ಸುದ್ದಿ

ಮಹಾಮಳೆಗೆ ತತ್ತರಿಸಿದ ಬೆಂಗಳೂರು : 10 ಬಡಾವಣೆಗಳು ಜಲಾವೃತ

ವಿದ್ಯುತ್‌, ಇಂಟರ್‌ನೆಟ್‌ ಸಂಪರ್ಕವಿಲ್ಲದೆ ಜನರ ಪರದಾಟ ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಂಗಳೂರು ನಗರ ಕಂಡು ಕೇಳರಿಯದ ಮಳೆಯ ಆರ್ಭಟ ಎದುರಿಸುತ್ತಿದೆ. ಭಾರಿ ಮಳೆಯಿಂದಾಗಿ ನಗರದ ಜನಜೀವನ ಪೂರ್ತಿ ಅಸ್ತವ್ಯಸ್ತಗೊಂಡಿದ್ದು, ಜನರು ಮನೆಯಿಂದ ಹೊರಗಿಳಿಯಲು ಸಾಧ್ಯವಾಗದ ಪರಿಸ್ಥಿತಿಯಿದೆ. ಯಲಹಂಕ ಪ್ರದೇಶದಲ್ಲಿ ಉಂಟಾದ ಮೇಘಸ್ಫೋಟದಿಂದ ಇಲ್ಲಿನ ನಿವಾಸಿಗಳು ಬಹಳ ಕಷ್ಟಪಡುತ್ತಿದ್ದಾರೆ. ಭಾರಿ ಮಳೆಯಿಂದಾಗಿ 10 ಲೇಔಟ್‌ಗಳು ಮತ್ತು ಸುತ್ತಮುತ್ತಲಿನ ಸಾವಿರಾರು ನಿವಾಸಿಗಳು ಆಹಾರ, ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕವಿಲ್ಲದೆ ಕಂಗಾಲಾಗಿದ್ದಾರೆ. ಎಲ್ಲ ದಿಕ್ಕುಗಳಿಂದಲೂ ನೀರಿನಿಂದ ಆವೃತವಾದ ಪ್ರದೇಶಗಳ ಜನರನ್ನು […]

ಮಹಾಮಳೆಗೆ ತತ್ತರಿಸಿದ ಬೆಂಗಳೂರು : 10 ಬಡಾವಣೆಗಳು ಜಲಾವೃತ Read More »

ಕಲುಷಿತ ನೀರು ಕುಡಿದು 8 ತಿಂಗಳ ಮಗು ಸಹಿತ ಐವರು ಸಾವು

ವಿಜಯನಗರ: ಕಲುಷಿತ ನೀರು ಕುಡಿದು ವಾಂತಿಭೇದಿಯಿಂದ ಬಳಲಿ ನವಜಾತ ಶಿಶು ಸೇರಿದಂತೆ ಐವರು ಮೃತಪಟ್ಟಿರುವ ದಾರುಣ ಘಟನೆ ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ಸಂಭವಿಸಿದೆ. ಹರಪನಹಳ್ಳಿ ತಾಲೂಕಿನ ಟಿ ತುಂಬಿಗೇರೆ ಗ್ರಾಮದ ಸುರೇಶ್ (30), ಮಹಾಂತೇಶ್ (45), ಗೌರಮ್ಮ (60), ಹನುಮಂತಪ್ಪ (38) ಮತ್ತು ಎಂಟು ತಿಂಗಳ ಗಂಡು ಮಗು ಮೃತಪಟ್ಟಿದೆ.ಗ್ರಾಮಕ್ಕೆ ಕಳೆದ 15 ದಿನಗಳಿಂದ ಕಲುಷಿತ ನೀರು ಸರಬರಾಜು ಆಗುತ್ತಿದೆ. ಇದನ್ನು ತಿಳಿಯದೆ ಗ್ರಾಮಸ್ಥರು ನೀರು ಕುಡಿಯುತ್ತಿದ್ದಾರೆ. ಇದರಿಂದ ಗ್ರಾಮದ 50ಕ್ಕೂ ಹೆಚ್ಚು ಜನರು ವಾಂತಿಭೇದಿಯಿಂದ ಆಸ್ಪತ್ರೆಗೆ

