ಲೇಖನ

ಪರೀಕ್ಷೆಗೆ ಕೊನೆಯ ಕ್ಷಣದ ಸಿದ್ಧತೆ ಮಾಡಲು ಇಲ್ಲಿದೆ ಟಿಪ್ಸ್

ಎಸೆಸೆಲ್ಸಿ ವಿದ್ಯಾರ್ಥಿಗಳು ಇನ್ನು ಓದಿದರೂ ಪಾಸ್ ಆಗಬಹುದು (ಭಾಗ 2) 1) ಸುಂದರವಾದ ಕೈಬರಹ ನಿಮಗೆ ಹೆಚ್ಚು ಅಂಕಗಳನ್ನು ತಂದುಕೊಡುತ್ತದೆ. ಇನ್ನು ಕಾಪಿ ಬರೆದು ಅಕ್ಷರ ಚಂದ ಮಾಡಲು ನಿಮಗೆ ಸಮಯ ಇಲ್ಲ. ಆದರೆ ದಿನಕ್ಕೊಂದು ಅರ್ಧ ಗಂಟೆ ಸಮಯ ತೆಗೆದುಕೊಂಡು ಖಾಲಿ ಪೇಪರಿನಲ್ಲಿ ಐದಾರು ಪುಟ ಸುಂದರವಾಗಿ ಬರೆಯುವುದರಿಂದ ನಿಮ್ಮ ಪ್ರೆಸೆಂಟೇಷನ್ ಹೆಚ್ಚು ಮೌಲ್ಯ ಪಡೆಯುತ್ತದೆ. ಅದಕ್ಕೂ ಹೆಚ್ಚು ಏಕಾಗ್ರತೆ ಬೇಕು. 2) ಮೂರೂ ಭಾಷೆಗಳಲ್ಲಿ ಪತ್ರ ಲೇಖನಕ್ಕೆ ತಲಾ ಐದು ಅಂಕಗಳು ಇವೆ. ಆಫಿಶಿಯಲ್ […]

ಪರೀಕ್ಷೆಗೆ ಕೊನೆಯ ಕ್ಷಣದ ಸಿದ್ಧತೆ ಮಾಡಲು ಇಲ್ಲಿದೆ ಟಿಪ್ಸ್ Read More »

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನು ಓದಿದರೂ ಪಾಸ್ ಆಗಬಹುದು…

ಕೊನೆಯ ಹಂತದ ಪ್ಲಾನಿಂಗ್ ಹೀಗಿರಲಿ ಪ್ರೀತಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳೇ ನಿಮಗೆಲ್ಲಾ ಮೊದಲಾಗಿ ನಮ್ಮ ಶುಭಾಶಯಗಳು.ನಿಮ್ಮ ಜೀವನದ ಮೊದಲ ಬೋರ್ಡ್ ಪರೀಕ್ಷೆಯನ್ನು ಬರೆಯುತ್ತಿದ್ದೀರಿ. ಇದು ನೀವು ಎದುರಿಸುವ ಮೊದಲ ರಾಜ್ಯಮಟ್ಟದ ಪರೀಕ್ಷೆ. ಮುಂದೆ ನೀವು ಎದುರಿಸುವ ಹಲವು ಬೋರ್ಡ್ ಪರೀಕ್ಷೆಗಳಿಗೆ ಇದು ಖಂಡಿತವಾಗಿಯೂ ಪಂಚಾಂಗ ಆಗುತ್ತದೆ.2023ರ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈಗಾಗಲೇ ಕ್ಷಣಗಣನೆಯು ಆರಂಭ ಆಗಿದೆ. ಮಾ.31ರಂದು ನಿಮ್ಮ ಪರೀಕ್ಷೆಗಳು ಆರಂಭ ಆಗಲಿವೆ. ನಿಮಗೆ ಕಳೆದ ವರ್ಷ ಮೇ 16ರಿಂದ ಇಂದಿನ ದಿನದವರೆಗೂ ನಿಮ್ಮ ಅಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ತರಬೇತಿ

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಇನ್ನು ಓದಿದರೂ ಪಾಸ್ ಆಗಬಹುದು… Read More »

