ಸುದ್ದಿ

ಮಹಾಕುಂಭಮೇಳಕ್ಕೆ ವೈಭವದ ತೆರೆ : 66 ಕೋಟಿಗೂ ಅಧಿಕ ಜನರಿಂದ ಪುಣ್ಯಸ್ನಾನ

183 ದೇಶಗಳ ಪ್ರತಿನಿಧಿಗಳು ಭಾಗಿ; 4 ಲಕ್ಷ ಕೋಟಿ ರೂಪಾಯಿಯಷ್ಟು ವ್ಯವಹಾರ ಪ್ರಯಾಗರಾಜ್ : ಮಕರ ಸಂಕ್ರಾಂತಿಯಂದು ಶುರುವಾಗಿ ಮಹಾಶಿವರಾತ್ರಿ ತನಕ 45 ದಿನಗಳ ಕಾಲ ನಡೆದ ವಿಶ್ವದ ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಮೇಳದಲ್ಲಿ 66 ಕೋಟಿಗೂ ಹೆಚ್ಚು ಜನ ತ್ರಿವೇಣಿ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಮಹಾಶಿವರಾತ್ರಿಯ ಸ್ನಾನದೊಂದಿಗೆ ವೈಭವದ ಮಹಾಕುಂಭಮೇಳ ಮುಕ್ತಾಯಗೊಂಡಿದೆ. ಮಹಾಕುಂಭದಲ್ಲಿ 5 ಪವಿತ್ರ ಸ್ನಾನಗಳು ನಡೆದವು. ಅವುಗಳಲ್ಲಿ ಮೂರು ಅಮೃತ ಸ್ನಾನಗಳು. […]

ಮಹಾಕುಂಭಮೇಳಕ್ಕೆ ವೈಭವದ ತೆರೆ : 66 ಕೋಟಿಗೂ ಅಧಿಕ ಜನರಿಂದ ಪುಣ್ಯಸ್ನಾನ Read More »

ಈಶಾ ಫೌಂಡೇಷನ್‌ ಶಿವರಾತ್ರಿ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಜೊತೆ ಭಾಗವಹಿಸಿದ ಡಿಕೆಶಿ

ಕಾಂಗ್ರೆಸ್‌ನಿಂದ ತೀವ್ರ ಆಕ್ಷೇಪ – ರಾಜಕೀಯದಲ್ಲಿ ಸಂಚಲನ ಬೆಂಗಳೂರು: ಕೊಯಮತ್ತೂರಿನ ಈಶಾ ಫೌಂಡೇಶನ್‌ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿರುವುದು ರಾಜಕೀಯದಲ್ಲಿ ತೀವ್ರ ಸಂಚಲನಕ್ಕೆ ಕಾರಣವಾಗಿದ್ದು, ಕಾಂಗ್ರೆಸ್‌ನಲ್ಲಿ ಈ ನಡೆಗೆ ತೀವ್ರ ಅಪಸ್ವರ ವ್ಯಕ್ತವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಏನೇನೋ ಹಾಕುತ್ತಾರೆ ಎಂದು ಡಿಕೆಶಿ ಹೇಳಿಕೆ ಬೆನ್ನಲ್ಲೇ ಎಐಸಿಸಿ‌ ಕಾರ್ಯದರ್ಶಿ ಕೇರಳದ ಮಾಜಿ ಉಸ್ತುವಾರಿ ಪಿ.ವಿ.ಮೋಹನ್ ಬಹಿರಂಗವಾಗಿಯೇ ಅಸಮಾಧಾನ‌ ಹೊರಹಾಕಿದ್ದಾರೆ. ಪಕ್ಷದ ತತ್ವ ಸಿದ್ಧಾಂತ ಹಾಗೂ ರಾಹುಲ್ ಗಾಂಧಿ

ಈಶಾ ಫೌಂಡೇಷನ್‌ ಶಿವರಾತ್ರಿ ಕಾರ್ಯಕ್ರಮದಲ್ಲಿ ಅಮಿತ್‌ ಶಾ ಜೊತೆ ಭಾಗವಹಿಸಿದ ಡಿಕೆಶಿ Read More »

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ | ಜಾನುವಾರುಗಳ ಮೇವು ಸಾಗಾಟದ ಟೆಂಪೋ

ಬೆಳ್ತಂಗಡಿ: ಜಾನುವಾರುಗಳ ಮೇವು ಸಾಗಾಟದ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ  ಘಟನೆ  ನಿನ್ನೆ ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಕ್ರಾಸ್ ಬಳಿ ನಡೆದಿದೆ. ಟೆಂಪೋದಲ್ಲಿದ್ದವರು ಅಲ್ಪಸ್ವಲ್ಪ ಗಾಯಗೊಂಡು ಹೆಚ್ಚಿನ ಅಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿ | ಜಾನುವಾರುಗಳ ಮೇವು ಸಾಗಾಟದ ಟೆಂಪೋ Read More »

