ಕ್ಯಾಂಪಸ್‌

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ – “ಫಿಲೋವೆಂಚುರ-ಅವಿನ್ಯ 2023 ಸಮಾರೋಪ | ಸೇಕ್ರೆಡ್‌ ಹಾರ್ಟ್‌ ಕಾಲೇಜಿಗೆ ಸಮಗ್ರ ಪ್ರಶಸ್ತಿ

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ವಿಭಾದ ವತಿಯಿಂದ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ – “ಫಿಲೋ ವೆಂಚುರ-ಅವಿನ್ಯ 2023ರ ಸಮಾರೋಪ ಸಮಾರಂಭ ಕಾಲೇಜಿನ ಬೆಳ್ಳಿಹಬ್ಬ ಸಭಾಭವನದಲ್ಲಿ ನಡೆಯಿತು. ಮಡಂತ್ಯಾರು ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ಇಂಗ್ಲೀಷ್‌ ವಿಭಾಗದ ಮುಖ್ಯಸ್ಥ ಪ್ರೊ| ಲಿಯೋ ನೊರೋನ್ಹ ಮಾತನಾಡಿ, ಪ್ರತಿಯೋರ್ವನಲ್ಲೂ ಒಂದಲ್ಲ ಒಂದು ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊರತರುವುದು ಹಾಗೂ ಪ್ರತಿಭೆಗಳನ್ನು ಅನ್ವೇಶಿಸುವುದು ಸ್ಪರ್ಧೆಗಳ ಮೂಲ ಉದ್ದೇಶ ಎಂದು ಹೇಳಿದರು. ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ| ಡಾ| […]

ಸಂತ ಫಿಲೋಮಿನಾ ಕಾಲೇಜಿನಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್‌ ಫೆಸ್ಟ್‌ – “ಫಿಲೋವೆಂಚುರ-ಅವಿನ್ಯ 2023 ಸಮಾರೋಪ | ಸೇಕ್ರೆಡ್‌ ಹಾರ್ಟ್‌ ಕಾಲೇಜಿಗೆ ಸಮಗ್ರ ಪ್ರಶಸ್ತಿ Read More »

ನಮ್ಮ ಕ್ರೀಡಾಳುಗಳಿಂದ ದೇಶಕ್ಕೆ ಹೆಮ್ಮೆ ತರುವ ಕಾರ್ಯ | ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಸುರೇಶ ಶೆಟ್ಟಿ

ಪುತ್ತೂರು: ದಶಕಗಳ ಹಿಂದೆ ಕ್ರೀಡಾಕ್ಷೇತ್ರದಲ್ಲಿ ಭಾರತದ ಪ್ರದರ್ಶನ ನೀರಸವಾಗಿರುತ್ತಿತ್ತು. ಅಲ್ಲೋ ಇಲ್ಲೋ ಒಬ್ಬ ಕ್ರೀಡಾಪಟು ಮೂರು – ನಾಲ್ಕನೇ ಸ್ಥಾನ ಗಳಿಸುವುದೇ ದೊಡ್ಡ ಸಾಧನೆ ಎನಿಸುತ್ತಿತ್ತು. ಆದರೆ ಈಗ ಚಿತ್ರಣ ಬದಲಾಗುತ್ತಿದೆ. ಒಲಿಂಪಿಕ್ಸ್ ನಂತಹ ಸ್ಪರ್ಧೆಗಳಲ್ಲೂ ನಿರಂತರವಾಗಿ ಚಿನ್ನ, ಬೆಳ್ಳಿ ಪದಕಗಳು ಭಾರತಕ್ಕೆ ಬರಲಾರಂಭಿಸಿವೆ. ಹಾಗಾಗಿ ನಮ್ಮ ಕ್ರೀಡಾಳುಗಳು ದೇಶಕ್ಕೆ ಹೆಮ್ಮೆ ತರುವ ಕಾರ್ಯ ಮಾಡುತ್ತಿದ್ದಾರೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸದಸ್ಯ ಸುರೇಶ ಶೆಟ್ಟಿ ಹೇಳಿದರು. ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ

ನಮ್ಮ ಕ್ರೀಡಾಳುಗಳಿಂದ ದೇಶಕ್ಕೆ ಹೆಮ್ಮೆ ತರುವ ಕಾರ್ಯ | ಅಂಬಿಕಾ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟಿಸಿ ಸುರೇಶ ಶೆಟ್ಟಿ Read More »

ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ, ನೂತನ ಕೊಠಡಿ ಉದ್ಘಾಟನೆ

ಪುತ್ತೂರು: ಪ್ರತೀ ಕನ್ನಡ ಶಾಲೆಗಳಲ್ಲಿ ಆಂಗ್ಲ ಮಾಧ್ಯಮವನ್ನು ತೆರೆಸಿ  ಆಂಗ್ಲ ಶಿಕ್ಷಕರನ್ನು ನೀಡುವ ಯೋಜನೆಯಿದ್ದು, ಈ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ. ಅವರು ಬುಧವಾರ ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2023-24ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ನೂತನ ಶಾಲಾ ಕೊಠಡಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸರಕಾರಿ ಶಾಲಾ ಅಭಿವೃದ್ಧಿಯಲ್ಲಿ ಶಿಕ್ಷಕರು, ಶಿಕ್ಷಣ ಇಲಾಖೆ ಜತೆಗೆ ಸರಕಾರ ಒಟ್ಟಾಗಿ ಕೆಲಸ ಮಾಡುವ ಅಗತ್ಯವಿದೆ. ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಲು

ಹಾರಾಡಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ, ನೂತನ ಕೊಠಡಿ ಉದ್ಘಾಟನೆ Read More »

ಇಂದು ಕಾಣಿಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಸೇವಾ ನಿವೃತ್ತಿ

ಕಾಣಿಯೂರು: ಕಾಣಿಯೂರು ಸ.ಹಿ.ಪ್ರಾ. ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಅವರು ಮೇ 31ರಂದು ಸೇವಾ ನಿವೃತ್ತಿ ಹೊಂದಿದ್ದಾರೆ. 1994ರಲ್ಲಿ ಬಂಟ್ವಾಳ ಕೊಯಿಲ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿ, 1996ರಲ್ಲಿ ಕುದ್ಮಾರು ಸ.ಉ.ಹಿ.ಪ್ರಾ ಶಾಲೆಯಲ್ಲಿ, ಒಂದು ವರ್ಷ ಬೆಳಂದೂರು ಸ.ಹಿ.ಪ್ರಾ.ಶಾಲೆಗೆ ನಿಯೋಜನೆಗೊಂಡು ಕರ್ತವ್ಯ ಸಲ್ಲಿಸಿದ್ದಾರೆ. 2016ರಲ್ಲಿ ಕಾಣಿಯೂರು ಸ.ಹಿ.ಪ್ರಾ.ಶಾಲೆಗೆ ವರ್ಗಾವಣೆಗೊಂಡು 6 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸುದೀರ್ಘ 21 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಇವರು, ಇದೀಗ ಸೇವಾ ನಿವೃತ್ತರಾಗುತ್ತಿದ್ದಾರೆ.

ಇಂದು ಕಾಣಿಯೂರು ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ರೇವತಿ ಪಿ. ಸೇವಾ ನಿವೃತ್ತಿ Read More »

ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ

ಕಡಬ: ಕಡಬ ತಾಲೂಕು ಕಚೇರಿಯಲ್ಲಿ ವಿಲೇವಾರಿಯಾಗದೆ ಉಳಿದ 94 ಸಿ ಕಡತದ ಬಗ್ಗೆ ವಿಚಾರಿಸಲು ತೆರಳಿದ ಪತ್ರಕರ್ತರಿಗೆ ಕಡತ ವಿಲೇವಾರಿ ಸಿಬಂದಿ ಅನುಚಿತವಾಗಿ ವರ್ತಿಸಿದ ಅರೋಪ ವ್ಯಕ್ತವಾಗಿದೆ.  ಕಳೆದ 5 ತಿಂಗಳ ಹಿಂದೆ ಸುಬ್ರಹ್ಮಣ್ಯದ ಮಹಿಳೆಯೋರ್ವರು 94 ಸಿ ಅರ್ಜಿ ಸಲ್ಲಿಸಿದ್ದರು.  ಬಳಿಕ ಕುಂಟುತ್ತಾ ಸಾಗುತ್ತಾ ವಿಲೇವಾರಿಯಾಗಲಿಲ್ಲ. ಈ ಬಗ್ಗೆ ಸುಬ್ರಹ್ಮಣ್ಯ ಗ್ರಾಮದ ಕಡತ ವಿಲೇವಾರಿ ಮಾಡುವ ಸಿಬ್ಬಂದಿ ಬಳಿ ತೆರಳಿ  ಕಡಬದ ಪತ್ರಕರ್ತರೋರ್ವರು  ವಿಚಾರಿಸುವ  ವೇಳೆ  ಪತ್ರಕರ್ತ ಎಂದು ಪರಿಚಯಿಸಿಕೊಂಡಿದ್ದಾರೆ. ಪತ್ರಕರ್ತರು ಎಂದು ಪರಿಚಯಿಸಿಕೊಂಡು ಇಲ್ಲಿಗೆ

ಕಡಬ ತಾಲೂಕು ಕಛೇರಿಯಲ್ಲಿ 5 ತಿಂಗಳಾದರೂ ವಿಲೇವಾರಿವಾಗದ 94ಸಿ ಕಡತ! ಪ್ರಶ್ನಿಸಿದ ಪತ್ರಕರ್ತನಿಗೆ ದಬಾಯಿಸಿದ ತಾಲೂಕು ಕಛೇರಿ ಸಿಬ್ಬಂದಿ Read More »

ಆಲಂಕಾರು ಶ್ರೀ ಭಾರತಿ ಹಿ.ಪ್ರಾ. ಶಾಲೆಯಲ್ಲಿ 6-8ನೇ ತರಗತಿ ಆಂಗ್ಲ ಮಾಧ್ಯಮ ಉದ್ಘಾಟನೆ

ಕಡಬ: ವ್ಯವಹಾರಿಕ ದೃಷಿಕೋನದಿಂದ ಆಂಗ್ಲ ಮಾಧ್ಯಮ ಶಿಕ್ಷಣ ಅಗತ್ಯವಾಗಿದೆ ಎಂದು ನಂಬಿರುವ ಕಾಲಘಟ್ಟದಲ್ಲಿ ಶಿಕ್ಷಣದೊಂದಿಗೆ ಭಾರತೀಯ ಸಂಸ್ಕಾರ ಸಂಸ್ಕೃತಿಯನ್ನು ಅಳವಡಿಸಿಕೊಳ್ಳಬೇಕು. ಭಾರತೀಯತೆಯ ಮೂಲ ತತ್ತ್ವವನ್ನು ಉಳಿಸಿಕೊಂಡು ಸಮಾಜದ ಪ್ರಗತಿಯ ವೇಗಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣವನ್ನು ನೀಡುವುದು ಶಿಕ್ಷಣ ಸಂಸ್ಥೆಗಳ ಜವಬ್ದಾರಿಯಾಗಿದೆ ಎಂದು  ಮಂಗಳೂರು ಶಾರದಾ ಗ್ರೂಪ್ ಆಫ್ ಇನ್ಸ್ಸ್ಟಿಟ್ಯೂಷನ್ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಹೇಳಿದರು. ಆಲಂಕಾರು ಗ್ರಾಮದ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6ರಿಂದ 8ನೇ ತರಗತಿಯವರೆಗಿನ ಆಂಗ್ಲ ಮಾಧ್ಯಮ ಶಿಕ್ಷಣ ತರಗತಿ ಉದ್ಘಾಟಿಸಿ

