ಸುದ್ದಿ

ಮಹಾಕುಂಭಮೇಳದಲ್ಲಿ ಇಂದು ಕೊನೆಯ ಪುಣ್ಯಸ್ನಾನ : ಜಗತ್ತಿನ ಬೃಹತ್‌ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆ

ಇದುವರೆಗೆ ಸುಮಾರು 64 ಕೋಟಿ ಜನರಿಂದ ಪುಣ್ಯಸ್ನಾನ ಪ್ರಯಾಗರಾಜ್: ಮಹಾಶಿವರಾತ್ರಿ ಪವಿತ್ರ ದಿನವಾದ ಇಂದು ಮಹಾಕುಂಭಮೇಳದಲ್ಲಿ ಕೊನೆಯ ಪುಣ್ಯಸ್ನಾನ ನಡೆಯಲಿದ್ದು, ಇದರೊಂದಿಗೆ ಜಗತ್ತಿನ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾಗಲಿದೆ. ಫೆಬ್ರವರಿ 25ರಂದು ರಾತ್ರಿ 8 ಗಂಟೆಯವರೆಗೆ ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ 1.24 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದರು. ಇದರೊಂದಿಗೆ ಜನವರಿ 13ರಿಂದ ಮಹಾಕುಂಭದಲ್ಲಿ ಸ್ನಾನ ಮಾಡಿದ ಒಟ್ಟು ಭಕ್ತರ ಸಂಖ್ಯೆ 64 ಕೋಟಿ ಮೀರಿದೆ.ಇಂದು ನಡೆಯಲಿರುವ ಮಹಾಶಿವರಾತ್ರಿಯ […]

ಮಹಾಕುಂಭಮೇಳದಲ್ಲಿ ಇಂದು ಕೊನೆಯ ಪುಣ್ಯಸ್ನಾನ : ಜಗತ್ತಿನ ಬೃಹತ್‌ ಧಾರ್ಮಿಕ ಕಾರ್ಯಕ್ರಮಕ್ಕೆ ತೆರೆ Read More »

ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವಕ್ಕೆ  ದಕ್ಷಿಣ ಕನ್ನಡ ಜಿಲ್ಲೆಯಿಂದ ಡಾ. ಅನುರಾಧಾ ಕುರುಂಜಿ ಆಯ್ಕೆ | ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ

ಸುಳ್ಯ : ಅಂತಾರಾಷ್ಟ್ರೀಯ ಖ್ಯಾತಿಯ ಜಗದ್ವಿಖ್ಯಾತ ಹಂಪಿ ಉತ್ಸವದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡಿಸಲು ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರು, ಲೇಖಕರು, ವ್ಯಕ್ತಿತ್ವವ ವಿಕಸನ ತರಬೇತುದಾರರಾದ ಡಾ. ಅನುರಾಧಾ ಕುರುಂಜಿಯವರು ಆಯ್ಕೆಯಾಗಿದ್ದಾರೆ. ಹಿಂದಿನ ವಿಜಯನಗರ ಸಾಮ್ರಾಜ್ಯದ ಭವ್ಯತೆಯನ್ನು ಮರು ಸೃಷ್ಟಿಸುವ ಸಲುವಾಗಿ ರಾಜ್ಯ ಸರ್ಕಾರವು ಆರಂಭಿಸಿರುವ ಹಂಪಿ ಉತ್ಸವಕ್ಕೆ ದೇಶ ವಿದೇಶಗಳಿಂದ ಸಾಗರೋಪಾದಿಯಲ್ಲಿ  ಜನರು ಆಗಮಿಸಿ ಸಾಕ್ಷಿಯಾಗುತ್ತಿದ್ದು, 2025ರ  ಹಂಪಿ ಉತ್ಸವವು ಫೆಬ್ರುವರಿ  28 ರಿಂದ ಮಾರ್ಚ್  2

ಅಂತಾರಾಷ್ಟ್ರೀಯ ಖ್ಯಾತಿಯ ಹಂಪಿ ಉತ್ಸವಕ್ಕೆ  ದಕ್ಷಿಣ ಕನ್ನಡ ಜಿಲ್ಲೆಯಿಂದ ಡಾ. ಅನುರಾಧಾ ಕುರುಂಜಿ ಆಯ್ಕೆ | ಮಹಿಳಾ ವಿಚಾರ ಗೋಷ್ಠಿಯಲ್ಲಿ ಪ್ರಬಂಧ ಮಂಡನೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಜನಮಂಗಲ ಕಾರ್ಯಕ್ರಮದಲ್ಲಿ ಕೊಮೋಡಾ ವೀಲ್ ಚಯರ್ ವಿತರಣೆ