ಮಂಗನಖಾಯಿಲೆಗೆ ಓರ್ವ ಮಹಿಳೆ ಬಲಿ

ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ 55 ವರ್ಷದ ಮಹಿಳೆಯೊಬ್ಬರು ಕೆಎಫ್‌ಡಿ ಸೋಂಕಿನಿಂದ ಬಳಲುತ್ತಿದ್ದರು. ಈ ಹಿನ್ನಲೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎನ್ನುವ ವಿಚಾರ  ತಡವಾಗಿ ಬೆಳಕಿಗೆ ಬಂದಿದೆ. ಇದು ಈ ವರ್ಷದ ಮೊದಲ ಬಲಿಯಾಗಿದೆ. ತೀರ್ಥಹಳ್ಳಿ ತಾಲೂಕಿನ ಕೊನೇರಿಪುರದ 55 ವರ್ಷದ ಮಹಿಳೆಗೆ ಜ.23ರಂದು ಕೆಎಫ್‌ಡಿ ಪಾಸಿಟಿವ್ ಬಂದಿತ್ತು. ಹೀಗಾಗಿ ಅವರಿಗೆ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಜ.23ರಂದು ಮಹಿಳೆಗೆ ಕಎಫ್‌ಡಿ ಪಾಸಿಟಿವ್ ಬಂದಿದ್ದರಿಂದ ಶಿವಮೊಗ್ಗ ಮೆಗ್ಯಾನ್ ಆಸ್ಪತ್ರೆಗೆ ದಾಖಲಿಸಿ

ಮಂಗನಖಾಯಿಲೆಗೆ ಓರ್ವ ಮಹಿಳೆ ಬಲಿ Read More »

ಕೆರೆಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ

ಉಪ್ಪಿನಂಗಡಿ: ತನ್ನದೇ ಮನೆಯ ತೋಟದ ಕೆರೆಗೆ ಹಾರಿ ಯುವಕನೋರ್ವ  ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಉಪ್ಪಿನಂಗಡಿ ಸಮೀಪದ ಪೆರಿಯಡ್ಕದಲ್ಲಿ ನಡೆದಿದೆ. ಕಿಂಡೋವು ಜಿನ್ನಪ್ಪ ಗೌಡ ಎಂಬವರ ಪುತ್ರ ಶ್ರೀನಿವಾಸ ಆತ್ಮಹತ್ಯೆ ಮಾಡಿಕೊಂಡ ಯುವಕ. ಕೂಲಿ ಕಾರ್ಮಿಕನಾಗಿದ್ದ ಶ್ರೀನಿವಾಸ ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದು, ಮಂಗಳವಾರ ಮುಂಜಾನೆ ಆತನ ಶವ ತೋಟದಲ್ಲಿನ ಕೆರೆಯಲ್ಲಿ ಪತ್ತೆಯಾಗಿತ್ತು. ಈತನ ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಪ್ಪಿನಂಗಡಿ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಕೆರೆಗೆ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ Read More »

ಡಾ. ಸುರೇಶ್‍ ಪುತ್ತೂರಾಯರಿಗೆ ಮಾತೃವಿಯೋಗ

ಪುತ್ತೂರು: ಮಹಾವೀರ ಆಸ್ಪತ್ರೆಯ ಖ್ಯಾತ ವೈದ್ಯರಾದ ಡಾ.ಸುರೇಶ್ ಪುತ್ತೂರಾಯರವರ ತಾಯಿ ಸುನಂದಾ ಪುತ್ತೂರಾಯ (82 ವ.) ಅವರು ಮುಂಬಯಿಯಲ್ಲಿರುವ ಹಿರಿಯ ಪುತ್ರನ ಮನೆಯಲ್ಲಿ ಫೆ.25ರಂದು ಸಂಜೆ ನಿಧನರಾದರು. ಸುನಂದಾರವರು ಕಿರಿಯ ಪುತ್ರ ಡಾ.ಸುರೇಶ್ ಪುತ್ತೂರಾಯ ರವರ ಮನೆಯಲ್ಲಿ ವಾಸವಿದ್ದು, ಕೆಲ ತಿಂಗಳ ಹಿಂದೆ ಮುಂಬಯಿಯಲ್ಲಿ ಇಂಜಿನಿಯರ್ ಆಗಿರುವ ಹಿರಿಯ ಪುತ್ರ ಗೋಪಾಲಕೃಷ್ಣರವರ ಮನೆಗೆ ತೆರಳಿದ್ದರು. ಮೃತರು ಪುತ್ರರಾದ ಗೋಪಾಲಕೃಷ್ಣಪುತ್ತೂರಾಯ. ಡಾ.ಸುರೇಶ್ ಪುತ್ತೂರಾಯ, ಪುತ್ರಿಯರಾದ ಶಶಿಕಲಾ ಸಾಮಗ ಉಡುಪಿ, ಧರ್ಮಸ್ಥಳ ಎಸ್‌.ಡಿ.ಎಂ ಕಾಲೇಜಿನ ಸಹ ಪ್ರಾಧ್ಯಾಪಕಿ ಹರಿಣಿ ಪುತ್ತೂರಾಯ,

