ಲೇಖನ

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ

ಅವರು ಬರೆದ 900 ಹಿಂದಿ ಹಾಡುಗಳು ಕೂಡ ಸೂಪರ್ ಹಿಟ್ ಚಿಕ್ಕಂದಿನಿಂದ ಹಿಂದಿ ಸಿನೆಮಾದ ಅತ್ಯಂತ ಮಾಧುರ್ಯದ ಸುಮಧುರ ಗೀತೆಗಳನ್ನು ಕೇಳುತ್ತಾ, ಆರಾಧನೆ ಮಾಡುತ್ತ ಬೆಳೆದಿದ್ದ ನನಗೆ 60-70ರ ದಶಕದ ಕೆಲವು ಅದ್ಭುತವಾದ ಹಾಡುಗಳು ಹುಚ್ಚು ಹಿಡಿಸಿಬಿಟ್ಟಿದ್ದವು. ಆ ಹಾಡುಗಳನ್ನು ಬರೆದ ಕವಿಯ ಕಾವ್ಯಶಕ್ತಿಗೆ ಬೆರಗಾಗದೆ ಇರಲು ಸಾಧ್ಯವೇ ಇರಲಿಲ್ಲ.ಆ ಕವಿ ಯಾರು? ಎಂದು ಹುಡುಕುತ್ತಾ ಹೋದಾಗ ನನಗೆ ವಿಸ್ಮಯವೇ ಮೂಡಿತು. ಅತ್ಯಂತ ಕಡುಬಡತನದಲ್ಲಿ ಜನ್ಮ ತಾಳಿದ ಆ ಕವಿ, ಹಸಿದ ಹೊಟ್ಟೆಯಲ್ಲಿ 17 ವರ್ಷದ ಅವಧಿಯಲ್ಲಿ […]

ಸಾವಿರದ ಹಾಡುಗಳ ಅಮರ ಕವಿ ಶೈಲೇಂದ್ರ Read More »

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ?

ಕೊಳಚೆಗೇರಿಯಲ್ಲಿ ಕೂಡ ಅದ್ಭುತವಾದ ಪ್ರತಿಭೆಗಳು ಇರುತ್ತವೆ ಜಗತ್ತಿನ ಎಲ್ಲ ಮಕ್ಕಳೂ ದೇವರ ಮಕ್ಕಳೇ. ಪ್ರತಿಭೆಗೆ ಬಡವ, ಶ್ರೀಮಂತ ಎಂಬ ಬೇಧ ಖಂಡಿತವಾಗಿ ಇಲ್ಲ ಎನ್ನುವುದು ಸತ್ಯ. ಕೆಳಗೆ ನಾನು ಬರೆದ ಪ್ರತಿ ವಾಕ್ಯಕ್ಕೂ ಅಪವಾದಗಳು ಇವೆ. ಹಾಸಿಗೆ ಇದ್ದಷ್ಟು ಮಾತ್ರ ಕಾಲು ಚಾಚು ನಮ್ಮ ಹಿರಿಯರು ‘ತುಂಬಾ ಆಸೆ ಪಡಬೇಡ, ಇರೋದರಲ್ಲಿ ನೆಮ್ಮದಿಯಿಂದ ಬದುಕು’ ಎಂಬ ಆಶಯದಲ್ಲಿ ಈ ಮೇಲಿನ ಗಾದೆಯನ್ನು ಹೆಣೆದರು. ಆದರೆ ದೊಡ್ಡ ಕನಸು ಕಾಣುವುದು ಬೇಡ ಎಂದು ಯಾವತ್ತೂ ಹೇಳಲಿಲ್ಲ. ‘ಗುಡಿಸಲಲ್ಲಿ ಪ್ರತಿಭೆಗಳು

ಬಡವರ ಮಕ್ಕಳು ದೊಡ್ಡ ಕನಸು ಕಾಣುವುದು ತಪ್ಪಾ? Read More »