ದಕ್ಷಿಣ ಭಾರತದ ಕೋಗಿಲೆಗೆ ಎಸ್. ಜಾನಕಿ ಪ್ರಶಸ್ತಿಯ ಗರಿ

ಕರಾವಳಿ ಕರ್ನಾಟಕದಲ್ಲಿ ಇಂದು ಕೆ.ಎಸ್. ಚಿತ್ರಾ ಹಾಡ್ತಾರೆ ಕುಂದಾಪುರದಲ್ಲಿ ಸಂಗೀತದ ಸಾವಿರಾರು ಅಭಿಮಾನಿಗಳ ನಡುವೆ ಇಂದು ದಕ್ಷಿಣ ಭಾರತದ ಕೋಗಿಲೆ ಕೆ. ಎಸ್. ಚಿತ್ರಾ ಹಾಡುತ್ತಾರೆ ಅನ್ನುವಾಗ ಇಡೀ ಕರಾವಳಿ ಕರ್ನಾಟಕ ರೋಮಾಂಚನ ಪಡುತ್ತಾ ಇದೆ. ಕುಂದಾಪುರದ ವೈಭವೋಪೇತವಾದ ಒಪೆರಾ ಯುವಾ ಮೆರಿಡಿಯನ್ ಸಭಾಂಗಣದಲ್ಲಿ ಇಂದು ಸಂಜೆ ಅವರಿಗೆ ಎಸ್. ಜಾನಕಿ ಅಮ್ಮನ ಹೆಸರಿನ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಆಗಲಿದೆ. ಸಂಗೀತದ ಅಭಿಮಾನಿ ಹೃದಯಗಳಿಗೆ ಎರಡೂ ವಿಶೇಷವೇ. ಕೆಲವೇ ವರ್ಷಗಳ ಹಿಂದೆ ಎಸ್. ಜಾನಕಿ ಅಮ್ಮ ಹೃದಯ

ದಕ್ಷಿಣ ಭಾರತದ ಕೋಗಿಲೆಗೆ ಎಸ್. ಜಾನಕಿ ಪ್ರಶಸ್ತಿಯ ಗರಿ Read More »

ಕಪ್ಪು ಹದ್ದುಗಳ ಉಳಿವಿನ ರೋಚಕ ಸಿನೆಮಾ – ALL THAT BREATHS

ಇಬ್ಬರು ಸಹೋದರರ ಯಶೋಗಾಥೆಯ ಚಿತ್ರಣ – ಈ ವರ್ಷದ ಆಸ್ಕರ್ ಪ್ರಶಸ್ತಿಗೆ ನಾಮಿನೇಟ್ ಆದ ಸಿನೆಮಾ ಎಂದಿನಂತೆಯೇ ನಾನು ಸುಮ್ಮನೆ ಜಾಲತಾಣಗಳನ್ನು ಜಾಲಾಡುತ್ತ ಹೋದಾಗ ಈ ಡಾಕ್ಯುಮೆಂಟರಿ ಫಿಲ್ಮ್ ಥಟ್ಟನೆ ಗಮನ ಸೆಳೆಯಿತು. ಈ ವರ್ಷದ ಆಸ್ಕರ್ ಪ್ರಶಸ್ತಿಯ ರೇಸಲ್ಲಿ ಈ ಸಿನೆಮಾ ಇತ್ತು ಮತ್ತು ಫೈನಲ್ಸ್ ವರೆಗೆ ತಲುಪಿತ್ತು ಎಂದು ತಿಳಿದುಬಂತು. ಕಳೆದ ವರ್ಷ ಬಿಡುಗಡೆ ಆದ ಈ ಸಿನೆಮಾ ಈಗಾಗಲೇ ಹತ್ತಾರು ದೇಶಗಳ ಫಿಲ್ಮ್ ಫೆಸ್ಟಿವಲ್‌ಗಳಲ್ಲಿ ಸ್ಕ್ರೀನ್ ಆಗಿ ಪ್ರಶಸ್ತಿಗಳ ಸರಮಾಲೆಯನ್ನು ಗೆದ್ದಿದೆ ಅಂದಾಗ

