ಸ್ಥಳೀಯ ಸುದ್ದಿ

ಅಕ್ಷಯ ಕಾಲೇಜಿನಲ್ಲಿ ‘ದಿ ನೆಕ್ಸ್ಟ್ ಚಾಪ್ಟರ್’ ಕೆರಿಯರ್ ಮಾರ್ಗದರ್ಶನ ಕಾರ್ಯಕ್ರಮ

ಪುತ್ತೂರು: ಅಕ್ಷಯ ಕಾಲೇಜಿನ ಹಾಸ್ಪಿಟಾಲಿಟಿ ಸೈನ್ಸ್ ವಿಭಾಗದ ಕಾಯು ಸಂಘಟನೆಯ ವತಿಯಿಂದ ‘ದಿ ನೆಕ್ಸ್ಟ್ ಚಾಪ್ಟರ್’ ಎಂಬ ಕೆರಿಯರ್ ಆಧಾರಿತ ಕಾರ್ಯಕ್ರಮ ನಡೆಯಿತು. ಅಕ್ಷಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಅಕ್ಷಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಭವಿಷ್ಯದ ಶಿಕ್ಷಣ ಮತ್ತು ವೃತ್ತಿ ಮಾರ್ಗಗಳ ಬಗ್ಗೆ ಜ್ಞಾನಾಧಾರಿತ ನಿರ್ಧಾರಗಳನ್ನು ತೆಗೆದುಕೊಳ್ಳಲು ಮಾರ್ಗದರ್ಶನ ನೀಡಿತು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೌಶಲ್ಯ ಆಧಾರಿತ ಶಿಕ್ಷಣ, ಜಾಗತಿಕ ಒಡನಾಟ ಮತ್ತು ಅನುಕೂಲತೆಯ ಬೆಳೆಯುತ್ತಿರುವ ಮಹತ್ವವನ್ನು ಕಾರ್ಯಾಗಾರಾಧಲ್ಲಿ ಹೇಳಲಾಯಿತು. ಸಾಂಪ್ರದಾಯಿಕ […]

ಅಕ್ಷಯ ಕಾಲೇಜಿನಲ್ಲಿ ‘ದಿ ನೆಕ್ಸ್ಟ್ ಚಾಪ್ಟರ್’ ಕೆರಿಯರ್ ಮಾರ್ಗದರ್ಶನ ಕಾರ್ಯಕ್ರಮ Read More »

KSRTC ಬಸ್ಸಿನಲ್ಲಿ ಕೀ ಗೊಂಚಲು ಬಿದ್ದು ಸಿಕ್ಕಿದೆ: ಕಳಕೊಂಡವರು ಸಂಪರ್ಕಿಸಲು ಸೂಚನೆ

ಪುತ್ತೂರು: ಇಂದು (23 ಮಾರ್ಚ್ 2026, ಸೋಮವಾರ) ಬೆಳಗ್ಗೆ ಉಪ್ಪಿನಂಗಡಿ ಮಾರ್ಗವಾಗಿ ಹಾಸನದಿಂದ ‌ಪುತ್ತೂರಿಗೆ ಬಂದ F-0102 ಕೆಎಸ್‌ಆರ್‌ಟಿ‌ಸಿ ಬಸ್ಸಿನಲ್ಲಿ ಚಾಲಕನಿಗೆ ಕೀ ಗೊಂಚಲೊಂದು ಬಿದ್ದು ಸಿಕ್ಕಿರುತ್ತದೆ. ಹಾಸನದಿಂದ 8.30 ಕ್ಕೆ ಹೊರಟು ಪುತ್ತೂರಿಗೆ 12 ಗಂಟೆಗೆ ಬಂದು ತಲುಪಿದ ಬಸ್ಸಿನಲ್ಲಿ ಕೀ ಬಂಚ್ ‌ಸಿಕ್ಕಿರುವುದಾಗಿದೆ. ಅದನ್ನು ಕೆಎಸ್‌ಆರ್‌ಟಿ‌ಸಿ ಪುತ್ತೂರು ಘಟಕದ ಇಂಧನ ಶಾಖೆಯಲ್ಲಿ ನೀಡಲಾಗಿತ್ತು, ಕಳಕೊಂಡವರು ಸಂಪರ್ಕಿಸಬಹುದಾಗಿದೆ.