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ

ಇರಲಿ ವಾರ್ಷಿಕೋತ್ಸವಗಳಿಗೊಂದು ಸಂಹಿತೆಯ ಚೌಕಟ್ಟು ಕಳೆದ ಹತ್ತಾರು ವರ್ಷಗಳಿಂದ ನೂರಾರು ಕನ್ನಡ ಶಾಲೆಗಳ ವಾರ್ಷಿಕೋತ್ಸವದ ಕಾರ್ಯಕ್ರಮಗಳನ್ನು ನೋಡುತ್ತಾ ಬಂದಿರುವ ನನಗೆ ಇತ್ತೀಚೆಗೆ ಹೆಚ್ಚು ನಿರಾಸೆ ಕಾಡುತ್ತಿದೆ. ಕನ್ನಡದ ಸತ್ವವನ್ನು ಜಗತ್ತಿಗೆ ತೋರಿಸುವ ವಾರ್ಷಿಕೋತ್ಸವವನ್ನು ಮಾಡುವ ಶಾಲೆಗಳೂ ಇವೆ. ಅವರಿಗೆ ನಮ್ಮ ಅಭಿನಂದನೆ ಇರಲಿ. ವಾರ್ಷಿಕೋತ್ಸವ ಕಾರ್ಯಕ್ರಮಗಳ ಉದ್ದೇಶ ಏನು? ಈ ಮಕ್ಕಳ ಉತ್ಸವಗಳ ಉದ್ದೇಶ ಸಫಲ ಆಗ್ತಾ ಇದೆಯಾ? ಈ ಉಸಿರು ಕಟ್ಟುವ ಪ್ರೋಟೋಕಾಲ್ ಕಾರ್ಯಕ್ರಮಗಳಿಂದ ನಮ್ಮ ದೇವರಂತಹ ಮುಗ್ಧ ಮಕ್ಕಳ ನಿಜವಾದ ಪ್ರತಿಭೆ ಅರಳುತ್ತಿವೆಯಾ? ಯೋಚನೆ

ಹಳಿ ತಪ್ಪುತ್ತಿದೆ ಕನ್ನಡ ಶಾಲೆಗಳ ವಾರ್ಷಿಕೋತ್ಸವ Read More »

ವಾ ಉಸ್ತಾದ್ – ಝಾಕೀರ್ ಹುಸೇನ್ ನಿರ್ಗಮನ

ತಬಲಾವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದ ಪ್ರತಿಭಾವಂತ ತಬಲಾ ಸಾಮ್ರಾಟ್ ಉಸ್ತಾದ್ ಝಾಕೀರ್ ಹುಸೇನ್ ನಿಧನರಾದ ಸುದ್ದಿ ಸಂಗೀತಪ್ರೇಮಿಗಳಿಗೆ ನಿಜಕ್ಕೂ ಆಘಾತಕಾರಿ. ಆ ಶೂನ್ಯವನ್ನು ತುಂಬಿಸುವ ಇನ್ನೊಬ್ಬ ತಬಲಾ ಕಲಾವಿದ ಇಲ್ಲ ಅನ್ನುವುದು ಅವರ ತಾಕತ್ತು. ಅವರಿಗೆ 73 ವರ್ಷ ವಯಸ್ಸು ಆಗಿತ್ತು.12ನೆಯ ವಯಸ್ಸಿಗೇ ತಬಲಾ ಸೋಲೋ ಕಛೇರಿಯನ್ನು ನಡೆಸಿದ ಕೀರ್ತಿ ಅವರದ್ದು. ಅಂದಿನಿಂದಲೂ ತಬಲಾ ಅವರನ್ನು ಬಿಟ್ಟು ಹೋದದ್ದೇ ಇಲ್ಲ. ಅವರ ಮತ್ತು ತಬಲಾ ಗೆಳೆತನ 61 ವರ್ಷಗಳದ್ದು. ತಬಲಾ ಅಂದಕೂಡಲೇ ಜಗತ್ತು ನೆನಪಿಸಿಕೊಳ್ಳುವುದು, ಕನವರಿಸುವುದು ಉಸ್ತಾದರನ್ನೇ.