ಬಂಟ್ವಾಳ  ತಾಲೂಕು, ಕೆದಿಲ ಗ್ರಾಮದ  ಕರಿಮಜಲು  ಪ್ರೇಮ W/O  ರಾಮಮೂಲ್ಯ ಮತ್ತು  ಕಂಪ  ಲೋಕಯ ಗೌಡ ಇವರು ಅಸೌಖ್ಯಂದಿದ್ದು, ಇವರಿಗೆ    ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯ  ಜನಮಂಗಲ ಕಾರ್ಯಕ್ರಮದ  ಯೋಜನೆಯಡಿಯಲ್ಲಿ ಫೆ.24   ಸೋಮವಾರದಂದು ಕೊಮೋಡೋ  ವೀಲ್ ಚಯರನ್ನು ನೀಡಲಾಯಿತು. ವಿಟ್ಲ ತಾಲೂಕು ಕೃಷಿ ಅಧಿಕಾರಿ ಚಿದಾನಂದ ಮತ್ತು ಪೆರ್ನೆ ವಲಯ  ಮೇಲ್ವಿಚಾರಕಿ ಶಾರದಾ ಕೊಮೋಡೋ  ವೀಲ್ ಚಯರನ್ನು ವಿತರಿಸಿದರು.  ಈ ಸಂದರ್ಭದಲ್ಲಿ  ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ  ಶಾರದಾ ಮತ್ತು ಕೆದಿಲ  “B” ಒಕ್ಕೂಟದ ಸೇವಾಪ್ರತಿನಿಧಿ

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯ  ಜನಮಂಗಲ ಕಾರ್ಯಕ್ರಮದಲ್ಲಿ ಕೊಮೋಡಾ ವೀಲ್ ಚಯರ್ ವಿತರಣೆ Read More »

ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ

ಪುತ್ತೂರು: ತೋಟವೊಂದರಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಪುತ್ತೂರಿನ ಪಾಂಗ್ಲಾಯಿ ಎಂಬಲ್ಲಿ ನಡೆದಿದೆ. ಸ್ಥಳಕ್ಕೆ ಪುತ್ತೂರು ನಗರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ದೇಹದ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.

ತೋಟವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆ Read More »

ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಅನುಮಾನಾಸ್ಪದ ದೋಣಿ ಪತ್ತೆ

ಸತಾಯಿಸುತ್ತಿದ್ದ ಮಾಲೀಕನಿಂದ ಪಾರಾಗಲು ತಪ್ಪಿಸಿಕೊಂಡು ಬಂದ ತಮಿಳುನಾಡಿನ ಮೀನುಗಾರರು 4000 ಕಿ.ಮೀ. ಮೀನುಗಾರಿಕೆ ದೋಣಿಯಲ್ಲೆ ಪ್ರಯಾಣ ಉಡುಪಿ : ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಮೀನುಗಾರಿಕೆ ದೋಣಿಯೊಂದು ಪತ್ತೆಯಾಗಿದೆ. ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮಾನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮಾನ್ ಹಾರ್ಬರ್​ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂಬುದು ತಿಳಿದುಬಂದಿದೆ. ಬೋಟ್​​​ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ.ಓಮಾನ್ ಮೂಲದ ಬೋಟ್​ನಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ

ಮಲ್ಪೆ ಸೈಂಟ್‌ ಮೇರಿಸ್‌ ದ್ವೀಪದ ಸಮೀಪ ಅನುಮಾನಾಸ್ಪದ ದೋಣಿ ಪತ್ತೆ Read More »

ಪುತ್ತೂರು ಸಂಚಾರಿ ಪೋಲಿಸ್ ಠಾಣೆಗೆ ಜಿ.ಎಲ್ ಆಚಾರ್ಯ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ | ಕೃತಜ್ಞತಾ ಪತ್ರ ನೀಡಿ ಅಭಿನಂದನೆ

ಪುತ್ತೂರು: ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆ ಸಂಚಾರ ಪೊಲೀಸ್ ಠಾಣೆಗೆ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದೆ.   ಕಂಪ್ಯೂಟರನ್ನು ಕೊಡುಗೆಯಾಗಿ ನೀಡಿದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಗೆ ಸಂಚಾರ ಪೊಲೀಸ್ ಠಾಣೆಯಿಂದ ಕೃತಜ್ಞತಾ ಪತ್ರ ನೀಡಿ ಅಭಿನಂದಿಸಲಾಯಿತು. ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ಮತ್ತು ಹೆಡ್‌ಕಾನ್‌ ಸ್ಟೇಬಲ್ ದಿನೇಶ್ ಅವರು ಜಿ.ಎಲ್.ಆಚಾರ್ಯ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ಆಡಳಿತ ನಿರ್ದೇಶಕ ಸುಧನ್ವ ಆಚಾರ್ಯ ಅವರಿಗೆ ಕೃತಜ್ಞತಾ ಪತ್ರ ನೀಡಿ ಅಭಿನಂದಿಸಿದರು. ಈ ಸಂದರ್ಭ ಎಸ್.ಬಿ ಉದಯರವಿ

