ಸುದ್ದಿ

ಇಬ್ಬರು ಗ್ರಾಮ ರಕ್ಷಕರನ್ನು ಅಪಹರಿಸಿ ಸಾಯಿಸಿದ ಉಗ್ರರು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಉಗ್ರರು ಇಬ್ಬರು ವಿಲೇಜ್ ಡಿಫೆನ್ಸ್ ಗ್ರೂಪ್ (ವಿಡಿಜಿ) ಸದಸ್ಯರನ್ನು ಅಪಹರಿಸಿ ಹತ್ಯೆ ಮಾಡಿದ್ದಾರೆ. ಜೈಶ್-ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಹತ್ಯೆಯಾದವರನ್ನು ಓಹ್ಲಿ ಕುಂಟ್ವಾರ ಗ್ರಾಮದ ನಿವಾಸಿಗಳಾದ ನಜೀರ್ ಅಹ್ಮದ್ ಮತ್ತು ಕುಲದೀಪ್ ಕುಮಾರ್ ಎಂದು ಗುರುತಿಸಲಾಗಿದೆ. ಅವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ.ಮೃತದೇಹಗಳ ಪತ್ತೆಗೆ ಪೊಲೀಸರು ಭಾರಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ನಜೀರ್ ಮತ್ತು ಕುಲದೀಪ್ ಜಾನುವಾರುಗಳನ್ನು ಮೇಯಿಸಲು ಕಾಡಿಗೆ ಹೋದಾಗ ಭಯೋತ್ಪಾದಕರು ಅಪಹರಿಸಿದ್ದಾರೆ. […]

ಇಬ್ಬರು ಗ್ರಾಮ ರಕ್ಷಕರನ್ನು ಅಪಹರಿಸಿ ಸಾಯಿಸಿದ ಉಗ್ರರು Read More »

ಸರಕಾರದ ಸೂಚನೆಯಂತೆ ಪಹಣಿಯಲ್ಲಿ ವಕ್ಫ್‌ ಹೆಸರು ಸೇರ್ಪಡೆ : ಜಗದಂಬಿಕಾ ಪಾಲ್‌

ರೈತರ ಅಹವಾಲು ಆಲಿಸಲು ಬಂದ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಬೆಂಗಳೂರು: ರಾಜ್ಯ ಸರಕಾರದ ಸೂಚನೆಯ ಮೇರೆಗೆ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಲಾಗಿದೆ, ಆಡಳಿತ ವ್ಯವಸ್ಥೆಯ ಕೈವಾಡ ಇಲ್ಲದೆ ಈ ರೀತಿ ಎಲ್ಲ ಆಗಲು ಸಾಧ್ಯವಿಲ್ಲ ಎಂಬುದಾಗಿ ವಕ್ಫ್‌ ಕಾಯ್ದೆ ತಿದ್ದುಪಡಿ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷ ಜಗದಂಬಿಕಾ ಪಾಲ್ ಆರೋಪಿಸಿದರು.ಇಂದು ಹುಬ್ಬಳ್ಳಿಗೆ ಭೇಟಿ ನೀಡಿ ವಕ್ಫ್‌ ಎಂದು ನಮೂದಾಗಿರುವ ರೈತರ ಅಹವಾಲು ಆಲಿಸಿದ ಬಳಿಕ ಮಾತನಾಡಿದ ಅವರು, ರೈತರ ಜಮೀನು, ದೇಗುಲ, ಪಾರಂಪರಿಕ

ಸರಕಾರದ ಸೂಚನೆಯಂತೆ ಪಹಣಿಯಲ್ಲಿ ವಕ್ಫ್‌ ಹೆಸರು ಸೇರ್ಪಡೆ : ಜಗದಂಬಿಕಾ ಪಾಲ್‌ Read More »