ಕಪ್ಪು ಹದ್ದುಗಳ ಉಳಿವಿನ ರೋಚಕ ಸಿನೆಮಾ – ALL THAT BREATHS Read More »

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌…

ಇವುಗಳಲ್ಲಿ ಕೆಲವನ್ನಾದರೂ ಮಾಡಿ ನಿಮ್ಮ ಹ್ಯಾಪಿನೆಸ್ ಹೆಚ್ಚು ಮಾಡಿಕೊಳ್ಳಿ 1) ನಾವು ಕಲಿತ ಪ್ರೈಮರಿ ಶಾಲೆಯ ಜಗಲಿಯ ಮೇಲೆ ವಾರಕ್ಕೊಮ್ಮೆ ಹೋಗಿ ಒಂದಷ್ಟು ಹೊತ್ತು ಮೌನವಾಗಿ ಕುಳಿತು ಬರುವುದು. 2) ನಮ್ಮೊಂದಿಗೆ ಭಾವನಾತ್ಮಕ ಸಂಬಂಧ ಹೊಂದಿರುವ ಯಾರಾದರೂ ಐದು ಜನರಿಗೆ ವಾರಕ್ಕೊಮ್ಮೆ ಕಾಲ್ ಮಾಡಿ ಕ್ಯಾಶುವಲ್ ಆಗಿ ಸ್ವಲ್ಪ ಹೊತ್ತು ಪ್ರೀತಿಯಿಂದ ಮಾತನಾಡುವುದು. 3) ದಿನಕ್ಕೊಂದು ಹದಿನೈದು ನಿಮಿಷ ಬಿಡುವು ಮಾಡಿಕೊಂಡು ಕಿವಿಗೆ ಇಯರ್ ಫೋನ್ ಚುಚ್ಚಿಕೊಂಡು ಮಾಧುರ್ಯದ ಹಾಡುಗಳನ್ನು ಕೇಳುವುದು. 4) ಹಸಿರು ಪರಿಸರದ ನಡುವೆ

ನಿಮ್ಮ ಸಂತಸ ಹೆಚ್ಚಿಸಲು ಕೆಲವು ಟಿಪ್ಸ್‌… Read More »

ಕಗ್ಗದ ಸಂದೇಶ-

ಮಾನವ ಶಾಶ್ವತವಲ್ಲ ಮಾನವೀಯತೆ ಶಾಶ್ವತ… ದೇವರ್ಕಳುದಿಸಿ ಮರೆಯಹರು; ದೇವತ್ವ ಚಿರ|ಜಾವ ದಿನ ಬಂದು ಪೋಗುವುವು; ಕಾಲ ಚಿರ||ಜೀವದ ವ್ಯಕ್ತಿ ಸಾಯ್ವುದು; ಜೀವಸತ್ತ್ವ ಚಿರ|ಭಾವಿಸಾ ಕೇವಲವ – ಮಂಕುತಿಮ್ಮ||ಒಂದೊಂದು ಕಾಲದಲ್ಲಿ ನಾವು ಒಂದೊಂದು ದೇವರಿಗೆ ಪೂಜೆ ಸಲ್ಲಿಸುತ್ತಿರುವುದು ಚರಿತ್ರೆಯಿಂದ ನಮಗೆ ತಿಳಿಯುತ್ತದೆ. ಒಂದು ಕಾಲದಲ್ಲಿದ್ದ ದೇವರು ಇನ್ನೊಂದು ಕಾಲದಲ್ಲಿ ಮರೆಯಾಗಿ ಹೋಗಿರುವುದನ್ನು ನಾವು ಕಾಣಬಹುದು. ದೇವರುಗಳು ಕಾಲಕಾಲಕ್ಕೆ ಬದಲಾಗಬಹುದು ಆದರೆ ಮನುಷ್ಯ ಶಕ್ತಿಗಿಂತ ಮಿಗಿಲಾದ ನಾವು ಹಿಂದಿನಿಂದ ನಂಬಿಕೊಂಡು ಬಂದ ಒಂದು ದೈವಿಕ ಶಕ್ತಿ ಅಥವಾ ದೇವತ್ವ‌ ಎನ್ನುವುದು

