ಸುದ್ದಿ

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ

ಪುತ್ತೂರು: ರಬ್ಬರ್ ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸನ್ನು ಶೀಘ್ರ ನೀಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಪುತ್ತೂರು ಶಾಸಕ ಅಶೋಕ್ ರೈಯವರಿಗೆ ಭರವಸೆ ನೀಡಿದರು. ಕಾರ್ಮಿಕರ ಬೋನಸ್ ಬಾಕಿ ಇರುವ ಬಗ್ಗೆ ಕಾರ್ಮಿಕರು ಶಾಸಕರಿಗೆ ಮನವಿ ಮಾಡಿದ್ದರು. ಕಾರ್ಮಿಕರ ಸಮ್ಮುಖದಲ್ಲೇ ಸಚಿವರ ಜೊತೆ ಮಾತುಕತೆ ನಡೆಸಿದ್ದ ಶಾಸಕರು ಕಾರ್ಮಿಕರಿಗೆ ನೀಡಲು ಬಾಕಿ ಇರುವ ಬೋನಸ್ ನ್ನು ಅಗತ್ಯವಾಗಿ ನೀಡಬೇಕಾಗಿದೆ ಎಂದು ಸಚಿವರಲ್ಲಿ ವಿನಂತಿಸಿದ್ದರು. ಬೋನಸ್ ನೀಡಲು ಕೆಎಫ್‌ಡಿಸಿ ಮತ್ತು ಹಣಕಾಸು ಇಲಾಖೆಯ ಒಪ್ಪಿಗೆ ಸಿಗಲು ತಡವಾಗಿರುವ […]

ರಬ್ಬರ್ ಕಾರ್ಮಿಕರ ಬಾಕಿ ಬೋನಸ್ ಶೀಘ್ರ ಬಿಡುಗಡೆ | ಅರಣ್ಯ ಸಚಿವ ಖಂಡ್ರೆ ಭರವಸೆ Read More »

ಕಾವೇರುತ್ತಿರುವ ಹುಲಿಉಗುರು ಪೆಂಡೆಂಟ್ ಧಾರಣೆ ಪ್ರಕರಣ | ವನ್ಯಜೀವಿ ಅಂಗಗಳ ಸಂಗ್ರಹ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ

ಮಂಗಳೂರು: ಹುಲಿಉಗುರು ಪ್ರಕರಣ ದಿನದಿಂದ ದಿನಕ್ಕೆ ಕಾವೇರುತ್ತಿದ್ದಂತೆ ವನ್ಯಜೀವಿ ಹಾಗೂ ಅದರ ಅಂಗಗಳ ಸಂಗ್ರಹ ಪ್ರಕರಣದ ತನಿಖೆಗೆ ವನ್ಯಜೀವಿ ಸಂರಕ್ಷಣಾಧಿಕಾರಿಗಳನ್ನು ಒಳಗೊಂಡ ಮೂರು ಸದಸ್ಯರ ಸಮಿತಿಯನ್ನು ಅರಣ್ಯ ಇಲಾಖೆ ರಚಿಸಿ ಸೂಕ್ತ ಕ್ರಮಕ್ಕೆ ಇದೀಗ ಮುಂದಾಗಿದೆ. ಈ ಕುರಿತು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶ ಹೊರಡಿಸಿದ್ದಾರೆ. ಈಗಾಗಲೇ ಸೆಲೆಬ್ರಿಟಿಗಳು ಸೇರಿದಂತೆ ಮತ್ತಿತರರು ಹುಲಿಉಗುರು ಪೆಂಡೆಂಟ್  ಧರಿಸಿರುವುದು ಕಂಡು ಬಂದಿದ್ದು, ಇದು ಕಾನೂನು ಪ್ರಕಾರ ಅಪರಾಧವಾಗಿರುವುದರಿಂದ ಪ್ರಾಣಿಗಳ ವಧೆ ಮಾಡಿ ಅಂಗಾಂಗ ಸಂಗ್ರಹದಂತಹ ಪ್ರಕರಣವನ್ನು ತನಿಖೆಗೊಳಪಡಿಸಿ ಸೂಕ್ತ

ಕಾವೇರುತ್ತಿರುವ ಹುಲಿಉಗುರು ಪೆಂಡೆಂಟ್ ಧಾರಣೆ ಪ್ರಕರಣ | ವನ್ಯಜೀವಿ ಅಂಗಗಳ ಸಂಗ್ರಹ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ Read More »