KSRTC ಬಸ್ಸಿನಲ್ಲಿ ಕೀ ಗೊಂಚಲು ಬಿದ್ದು ಸಿಕ್ಕಿದೆ: ಕಳಕೊಂಡವರು ಸಂಪರ್ಕಿಸಲು ಸೂಚನೆ Read More »

ಕೃಷ್ಣನಗರದ ಹಳೆಯ ಮನೆಗೆ ಹೊಸ ಕಾಯಕ: ಸಾಯಿ ಸೇವಾ ಕಾರ್ಯ

ಪುತ್ತೂರು:ಪುತ್ತೂರಿನ ಕೃಷ್ಣನಗರದ ಸಮೀಪವಿರುವ ಹಳೆಯ ಮನೆಯೊಂದರ ಮೇಲ್ಛಾವಣಿಯು ಸಂಪೂರ್ಣವಾಗಿ ಶಿಥಿಲಗೊಂಡು ವಾಸಿಸಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದಾಗ, ಶ್ರೀ ಸತ್ಯಸಾಯಿ ಸ್ವಯಂಸೇವಕರು ಮಾನವೀಯತೆಯ ನೆಲೆಯಲ್ಲಿ ನೆರವಿಗೆ ಧಾವಿಸಿದ್ದಾರೆ. ಮಳೆಗಾಲದ ಮುನ್ನವೇ ಈ ಮನೆಯನ್ನು ದುರಸ್ತಿಗೊಳಿಸುವ ಉದ್ದೇಶದಿಂದ, ವಿಶೇಷ ಸೇವಾ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು. ಸದಸ್ಯರು ಸ್ವತಃ ಶ್ರಮದಾನದಲ್ಲಿ ಪಾಲ್ಗೊಂಡು, ಹಳೆಯ ಮೇಲ್ಛಾವಣಿಯನ್ನು ತೆರವುಗೊಳಿಸಿ ಹೊಸ ಶೀಟ್ ಹಾಗೂ ಅಗತ್ಯ ಸಾಮಗ್ರಿಗಳನ್ನು ಅಳವಡಿಸುವ ಮೂಲಕ ಮನೆಯನ್ನು ಸುಸ್ಥಿತಿಗೆ ತಂದಿದ್ದಾರೆ. ಈ ಉದಾತ್ತ ಸೇವಾ ಕಾರ್ಯದಲ್ಲಿ ಪ್ರೊ. ಗೋವಿಂದ ಭಟ್, ರಮೇಶ್ ಆಚಾರ್, ಜಗನ್ನಾಥ

ಕೃಷ್ಣನಗರದ ಹಳೆಯ ಮನೆಗೆ ಹೊಸ ಕಾಯಕ: ಸಾಯಿ ಸೇವಾ ಕಾರ್ಯ Read More »

ಅಸೌಖ್ಯದಿಂದ ಮಹಿಳೆ ಮೃತ್ಯು

ಕಾಣಿಯೂರು: ಅಸೌಖ್ಯದಿಂದ ಕಾಣಿಯೂರು ಗ್ರಾಮದ ಕೆನ್ನಾರುವಿನ ರಂಜಿತಾ(33) ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ. ಮೃತರು ಪತಿ ರಾಘವೇಂದ್ರ, ಪುತ್ರರಾದ ದಿಶಾಂತ್, ಸುಮಂತ್, ಅತ್ತೆ ಪುಷ್ಪಾವತಿ ಅವರನ್ನು ಅಗಲಿದ್ದಾರೆ.

ಅಸೌಖ್ಯದಿಂದ ಮಹಿಳೆ ಮೃತ್ಯು Read More »

ಕುರಿಯ ಏಳ್ನಾಡುಗುತ್ತು ಶ್ರೀ ಮಹಾಲಿಂಗೇಶ್ವರ ದೇವರ ಆರಾಧನ ಸಮಿತಿ ರಚನೆ

ಅಧ್ಯಕ್ಷರಾಗಿ ಮೋಹನ್ ರೈ, ಪ್ರಧಾನ ಕಾರ್ಯದರ್ಶಿಯಾಗಿ ಕೆ. ರಾಜೇಂದ್ರ ಪ್ರಸಾದ್ ಶೆಟ್ಟಿ ನೇಮಕ ಪುತ್ತೂರು: ಸೀಮಾಧಿಪತಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಆರಾಧನ ಸಮಿತಿಯ ಕುರಿಯ ಏಳ್ನಾಡುಗುತ್ತಿನ ವಾರ್ಷಿಕ ಮಹಾಸೇವೆ ಅಧ್ಯಕ್ಷ ಚೆನ್ನಪ್ಪ ರೈ ಬಳಜ್ಜ ಇವರ ನೇತೃತ್ವದಲ್ಲಿ ಸಾಂಗವಾಗಿ ಜರುಗಿತು. ಇದೇ ಸಂದರ್ಭದಲ್ಲಿ 2025ನೇ ಸಾಲಿನ ವರದಿ ಮಂಡನೆ, ಅನುಮೋದನೆಗಳು ನಡೆದವು. ಸಮಿತಿಯ ಪುನಾರಚನೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಮೋಹನ್ ರೈ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಸಮರ್ಪಣಾ ಚಾರಿಟೇಬಲ್ ಟ್ರಸ್ಟ್’ನ ಅಧ್ಯಕ್ಷ ಮತ್ತು G5 Nexus