ವಾ ಉಸ್ತಾದ್ – ಝಾಕೀರ್ ಹುಸೇನ್ ನಿರ್ಗಮನ Read More »

ಗಾಂಧೀಜಿಯ ಕನಸಿನ ಸ್ವಚ್ಛ ಭಾರತಕ್ಕೆ ನಾವೇ ಅಡ್ಡಿ!

ಕಸದ ಕೊಂಪೆ ಆಗುತ್ತಾ ಇದೆ ಭಾರತ ನಮ್ಮ ಪ್ರಧಾನಮಂತ್ರಿ ಮೋದಿಜಿ ಅವರು ಸ್ವಚ್ಛ ಭಾರತದ ಅಭಿಯಾನಕ್ಕೆ ಕರೆ ನೀಡಿದರು. ಅದನ್ನು ಅವರು ನೂರಕ್ಕೆ ನೂರರಷ್ಟು ಪಾಲಿಸಿದರು. ಸ್ವತಃ ಪ್ರಧಾನಿ ರಸ್ತೆಗೆ ಬಂದು ಕಸಬರಿಕೆ ಹಿಡಿದು ಕಸ ಗುಡಿಸಿದರು. ಗಾಂಧೀಜಿಯವರ ಅತಿದೊಡ್ಡ ಕನಸಿನ ಅಭಿಯಾನಕ್ಕೆ ಚಾಲನೆ ನೀಡಿದರು. ಆದರೆ ಭಾರತ ಬದಲಾಯಿತಾ? 1) ಭಾರತದ 120 ಕೋಟಿ ಜನರಲ್ಲಿ ಅರ್ಧಾಂಶ ಜನ ಮಾತ್ರ ಶೌಚಾಲಯ ಬಳಸುತ್ತಾರೆ. 2) ವಾರ್ಷಿಕ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ 1.86 ಲಕ್ಷ ಮಕ್ಕಳು

ಗಾಂಧೀಜಿಯ ಕನಸಿನ ಸ್ವಚ್ಛ ಭಾರತಕ್ಕೆ ನಾವೇ ಅಡ್ಡಿ! Read More »

ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ…

21ನೇ ವರ್ಷಕ್ಕೆ ಉಸಿರು ಚೆಲ್ಲಿದ್ದ ಗಣಿತದ ಮೇರು ಪ್ರತಿಭೆಯ ದುರಂತ ಕಥೆ ಫ್ರಾನ್ಸ್ ದೇಶದ ಅತ್ಯಂತ ಪ್ರತಿಭಾವಂತ ಗಣಿತ ತಜ್ಞನ ಬದುಕು ದುರಂತವಾದದ್ದು ಯಾಕೆ? ಆತನ ಕಥೆಯನ್ನು ಓದುತ್ತಾ ಹೋಗಿ.ಅವನ ಹೆಸರು ಎವರೆಸ್ಟ್ ಗಾಲ್ವಾ (Everest Galois). ಆತ ಬದುಕಿದ್ದು 21 ವರ್ಷ ಮಾತ್ರ. ಆದರೆ ಅಷ್ಟರಲ್ಲಿ ಆತ ತಾನೆಷ್ಟು ಪ್ರತಿಭಾವಂತ ಎಂದು ಸಾಬೀತು ಮಾಡಿ ಆಗಿತ್ತು. ಆತನ ಬಾಲ್ಯದ ಒಂದು ಘಟನೆ… ಬಾಲ್ಯದಲ್ಲಿ ಅವನು ಒಂದನೇ ತರಗತಿಯಲ್ಲಿ ಓದುತ್ತಿದ್ದಾಗ ತುಂಬ ತಂಟೆ ಮಾಡುತ್ತಿದ್ದ. ಅದನ್ನು ಸಹಿಸಿಕೊಳ್ಳಲು

ಮೈತುಂಬ ಗುಂಡುಗಳು ಇದ್ದರೂ ಗಣಿತದ ಆ ಮಹಾತಜ್ಞ ಬರೆಯುತ್ತಲೇ ಇದ್ದ… Read More »

