ಸುದ್ದಿ

ನಾಳೆ ಅಯೋಧ್ಯೆಯ ಶ್ರೀ ರಾಮನಿಗೆ ಜಲಾಭಿಷೇಕ

ಅಯೋಧ್ಯೆಯಲ್ಲಿ 155 ರಾಷ್ಟ್ರಗಳ ನೀರಿನ ಸಂಗಮ ಅಯೋಧ್ಯೆ : ಉಜೈಕಿಸ್ತಾನ್, ಪಾಕಿಸ್ತಾನ, ಚೀನಾ ಸೇರಿದಂತೆ ವಿವಿಧ ದೇಶಗಳ 155 ನದಿಗಳ ನೀರು ಗುರುವಾರ ಬೆಳಗ್ಗೆ ಅಯೋಧ್ಯೆಗೆ ತಲುಪಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಏಪ್ರಿಲ್ 23 ರಂದು ಈ ನದಿಗಳ ನೀರಿನಿಂದ ಅಯೋಧ್ಯೆಯ ಶ್ರೀ ರಾಮನಿಗೆ ‘ಜಲಾಭಿಷೇಕ’ ಮಾಡಲಿದ್ದಾರೆ. ದೆಹಲಿಯ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ, ನೀರು ಸಂಗ್ರಹದ ಹಿಂದಿರುವ ವ್ಯಕ್ತಿ ವಿಜಯ್ ಜಾಲಿ, ಅಂಟಾರ್ಕ್ಷಿಕಾದಿಂದ ಕೂಡ ನೀರನ್ನು ತರಲಾಗಿದೆ ಎಂದು ತಿಳಿಸಿದ್ದಾರೆ.ತಾಂಜಾನಿಯಾ, […]

ನಾಳೆ ಅಯೋಧ್ಯೆಯ ಶ್ರೀ ರಾಮನಿಗೆ ಜಲಾಭಿಷೇಕ Read More »

ನಾನು ಮುಖ್ಯಮಂತ್ರಿ ಹುದ್ದೆ ಸ್ಪರ್ಧಿಯಲ್ಲ : ಬಿ. ಎಲ್‌. ಸಂತೋಷ್‌ ಸ್ಪಷ್ಟನೆ

ಬಿಜೆಪಿಯಲ್ಲಿ ಸಮರ್ಥ ನಾಯಕರಿಗೆ ಪ್ರತಿಸ್ಪರ್ಧಿಯಾಗುವುದಿಲ್ಲ ಎಂದ ಸಂತೋಷ್‌ ಬೆಂಗಳೂರು : ನಾನು ಮುಖ್ಯಮಂತ್ರಿ ಹುದ್ದೆಯ ಸ್ಪರ್ಧಿಯಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಸ್ಪಷ್ಟಪಡಿಸಿದ್ದಾರೆ. ಮಾಧ್ಯಮದವರ ಜತೆ ಮಾತನಾಡುವ ವೇಳೆ ಈ ವಿಚರ ಪ್ರಸ್ತಾವಿಸಿದ ಅವರು ಬಿಜೆಪಿಯಲ್ಲಿ ಹಲವು ಶಕ್ತ ನಾಯಕರಿದ್ದಾರೆ ಮತ್ತು ನಾನು ಅವರಿಗೆ ಪ್ರತಿಸ್ಪರ್ಧಿಯಾಗಲು ಬಯಸುವುದಿಲ್ಲ ಎಂದು ತಿಳಿಸಿದರು.ಟಿಕೆಟ್‌ ಹಂಚಿಕೆಯಲ್ಲಿ ಸಂತೋಷ್‌ ವ್ಯಾಪಕವಾಗಿ ಪ್ರಭಾವ ಬೀರಿದ್ದಾರೆ ಮತ್ತು ಬಿಜೆಪಿಗೆ ಬಹುಮತ ಬಂದರೆ ಮುಖ್ಯಮಂತ್ರಿಯಾಗಲು ಅವರು ರಾಜ್ಯ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗುತ್ತಿದ್ದಾರೆ