ಕುರಿಯ ಏಳ್ನಾಡುಗುತ್ತು ಶ್ರೀ ಮಹಾಲಿಂಗೇಶ್ವರ ದೇವರ ಆರಾಧನ ಸಮಿತಿ ರಚನೆ Read More »

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವ್ಯೂಹ ಭಿತ್ತಿಪತ್ರ ಅನಾವರಣ

ಸಂಪ್ಯ:ಅಕ್ಷಯ ಕಾಲೇಜು ಪುತ್ತೂರು ಇಲ್ಲಿನ ಇನ್ವಿಕ್ತ ವಾಣಿಜ್ಯ ಸಂಘ ಮತ್ತು ಐಕ್ಯೂಎಸಿ ಇದರ ಸಹಯೋಗದಲ್ಲಿ ‘ವಾಣಿಜ್ಯ ವ್ಯೂಹ’ ಎಂಬ ಶಿರೋನಾಮೆಯಲ್ಲಿ ಭಿತ್ತಿಪತ್ರದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮವನ್ನು ಕೇಶವ್ ಅಮೈ (ಆಡಳಿತ ನಿರ್ದೇಶಕರು ಎಸ್.ಆರ್.ಕೆ. ಲ್ಯಾಡರ್ಸ್ ಪುತ್ತೂರು) ಇವರು ಉದ್ಘಾಟಿಸಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಎಲ್ಲಿದ್ದರು ತಮ್ಮ ಬದುಕನ್ನು ರೂಪಿಸುವಲ್ಲಿ ಯಶಸ್ವಿಯಾಗುತ್ತಾರೆ. ಸಿಕ್ಕ ಅವಕಾಶಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಜೀವನದಲ್ಲಿ ಯಶಸ್ವಿಯನ್ನು ಪಡೆದುಕೊಳ್ಳಬೇಕು ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಮುಖ್ಯ ಅತಿಥಿ ಡಾ. ಅಕ್ಷಯ್ (ಕಾರ್ಯದರ್ಶಿ ಅಕ್ಷಯ ಸಮೂಹ

ಅಕ್ಷಯ ಕಾಲೇಜಿನಲ್ಲಿ ವಾಣಿಜ್ಯ ವ್ಯೂಹ ಭಿತ್ತಿಪತ್ರ ಅನಾವರಣ Read More »

ಯುಗಾದಿ ಪ್ರಯುಕ್ತ ಜಿ. ಎಲ್. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ‌ವಿಶೇಷ ಆಫರ್

ಪುತ್ತೂರು: ನಗರದ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಜಿ. ಎಲ್. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ಪ್ರಕಟಿಸಿದೆ. ಹಳದಿ ಟ್ಯಾಗ್ ಹೊಂದಿರುವ ವಿಶೇಷ ಆಭರಣಗಳ ಮೇಕಿಂಗ್ ಶುಲ್ಕಗಳ ಮೇಲೆ 50%ವರೆಗೆ ರಿಯಾಯಿತಿಯೊಂದಿಗೆ ಖರೀದಿ ಮಾಡುವ ಅವಕಾಶವನ್ನು ಪಡೆಯಬಹುದಾಗಿದೆ. ಪುತ್ತೂರು, ಸುಳ್ಯ, ಹಾಸನ, ಕುಶಾಲನಗರ ಹಾಗೂ ಮೂಡಬಿದ್ರೆಯ ಮಳಿಗೆಗಳಲ್ಲಿ ಈ ಆಫರ್ ಲಭ್ಯವಿದ್ದು, ಗ್ರಾಹಕರು ಹಬ್ಬದ ಸಂಭ್ರಮವನ್ನು ಹೊಸ ಆಭರಣಗಳೊಂದಿಗೆ ಆಚರಿಸಲು ಉತ್ತಮ ಅವಕಾಶ ಕಲ್ಪಿಸಲಾಗಿದೆ. ಈ ಕೊಡುಗೆ ಮಾರ್ಚ್ 18ರಿಂದ 23ರವರೆಗೆ ಮಾತ್ರ

ಯುಗಾದಿ ಪ್ರಯುಕ್ತ ಜಿ. ಎಲ್. ಆಚಾರ್ಯ ಜುವೆಲ್ಲರ್ಸ್‌ನಲ್ಲಿ ‌ವಿಶೇಷ ಆಫರ್ Read More »