ಅಬಕಾರಿ ಸಚಿವರ ಆಪ್ತ ಬ್ರಹ್ಮಾಂಡ ಭ್ರಷ್ಟಾಚಾರದ ಸೂತ್ರಧಾರ

ಲೈಸೆನ್ಸ್‌ ಕೊಡಿಸುವುದಾಗಿ ನಂಬಿಸಿ ಬಾರ್‌ ಮಾಲೀಕರಿಗೆ ಕೋಟ್ಯಂತರ ರೂ. ವಂಚನೆ ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ನೂರಾರು ಕೋಟಿ ರೂ. ಭ್ರಷ್ಟಾಚಾರದ ಸೂತ್ರಧಾರ ಅಬಕಾರಿ ಸಚಿವ ಆರ್​​.ಬಿ ತಿಮ್ಮಾಪುರ ಅವರ ಆಪ್ತ ಜೀವನ್ ಶೆಟ್ಟಿ ಎನ್ನಲಾಗಿದೆ. ಅಬಕಾರಿ ಇಲಾಖೆಯಲ್ಲಿ ಇಷ್ಟೊಂದು ಅಕ್ರಮ ನಡೆಯಲು ಜೀವನ್ ಶೆಟ್ಟಿಯೇ ಕಾರಣ ಎಂದು ಆರೋಪಿಸಲಾಗಿದೆ. ಇವರು ಸಿಎಲ್- 2 ಲೈಸೆನ್ಸ್ ಕೊಡಿಸುತ್ತೇನೆ ಎಂದು ಬಾರ್ ಮಾಲೀಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆರ್​.ಬಿ ತಿಮ್ಮಾಪುರ ಅಬಕಾರಿ ಸಚಿವರಾಗಿದ್ದನಿಂದಲೂ

ಅಬಕಾರಿ ಸಚಿವರ ಆಪ್ತ ಬ್ರಹ್ಮಾಂಡ ಭ್ರಷ್ಟಾಚಾರದ ಸೂತ್ರಧಾರ Read More »

ಸರಕಾರಿ ಕಚೇರಿ, ಆವರಣಗಳಲ್ಲಿ ತಂಬಾಕು ಉತ್ಪನ್ನ ಬಳಕೆ ನಿಷೇಧ | ಸಿಗರೇಟ್‌, ಗುಟ್ಕಾ ಇತ್ಯಾದಿ ಸೇವಿಸಿದರೆ ಶಿಸ್ತುಕ್ರಮ

ಬೆಂಗಳೂರು : ಸರಕಾರಿ ಕಚೇರಿಗಳಲ್ಲಿ, ಕಚೇರಿಯ ಆವರಣಗಳಲ್ಲಿ ಧೂಮಪಾನ ಹಾಗೂ ಇತರ ತಂಬಾಕು ಉತ್ಪನ್ನಗಳ ಸೇವನೆ ನಿಷೇಧಿಸಿ ರಾಜ್ಯ ಸರಕಾರ ಖಡಕ್ ಆದೇಶ ಹೊರಡಿಸಿದೆ.ಈ ಕುರಿತು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಗೆಜೆಟ್ ಅಧಿಸೂಚನೆ ಹೊರಡಿಸಿದ್ದಾರೆ. ಧೂಮಪಾನ ಹಾಗೂ ತಂಬಾಕಿನ ಇತರ ಉತ್ಪನ್ನಗಳ ಸೇವನೆ ಆರೋಗ್ಯಕ್ಕೆ ಮಾರಕವಾಗಿದ್ದು, ಸಾರ್ವಜನಿಕ ಪ್ರದೇಶಗಳಲ್ಲಿ ಇಂತಹ ಉತ್ಪನ್ನಗಳ ಸೇವನೆಯನ್ನು ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ ಮತ್ತು ಉತ್ಪಾದನೆ, ಪೂರೈಕೆ, ಮಾರಾಟ

ಸರಕಾರಿ ಕಚೇರಿ, ಆವರಣಗಳಲ್ಲಿ ತಂಬಾಕು ಉತ್ಪನ್ನ ಬಳಕೆ ನಿಷೇಧ | ಸಿಗರೇಟ್‌, ಗುಟ್ಕಾ ಇತ್ಯಾದಿ ಸೇವಿಸಿದರೆ ಶಿಸ್ತುಕ್ರಮ Read More »