ಕಲುಷಿತ ನೀರು ಕುಡಿದು 8 ತಿಂಗಳ ಮಗು ಸಹಿತ ಐವರು ಸಾವು Read More »

ಬೆಂಗಳೂರು: ಕಟ್ಟಡ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 5ಕ್ಕೇರಿಕೆ

ಭಾರಿ ಮಳೆಗ ಕುಸಿದು ಬಿದ್ದ ನಿರ್ಮಾಣ ಹಂತದ 7 ಅಂತಸ್ತಿನ ಕಟ್ಟಡ ಬೆಂಗಳೂರು: ಭಾರಿ ಮಳೆ ಬೆಂಗಳೂರಿನಲ್ಲಿ ಹಲವು ಅನಾಹುತಗಳನ್ನು ಸೃಷ್ಟಿಸಿದ್ದು, ನಿನ್ನೆ ಸಂಜೆ ಸಂಭವಿಸಿದ ಕಟ್ಟಡ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 5ಕ್ಕೇರಿದೆ. ಮಂಗಳವಾರ ಹೆಣ್ಣೂರಿನ ಬಾಬುಸಾಬ್ ಪಾಳ್ಯದಲ್ಲಿ ನಿರ್ಮಾಣ ಹಂತದಲ್ಲಿದ್ದ 7 ಮಹಡಿಯ ಕಟ್ಟಡ ಕುಸಿದಿತ್ತು. ಓರ್ವನ ಶವ ನಿನ್ನೆಯೆ ಸಿಕ್ಕಿತ್ತು. ಉಳಿದವರ ಶವಗಳನ್ನು ಮಧ್ಯರಾತ್ರಿಗಾಗುವಾಗ ಹೊರತೆಗೆಯಲಾಗಿದೆ. ಮೃತರೆಲ್ಲ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿದ್ದ ಕಾರ್ಮಿಕರು.ರಾತ್ರಿಯಿಡೀ ಅವಶೇಷಗಳಡಿ ಸಿಲುಕಿದವರ ಪತ್ತೆ ಮತ್ತು ರಕ್ಷಣಾ ಕಾರ್ಯ ನಡೆದಿದೆ.

ಬೆಂಗಳೂರು: ಕಟ್ಟಡ ಕುಸಿತ ದುರಂತದಲ್ಲಿ ಮೃತರ ಸಂಖ್ಯೆ 5ಕ್ಕೇರಿಕೆ Read More »

ಅನ್ನಭಾಗ್ಯ ಹಣ ವರ್ಗಾವಣೆ ಸದ್ಯ ಮುಂದುವರಿಕೆ : ಮುನಿಯಪ್ಪ

ಫಲಾನಭವಿಗಳ ಖಾತೆಗೆ ಹಣ ವರ್ಗಾವಣೆ ವ್ಯವಸ್ಥೆಯಲ್ಲಿ ಬದಲಾವಣೆಯಿಲ್ಲ ಬೆಂಗಳೂರು : ಅನ್ನಭಾಗ್ಯ ಫಲಾನುಭವಿಗಳಿಗೆ ಐದು ಕೆಜಿ ಅಕ್ಕಿ ಬದಲಿಗೆ 170 ರೂ. ನೇರ ನಗದು ವರ್ಗಾವಣೆ (ಡಿಬಿಟಿ) ವ್ಯವಸ್ಥೆ ಸದ್ಯಕ್ಕೆ ಮುಂದುವರಿಯಲಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್‌. ಮುನಿಯಪ್ಪ ತಿಳಿಸಿದ್ದಾರೆ. ರಾಜ್ಯಕ್ಕೆ ಕೆಜಿಗೆ 28 ರೂ.ಯಂತೆ ಅಕ್ಕಿ ನೀಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಹೆಚ್ಚುವರಿಯಾಗಿ ಅಗತ್ಯವಿರುವ 20,000 ಮೆಟ್ರಿಕ್ ಟನ್ ಅಕ್ಕಿಯನ್ನು ರಾಜ್ಯ ಸರ್ಕಾರ ಬೇರೆಡೆಗಳಿಂದ ಸಂಗ್ರಹಿಸಲಿದೆ. ಆದರೆ ಸದ್ಯಕ್ಕೆ ಫಲಾನುಭವಿಗಳ