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ

ಉಪ್ಪಿನಂಗಡಿ: ಪಾರದರ್ಶಕತೆಯಿಂದ ಸಮಾಜ ಸೇವಾ ಕಾರ್ಯಗಳನ್ನು ಮಾಡುವ ಸಂಸ್ಥೆಗಳಿಗೆ ಜನರ ಬೆಂಬಲವಿದ್ದು ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಸೇವಾ ಕಾರ್ಯಗಳನ್ನು ನಡೆಸಲು ಕರ್ನಾಟಕ ಸೇವಾ ಭಾರತೀ ಸಂಸ್ಥೆಯು ಮಾರ್ಗದರ್ಶನ ನೀಡಲು ಬದ್ಧವಾಗಿದೆ ಎಂದು ಸೇವಾ ಭಾರತಿ ಸಂಸ್ಥೆಯ ದಕ್ಷಿಣ ಪ್ರಾಂತ್ಯದ ಸಂಚಾಲಕ ಕೆ. ಚೆನ್ನಯ್ಯ ಸ್ವಾಮಿ ದೇರೆಬೈಲು ತಿಳಿಸಿದರು. ಉಪ್ಪಿನಂಗಡಿಯ ಪಾತಾಳ ನಿವಾಸದಲ್ಲಿ ಜರಗಿದ ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನ ರಿ. ಮೆಲ್ಕಾರು ಬಂಟ್ವಾಳ ಇದರ ಕೇಂದ್ರ ಸಮಿತಿಯ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಪ್ರಸಿದ್ಧ

ಅಖಿಲ ಕರ್ನಾಟಕ ಹಿರಿಯರ ಸೇವಾ ಪ್ರತಿಷ್ಠಾನದ ಸಭೆ Read More »

ಮಾ. 15: ಕೋಕೋ ಮಿತ್ರ ಸಂಸ್ಥೆ ಶುಭಾರಂಭ

ಸುಳ್ಯ: ನೂತನವಾದ ಕೋಕೋ ‌ಮಿತ್ರ ಎಂಬ ಹೆಸರಿನ ಪರಿಶುದ್ಧ ತೆಂಗಿನೆಣ್ಣೆ ಮತ್ತು ಇತರ ವಸ್ತುಗಳ ತಯಾರಿಕಾ ಘಟಕವು ಮಾ. 15 ರ ಆದಿತ್ಯವಾರದಂದು ‌ನಿಂತಿಕಲ್ಲಿನಲ್ಲಿ ಶುಭಾರಂಭಗೊಳ್ಳಲಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠ, ಮಂಗಳೂರು ಇಲ್ಲಿನ ಪರಮ ಪೂಜ್ಯ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಪವಿತ್ರ ಪಾವಕ ಪ್ರಜ್ವಲನೆ ಮತ್ತು ಆಶೀರ್ವಚನ ನೀಡಲಿದ್ದಾರೆ.ಶಾಸಕಿ ಭಾಗೀರಥಿ ಮುರುಳ್ಯ ಅವರು ಘಟಕದ ಕಚೇರಿ ಉದ್ಘಾಟನೆ ಮಾಡಲಿದ್ದಾರೆ. ಜಾನಪದ ವಿವಿ ಹಾವೇರಿಯ ‌ವಿಶ್ರಾಂತ ಕುಲಪತಿ ಡಾ. ಕೆ. ಚಿನ್ನಪ್ಪ ಗೌಡ

ಮಾ. 15: ಕೋಕೋ ಮಿತ್ರ ಸಂಸ್ಥೆ ಶುಭಾರಂಭ Read More »

ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಡಾ. ಅನುರಾಧಾ ಕುರುಂಜಿ

ಸುಳ್ಯ: ಸ್ವಾವಲಂಬಿ ಬದುಕು ವ್ಯಕ್ತಿಯನ್ನು ಬಲಿಷ್ಠನಾಗಿಸುತ್ತದೆ. ತನ್ನ ಪರಿಶ್ರಮ ಮತ್ತು ಸಾಮರ್ಥ್ಯದಿಂದ ಬದುಕುವ ವ್ಯಕ್ತಿ ಸಮಾಜಕ್ಕೆ ಮಾದರಿಯಾಗುತ್ತಾನೆ. ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರೆ, ನೆಹರು ಮೆಮೋರಿಯಲ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಅನುರಾಧಾ ಕುರುಂಜಿ ಅಭಿಪ್ರಾಯಪಟ್ಟರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್, ಸುಳ್ಯ ತಾಲೂಕಿನ ದೊಡ್ಡೇರಿ ಕಾರ್ಯಕ್ಷೇತ್ರದಲ್ಲಿ ಅಮೃತ ಜ್ಞಾನವಿಕಾಸ ಕೇಂದ್ರದಲ್ಲಿ ಮೂರು ತಿಂಗಳ ಕಾಲ ನಡೆದ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ

ಸ್ವಾವಲಂಬಿ ಬದುಕು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ: ಡಾ. ಅನುರಾಧಾ ಕುರುಂಜಿ Read More »

error: Content is protected !!
Scroll to Top