ಕಾರ್ಕಳದ ಈದುವಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ? | ಕಾಡುತ್ಪತ್ತಿ ಸಂಗ್ರಹಿಸಲು ಹೋದವರಿಗೆ ನಕ್ಸಲರು ಕಾಣಸಿಕ್ಕಿದ ಸುದ್ದಿಯಿಂದ ಆತಂಕ

ಕಾರ್ಕಳ: ಈದು ಗ್ರಾಮದಲ್ಲಿ ನಕ್ಸಲರು ಕಾಣಿಸಿಕೊಂಡಿದ್ದಾರೆ ಎನ್ನುವ ಸುದ್ದಿಯೊಂದು ಹರಿದಾಡುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ.ನಾಲ್ವರು ಶಸ್ತ್ರಸಜ್ಜಿತ ಯುವಕರ ತಂಡ ಈದು ಗ್ರಾಮದ ಮುಸ್ಲಿಂ ಕಾಲೋನಿಯ ಬಳಿಯಿರುವ ಬಂಡೆಕಲ್ಲು ಸಮೀಪ ಸೋಮವಾರ ಹಾಡುಹಗಲೇ ಕಾಣಿಸಿಕೊಂಡಿದ್ದಾರೆ ಎಂದು ಕಾಡುತ್ಪತ್ತಿ ಸಂಗ್ರಹಿಸಲು ತೆರಳಿದ ಕೆಲವು ಸ್ಥಳೀಯರು ಹೇಳಿಕೊಂಡಿದ್ದಾರೆ. ಆ ಬಳಿಕ ಪಶ್ಚಿಮ ಘಟ್ಟದಲ್ಲಿ ನಕ್ಸಲರ ಚಟುವಟಿಕೆ ಮತ್ತೆ ಪ್ರಾರಂಭವಾಗಿದೆಯೇ ಎಂಬ ಅನುಮಾನ ಮೂಡಿದೆ. 30ರಿಂದ 40 ವರ್ಷ ವಯಸ್ಸಿನ ಯುವಕರು ತಂಡದಲ್ಲಿದ್ದು, ಹಾಡಹಗಲೇ ಕಾಣಸಿಕ್ಕಿದ್ದಾರೆ ಎಂಬ ಸುದ್ದಿ ಕಳೆದ ಮೂರು ದಿನಗಳಿಂದ

ಕಾರ್ಕಳದ ಈದುವಿನಲ್ಲಿ ಮತ್ತೆ ನಕ್ಸಲರು ಪ್ರತ್ಯಕ್ಷ? | ಕಾಡುತ್ಪತ್ತಿ ಸಂಗ್ರಹಿಸಲು ಹೋದವರಿಗೆ ನಕ್ಸಲರು ಕಾಣಸಿಕ್ಕಿದ ಸುದ್ದಿಯಿಂದ ಆತಂಕ Read More »

ಅಮೆರಿಕ ಚುನಾವಣೆ : ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌ ನಾಗಾಲೋಟ; ಕಮಲಾ ಹ್ಯಾರಿಸ್‌ಗೆ ಹಿನ್ನಡೆ