ಅನ್ನಭಾಗ್ಯ ಹಣ ವರ್ಗಾವಣೆ ಸದ್ಯ ಮುಂದುವರಿಕೆ : ಮುನಿಯಪ್ಪ Read More »

ಲವ್‌ ಮಾಡ್ಬೇಕಾ, ಗಡ್ಡ ಬೋಳಿಸಿ : ಹುಡುಗಿಯರ ವಿಚಿತ್ರ ಬೇಡಿಕೆ

ಕ್ಲೀನ್‌ ಶೇವ್‌ ಮಾಡಿದ ಹುಡುಗರು ಬೇಕೆಂದು ಆಗ್ರಹಿಸಿ ರ‍್ಯಾಲಿ ಇಂದೋರ್‌ : ಈಗಿನ ಯುವಕರಿಗೆ ಗಡ್ಡ ಬಿಡುವುದು ಬಹಳ ಇಷ್ಟ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ಕಾರ್ಪೋರೇಟ್‌ ಕಂಪನಿಯ ತನಕ ಎಲ್ಲಿ ನೋಡಿದರೂ ಗಡ್ಡಧಾರಿ ಸ್ಟೈಲಿಶ್‌ ಹುಡುಗರೇ ಹೆಚ್ಚಾಗಿ ಕಾಣಸಿಗುತ್ತಾರೆ. ಗಡ್ಡಕ್ಕೆ ಹುಡುಗಿಯರು ಬೇಗ ಬೌಲ್ಡ್‌ ಆಗುತ್ತಾರೆ ಎಂದು ಅವರು ಭಾವಿಸಿರಬಹುದು. ಆದರೆ ಎಲ್ಲ ಹುಡುಗಿಯರಿಗೆ ಗಡ್ಡ ಇಷ್ಟ ಆಗುವುದಿಲ್ಲ. ಇಂದೋರ್‌ನ ಕೆಲವು ಹುಡುಗಿಯರು ನಮಗೆ ಕ್ಲೀನ್‌ ಶೇವ್‌ ಹುಡುಗರೇ ಬೇಕೆಂದು ಆಗ್ರಹಿಸಿ ಬೀದಿಗಿಳಿರುವುದೇ ಇದಕ್ಕೆ ಸಾಕ್ಷಿ. ಇದರ

ಲವ್‌ ಮಾಡ್ಬೇಕಾ, ಗಡ್ಡ ಬೋಳಿಸಿ : ಹುಡುಗಿಯರ ವಿಚಿತ್ರ ಬೇಡಿಕೆ Read More »

ಗುರುವಾರ ಪ್ರಚಂಡ ವೇಗದಲ್ಲಿ ಅಪ್ಪಳಿಸಲಿದೆ ಚಂಡಮಾರುತ

ಈ ರಾಜ್ಯಗಳಲ್ಲಿ ಬುಧವಾರದಿಂದಲೇ ಭಾರಿ ಮಳೆಯ ಎಚ್ಚರಿಕೆ ಭುವನೇಶ್ವರ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಸೃಷ್ಟಿಯಾಗಿರುವ ಡಾನಾ ಚಂಡಮಾರುತ ಗುರುವಾರ ಬಂಗಾಳಕೊಲ್ಲಿ ತೀರದ ಪ್ರದೇಶಗಳಿಗೆ ಪ್ರಚಂಡ ವೇಗದಲ್ಲಿ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಪೂರ್ವ–ಮಧ್ಯ ಬಂಗಾಳಕೊಲ್ಲಿ ಹಾಗೂ ಅಂಡಮಾನ್ ಸಮುದ್ರದ ಉತ್ತರಕ್ಕೆ ವಾಯುಭಾರ ಕುಸಿತ ಉಂಟಾಗಿದೆ. ಇದು ‍ಪಶ್ಚಿಮ–ವಾಯವ್ಯ ದಿಕ್ಕಿನೆಡೆಗೆ ಚಲಿಸಿ ಬುಧವಾರದ ವೇಳೆಗೆ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಅಕ್ಟೋಬರ್ 24ರ ವೇಳೆಗೆ ಇದು ತೀವ್ರ ಚಂಡಮಾರುತವಾಗಿ ತೀವ್ರಗೊಂಡು ಉತ್ತರ ಬಂಗಾಳ ಕೊಲ್ಲಿಯ ತೀರ

