ಸುದ್ದಿ

ಪುತ್ತೂರು ಸಂಚಾರಿ ಪೋಲಿಸ್ ಠಾಣೆಗೆ ಜಿ.ಎಲ್ ಆಚಾರ್ಯ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ | ಕೃತಜ್ಞತಾ ಪತ್ರ ನೀಡಿ ಅಭಿನಂದನೆ

ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ ಸಂಚಾರ ಪೊಲೀಸ್ ಠಾಣೆಗೆ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದೆ.   ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಗೆ ಸಂಚಾರ ಪೊಲೀಸ್ ಠಾಣೆಯಿಂದ ಕೃತಜ್ಞತಾ ಪತ್ರ ನೀಡಿ ಅಭಿನಂದಿಸಲಾಯಿತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ಮತ್ತು ಹೆಡ್‌ಕಾನ್‌ ಸ್ಟೇಬಲ್ ದಿನೇಶ್ ಅವರು ಜಿ.ಎಲ್.ಆಚಾರ್ಯ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಆಚಾರ್ಯ ಅವರಿಗೆ ಕೃತಜ್ಞತಾ ಪತ್ರ ನೀಡಿ ಅಭಿನಂದಿಸಿದರು. ಈ ಸಂದರ್ಭ ಎಸ್.ಬಿ ಉದಯರವಿ […]

ಪುತ್ತೂರು ಸಂಚಾರಿ ಪೋಲಿಸ್ ಠಾಣೆಗೆ ಜಿ.ಎಲ್ ಆಚಾರ್ಯ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ | ಕೃತಜ್ಞತಾ ಪತ್ರ ನೀಡಿ ಅಭಿನಂದನೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್  ವಿತರಣೆ

ಕೆದಿಲ : ಬಂಟ್ವಾಳ  ತಾಲೂಕು, ಕೆದಿಲ ಗ್ರಾಮದ    ಲಕ್ಷ್ಮಿ  ವಿಶ್ವನಾಥ ಮಡಿವಾಳ  ಕುಕ್ಕಾಜೆ ಮತ್ತು  ಕುಸುಮಾವತಿ  ಚೆನ್ನಪ್ಪ ಗೌಡ  ಮುದ್ರಾಜೆ   ಇವರು ಅಸೌಖ್ಯಂದಿದ್ದು, ಇವರಿಗೆ   ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್ ಅನ್ನು  ಫೆ.24 ಸೋಮವಾರದಂದು ವಿತರಿಸಲಾಯಿತು.  ವಿಟ್ಲ ತಾಲೂಕು ಕೃಷಿ ಅಧಿಕಾರಿ  ಚಿದಾನಂದ ಮತ್ತು ಪೆರ್ನೆ ವಲಯ  ಮೇಲ್ವಿಚಾರಕಿ ಶಾರದಾ ಕ್ರಿಟಿಕಲ್ ಇನ್ಲೆಸ್ ಫಂಡ್ ವಿತರಿಸಿದರು.  ಈ ಸಂದರ್ಭದಲ್ಲಿ  ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ  ಶಾರದಾ, ಕೆದಿಲ  “B” ಒಕ್ಕೂಟದ ಸೇವಾಪ್ರತಿನಿಧಿ ಜಯಂತಿ,

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್  ವಿತರಣೆ Read More »

ಸೈಬರ್‌ ವಂಚಕನಿಂದಲೇ ವಿದ್ಯಾರ್ಥಿಗಳಿಗೆ ಸೈಬರ್‌ ಜಾಗೃತಿ ಪಾಠ ಮಾಡಿಸಿದ ಮಂಗಳೂರು ಪೊಲೀಸರು!

ಆರೋಪಿಗಳ ಖರ್ಚಿನಲ್ಲೇ ಗುಜರಾತ್‌ಗೆ ಹೋಗಿ ಮೋಜುಮಸ್ತಿ ಮಾಡಿದ ಫೋಟೊ ಬಹಿರಂಗ ಮಂಗಳೂರು : ಅಮೆಜಾನ್‌ ಆನ್‌ಲೈನ್‌ ಕಂಪನಿಗೆ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಇಬ್ಬರು ಸೈಬರ್‌ ವಂಚಕರಿಂದಲೇ ಮಂಗಳೂರು ಪೊಲೀಸರು ಕಾನೂನು ವಿದ್ಯಾರ್ಥಿಗಳಿಗೆ ಸೈಬರ್‌ ವಂಚನೆ ಜಾಗೃತಿಯ ಪಾಠ ಮಾಡಿಸಿ ಯಡವಟ್ಟು ಮಾಡಿಕೊಂಡಿರುವುದು ಬಹಿರಂಗವಾಗಿದೆ. ಇಷ್ಟು ಮಾತ್ರವಲ್ಲದೆ ಈ ಆರೋಪಿಗಳ ಖರ್ಚಿನಲ್ಲಿ ಪೊಲೀಸರು ತಿರುಗಾಡಿ ಮೋಜು ಮಸ್ತಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಕೂಡ ಬಹಿರಂಗವಾಗಿ ಪೊಲೀಸ್‌ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಮಂಗಳೂರಿನ ಉರ್ವ ಠಾಣೆಯ ಪೊಲೀಸರ ವಿರುದ್ಧ ಇಂಥದ್ದೊಂದು ಗಂಭೀರ