ತವರು ರಾಜ್ಯ ನ್ಯೂಯಾರ್ಕ್‌ನಲ್ಲಿ ಟ್ರಂಪ್‌ಗೆ ಮುಖಭಂಗ ನ್ಯೂಯಾರ್ಕ್‌: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರವನ್ನು ಬುಡಮೇಲು ಮಾಡಿ ರಿಪಬ್ಲಿಕನ್‌ನ ಡೊನಾಲ್ಡ್‌ ಟ್ರಂಪ್‌ ಐತಿಹಾಸಿಕ ಗೆಲುವು ದಾಖಲಿಸುವ ಸನಿಹದಲ್ಲಿದ್ದಾರೆ. ಮಧ್ಯಾಹ್ನದ ತನಕದ ಫಲಿತಾಂಶದಲ್ಲಿ ಟ್ರಂಪ್‌ ಗೆಲುವಿನತ್ತ ನಾಗಾಲೋಟದಲ್ಲಿದ್ದಾರೆ. ಎದುರಾಳಿ ಕಮಲಾ ಹ್ಯಾರಿಸ್‌ ಕೆಲವು ರಾಜ್ಯಗಳಲ್ಲಿ ಹಿನ್ನಡೆ ಅನುಭವಿಸಿ ಗೆಲುವಿನಿಂದ ದೂರ ಸರಿಯುತ್ತಿದ್ದಾರೆ. ಚುನಾವಣೆಯಲ್ಲಿ ಹಿನ್ನಡೆಯಾಗುತ್ತಿದ್ದಂತೆ ಡೆಮಾಕ್ರಟಿಕ್‌ ಅಭ್ಯರ್ಥಿ ಕಮಲಾ ಹ್ಯಾರಿಸ್‌ ತಮ್ಮ ಚುನಾವಣಾ ಭಾಷಣವನ್ನು ರದ್ದುಗೊಳಿಸಿದ್ದಾರೆ.ಅನಿಶ್ಚಿತ ಎಂದು ಭಾವಿಸಲಾಗಿದ್ದ ಎಲ್ಲ ಏಳು ರಾಜ್ಯಗಳಲ್ಲಿ ಟ್ರಂಪ್ ಎದುರಾಳಿ ಕಮಲಾ ಹ್ಯಾರಿಸ್

ಅಮೆರಿಕ ಚುನಾವಣೆ : ಗೆಲುವಿನತ್ತ ಡೊನಾಲ್ಡ್‌ ಟ್ರಂಪ್‌ ನಾಗಾಲೋಟ; ಕಮಲಾ ಹ್ಯಾರಿಸ್‌ಗೆ ಹಿನ್ನಡೆ Read More »

ಆಯುಷ್ಮಾನ್‌ ವಯ ವಂದನಾ : ಹಿರಿಯರಿಗೆ ವರದಾನ

70 ವರ್ಷ ಮೇಲ್ಪಟ್ಟವರಿಗೆ ಉಚಿತ ವೈದ್ಯಕೀಯ ಶುಶ್ರೂಷೆ ಸೌಲಭ್ಯ ಬೆಂಗಳೂರು: 70 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯನ್ನು ಪ್ರಧಾನಿ ನರೇಂದ್ರ ಕಳೆದ ವಾರ ಚಾಲನೆ ನೀಡಿದರು. ಇದು ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ವಿಸ್ತರಿತ ಆರೋಗ್ಯ ವಿಮೆ ಯೋಜನೆಯಾಗಿದೆ. ಈಗ 70 ವರ್ಷಕ್ಕೂ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರು ಆಯುಷ್ಮಾನ್ ವಯ ವಂದನಾ ಕಾರ್ಡ್ ಪಡೆಯಲು ಅರ್ಹರಾಗಿದ್ದಾರೆ. ಈ ಯೋಜನೆಯಲ್ಲಿ ಹಿರಿಯ ನಾಗರಿಕರು 5 ಲಕ್ಷ

ಆಯುಷ್ಮಾನ್‌ ವಯ ವಂದನಾ : ಹಿರಿಯರಿಗೆ ವರದಾನ Read More »