ಮಗುವಿನ ಪರಿಪೂರ್ಣ ಶಿಕ್ಷಣಕ್ಕೆ 4 Qಗಳು

ಬುದ್ಧಿವಂತಿಕೆ ಒಂದೇ ಮಗುವಿನ ಆಸ್ತಿ ಅಲ್ಲ ನಿಮ್ಮ ಮಗುವಿನ ಸಾಮರ್ಥ್ಯಗಳನ್ನು ಕೇವಲ ಪರೀಕ್ಷೆಯ ಅಂಕಗಳ ಮೂಲಕ ಅಳತೆ ಮಾಡುವ ಕಾಲ ಒಂದಿತ್ತು. ಮಕ್ಕಳು ಪಡೆದ ಅಂಕಗಳ ಆಧಾರದ ಮೇಲೆ ಬುದ್ಧಿವಂತ, ದಡ್ಡ ಇತ್ಯಾದಿಗಳ ವರ್ಗೀಕರಣ ಆಗ್ತಿತ್ತು.ಆದರೆ ಮುಂದೆ ಗುಣಾತ್ಮಕವಾದ ಶಿಕ್ಷಣದ ಕಾನ್ಸೆಪ್ಟ್ ವಿಸ್ತಾರ ಆಗುತ್ತ ಹೋದಂತೆ ಮಗುವಿನ ಸರ್ವಾಂಗೀಣವಾದ ವಿಕಾಸ ಶಿಕ್ಷಣದ ಉದ್ದೇಶ ಅಂತ ಆಯ್ತು. ಅದರ ಆಧಾರದ ಮೇಲೆ ಮಗುವಿನ ಶಿಕ್ಷಣ ಪರಿಪೂರ್ಣ ಆಗಬೇಕು ಅಂತಾದರೆ ಈ ಕೆಳಗಿನ ನಾಲ್ಕು ಅಂಶಗಳು ಅತಿಮುಖ್ಯ ಎಂದು ಶಿಕ್ಷಣತಜ್ಞರು

ಮಗುವಿನ ಪರಿಪೂರ್ಣ ಶಿಕ್ಷಣಕ್ಕೆ 4 Qಗಳು Read More »

ಭಾರತದ ವಾಲ್ಟ್ ಡಿಸ್ನಿ ಅಂಕಲ್ ಪೈ

ಅಮರ ಚಿತ್ರಕಥಾ ಸರಣಿಗಳ ಜನಕ ಅವರು ಪ್ರತಿಯೊಬ್ಬರೂ ಬಾಲ್ಯದಲ್ಲಿ ಖಂಡಿತವಾಗಿ ಓದಿರುವ ಹಾಗೂ ಇಂದಿಗೂ ಓದಲು ಇಚ್ಛೆ ಪಡುವ ಎರಡು ಕಾಮಿಕ್ಸ್ ಪುಸ್ತಕಗಳ ಸರಣಿಗಳೆಂದರೆ ಅವು ಅಮರ ಚಿತ್ರಕಥಾ ಮತ್ತು ಟಿಂಕಲ್. ಬಣ್ಣ ಬಣ್ಣದ ಚಿತ್ರಗಳ ಜೊತೆಗೆ ಕಥೆ ಹೇಳುವ ಆಕರ್ಷಕ ಪುಸ್ತಕಗಳು ಅವು. ನಮ್ಮೆಲ್ಲರ ಮನಸ್ಸಿನಲ್ಲಿ ಅದ್ಭುತ ರಮ್ಯ ಕಲ್ಪನಾಲೋಕ ಸೃಷ್ಟಿಸಿದ ಸರಣಿ ಪುಸ್ತಕಗಳು. ಅವೆರಡೂ ಸರಣಿಗಳನ್ನು ಭಾರತದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಸಿದವರು ಅನಂತ್ ಪೈಯವರು. ತಮ್ಮನ್ನು ‘ಅಂಕಲ್ ಪೈ’ ಎಂದವರು ಪ್ರೀತಿಯಿಂದ ಕರೆದುಕೊಂಡರು.