ಡಾ. ಸುರೇಶ್‍ ಪುತ್ತೂರಾಯರಿಗೆ ಮಾತೃವಿಯೋಗ Read More »

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ | ನೆರವೇರಿದ ಮಹಾರುದ್ರಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು | ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ

ಪುತ್ತೂರು : ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಮಹಾರುದ್ರಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತು. ಮಹಾಶಿವರಾತ್ರಿ ಉತ್ಸವದ ವಿಶೇಷವಾಗಿ ಬೆಳಗ್ಗೆ 7:30ರಿಂದ ಶ್ರೀ ದೇವರಿಗೆ ಮಹಾರುದ್ರಯಾಗ, 9 ಗಂಟೆಗೆ ಶತರುದ್ರಾಭಿಷೇಕ ನಡೆಯಿತು. ವಿಶೇಷವಾಗಿ ದೇವಸ್ಥಾನದ ಒಳಾಂಗಣದಲ್ಲಿ ಶ್ರೀ ಮಹಾಲಿಂಗೇಶ್ವರ ದೇವರ ಮೂರ್ತಿಗೆ ಭಕ್ತಾದಿಗಳಿಂದ ಬಿಲ್ವಾರ್ಚನೆ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಬೆಳಿಗ್ಗೆಯಿಂದಲೇ ಮಹಾಶಿವರಾತ್ರಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ | ನೆರವೇರಿದ ಮಹಾರುದ್ರಯಾಗ ಸಹಿತ ವಿವಿಧ ವೈದಿಕ ಕಾರ್ಯಕ್ರಮಗಳು | ಸಹಸ್ರಾರು ಸಂಖ್ಯೆಯಲ್ಲಿ ಭಕ್ತರ ಪಾಲ್ಗೊಳ್ಳುವಿಕೆ Read More »

ಜಾಗ್ವಾರ್ ಯುದ್ದ ವಿಮಾನಕ್ಕೆ ಪೈಲಾಟ್ ಆಗಿ ಆಯ್ಕೆಯಾದ ಮಂಗಳೂರಿನ ತನುಷ್ಕಾ ಸಿಂಗ್  

ಮಂಗಳೂರು: ಭಾರತೀಯ ವಾಯುಪಡೆಯ ಹೆಮ್ಮೆ ಹಾಗೂ ಯಶಸ್ವಿ ಯುದ್ಧವಿಮಾನಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವ ಜಾಗ್ವಾರ್ ವಿಮಾನವನ್ನು ಮುನ್ನಡೆಸಲು ಮಹಿಳೆಯೋರ್ವಳಾದ ಪ್ಲೆಯಿಂಗ್ ಆಫೀಸರ್ ತನುಷ್ಕಾ ಸಿಂಗ್ ಆಯ್ಕೆಯಾಗಿದ್ದಾರೆ. ಇವರು ಜಾಗ್ವಾರ್ ಯುದ್ಧ ವಿಮಾನ ಸ್ಮಾಡ್ರನ್‌ನಲ್ಲಿ ಪೈಲಟ್ ಆಗಿ ಆಯ್ಕೆಯಾಗಿದ್ದಾರೆ. ಜಾಗ್ವಾರ್ ಯುದ್ಧ ವಿಮಾನ ಸ್ಮಾಡ್ರನ್‌ನಲ್ಲಿ ಪೈಲಟ್ ಆಗಿ ಆಯ್ಕೆಯಾದ ತನುಷ್ಕಾ ಸಿಂಗ್, ತಂದೆ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಅಜಯ್ ಪ್ರತಾಪ್ ಸಿಂಗ್ ಅವರ ಪುತ್ರಿ. ಪ್ರಸ್ತುತ  ಇವರು ಎಂಆರ್‌ಪಿಎಲ್ ಸಂಸ್ಥೆಯ ಎಚ್‌ಎಸ್‌ಇ ವಿಭಾಗದಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಾಗ್ವಾರ್ ಯುದ್ದ ವಿಮಾನಕ್ಕೆ ಪೈಲಾಟ್ ಆಗಿ ಆಯ್ಕೆಯಾದ ಮಂಗಳೂರಿನ ತನುಷ್ಕಾ ಸಿಂಗ್   Read More »