ಬೆಂಗಳೂರು ಕಂಬಳ-ನಮ್ಮ ಕಂಬಳ : ದ.ಕ.ಉಸ್ತುವಾರಿ ಸಚಿವರಿಗೆ ಆಹ್ವಾನ

ಬೆಂಗಳೂರು: ಬೆಂಗಳೂರು ಕಂಬಳ ಸಮಿತಿ ವತಿಯಿಂದ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ, ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರನ್ನು ಭೇಟಿಮಾಡಿ ಕಂಬಳ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಚರ್ಚಿಸಿ, ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ಬೆಂಗಳೂರು ಕಂಬಳ-ನಮ್ಮ ಕಂಬಳ ಕಾರ್ಯಕ್ರಮಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಸಚಿವರು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪುತ್ತೂರು ಶಾಸಕ, ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ, ಕಾರ್ಯಾಧ್ಯಕ್ಷ ಗುರುಕಿರಣ್, ಉಪಾಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ,

ಬೆಂಗಳೂರು ಕಂಬಳ-ನಮ್ಮ ಕಂಬಳ : ದ.ಕ.ಉಸ್ತುವಾರಿ ಸಚಿವರಿಗೆ ಆಹ್ವಾನ Read More »

ನಾರ್ಯ ಪರಿಸರದಲ್ಲಿ ಚಿರತೆ ಓಡಾಟ : ಸ್ಥಳೀಯರಲ್ಲಿ ಭೀತಿ

ಉಜಿರೆ : ಉಜಿರೆ ಸಮೀಪದ ಕನ್ಯಾಡಿ-2ಗ್ರಾಮದ ನಾರ್ಯ ಮೂರು ಮಾರ್ಗ ಎಂಬಲ್ಲಿ ಬುಧವಾರ ರಾತ್ರಿ ಚಿರತೆ ಕಂಡು ಬಂದಿದ್ದು, ಸ್ಥಳೀಯ ಜನತೆ ಭಯಭೀತರಾಗಿದ್ದಾರೆ. ರಾತ್ರಿ ಸಮಯ ಈ ರಸ್ತೆಯಲ್ಲಿ ಪಾಣೇಲಿನ ವ್ಯಕ್ತಿಗೆ ಚಿರತೆ ಕಂಡು ಬಂದಿದೆ ಎಂದು ಹೇಳಲಾಗಿದ್ದು, ಚಿರತೆಯ ಚಿತ್ರ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಾರ್ಯ ಪರಿಸರದಲ್ಲಿ ಹಲವು ಮನೆಗಳು ಇದ್ದು ಇಲ್ಲಿನ ಮಂದಿ ಚಿರತೆ ಓಡಾಟದಿಂದ ಭೀತರಾಗಿದ್ದಾರೆ.  ಈ ಭಾಗದಲ್ಲಿ ಧರ್ಮಸ್ಥಳ ಮೀಸಲು ಅರಣ್ಯ ಹಾಗೂ ಬೆಳಾಲು ವ್ಯಾಪ್ತಿಯ ದಡಂತಮಲೆ ಅರಣ್ಯ ಪ್ರದೇಶ

ನಾರ್ಯ ಪರಿಸರದಲ್ಲಿ ಚಿರತೆ ಓಡಾಟ : ಸ್ಥಳೀಯರಲ್ಲಿ ಭೀತಿ Read More »

ಜ.22: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ : ಪ್ರಧಾನಿ ಮೋದಿಗೆ ಆಹ್ವಾನ

ನವದೆಹಲಿ: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಮಂದಿರದಲ್ಲಿ ಜ.22 ರಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯಾಗಲಿದ್ದು, ಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಮಂತ್ರಣ ನೀಡಲಾಯಿತು. ಈ ಬಗ್ಗೆ ಸ್ವತಃ ಪ್ರಧಾನಿಗಳು ಟ್ವಿಟ್ ಮಾಡಿದ್ದು, ತಮ್ಮ ಜೀವಮಾನದಲ್ಲಿ ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲಿರುವುದಕ್ಕೆ ಧನ್ಯನಾಗಿದ್ದೇನೆ ಎಂದು ಹೇಳಿದ್ದಾರೆ. ತಮಗೆ ಆಮಂತ್ರಣ ನೀಡಿದ್ದನ್ನು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಜೈ ಸಿಯಾರಾಮ್! ಇಂದು ಅತ್ಯಂತ ಭಾವನಾತ್ಮಕ ದಿನವಾಗಿದೆ ಎಂದು ಹೇಳಿದ್ದಾರೆ. ಪ್ರಧಾನಿಗೆ ಆಮಂತ್ರಣ ನೀಡಿದ ತೀರ್ಥ ಕ್ಷೇತ್ರ

ಜ.22: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ : ಪ್ರಧಾನಿ ಮೋದಿಗೆ ಆಹ್ವಾನ Read More »