ನಾನು ಮುಖ್ಯಮಂತ್ರಿ ಹುದ್ದೆ ಸ್ಪರ್ಧಿಯಲ್ಲ : ಬಿ. ಎಲ್‌. ಸಂತೋಷ್‌ ಸ್ಪಷ್ಟನೆ Read More »

ಚುನಾವಣಾ ಅಕ್ರಮ : 278 ಕೋ. ರೂ. ಜಪ್ತಿ

ಆಮಿಷಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣು ಬೆಂಗಳೂರು : ಚುನಾವಣಾ ನೀತಿ ಸಂಹಿತೆ ಜಾರಿಯಾದ ಬಳಿಕ ಈವರೆಗೆ ಒಟ್ಟು 80.23 ಕೋಟಿ ರೂ. ನಗದು, 19.31 ಕೋಟಿ ರೂ. ಮೌಲ್ಯದ ಉಚಿತ ಕೊಡುಗೆಗಳು, 73.80 ಕೋಟಿ ರೂ. ಮೌಲ್ಯದ 145.55 ಕೆ.ಜಿ. ಚಿನ್ನ ಜಪ್ತಿ ಮಾಡಲಾಗಿದೆ. ನಗದು, ಮದ್ಯ ಸೇರಿದಂತೆ ಒಟ್ಟು 245.76 ಕೋಟಿ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.ಚುನಾವಣಾ ಅಕ್ರಮಗಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸಿರುವ ಚುನಾವಣಾ

ಚುನಾವಣಾ ಅಕ್ರಮ : 278 ಕೋ. ರೂ. ಜಪ್ತಿ Read More »

4989 ನಾಮಪತ್ರಗಳು ಕ್ರಮಬದ್ಧ : 500 ನಾಮಪತ್ರಗಳು ತಿರಸ್ಕೃತ

ಸದ್ಯ 3,044 ಅಭ್ಯರ್ಥಿಗಳು – ಏ.24 ನಾಮಪತ್ರ ಹಿಂಪಡೆಯಲು ಕೊನೇ ದಿನ ಬೆಂಗಳೂರು : ವಿಧಾನಸಭಾ ಚುನಾವಣೆಗೆ ರಾಜ್ಯಾದ್ಯಂತ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಗುರುವಾರ ಮುಕ್ತಾಯಗೊಂಡಿದ್ದು, ಶುಕ್ರವಾರ ಪರಿಶೀಲನೆಯ ಬಳಿಕ 4989 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಒಟ್ಟು 3632 ಅಭ್ಯರ್ಥಿಗಳು 5 ಸಾವಿರಕ್ಕೂ ಹೆಚ್ಚು ನಾಮಪತ್ರಗಳನ್ನು ಸಲ್ಲಿಸಿದ್ದು, ಈ ಪೈಕಿ 500ಕ್ಕೂ ಹೆಚ್ಚು ನಾಮಪತ್ರಗಳು ತಿರಸ್ಕೃತಗೊಂಡಿವೆ. 3,044 ಅಭ್ಯರ್ಥಿಗಳ 4,989 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ಆಯೋಗ ಹೇಳಿದೆ.ಐದು ವಿಧಾನಸಭಾ ಕ್ಷೇತ್ರಗಳಾದ ಸವದತ್ತಿ,‌ ಔರಾದ್,

4989 ನಾಮಪತ್ರಗಳು ಕ್ರಮಬದ್ಧ : 500 ನಾಮಪತ್ರಗಳು ತಿರಸ್ಕೃತ Read More »

ಟಿಕೆಟ್‌ಗಾಗಿ ಹಣ ಸಂಗ್ರಹ : ಕಾಂಗ್ರೆಸ್‌ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು

ಹಣ ಪಡೆದು ಬಿ ಫಾರ್ಮ್‌ ಹಂಚುವುದು ಲಂಚಕ್ಕೆ ಸಮ ಎಂದು ಆರೋಪ ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳಿಂದ ಹಣ ಸಂಗ್ರಹಿಸಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದು ಭಾರತೀಯ ದಂಡ ಸಂಹಿತೆಯ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕಿಯಾಗಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಚುನಾವಣಾ ಕಾನೂನುಗಳು ಮತ್ತು ಮಾದರಿ ನೀತಿ