ಸೈಬರ್‌ ವಂಚಕನಿಂದಲೇ ವಿದ್ಯಾರ್ಥಿಗಳಿಗೆ ಸೈಬರ್‌ ಜಾಗೃತಿ ಪಾಠ ಮಾಡಿಸಿದ ಮಂಗಳೂರು ಪೊಲೀಸರು! Read More »

ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ : ಅಶೋಕ್ ಕುಮಾರ್ ರೈ | ಕುಡಿಯುವ ನೀರು ಯೋಜನೆ ಕುರಿತು ಅಧಿಕಾರಿಗಳ ಸಭೆ

ಪುತ್ತೂರು: ಈ ಬಾರಿ ಗ್ರಾಪಂಗಳಲ್ಲಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸುವುದನ್ನು ಸರ್ಕಾರ ರದ್ದು ಮಾಡಿದೆ. ಈ ಹಿಂದೆ ತೆಗೆಯಲಾದ ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ತಾಲೂಕಿನ ಒಟ್ಟು 56 ಗ್ರಾಪಂಚಾಯತ್ ಗಳಿಗೆ  ಕುಡಿಯುವ ನೀಡಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಅವರು ಸೋಮವಾರ ಸಂಜೆ ಪುತ್ತೂರು ತಾಪಂ ಸಭಾಂಗಣದಲ್ಲಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ವಿಧಾನಸಭಾ

ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ : ಅಶೋಕ್ ಕುಮಾರ್ ರೈ | ಕುಡಿಯುವ ನೀರು ಯೋಜನೆ ಕುರಿತು ಅಧಿಕಾರಿಗಳ ಸಭೆ Read More »

ಶ್ರೀ ಮಹಾಭಾರತ ಸರಣಿಯಲ್ಲಿ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ

ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ದಿನದ ಪ್ರಯುಕ್ತ ಫೆ. 24ರಂದು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದಿಂದ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ ಜರಗಿತು. ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ (ಕುಮುದಾಕ್ಷಿ) ಭಾಸ್ಕರ ಬಾರ್ಯ (ಹನುಮಂತ) ಶ್ರೀಧರ ಎಸ್. ಪಿ ಸುರತ್ಕಲ್ (ಕರ್ಣ), ಜಿನೇಂದ್ರ ಜೈನ್ ಬಳ್ಳಮಂಜ(ಗಾರ್ಗ್ಯ ಮುನಿ ಮತ್ತು ಕುಂಜರ), ಗೀತಾ(ಚಂದ್ರಸೇನ1), ಸತೀಶ್ ಶಿರ್ಲಾಲು(ದ್ರೋಣ), ಗುಡ್ಡಪ್ಪ ಬಲ್ಯ(ಅರ್ಜುನ), ಜಯರಾಮ ಬಲ್ಯ(ಭೀಮ), ರವೀಂದ್ರ ದರ್ಬೆ(ಕೌರವ), ಶ್ರುತಿ ವಿಸ್ಮಿತ್ (ಭೀಷನಿ), ಪೂರ್ಣಿಮಾ ರಾವ್ ಬೆಳ್ತಂಗಡಿ (ಧರ್ಮರಾಯ

ಶ್ರೀ ಮಹಾಭಾರತ ಸರಣಿಯಲ್ಲಿ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ Read More »