ಕಗ್ಗದ ಸಂದೇಶ- Read More »

ನ್ಯಾಯಾಂಗದ ಹೆಮ್ಮೆ ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ

ಲೋಕಸಭೆಯ ಸ್ಪೀಕರ್ ಆಗಿ ಅನನ್ಯ ಮಾದರಿ 1973ರ ಇಸವಿಯ ಹೊತ್ತಿಗೆ ಸುಪ್ರೀಂ ಕೋರ್ಟಿನ ಒಬ್ಬ ನ್ಯಾಯಾಧೀಶರು ತಮ್ಮ ನ್ಯಾಯಾಂಗ ಬದ್ಧತೆಗೆ ಭಾರಿ ಹೆಸರು ಮಾಡಿದ್ದರು. ಯಾವ ಮುಲಾಜು ಇಲ್ಲದೆ ಅವರು ನೇರ ಮತ್ತು ದಿಟ್ಟ ತೀರ್ಪನ್ನು ಕೊಡುತ್ತಿದ್ದರು. ಒಮ್ಮೆ ದೇಶದ ಪವರಫುಲ್ ಪ್ರಧಾನಿ ಆಗಿದ್ದ ಇಂದಿರಾ ಗಾಂಧಿಯವರ ಒಂದು ಕೇಸ್ ವಿಚಾರಣೆಗೆ ಕೋರ್ಟಿಗೆ ಬಂದಾಗಲೂ ಯಾವ ಮುಲಾಜಿಗೆ ಬಗ್ಗದೆ ತೀರ್ಪು ನೀಡಿ ಭಾರಿ ಹೆಸರು ಮಾಡಿದ್ದರು. ಅವರೇ ಜಸ್ಟೀಸ್ ಕೆ. ಎಸ್. ಹೆಗ್ಡೆ.ಅದೇ ಹೊತ್ತಿಗೆ ಕೇಶವಾನಂದ ಭಾರತಿ

ನ್ಯಾಯಾಂಗದ ಹೆಮ್ಮೆ ಜಸ್ಟೀಸ್ ಕೌಡೂರು ಸದಾನಂದ ಹೆಗ್ಡೆ Read More »

ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್

ಸಿಡುಬು ರೋಗದ ಲಸಿಕೆಯ ಮೂಲಕ ಲಕ್ಷಾಂತರ ಜನರ ಪ್ರಾಣ ಉಳಿಸಿದ ಮಹಾವೈದ್ಯ ಇಂದು ವೈದ್ಯಕೀಯ ವಿಜ್ಞಾನವನ್ನು ಓದುತ್ತಿರುವ ಹಲವರನ್ನು ನಾನು ಮಾತಾಡುತ್ತೇನೆ. MBBS ಮಾಡಿ ಮುಂದೇನು ಮಾಡುತ್ತೀರಿ ಎನ್ನುವುದು ನನ್ನ ಸಾಮಾನ್ಯ ಪ್ರಶ್ನೆ. ಅದಕ್ಕೆ ಹೆಚ್ಚಿನವರು ಕೊಡುವ ಉತ್ತರ ನಾನು ಸರಕಾರಿ ಆಸ್ಪತ್ರೆಯ ಡಾಕ್ಟರ್ ಆಗಿ ಜನರ ಪ್ರಾಣ ಉಳಿಸುವ ಕೆಲಸ ಮಾಡುತ್ತೇನೆ ಎಂದು. ಇನ್ನೂ ಕೆಲವರು ನರ್ಸಿಂಗ್ ಹೋಮ್ ನಡೆಸುತ್ತೇನೆ ಅನ್ನುತ್ತಾರೆ. ಇನ್ನೂ ಕೆಲವರು ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಉಪನ್ಯಾಸಕ ಆಗುತ್ತೇನೆ ಎಂದೆಲ್ಲ ಹೇಳುತ್ತಾರೆ. ನಾನು

ಲಸಿಕಾ ವಿಜ್ಞಾನದ ಪಿತಾಮಹ ಎಡ್ವರ್ಡ್ ಜೆನ್ನರ್ Read More »