ಭಾರತದ ವಾಲ್ಟ್ ಡಿಸ್ನಿ ಅಂಕಲ್ ಪೈ Read More »

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…!

ರಾಮಾನುಜನ್ ಬದುಕಿನಲ್ಲಿ ತಿರುವು ಕೊಟ್ಟ ಆ ಘಟನೆ ಯಾವುದು? 1913ನೇ ಇಸವಿಯ ಡಿಸೆಂಬರ್ ತಿಂಗಳ ಮೈ ಕೊರೆಯುವ ಚಳಿಯ ಒಂದು ದಿನ. ಆಕ್ಸಫರ್ಡ್ ವಿವಿಯ ತನ್ನ ಕೊಠಡಿಯಲ್ಲಿ ಕುಳಿತು ಗಣಿತದ ಪ್ರಸಿದ್ಧ ಪ್ರೊಫೆಸರ್ ಹಾರ್ಡಿ ಸರ್ ಅವರು ಸಿಗಾರ್ ಎಳೆಯುತ್ತಿದ್ದರು. ಅವರ ಟೇಬಲ್ ಮೇಲೆ ಅಂಚೆಚೀಟಿ ಹೊತ್ತ ಕಂದು ಬಣ್ಣದ ಒಂದು ಕವರ್ ಬಂದು ಕೂತಿತ್ತು. ಅದು ಭಾರತದಿಂದ ಹಡಗಿನಲ್ಲಿ ಕೂತು ಇಂಗ್ಲೆಂಡಿಗೆ ಬಂದಿತ್ತು. ಹಾರ್ಡಿ ಸರ್ ಅದನ್ನು ಮೇಲೆ ಮೇಲೆ ಒಮ್ಮೆ ನೋಡಿ ಬದಿಗೆ ಸರಿಸಿದರು.

ಆ ಒಂದು ಪತ್ರವನ್ನು ಹಾರ್ಡಿ ಸರ್ ತೆರೆಯದೇ ಇದ್ದಿದ್ದರೆ…! Read More »

ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌

ರಶ್ಮಿಕಾ ಮಂದಣ್ಣ ಬೆಳೆದು ಬಂದ ದಾರಿ ನಿಜಕ್ಕೂ ವಿಸ್ಮಯ ಇಂದು ಇಡೀ ಭಾರತದ ಸಿನೆಮಾ ಇಂಡಸ್ಟ್ರಿ ಆಕೆಯ ಸೌಂದರ್ಯ ಮತ್ತು ಪ್ರತಿಭೆಗೆ ಬೆರಗಾಗಿದೆ. ಆಕೆಯನ್ನು ಸಿನೆಮಾ ಪಂಡಿತರು ಭಾರತದ ಕೃಶ್‌ ಎಂದು ಕರೆಯಲು ಆರಂಭಿಸಿದ್ದಾರೆ. ಆಕೆ ಇಂದು ದಕ್ಷಿಣ ಭಾರತದ ಅತ್ಯಂತ ಹೆಚ್ಚು ಸಂಭಾವನೆ ಪಡೆವ ನಟಿ ಎಂದು ಕರೆಯಲ್ಪಟ್ಟಿದ್ದಾರೆ. ಭಾರತದ ಹೆಚ್ಚಿನ ಸೂಪರ್‌ಸ್ಟಾರ್ ನಟರ ಜೊತೆ ಆಕೆ ನಟಿಸಿ ಆಗಿದೆ. ದಕ್ಷಿಣ ಭಾರತದ ಒಬ್ಬ ನಟಿ ಅಮಿತಾಬ್, ಸಲ್ಮಾನ್ ಖಾನ್ ಮೊದಲಾದ ಮಹಾನ್ ನಟರ ಸಿನೆಮಾದಲ್ಲಿ

ಕಿರಿಕ್ ಪಾರ್ಟಿಯ ಸಾನ್ವಿ ಇದೀಗ ಇಡೀ ಭಾರತದ ಕೃಶ್‌ Read More »

error: Content is protected !!
Scroll to Top