ಅಜ್ಜಿ, ತಾಯಿ ಸಹೋದರ, ಪ್ರೇಯಸಿ ಸೇರಿ ಆರು ಮಂದಿಯನ್ನು ಕೊಂದ ಯುವಕ

2 ತಾಸಿನಲ್ಲಿ 34 ಕಿಲೋಮೀಟರ್‌ ಪ್ರಯಾಣಿಸಿ ಮೂರು ಮನೆಗಳಲ್ಲಿ ಆರು ಮಂದಿಯ ಹತ್ಯೆ ತಿರುವನಂತಪುರ: ಯುವಕನೊಬ್ಬ ತನ್ನ ಅಜ್ಜಿ,ಅಮ್ಮ, ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ, ಪ್ರೇಯಸಿ ಸೇರಿ ಆರು ಮಂದಿಯನ್ನು ಬರ್ಬರವಾಗಿ ಕೊಂದಿರುವ ಆಘಾತಕಾರಿ ಘಟನೆಯೊಂದು ಕೇರಳದ ವಂಜರಜಮೂಡು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ. 23ರ ಹರೆಯದ ಅಫಾನ್‌ ಎಂಬಾತ 2 ತಾಸಿನ ಅವಧಿಯಲ್ಲಿ ಮೂರು ಮನೆಗಳಲ್ಲಿ ಈ ಕೃತ್ಯಗಳನ್ನು ಎಸಗಿದ್ದಾನೆ. ಆರು ಕೊಲೆಗಳನ್ನು ಮಾಡಲು ಅವನು ಸುಮಾರು 34 ಕಿಲೋಮೀಟರ್‌ ಪ್ರಯಾಣಿಸಿದ್ದಾನೆ. ನಂತರ ವಂಜರಮೂಡು ಪೊಲೀಸ್‌ ಠಾಣೆಗೆ

ಅಜ್ಜಿ, ತಾಯಿ ಸಹೋದರ, ಪ್ರೇಯಸಿ ಸೇರಿ ಆರು ಮಂದಿಯನ್ನು ಕೊಂದ ಯುವಕ Read More »

ಮಂಗಳೂರು-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ : ಕೇಂದ್ರದಿಂದ ಸ್ಪಂದನೆ

ಪ್ರಯಾಣ ದೂರ, ಸಮಯವನ್ನು ಕಡಿಮೆಗೊಳಿಸಲು ಷಟ್ಪಥ ನಿರ್ಮಾಣಕ್ಕೆ ಪ್ರಸ್ತಾವ ಬೆಂಗಳೂರು: ಬೆಂಗಳೂರು ಮತ್ತು ಮಂಗಳೂರು ಮಧ್ಯೆ ಎಕ್ಸ್‌ಪ್ರೆಸ್‌ವೇ ನಿರ್ಮಾಣದ ಬೇಡಿಕೆಯ ಕೇಂದ್ರ ಸರಕಾರ ಸ್ಪಂದಿಸಿದ್ದು, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಈ ಯೋಜನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಯೋಜನೆ ಪ್ರಕಾರ ಹಾಸನದ ಮೂಲಕ ಈ ಎಕ್ಸ್‌ಪ್ರೆಸ್‌ವೇ ಹಾದು ಹೋಗಲಿದೆ. ಈಗ ಬೆಂಗಳೂರು-ಮಂಗಳೂರು ನಡುವಿನ ಸುಮಾರು 400 ಕಿ.ಮೀ ದೂರ ಕ್ರಮಿಸಲು 7-8 ಗಂಟೆ ಸಮಯ ಹಿಡಿಯುತ್ತದೆ. ನಾಲ್ಕು ಅಥವಾ ಆರು ಪಥಗಳನ್ನು ಒಳಗೊಂಡಿರುವ ಈ

ಮಂಗಳೂರು-ಬೆಂಗಳೂರು ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಾಣ : ಕೇಂದ್ರದಿಂದ ಸ್ಪಂದನೆ Read More »

ಶಿರೂರು ಗುಡ್ಡ ಕುಸಿತ : ಕಾಮಗಾರಿ ಮಾಡಿದ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಶಿರೂರಿನಲ್ಲಿ ಜು.16ರಂದು 11 ಜನರ ಸಾವಿಗೆ ಕಾರಣವಾಗಿದ್ದ ಗುಡ್ಡ ಕುಸಿತ ದುರಂತಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಅಂಕೋಲಾ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.ಶಿರೂರು ದುರಂತಕ್ಕೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದ ಕಂಪನಿಯೇ ಹೊಣೆ, ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಪ್ರಣವಾನಂದ ಸ್ವಾಮೀಜಿ ದೂರು ದಾಖಲಿಸಿದ್ದರು.ಅವೈಜ್ಞಾನಿಕ ರೀತಿಯಲ್ಲಿ ಗುಡ್ಡ ಕೊರೆದಿದ್ದರಿಂದ ಅವಘಡ ಸಂಭವಿಸಿದೆ. ಅವಘಡ