ಆಲಂಕಾರು ಶ್ರೀ ಭಾರತಿ ಹಿ.ಪ್ರಾ. ಶಾಲೆಯಲ್ಲಿ 6-8ನೇ ತರಗತಿ ಆಂಗ್ಲ ಮಾಧ್ಯಮ ಉದ್ಘಾಟನೆ Read More »

ಅಕ್ಷಯ ಕಾಲೇಜಿನಲ್ಲಿ “ಯಕ್ಷಸಿಂಚನ” ಯಕ್ಷಗಾನ ಕಲಾ ಸಂಘ ಉದ್ಘಾಟನೆ

ಪುತ್ತೂರು: ಅಕ್ಷಯ ಕಾಲೇಜಿನಲ್ಲಿ ಯಕ್ಷಗಾನ ಕಲಾ ಸಂಘ “ಯಕ್ಷಸಿಂಚನ“ ಉದ್ಘಾಟನೆಗೊಂಡಿತು. ಹನುಮಗಿರಿ ಯಕ್ಷಗಾನ ಮೇಳದ ಖ್ಯಾತ ಭಾಗವತ ರವಿಚಂದ್ರ ಕನ್ನಡಿಕಟ್ಟೆ ಉದ್ಘಾಟಿಸಿ, ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು. ಗೆಜ್ಜೆಗಿರಿ ಮೇಳದ ಪ್ರಧಾನ ಭಾಗವತ ಗಿರೀಶ್ ರೈ ಕಕ್ಕೆಪದವು ಮುಖ್ಯ ಅಥಿತಿಗಳಾಗಿ ಶುಭಕೋರಿದರು. ಈ ಸಂದರ್ಭದಲ್ಲಿ ಭಾಗವತರಾದ ರವಿಚಂದ್ರ  ಕನ್ನಡಿಕಟ್ಟೆ ಮತ್ತು ಗಿರೀಶ್ ರೈ ಕಕ್ಕೆಪದವು ತಮ್ಮ ಸುಮಧುರ ಕಂಠದಿಂದ ಭಾಗವತಿಕೆ ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ಕಾಲೇಜಿನ

ಅಕ್ಷಯ ಕಾಲೇಜಿನಲ್ಲಿ “ಯಕ್ಷಸಿಂಚನ” ಯಕ್ಷಗಾನ ಕಲಾ ಸಂಘ ಉದ್ಘಾಟನೆ Read More »

ನರಿಮೊಗರು : ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದೀಕ್ಷಾ ಸಮಾರಂಭ

ನರಿಮೊಗರು: ಇಲ್ಲಿನ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ 2023-24ನೇ  ಶೈಕ್ಷಣಿಕ  ವರ್ಷದ  ನೂತನ  ವಿದ್ಯಾರ್ಥಿಗಳಿಗೆ  ದೀಕ್ಷಾ  ಸಮಾರಂಭ  ಹಾಗೂ  ಶಾಲಾ  ಪ್ರಾರಂಭೋತ್ಸವ ನಡೆಯಿತು. ಮುಖ್ಯ ಅತಿಥಿಯಾಗಿದ್ದ ಯತೀಶ್‌ ಅರ್ವಾರ ಮಾತನಾಡಿ, ನಾವು ಶಾಲೆಯಲ್ಲಿ ಹೇಳುವಂತಹ ಶ್ಲೋಕಕ್ಕೆ ಪೂರಕವಾದ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕು ಎಂದು ಹೇಳಿ ನೂತನ ಶೈಕ್ಷಣಿಕ ವರ್ಷಕ್ಕೆ ಶುಭಾಶಯ ಕೋರಿದರು. ವಿದ್ಯಾಸಂಸ್ಥೆಯ ಸಂಚಾಲಕ ಭಾಸ್ಕರ್‌ ಆಚಾರ್‌ ಹಿಂದಾರು ಮಾತನಾಡಿ, ನಾವು  ಆಯ್ಕೆ  ಮಾಡಿಕೊಂಡ ಯಾವುದೇ ಕ್ಷೇತ್ರವಿರಲಿ  ಭವಿಷ್ಯತ್ತಿನಲ್ಲಿ  ಯಾರಿಗೂ  ತೊಂದರೆ  ಕೊಡದಂತಹ  ವ್ಯಕ್ತಿಗಳಾಗಿ ಬೆಳಗಬೇಕು. ಇನ್ನೊಬ್ಬರಿಗೆ ಸಹಾಯಹಸ್ತ ನೀಡುವ ವ್ಯಕ್ತಿಗಳಾಗಿ ಸಮಾಜಕ್ಕೆ ಮಾದರಿಯಾಗಿರಬೇಕು ಎಂದು ಹೇಳಿ  ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಮಾತನಾಡಿ, ರಾಮ-ಕೃಷ್ಣರ  ಹಾಗೆ  ಶ್ರಮ ಪಟ್ಟು  ಉತ್ತಮ  ಸಾಧನೆ  ಮಾಡಿ 