ಪುತ್ತೂರು ಸಂಚಾರಿ ಪೋಲಿಸ್ ಠಾಣೆಗೆ ಜಿ.ಎಲ್ ಆಚಾರ್ಯ ಸಂಸ್ಥೆಯಿಂದ ಕಂಪ್ಯೂಟರ್ ಕೊಡುಗೆ | ಕೃತಜ್ಞತಾ ಪತ್ರ ನೀಡಿ ಅಭಿನಂದನೆ Read More »

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್  ವಿತರಣೆ

ಕೆದಿಲ : ಬಂಟ್ವಾಳ  ತಾಲೂಕು, ಕೆದಿಲ ಗ್ರಾಮದ    ಲಕ್ಷ್ಮಿ  ವಿಶ್ವನಾಥ ಮಡಿವಾಳ  ಕುಕ್ಕಾಜೆ ಮತ್ತು  ಕುಸುಮಾವತಿ  ಚೆನ್ನಪ್ಪ ಗೌಡ  ಮುದ್ರಾಜೆ   ಇವರು ಅಸೌಖ್ಯಂದಿದ್ದು, ಇವರಿಗೆ   ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ  ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್ ಅನ್ನು  ಫೆ.24 ಸೋಮವಾರದಂದು ವಿತರಿಸಲಾಯಿತು.  ವಿಟ್ಲ ತಾಲೂಕು ಕೃಷಿ ಅಧಿಕಾರಿ  ಚಿದಾನಂದ ಮತ್ತು ಪೆರ್ನೆ ವಲಯ  ಮೇಲ್ವಿಚಾರಕಿ ಶಾರದಾ ಕ್ರಿಟಿಕಲ್ ಇನ್ಲೆಸ್ ಫಂಡ್ ವಿತರಿಸಿದರು.  ಈ ಸಂದರ್ಭದಲ್ಲಿ  ಕೆದಿಲ “A” ಒಕ್ಕೂಟದ ಸೇವಾಪ್ರತಿನಿಧಿ  ಶಾರದಾ, ಕೆದಿಲ  “B” ಒಕ್ಕೂಟದ ಸೇವಾಪ್ರತಿನಿಧಿ ಜಯಂತಿ,

ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಕ್ರಿಟಿಕಲ್ ಇನ್ಲೆಸ್ ಫಂಡ್  ವಿತರಣೆ Read More »

ಸೈಬರ್‌ ವಂಚಕನಿಂದಲೇ ವಿದ್ಯಾರ್ಥಿಗಳಿಗೆ ಸೈಬರ್‌ ಜಾಗೃತಿ ಪಾಠ ಮಾಡಿಸಿದ ಮಂಗಳೂರು ಪೊಲೀಸರು!

ಆರೋಪಿಗಳ ಖರ್ಚಿನಲ್ಲೇ ಗುಜರಾತ್‌ಗೆ ಹೋಗಿ ಮೋಜುಮಸ್ತಿ ಮಾಡಿದ ಫೋಟೊ ಬಹಿರಂಗ ಮಂಗಳೂರು : ಅಮೆಜಾನ್‌ ಆನ್‌ಲೈನ್‌ ಕಂಪನಿಗೆ ವಂಚಿಸಿದ ಆರೋಪದಲ್ಲಿ ಸೆರೆಯಾಗಿರುವ ಇಬ್ಬರು ಸೈಬರ್‌ ವಂಚಕರಿಂದಲೇ ಮಂಗಳೂರು ಪೊಲೀಸರು ಕಾನೂನು ವಿದ್ಯಾರ್ಥಿಗಳಿಗೆ ಸೈಬರ್‌ ವಂಚನೆ ಜಾಗೃತಿಯ ಪಾಠ ಮಾಡಿಸಿ ಯಡವಟ್ಟು ಮಾಡಿಕೊಂಡಿರುವುದು ಬಹಿರಂಗವಾಗಿದೆ. ಇಷ್ಟು ಮಾತ್ರವಲ್ಲದೆ ಈ ಆರೋಪಿಗಳ ಖರ್ಚಿನಲ್ಲಿ ಪೊಲೀಸರು ತಿರುಗಾಡಿ ಮೋಜು ಮಸ್ತಿ ಮಾಡಿ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವುದು ಕೂಡ ಬಹಿರಂಗವಾಗಿ ಪೊಲೀಸ್‌ ಇಲಾಖೆಯೇ ತಲೆತಗ್ಗಿಸುವಂತಾಗಿದೆ. ಮಂಗಳೂರಿನ ಉರ್ವ ಠಾಣೆಯ ಪೊಲೀಸರ ವಿರುದ್ಧ ಇಂಥದ್ದೊಂದು ಗಂಭೀರ