ಟಿಕೆಟ್‌ಗಾಗಿ ಹಣ ಸಂಗ್ರಹ : ಕಾಂಗ್ರೆಸ್‌ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು Read More »

ಪುತ್ತೂರು : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪುತ್ತೂರು : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಟ್ಟಣಿಗೆಮುಡ್ನೂರು ಗ್ರಾಮದ ಪುಳಿಮಾರಡ್ಕದಲ್ಲಿ ಏ. 19 ರಂದು ಸಂಭವಿಸಿದೆ. ರಹಿಮಾನ್ ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ನೆಟ್ಟಣಿಗೆಮುಡ್ನೂರು ಗ್ರಾಮದ ಪುಳಿಮಾರಡ್ಕದಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ಸುಮಾರು 15 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದರು. ಮಂಗಳೂರಿನ ಕಂಕನಾಡಿ ಮತ್ತು ಶಿವಮೊಗ್ಗ ಆಸ್ಪತ್ರೆಯಿಂದ ಚಿಕಿತ್ಸೆಯನ್ನು ಮಾಡಿದ್ದು, ಸರಿಯಾಗಿ ಗುಣಮುಖಗೊಂಡಿರದ ಕಾರಣ ಇವರ ಯೋಗಕ್ಷೇಮವನ್ನು ಇವರ ಚಿಕ್ಕಮ್ಮನ ಮಗ ಮಹಮ್ಮದ್ ಹಾರಿಸ್ ನೋಡಿಕೊಳ್ಳುತ್ತಿದ್ದರು. ಏ. 19 ರಂದು ಸಂಜೆ 6.45

ಪುತ್ತೂರು : ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು

ಕೊಲಂಬಸ್ : ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ವಿದ್ಯಾರ್ಥಿಯೋರ್ವ ದುಷ್ಕರ್ಮಿಗಳ ಗುಂಡೇಟಿನಿಂದ ಸಾವನ್ನಪ್ಪಿರುವ ಘಟನೆ ಏ. 21 ರಂದು ಅಮೆರಿಕದಲ್ಲಿ ಸಂಭವಿಸಿದೆ.ಮೃತನನ್ನು ಸಾಯಿಶ್ ವೀರಾ(24) ಎಂದು ಗುರುತಿಸಲಾಗಿದೆ. ಇವರು ಕೊಲಂಬಸ್ ನ ಇಂಧನ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದು ಅಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆ ಎಂದು ಯುಎಸ್ ರಾಜ್ಯ ಓಹಿಯೋದ ಪೊಲೀಸರು ತಿಳಿಸಿದ್ದಾರೆ. ಸಾಯಿಶ್ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದು ಕೇವಲ 10 ದಿನಗಳ ಅಂತರದಲ್ಲಿ ಪದವಿಯೊಂದಿಗೆ H1B ವೀಸಾದ ಅಡಿಯಲ್ಲಿ ಆಯ್ಕೆಯಾಗಿದ್ದರು. ಇಂಧನ

ಭಾರತೀಯ ವಿದ್ಯಾರ್ಥಿ ಅಮೆರಿಕದಲ್ಲಿ ದುಷ್ಕರ್ಮಿಗಳ ಗುಂಡೇಟಿನಿಂದ ಮೃತ್ಯು Read More »

‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್ ಬಿಡುಗಡೆ

ಬೆಂಗಳೂರು : ಬಹುನಿರೀಕ್ಷಿತ ‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್ ಕೊನೆಗೂ ಬಿಡುಗಡೆಯಾಗಿದೆ. ಆ್ಯಪ್ ಬಳಸಿಕೊಂಡು ಇನ್ನು ಮುಂದೆ ಬೆಂಗಳೂರಿಗರು ಬಿಎಂಟಿಸಿ ಬಸ್’ಗಳನ್ನು ಟ್ರ್ಯಾಕ್ ಮಾಡಬಹುದಾಗಿದೆ. ಈ ಆ್ಯಪ್ ಅನ್ನು ಬುಧವಾರ ರಾತ್ರಿ ಲೈವ್ ಮಾಡಲಾಗಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಡೌನ್‌ಲೋಡ್ ಮಾಡಬಹುದು ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆ್ಯಪ್ ಬೀಟಾ ಪರೀಕ್ಷೆಯ ಹಂತದಲ್ಲಿದ್ದಾಗ ಅದನ್ನು ‘ನಿಮ್ ಬಸ್’ ಎಂದು ಕರೆಯಲಾಗುತ್ತಿತ್ತು. ಇದೀಗ ಲೈವ್ ಮಾಡುವ ವೇಳೆ ಅದನ್ನು ‘ನಮ್ಮ ಬಿಎಂಟಿಸಿ’ ಎಂದು

‘ನಮ್ಮ ಬಿಎಂಟಿಸಿ’ ಬಸ್ ಟ್ರ್ಯಾಕಿಂಗ್ ಮೊಬೈಲ್​ ಆ್ಯಪ್ ಬಿಡುಗಡೆ Read More »

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ : ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲ್ಮಡ್ಕ ಗ್ರಾಮದ ಪಡ್ಪಿನಂಗಡಿ ದರ್ಖಾಸು ಎಂಬಲ್ಲಿ ಏ. 20 ರಂದು ಸಂಭವಿಸಿದೆ.ಸುಬ್ಬಪ್ಪ (60)ಎಂಬವರೇ ಮೃತ ವ್ಯಕ್ತಿ. ಪಡ್ಪಿನಂಗಡಿ ದರ್ಖಾಸು ಎಂಬಲ್ಲಿರುವ ವಿಮಲ ರವರ ವಾಸದ ಮನೆಯ ಜಗಲಿಯಲ್ಲಿ ಛಾವಣಿಯ ಪಕ್ಕಾಸಿಗೆ ಶಾಲನ್ನು ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಳ್ಯ : ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ Read More »

ಅನನ್ಯಾ, ಕೌಶಿಕ್, ತಬಸ್ಸುಮ್ ಉತ್ತಮ ಸಾಧನೆ ಮೂಲಕ ಮೊದಲನೆ ಸ್ಥಾನ

ಬೆಂಗಳೂರು : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ವಾಣಿಜ್ಯ ವಿಭಾಗದಲ್ಲಿ ಅನನ್ಯಾ, ಕಲಾ ವಿಭಾಗದಲ್ಲಿ ತಬಸ್ಸುಮ್, ವಿಜ್ಞಾನ ವಿಭಾಗದದಲ್ಲಿ ಕೌಶಿಕ್ ಉತ್ತಮ ಸಾಧನೆ ಮೂಲಕ ಟಾಪರ್ಸ್‌ಗಳಾಗಿ ಮಿಂಚಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಮಂಗಳೂರು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ 600ಕ್ಕೆ 600 ಅಂಕಗಳನ್ನು ಪಡೆದುಕೊಂಡಿದ್ದು, ಬೆಂಗಳೂರಿನ ಜಯನಗರದ ಎನ್ಎಂಕೆಆರ್‌ವಿ ಕಾಲೇಜು ಕಲಾ ವಿಭಾಗದ ವಿದ್ಯಾರ್ಥಿನಿ ತಬಸ್ಸುಮ್ 600ಕ್ಕೆ 593 ಅಂಕಗಳನ್ನು ಪಡೆದುಕೊಂಡಿದ್ದಾರೆ. ಅಂತೆಯೇ ಕೋಲಾರದ ಗಂಗೋತ್ರಿ ಕಾಲೇಜು ವಿದ್ಯಾರ್ಥಿ ಕೌಶಿಕ್ ವಿಜ್ಞಾನ ವಿಭಾಗದಲ್ಲಿ 600ಕ್ಕೆ 596

ಅನನ್ಯಾ, ಕೌಶಿಕ್, ತಬಸ್ಸುಮ್ ಉತ್ತಮ ಸಾಧನೆ ಮೂಲಕ ಮೊದಲನೆ ಸ್ಥಾನ Read More »

error: Content is protected !!
Scroll to Top