ಚಂದ್ರಗ್ರಹಣ : ಕುಕ್ಕೆ ಕ್ಷೇತ್ರದಲ್ಲಿ ದರ್ಶನ ಸಮಯದಲ್ಲಿ ಬದಲಾವಣೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಅ.28ರಂದು ಶನಿವಾರ ಚಂದ್ರಗ್ರಹಣ ಇರುವುದರಿಂದ ಶ್ರೀ ದೇವಳದ ಪ್ರಧಾನ ಅರ್ಚಕರ ನಿರ್ದೇಶನದಂತೆ ಭಕ್ತಾಧಿಗಳಿಗೆ ಶ್ರೀ ದೇವರ ದರ್ಶನದ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅ.28ರಂದು ಶನಿವಾರ ರಾತ್ರಿ ಮಹಾಪೂಜೆ ಸಾಯಂಕಾಲ ಗಂಟೆ 6.30ಕ್ಕೆ ಮುಕ್ತಾಯಗೊಳ್ಳಲಿದೆ. ಆ ಬಳಿಕ ಶ್ರೀ ದೇವರ ದರುಶನಕ್ಕೆ ಅವಕಾಶ ಇರುವುದಿಲ್ಲ. ಅಲ್ಲದೆ ಈ ದಿನ ಸಾಯಂಕಾಲ ಸಂಜೆಯ ಆಶ್ಲೇಷ ಬಲಿ ಸೇವೆ ನೆರವೇರುವುದಿಲ್ಲ. ರಾತ್ರಿ ಪ್ರಸಾದ ಬೋಜನ ಪ್ರಸಾದ ವಿತರಣೆ ಇರುವುದಿಲ್ಲ ಎಂದು ಶ್ರೀ ದೇವಳದ

ಚಂದ್ರಗ್ರಹಣ : ಕುಕ್ಕೆ ಕ್ಷೇತ್ರದಲ್ಲಿ ದರ್ಶನ ಸಮಯದಲ್ಲಿ ಬದಲಾವಣೆ Read More »

ವೇಷ ಧರಿಸಿ ಧನಸಂಗ್ರಹ : ಮಾನವೀಯತೆ ಮೆರೆದ ಯುವಕರು

ಸುಳ್ಯ: ಕಳೆದ ಮೂವತ್ತು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ಚಾಂದಿನಿ ಅವರ ಚಿಕಿತ್ಸೆಗಾಗಿ ಸುಳ್ಯದ ಯುವಕರು ಸೇರಿಕೊಂಡು ನವರಾತ್ರಿ ಸಮಯದಲ್ಲಿ ವಿವಿಧ ವೇಷ ಧರಿಸಿ ಪುತ್ತೂರಿನಿಂದ ಸುಳ್ಯದವರೆಗೆ ರಸ್ತೆ ಬದಿ ಧನಸಂಗ್ರಹ ಮಾಡಿ ಹೀಗೊಂದು ಮಾನವೀಯತೆ ಮೆರೆದಿದ್ದಾರೆ. ಕನಕಮಜಲಿನ ಶ್ರೀ ಆತ್ಮಾರಾಮ ಭಜನಾ ಮಂದಿರದಿಂದ ವೇಷ ಧರಿಸಿ ಜೀಪಿನಲ್ಲಿ ಹೊರಟ ಸ್ವಸ್ತಿಕ್ ನರಿಯೂರು, ಸ್ವಪ್ನಿತ್ ನರಿಯೂರು, ನವೀನ್ ಅಡ್ಯಾರು, ತುಷಾರ್ ಕಣಜಾಲು ಹಾಗೂ ಪುನೀತ್ ಸಂಕೇಶ ಎಂಬ ಯುವಕರ ತಂಡ ಚಂಡ ಮುಂಡ, ಋಷಿ, ಹಿಡಿಂಬೆ ಹಾಗೂ ಬೇತಾಳ

ವೇಷ ಧರಿಸಿ ಧನಸಂಗ್ರಹ : ಮಾನವೀಯತೆ ಮೆರೆದ ಯುವಕರು Read More »