ಸೈಬರ್‌ ವಂಚಕನಿಂದಲೇ ವಿದ್ಯಾರ್ಥಿಗಳಿಗೆ ಸೈಬರ್‌ ಜಾಗೃತಿ ಪಾಠ ಮಾಡಿಸಿದ ಮಂಗಳೂರು ಪೊಲೀಸರು! Read More »

ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ : ಅಶೋಕ್ ಕುಮಾರ್ ರೈ | ಕುಡಿಯುವ ನೀರು ಯೋಜನೆ ಕುರಿತು ಅಧಿಕಾರಿಗಳ ಸಭೆ

ಪುತ್ತೂರು: ಈ ಬಾರಿ ಗ್ರಾಪಂಗಳಲ್ಲಿ ಸರ್ಕಾರಿ ಕೊಳವೆ ಬಾವಿಗಳನ್ನು ಕೊರೆಸುವುದನ್ನು ಸರ್ಕಾರ ರದ್ದು ಮಾಡಿದೆ. ಈ ಹಿಂದೆ ತೆಗೆಯಲಾದ ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ ಇದೆ. ಬಹುಗ್ರಾಮ ಕುಡಿಯುವ ನೀರು ಯೋಜನೆಯಲ್ಲಿ ಪುತ್ತೂರು, ಸುಳ್ಯ, ಬೆಳ್ತಂಗಡಿ, ಬಂಟ್ವಾಳ, ತಾಲೂಕಿನ ಒಟ್ಟು 56 ಗ್ರಾಪಂಚಾಯತ್ ಗಳಿಗೆ  ಕುಡಿಯುವ ನೀಡಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದರು. ಅವರು ಸೋಮವಾರ ಸಂಜೆ ಪುತ್ತೂರು ತಾಪಂ ಸಭಾಂಗಣದಲ್ಲಿ ಕುಡಿಯುವ ನೀರು ಯೋಜನೆಗೆ ಸಂಬಂಧಿಸಿ ವಿಧಾನಸಭಾ

ಕೊಳವೆ ಬಾವಿಗಳನ್ನು ಪುನರ್ ವ್ಯವಸ್ಥೆ ಕಲ್ಪಿಸಲು ಅವಕಾಶ : ಅಶೋಕ್ ಕುಮಾರ್ ರೈ | ಕುಡಿಯುವ ನೀರು ಯೋಜನೆ ಕುರಿತು ಅಧಿಕಾರಿಗಳ ಸಭೆ Read More »

ಶ್ರೀ ಮಹಾಭಾರತ ಸರಣಿಯಲ್ಲಿ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ

ಉಪ್ಪಿನಂಗಡಿ : ಉಪ್ಪಿನಂಗಡಿ ಶ್ರೀಸಹಸ್ರಲಿಂಗೇಶ್ವರ ದೇವಸ್ಥಾನದ ಪ್ರತಿಷ್ಠಾ ದಿನದ ಪ್ರಯುಕ್ತ ಫೆ. 24ರಂದು ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾಸೇವಾ ಸಂಘದಿಂದ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ ಜರಗಿತು. ಅರ್ಥಧಾರಿಗಳಾಗಿ ಪಾತಾಳ ಅಂಬಾ ಪ್ರಸಾದ (ಕುಮುದಾಕ್ಷಿ) ಭಾಸ್ಕರ ಬಾರ್ಯ (ಹನುಮಂತ) ಶ್ರೀಧರ ಎಸ್. ಪಿ ಸುರತ್ಕಲ್ (ಕರ್ಣ), ಜಿನೇಂದ್ರ ಜೈನ್ ಬಳ್ಳಮಂಜ(ಗಾರ್ಗ್ಯ ಮುನಿ ಮತ್ತು ಕುಂಜರ), ಗೀತಾ(ಚಂದ್ರಸೇನ1), ಸತೀಶ್ ಶಿರ್ಲಾಲು(ದ್ರೋಣ), ಗುಡ್ಡಪ್ಪ ಬಲ್ಯ(ಅರ್ಜುನ), ಜಯರಾಮ ಬಲ್ಯ(ಭೀಮ), ರವೀಂದ್ರ ದರ್ಬೆ(ಕೌರವ), ಶ್ರುತಿ ವಿಸ್ಮಿತ್ (ಭೀಷನಿ), ಪೂರ್ಣಿಮಾ ರಾವ್ ಬೆಳ್ತಂಗಡಿ (ಧರ್ಮರಾಯ

ಶ್ರೀ ಮಹಾಭಾರತ ಸರಣಿಯಲ್ಲಿ ಕುಮುದಾಕ್ಷಿ ಕಲ್ಯಾಣ ತಾಳಮದ್ದಳೆ Read More »

error: Content is protected !!
Scroll to Top