ಭಾವನೆಗಳೇ ಇಲ್ಲದವರ ಜತೆಗೆ ಬದುಕುವ ಕಷ್ಟ…

ರೋಬೋಟಿಗೂ ಇವರಿಗೂ ವ್ಯತ್ಯಾಸ ಇದೆಯಾ? ಕಳೆದ ಮೂವತ್ತು ವರ್ಷಗಳಿಂದ ಸಾವಿರಾರು ಮಾನವೀಯ ಸಂಬಂಧಗಳ ಬಗ್ಗೆ ತರಬೇತಿ ಕಾರ್ಯಗಾರಗಳನ್ನು ನಡೆಸುತ್ತಾ ಬಂದ ನನಗೆ ತುಂಬ ಆಶ್ಚರ್ಯ ಮತ್ತು ಆಘಾತ ತಂದು ಕೊಟ್ಟ ಒಂದು ಸಂಬಂಧದ ಬಗ್ಗೆ ಇವತ್ತು ಬರೆಯಬೇಕು. ಇಂತಹವರು ನಮ್ಮ ಸುತ್ತ ಇದ್ದರೂ ಇರಬಹುದು.ಒಂದು ನಿಜವಾದ ಉದಾಹರಣೆಯಿಂದ ಇಂದು ನನ್ನ ಲೇಖನ ಆರಂಭಿಸುವೆ. ಆ ಕುಟುಂಬ ತುಂಬಾನೇ ವಿಚಿತ್ರ ಆಗಿತ್ತು ನಮ್ಮ ಊರಿನಲ್ಲಿ ಮಧ್ಯಮ ವರ್ಗದ ಒಂದು ವಿಚಿತ್ರವಾದ ಕುಟುಂಬ ಇತ್ತು. ಆ ಕುಟುಂಬದಲ್ಲಿ ಮಾತುಕತೆ ನಿಂತು

ಭಾವನೆಗಳೇ ಇಲ್ಲದವರ ಜತೆಗೆ ಬದುಕುವ ಕಷ್ಟ… Read More »

ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪತ್ರ

ಇಂದು ನಿಮ್ಮ 49ನೆಯ ಹುಟ್ಟಿದ ಹಬ್ಬ ಅಪ್ಪು ಸರ್, ಹೇಗಿದ್ದೀರಿ?ಇಂದು ನಿಮಗೆ 48 ತುಂಬಿತು. ಆದರೆ ನಿಮ್ಮ ಹೃದಯಕ್ಕೆ ಇನ್ನೂ ಹದಿನಾರರ ಹರೆಯ!ನಿಮ್ಮ ಜೀವನ ಪ್ರೀತಿ ಮತ್ತು ಮುಗ್ಧತೆ ನಿಮ್ಮನ್ನು ನಮ್ಮ ಹೃದಯದಲ್ಲಿ ಶಾಶ್ವತ ಮಾಡಿ ಬಿಟ್ಟಿದೆ. ದೊಡ್ಡಮನೆ ಹುಡುಗ ಹೇಗಿರಬೇಕು ಎನ್ನುವುದನ್ನು ನಿಮ್ಮಷ್ಟು ಚೆನ್ನಾಗಿ ಯಾರೂ ಸಾಬೀತು ಮಾಡಲು ಸಾಧ್ಯವೇ ಆಗಿಲ್ಲ ಅಪ್ಪು ಸರ್. ನಿಮ್ಮ ವ್ಯಕ್ತಿತ್ವಕ್ಕೆ ನೂರಾರು ಆಯಾಮಗಳು ಅಪ್ಪು ಸರ್ ನಿಮ್ಮನ್ನು ಕೇವಲ ಸಿನೆಮಾ ನಟ, ವರನಟನ ಮಗ ಇಷ್ಟೇ ಆಗಿ ನಾವು

ನಮ್ಮ ಪ್ರೀತಿಯ ಅಪ್ಪು ಸರ್ ಅವರಿಗೊಂದು ಪತ್ರ Read More »

error: Content is protected !!
Scroll to Top