ನರಿಮೊಗರು : ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ದೀಕ್ಷಾ ಸಮಾರಂಭ Read More »

ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ

ಪುತ್ತೂರು: ಸೂಕ್ತ ಆಯ್ಕೆ ಹಾಗೂ ನಿರಂತರ ಪರಿಶ್ರಮ ಯಶಸ್ಸಿಗೆ ದಾರಿ ಎಂದು ಅಂತಾರಾಷ್ಟ್ರೀಯ ಮಟ್ಟದ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ ಗಣೇಶ್ ಕುಲಾಲ್ ಮಾಣಿಲ ಹೇಳಿದರು. ಮಾಣಿಲ ಸರಕಾರಿ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ 10ನೇ ತರಗತಿಯಲ್ಲಿ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದ 13 ವಿದ್ಯಾರ್ಥಿಗಳಿಗೆ  ತಲಾ 2000  ರೂ ನಗದು ಪುರಸ್ಕಾರ ವಿತರಿಸಿ ಅವರು ಮಾತನಾಡಿದರು. ಕಳೆದ ಶೈಕ್ಷಣಿಕ ವರ್ಷದಲ್ಲಿ ಶಾಲಾಭಿವೃದ್ಧಿಗೆ ಪ್ರೋತ್ಸಾಹ ನೀಡಿದ್ದ ಇವರು ತನ್ನ ಭರವಸೆಯಂತೆ ಡಿಸ್ಟಿಂಕ್ಷನ್ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ನಗದು

ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ವಿತರಣೆ Read More »

ಬೆಳಂದೂರು ಗ್ರಾ.ಪಂ.ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

ಕಡಬ: ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸದುಪಯೋಗವನ್ನು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಮಕ್ಕಳು ಪಡೆದುಕೊಳ್ಳಬೇಕು. ಆ ಮೂಲಕ ಮುಂದಿನ ದಿನಗಳಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಲಿ ಎಂದು ಬೆಳಂದೂರು ಗ್ರಾ.ಪಂ. ಅಧ್ಯಕ್ಷ ಲೋಹಿತಾಕ್ಷ ಕೆಡೆಂಜಿಕಟ್ಟ ಹೇಳಿದರು. ಅವರು ಬೆಳಂದೂರು ಗ್ರಾ.ಪಂ. ಗ್ರಂಥಾಲಯ ವತಿಯಿಂದ ಬೆಳಂದೂರು ಗ್ರಾ.ಪಂ.ಸಭಾಂಗಣದಲ್ಲಿ ನಡೆದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಕುದ್ಮಾರು ಶಾಲಾ ಮುಖ್ಯಶಿಕ್ಷಕ  ಕುಶಾಲಪ್ಪ ಗೌಡ ಅವರು ಮಾಹಿತಿ ನೀಡಿದರು. ಗ್ರಾ. ಪಂ. ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ

ಬೆಳಂದೂರು ಗ್ರಾ.ಪಂ.ನಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ Read More »

error: Content is protected !!
Scroll to Top