ಗುರುವಾರ ಪ್ರಚಂಡ ವೇಗದಲ್ಲಿ ಅಪ್ಪಳಿಸಲಿದೆ ಚಂಡಮಾರುತ Read More »

ನ.1ರಿಂದ 19ರ ನಡುವೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಸಬೇಡಿ : ಖಲಿಸ್ಥಾನಿ ಉಗ್ರರ ಬೆದರಿಕೆ

ಹೊಸದಿಲ್ಲಿ : ವಿಮಾನಗಳಿಗೆ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಬೆದರಿಕೆ ಕರೆಗಳನ್ನು ಮಾಡಿ ಸಂಚಾರವನ್ನು ಅಸ್ತವ್ಯಸ್ತಗೊಳಿಸುತ್ತಿರುವಾಗಲೇ ಈಗ ಖಲಿಸ್ಥಾನಿ ಉಗ್ರ ಗುರುಪತ್ವಂತ್‌ ಸಿಂಗ್‌ ಪನ್ನುನ್‌ ಏರ್​ ಇಂಡಿಯಾ ವಿಮಾನದಲ್ಲಿ ನವೆಂಬರ್ 1ರಿಂದ 19ರವರೆಗೆ ಪ್ರಯಾಣಿಸಬೇಡಿ ಎಂದು ಬೆದರಿಕೆ ಹಾಕಿದ್ದಾನೆ. ಸಿಖ್ ನರಮೇಧದ 40ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಏರ್ ಇಂಡಿಯಾ ವಿಮಾನದ ಮೇಲೆ ದಾಳಿ ಸಂಭವಿಸಬಹುದು ಏಂದು ಪನ್ನುನ್‌ ಬೆದರಿಕೆ ಸಂದೇಶದಲ್ಲಿ ಹೇಳಿದ್ದಾನೆ.ಕಳೆದ ವರ್ಷವೂ ಖಲಿಸ್ಥಾನಿ ಉಗ್ರರು ಏರ್‌ ಇಂಡಿಯಾಕ್ಕೆ ಇದೇ ರೀತಿಯ ಬೆದರಿಕೆ ಹಾಕಿದ್ದರು. ದಿಲ್ಲಿಯ ಇಂದಿರಾ

ನ.1ರಿಂದ 19ರ ನಡುವೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಸಬೇಡಿ : ಖಲಿಸ್ಥಾನಿ ಉಗ್ರರ ಬೆದರಿಕೆ Read More »

ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ

ಬೆಂಗಳೂರಿನಲ್ಲಿ ಯಕ್ಷಗಾನ ಪ್ರದರ್ಶನ ನೀಡಲು ಹೋದ ವೇಳೆ ಹೃದಯಾಘಾತವಾಗಿ ನಿಧನ ಮಂಗಳೂರು : ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಸೋಮವಾರ ಮುಂಜಾನೆ ವೇಳೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಸೋಮವಾರದಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ಭಾನುವಾರ ಬೆಳಗ್ಗೆ ಬೆಂಗಳೂರಿನ ಆರ್.ಕೆ ಭಟ್‌ ಅವರ ಮನೆಯಲ್ಲಿ ಬಂದಿಳಿದ ತಂಡದಲ್ಲಿದ್ದ ಬಂಟ್ವಾಳ ಆಚಾರ್ಯರಿಗೆ ಇಂದು ಮುಂಜಾನೆ 4 ಗಂಟೆಗೆ ವೇಳೆಗೆ ತೀವ್ರ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಜೊತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ

ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಇನ್ನಿಲ್ಲ Read More »

