಬಂಟ್ವಾಳ : ತಲವಾರಿನಿಂದ ಕೊಲ್ಲಲು ಯತ್ನಿಸಿದ್ದಾರೆ ಎಂದು ಸುಳ್ಳು ದೂರು ನೀಡಿದಾತ ಅರೆಸ್ಟ್‌

ಸಾರ್ವಜನಿಕ ಶಾಂತಿ ಕದಡುವ ಉದ್ದೇಶದಿಂದ ಕೊಲೆಯತ್ನದ ಕಥೆ ಕಟ್ಟಿದ್ದ ಆರೋಪಿ ಬಂಟ್ವಾಳ: ಸಜಿಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಜೂನ್ 11ರಂದು ತಲವಾರು ದಾಳಿ ನಡೆಸಿ ಕೊಲೆಗೆ ಯತ್ನಿಸಿದ್ದಾರೆ ಎಂದು ಸಜಿಪಮುನ್ನೂರು ನಿವಾಸಿ ಉಮರ್ ಫಾರೂಕ್ ಎಂಬಾತ ನೀಡಿದ ದೂರು ಸುಳ್ಳು ಎಂದು ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಜಿಪಮುನ್ನೂರು ಗ್ರಾಮದ ನಿವಾಸಿ ಉಮರ್ ಪಾರೂಕ್ (48) ಜೂನ್ 1 ರಂದು ಮುಂಜಾನೆ ಜೀಪಿನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆಗೆ ತೆರಳುತ್ತಿದ್ದಾಗ ಸಜಿಪನಡು ಗ್ರಾಮದ

ಬಂಟ್ವಾಳ : ತಲವಾರಿನಿಂದ ಕೊಲ್ಲಲು ಯತ್ನಿಸಿದ್ದಾರೆ ಎಂದು ಸುಳ್ಳು ದೂರು ನೀಡಿದಾತ ಅರೆಸ್ಟ್‌ Read More »

error: Content is protected !!
Scroll to Top