ಶಿರೂರು ಗುಡ್ಡ ಕುಸಿತ : ಕಾಮಗಾರಿ ಮಾಡಿದ ಕಂಪನಿಯ 8 ನಿರ್ದೇಶಕರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಆದೇಶ Read More »

ಚಾಂಪಿಯನ್ಸ್‌ ಟ್ರೋಫಿ ಕೂಟಕ್ಕೆ ಉಗ್ರರ ಕರಿನೆರಳು : ಒಬ್ಬೊಬ್ಬ ಆಟಗಾರನಿಗೆ 100 ಪೊಲೀಸರ ಭದ್ರತೆ

13 ಸಾವಿರ ಸೈನಿಕರಿಂದ ಕಟ್ಟೆಚ್ಚರದ ಕಾವಲು ಇಸ್ಲಾಮಾಬಾದ್‌ : ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ ಕೂಟದ ಮೇಲೆ ಭಯೋತ್ಪಾದಕರ ಕರಿನೆರಳು ಆವರಿಸಿದೆ. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ (ಐಎಸ್‌ಕೆಪಿ) ಎಂಬ ಭಯೋತ್ಪಾದಕ ಸಂಘಟನೆ ವಿದೇಶಿ ಪ್ರವಾಸಿಗರನ್ನು ಅಪಹರಿಸಿ ಒತ್ತೆ ಹಣಕ್ಕೆ ಬೇಡಿಕೆ ಇಡಬಹುದು ಎಂಬ ಗುಪ್ತಚರ ಮಾಹಿತಿ ಬಂದ ಬಳಿಕ ಪಾಕಿಸ್ಥಾನದಲ್ಲಿ ಕ್ರಿಕೆಟ್‌ ಆಡುತ್ತಿರುವ ವಿದೇಶಿ ಆಟಗಾರರಿಗೆ ಜೀವ ಬೆದರಿಕೆ ಶುರುವಾಗಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಕೂಟಕ್ಕೆ ಪಾಕ್‌ ಸರಕಾರ ಭಾರಿ ಭದ್ರತೆಯ ಏರ್ಪಾಡು ಮಾಡಿದೆ.

ಚಾಂಪಿಯನ್ಸ್‌ ಟ್ರೋಫಿ ಕೂಟಕ್ಕೆ ಉಗ್ರರ ಕರಿನೆರಳು : ಒಬ್ಬೊಬ್ಬ ಆಟಗಾರನಿಗೆ 100 ಪೊಲೀಸರ ಭದ್ರತೆ Read More »

ಆ್ಯಕ್ಟಿವಾ-ಕಾರು ಅಪಘಾತ | ಆ್ಯಕ್ಟಿವಾ ಸವಾರ ಜನಾರ್ದನ ಪೂಜಾರಿ ಮೃತ್ಯು

ಪುತ್ತೂರು: ಕಾರು ಹಾಗೂ ಆ್ಯಕ್ಟಿವಾ ಡಿಕ್ಕಿ ಹೊಡೆದುಕೊಂಡ ಪರಿಣಾಮ ಆ್ಯಕ್ಟಿವಾ ಸವಾರ ಮೃತಪಟ್ಟ ಘಟನೆ ಇಂದು ಕಬಕದಲ್ಲಿ ನಡೆದಿದೆ. ಕುಂಡಡ್ಕ ಕಂಪ ನಿವಾಸಿ ಜನಾರ್ದನ ಪೂಜಾರಿ (40) ಮೃತಪಟ್ಟ ಆ್ಯಕ್ಟಿವಾ ಸವಾರ. ಕಬಕದಿಂದ ವಿದ್ಯಾಪುರಕ್ಕೆ ಹೋಗುತ್ತಿರುವ ಆಕ್ಟಿವಾ ಮತ್ತು ಪುತ್ತೂರು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ನಡುವೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ತೀವ್ರ ಗಂಭೀರ ಗಾಯಗೊಂಡಿದ್ದ ಆಕ್ಟಿವಾ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜನಾರ್ದನ ಪೂಜಾರಿಯವರು ಇಡ್ತಿದು ಗ್ರಾಮ ಪಂಚಾಯತ್ ಮಾಜಿ ಸದಸ್ಯರಾಗಿದ್ದರು. ಸ್ಥಳಕ್ಕೆ ಪುತ್ತೂರು ಸಂಚಾರಿ ಠಾಣೆ

ಆ್ಯಕ್ಟಿವಾ-ಕಾರು ಅಪಘಾತ | ಆ್ಯಕ್ಟಿವಾ ಸವಾರ ಜನಾರ್ದನ ಪೂಜಾರಿ ಮೃತ್ಯು Read More »

error: Content is protected !!
Scroll to Top