ದೃಷ್ಟಿ ವೈಕಲ್ಯ ಮೆಟ್ಟಿ ನಿಂತು ಐಎಎಸ್ ಅಧಿಕಾರಿ ಆದ ಪ್ರಾಂಜಲ್ ಪಾಟೀಲ್ | ಎರಡು ಬಾರಿ ಐಎಎಸ್ ಪರೀಕ್ಷೆಯಲ್ಲಿ ತೇರ್ಗಡೆ
ಭಾರತದ ಅತ್ಯಂತ ಕ್ಲಿಷ್ಟವಾದ ಪರೀಕ್ಷೆ ಅಂದರೆ ಐಎಎಸ್. ಕೇಂದ್ರ ಸರಕಾರದ ಅಧೀನ ಸಂಸ್ಥೆಯಾದ UPSC ನಡೆಸುವ ಈ ಪರೀಕ್ಷೆಯಲ್ಲಿ ಪ್ರತಿ ವರ್ಷ 7ರಿಂದ 8 ಲಕ್ಷ ಯುವಕ-ಯುವತಿಯರು ತಮ್ಮ ಪ್ರತಿಭೆಯನ್ನು ನಿಕಷಕ್ಕೆ ಒಡ್ಡುತ್ತಿದ್ದು, ತೇರ್ಗಡೆ ಆಗುವವರ ಪ್ರಮಾಣ ಶೇ.2-3 ಮಾತ್ರ. ಅಂತಹ ಪರೀಕ್ಷೆಯಲ್ಲಿ ಪೂರ್ಣ ಅಂಧತ್ವ ಇರುವ ಹುಡುಗಿಯೊಬ್ಬಳು ಎರಡು ಬಾರಿ ತೇರ್ಗಡೆಯಾದರು ಅಂದರೆ ನಂಬೋದು ಹೇಗೆ? ಆಕೆಯ ಹೆಸರು ಪ್ರಾಂಜಲ್ ಪಾಟೀಲ್. ಮಹಾರಾಷ್ಟ್ರದ ಉಲ್ಲಾಸ ನಗರದವರು. ಹುಟ್ಟುವಾಗ ಆಕೆಗೆ ಮಸುಕು ಮಸುಕಾಗಿ ಕಾಣುತ್ತಿತ್ತು. ಆರು ವರ್ಷ […]