ಸಿ ಶ್ರೇಣಿ ದೇವಾಲಯಗಳಿಗೂ ಗೃಹಜ್ಯೋತಿ ಯೋಜನೆ ವಿಸ್ತರಣೆ | ಚಿಂತನೆ ನಡೆಸಿದ ಸರಕಾರ

ಬೆಂಗಳೂರು: ಗೃಹಜ್ಯೋತಿ ಯೋಜನೆಯಡಿ ಇದೀಗ ಸರಕಾರ ಧಾರ್ಮಿಕದತ್ತಿ ಇಲಾಖೆ ವ್ಯಾಪ್ತಿಯ ಸಿ ಶ್ರೇಣಿ ದೇವಸ್ಥಾನಗಳಿಗೂ ಗೃಹಜ್ಯೋತಿ ಯೋಜನೆಯನ್ನು ಕಲ್ಪಿಸಲು ಮುಂದಾಗಿದೆ. ಈಗಾಗಲೇ ಮನೆಗಳಿಗೆ ಉಚಿತ ವಿದ್ಯುತ್ ನೀಡುತ್ತಿದ್ದು, ಗೃಹಜ್ಯೋತಿ ಯೋಜನೆಯಡಿ ಮನೆಗಳಿಗೆ ಮಾಸಿಕ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಸೌಲಭ್ಯ ನೀಡುತ್ತಿರುವಂತೆ ಸಿ ದರ್ಜೆ ದೇವಸ್ಥಾನಗಳಿಗೂ ಉಚಿತ ವಿದ್ಯುತ್ ಪೂರೈಕೆ ಮಾಡಲು ಸರಕಾರ ಚಿಂತನೆ ನಡೆಸಿದೆ. ಶೀಘ್ರವೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯಲು ಯೋಜನೆ ರೂಪಿಸಲಾಗಿದೆ. ಒಂದರಿಂದ ಐದು ಲಕ್ಷ ರೂಪಾಯಿ ಆದಾಯ ಹೊಂದಿದ

ಸಿ ಶ್ರೇಣಿ ದೇವಾಲಯಗಳಿಗೂ ಗೃಹಜ್ಯೋತಿ ಯೋಜನೆ ವಿಸ್ತರಣೆ | ಚಿಂತನೆ ನಡೆಸಿದ ಸರಕಾರ Read More »

ಮಾಲಕರ ವಿಶ್ವಾಸ ಗಿಟ್ಟಿಸಿದ್ದ ಕೆಲಸದವನಿಂದಲೇ ಭಾರೀ ಕಳ್ಳತನ!

ಬಂಟ್ವಾಳ: ಬಿಲ್ಡರ್ ಓರ್ವರ ಮನೆಯ ಕೆಲಸಕ್ಕಿದ್ದಾತ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳುವು ಮಾಡಿ ಪರಾರಿಯಾಗಿರುವ ಘಟನೆ ಫರಂಗಿಪೇಟೆ ಎಂಬಲ್ಲಿ ನಡೆದಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪುದು ಗ್ರಾಮದ ಕೋಡಿಮಜಲು ನಿವಾಸಿಯಾಗಿರುವ ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಕಪಾಟಿನೊಳಗೆ ಇರಿಸಲಾಗಿದ್ದ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಸಹಿತ ಲಕ್ಷಾಂತರ ರೂ ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಪೋಲೀಸರಿಗೆ ದೂರು ನೀಡಲಾಗಿದೆ. ಸುಮಾರು 2,75,0000

ಮಾಲಕರ ವಿಶ್ವಾಸ ಗಿಟ್ಟಿಸಿದ್ದ ಕೆಲಸದವನಿಂದಲೇ ಭಾರೀ ಕಳ್ಳತನ! Read More »

‘ಬೆಂಗಳೂರು ಕಂಬಳ’ಕ್ಕೆ ಸಿಕ್ಕಿಲ್ಲ ಅನುಮತಿ! | ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದೇನು?

ಬೆಂಗಳೂರು: ಬಹುನಿರೀಕ್ಷಿತ ಬೆಂಗಳೂರು ಕಂಬಳಕ್ಕೆ ಇನ್ನೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅನುಮತಿ ಸಿಕ್ಕಿಲ್ಲ ಎಂದು ವರದಿಯಾಗಿದೆ. ನವಂಬರ್ ಕೊನೆ ವಾರದಲ್ಲಿ ನಡೆಯಲುದ್ದೇಶಿಸಿರುವ ಬೆಂಗಳೂರು ಕಂಬಳಕ್ಕೆ ಸಿದ್ಧತೆಗಳು ಭರದಿಂದ ಸಾಗುತ್ತಿದೆ. ಕರೆ ಮುಹೂರ್ತವೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕರೆ ಮುಹೂರ್ತಕ್ಕೆ ಆಗಮಿಸಿ, 1 ಕೋಟಿ ರೂ. ಅನುದಾನ ನೀಡುವ ಘೋಷಣೆ ಮಾಡಿದ್ದರು. ಇದರ ನಡುವೆ ಇದೀಗ ಅನುಮತಿ ವಿಚಾರ ವರದಿಯಾಗಿದೆ. ಬೆಂಗಳೂರಿನಲ್ಲಿ ಕಂಬಳ ನಡೆಸುವುದಾದರೆ ಬಿಬಿಎಂಪಿಯ ಅನುಮತಿ ಕಡ್ಡಾಯ. ಕಾನೂನು

‘ಬೆಂಗಳೂರು ಕಂಬಳ’ಕ್ಕೆ ಸಿಕ್ಕಿಲ್ಲ ಅನುಮತಿ! | ಐಎಎಸ್ ಅಧಿಕಾರಿ ತುಷಾರ್ ಗಿರಿನಾಥ್ ಹೇಳಿದ್ದೇನು? Read More »

error: Content is protected !!
Scroll to Top