ಅಕ್ಷಯ ಕಾಲೇಜು ಎನ್‌ಎಸ್‌ಎಸ್ ಶಿಬಿರ ಸಂಪನ್ನ

ಪುತ್ತೂರು : ಅಕ್ಷಯ ಕಾಲೇಜಿನ ರಾ.ಸೇ.ಯೋ.ಘಟಕಗಳ ವಾರ್ಷಿಕ ವಿಷೇಶ ಶಿಬಿರವು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮೇಗಿನಪೇಟೆಯಲ್ಲಿ ಯಶಸ್ವಿಯಾಗಿ ನಡೆಯಿತು. ಶಿಬಿರದಲ್ಲಿ ಸ್ವಚ್ಛತಾ ಅಭಿಯಾನ, ಗಿಡ ನೆಡುವ ಕಾರ್ಯಕ್ರಮ ಮತ್ತು ಆರೋಗ್ಯ ಜಾಗೃತಿ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳು ನಡೆದವು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಅಧ್ಯಕ್ಷರು ಜಯಂತ ನಡುಬೈಲು ಮಾತನಾಡಿ ನಮ್ಮ ವಿದ್ಯಾರ್ಥಿಗಳು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರಿಂದ ಅವರು ಜವಾಬ್ದಾರಿಯುತ ನಾಗರಿಕರಾಗಲು ಸಿದ್ಧಗೊಳ್ಳುತ್ತಾರೆ. ಶಿಬಿರದಲ್ಲಿ ಕಲಿತ ಪಾಠಗಳು ಮುಂದಿನ ಜೀವನದಲ್ಲಿಯೂ ಪ್ರೇರಣೆಯಾಗಿ ಉಳಿಯಬೇಕು, ಎಲ್ಲಾ

ಅಕ್ಷಯ ಕಾಲೇಜು ಎನ್‌ಎಸ್‌ಎಸ್ ಶಿಬಿರ ಸಂಪನ್ನ Read More »

ಗ್ಯಾರಂಟಿ ಯೋಜನೆಗಳು ಹೊರೆಯಾಗುತ್ತಿವೆ : ಜಿ.ಪರಮೇಶ್ವರ್‌

ಪ್ರಣಾಳಿಕೆ ಸಿದ್ಧಪಡಿಸಿದ್ದು ನೀವೇ ಎಂದ ಶಿವಕುಮಾರ್‌ ಬೆಂಗಳೂರು: ಚುನಾವಣೆ ಸಂದರ್ಭದಲ್ಲಿ ಅಧಿಕಾರ ಹಿಡಿಯಲು ಘೋಷಿಸಿದ ಗ್ಯಾರಂಟಿ ಯೋಜನೆಗಳು ಬೊಕ್ಕಸಕ್ಕೆ ಹೊರೆಯಾಗುತ್ತಿವೆ ಎಂಬುದನ್ನು ಈಗ ಕಾಂಗ್ರೆಸ್‌ ಸಚಿವರೇ ಹೇಳುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಗೃಹ ಸಚಿವ ಜಿ.ಪರಮೇಶ್ವರ್‌, ಗ್ಯಾರಂಟಿ ಯೋಜನೆಗಳು ಹೊರೆಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದ್ದಾರೆ.ಗ್ಯಾರಂಟಿಗಳಿಂದ ಹೊರೆಯಾಗುತ್ತಿರುವುದು ನಿಜ. ಆದರೆ ಅದನ್ನು ನಾವು ಗೊತ್ತಿದ್ದೇ ಜಾರಿಗೆ ತಂದಿದ್ದೇವೆ. ಬಡವರಿಗಾಗಿ ಆಗುವ ಹೊರೆಯನ್ನು ನಾವು ಸಹಿಸಿಕೊಳ್ಳಬೇಕು ಅಷ್ಟೆ ಎಂದಿದ್ದಾರೆ. ಬಿಜೆಪಿಯವರಿಗೆ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗುವುದು ಬೇಕಿಲ್ಲ. ಹೇಗಾದರೂ

ಗ್ಯಾರಂಟಿ ಯೋಜನೆಗಳು ಹೊರೆಯಾಗುತ್ತಿವೆ : ಜಿ.ಪರಮೇಶ್ವರ್‌ Read More »

error: Content is protected !!
Scroll to Top