ಸಂಪತ್ತಿನಲ್ಲಿ ಶಾರೂಕ್‌ ಈಗಲೂ ಕಿಂಗ್‌

ನಟನ ಒಟ್ಟು ಸಂಪತ್ತು ಎಷ್ಟೆಂದು ತಿಳಿದರೆ ನೀವು ಬೆರಗಾಗುತ್ತೀರಾ ಮುಂಬಯಿ: ಭಾರತೀಯ ನಟರ ಪೈಕಿ ಅತಿ ಶ್ರೀಮಂತ ಎಂದರೆ ಬಾಲಿವುಡ್‌ನಲ್ಲಿ ಕಿಂಗ್‌ ಖಾನ್‌ ಎಂದೇ ಅರಿಯಲ್ಪಡುವ ಶಾರೂಕ್‌ ಖಾನ್‌. ಹುರುನ್‌ ಇಂಡಿಯಾ ರಿಚ್‌ ಲಿಸ್ಟ್‌ ನಿನ್ನೆ ಬಿಡುಗಡೆಗೊಳಿಸಿರುವ ಭಾರತದ ಶ್ರೀಮಂತ ನಟರ ಪಟ್ಟಿಯಲ್ಲಿ ಶಾರೂಕ್‌ ಖಾನ್‌ ಅಗ್ರಸ್ಥಾನದಲ್ಲಿದ್ದಾರೆ. ಅವರ ಸಂಪತ್ತಿನ ಒಟ್ಟು ಮೌಲ್ಯ 7,300 ಕೋ. ರೂ. ಎನ್ನಲಾಗಿದೆ. ಇದು ಬಾಲಿವುಡ್‌ನಲ್ಲಿ ಶಾರೂಕ್‌ ಖಾನ್‌ ಎಷ್ಟು ಪ್ರಭಾವಶಾಲಿ ಎನ್ನುವುದಕ್ಕೆ ಸಾಕ್ಷಿ. ಹಾಗೆಂದು ಬರೀ ನಟನೆಯೊಂದರಿಂದಲೇ ಅವರು ಇಷ್ಟು

ಸಂಪತ್ತಿನಲ್ಲಿ ಶಾರೂಕ್‌ ಈಗಲೂ ಕಿಂಗ್‌ Read More »

ಶೂಟಿಂಗ್‌ನಲ್ಲಾದ ಗಾಯಕ್ಕೆ 5.75 ಕೋಟಿ ರೂ. ಪರಿಹಾರ ಕೇಳಿದ ನಟಿ!

ಕೊಚ್ಚಿ : ಸಿನಿಮಾ ಸೆಟ್​ಗಳಲ್ಲಿ ಅವಘಡಗಳು, ಅಪಘಾತಗಳಾಗುವುದು ಸಾಮಾನ್ಯ ವಿಚಾರ. ಸ್ಟಂಟ್, ರೋಪ್, ಡ್ಯಾನ್ಸ್, ಆಕ್ಷನ್, ದೊಡ್ಡ ದೊಡ್ಡ ಸೆಟ್‌, ಬೆಂಕಿ ಇನ್ನೂ ಹಲವು ಅಪಾಯಕಾರಿ ಶೂಟಿಂಗ್‌ ಮಾಡುವಾಗ ಅವಘಡ ಸಂಭವಿಸುತ್ತದೆ. ನಟ-ನಟಿಯರು ಗಾಯಗೊಂಡಾಗ ಕೆಲ ದಿನ ವಿಶ್ರಾಂತಿ ತೆಗೆದುಕೊಂಡು ಶೂಟಿಂಗ್​ಗೆ ಮರಳುತ್ತಾರೆ. ಆದರೆ ಮಲಯಾಳಂ ನಟಿಯೊಬ್ಬರು ಮಾತ್ರ ಸೆಟ್​ನಲ್ಲಿ ಗಾಯವಾಗಿದ್ದಕ್ಕೆ ಪರಿಹಾರವಾಗಿ 5.75 ಕೋಟಿ ರೂ. ಕೊಡಬೇಕೆಂದು ನಿರ್ಮಾಪಕರ ವಿರುದ್ಧ ಕೇಸ್‌ ಹಾಕಿದ್ದಾರೆ. ಮಲಯಾಳಂ ನಟಿ ಶೀತಲ್ ತಂಬಿ ಎಂಬುವರು ಮಲಯಾಳಂನ ಜನಪ್ರಿಯ ನಟಿ ಮಂಜು

ಶೂಟಿಂಗ್‌ನಲ್ಲಾದ ಗಾಯಕ್ಕೆ 5.75 ಕೋಟಿ ರೂ. ಪರಿಹಾರ ಕೇಳಿದ ನಟಿ! Read More »

error: Content is protected !!
Scroll to Top