ನ.20 : ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌

ಅಬಕಾರಿ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ; ಸಚಿವರೇ ಲಂಚ ವಸೂಲಿ ಮಾಡಿದ ಆರೋಪ ಬೆಂಗಳೂರು : ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ವಿರೋಧಿಸಿ ನ.20ರಂದು ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ ಮಾಡಲು ರಾಜ್ಯದ ಮದ್ಯ ಮಾರಾಟಗಾರರು ನಿರ್ಧರಿಸಿದ್ದಾರೆ.ಈ ಕುರಿತು ಕರ್ನಾಟಕ ಫೆಡರೇಷನ್‌ ಆಫ್‌ ವೈನ್‌ ಮರ್ಚೆಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಗುರುಸ್ವಾಮಿ ಮತ್ತು ಪ್ರಧಾನ ಕಾರ್ಯದರ್ಶಿ ಬಿ.ಗೋವಿಂದರಾಜ್‌ ಹೆಗ್ಡೆ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಹಾಗೂ ಇಲಾಖೆಯಲ್ಲಿನ ಭ್ರಷ್ಟಾಚಾರ ತೊಡೆದುಹಾಕಲು ಮುಖ್ಯಮಂತ್ರಿ ಹಾಗೂ ಅಬಕಾರಿ

ನ.20 : ರಾಜ್ಯವ್ಯಾಪಿ ಮದ್ಯ ಮಾರಾಟ ಬಂದ್‌ Read More »

ಎಸ್‌ಡಿಎ ಆತ್ಮಹತ್ಯೆ ಪ್ರಕರಣ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪಿಎ ವಿರುದ್ಧ ಕೇಸ್‌

ತಹಶೀಲ್ದಾರ್‌ ಕಚೇರಿಯಲ್ಲೇ ಸಾವಿಗೆ ಶರಣಾಗಿದ್ದ ಎಸ್‌ಡಿಎ ರುದ್ರಣ್ಣ ಬೆಳಗಾವಿ: ಎಸ್‌ಡಿಎ ರುದ್ರಣ್ಣ ಆತ್ಮಹತ್ಯೆ ಪ್ರಕರಣ ಈಗ ಪ್ರಭಾವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಸಂಕಟ ತಂದೊಡ್ಡಿದೆ. ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರ ಪಿಎ ಮತ್ತು ಬೆಳಗಾವಿಯ ತಹಶೀಲ್ದಾರ್‌ ವಿರುದ್ಧ ಪ್ರಕರಣ ದಾಖಲಾಗಿದೆ.ರುದ್ರಣ್ಣ ಅವರ ತಾಯಿ ಮಲ್ಲವ್ವ ನೀಡಿದ ದೂರಿನನ್ವಯ ತಹಶೀಲ್ದಾರ್‌ ಬಸವರಾಜ ನಾಗರಾಳ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು ಮತ್ತು ಸಹೋದ್ಯೋಗಿ ಅಶೋಕ ಕಬ್ಬಲಿಗೇರ್ ವಿರುದ್ಧ ಬೆಳಗಾವಿಯ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ

ಎಸ್‌ಡಿಎ ಆತ್ಮಹತ್ಯೆ ಪ್ರಕರಣ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಪಿಎ ವಿರುದ್ಧ ಕೇಸ್‌ Read More »

ಮುಡಾ ಹಗರಣ : ಇಂದು ಲೋಕಾಯುಕ್ತ ವಿಚಾರಣೆ ಎದುರಿಸಲು ಸಿದ್ದರಾಮಯ್ಯ ಸಿದ್ಧ

ರಾತ್ರಿ ವಿಮಾನ ನಿಲ್ದಾಣದಲ್ಲೇ ಆಪ್ತ ಸಚಿವರ ಜೊತೆ ರಹಸ್ಯ ಸಮಾಲೋಚನೆ ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತದ ತನಿಖೆ ಎದುರಿಸಲಿದ್ದಾರೆ. ಈಗಾಗಲೇ ಮುಡಾ ಕೇಸ್ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿದ್ದರಾಮಯ್ಯನವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜು ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಒಂದನೇ ಆರೋಪಿ ಎಂದು ಹೆಸರಿಸಲಾಗಿರುವ ಸಿದ್ದರಾಮಯ್ಯನವರಿಗೆ ಇಂದು ವಿಚಾರಣೆಗೆ ಹಾಜರಾಗಲು ನೋಟಿಸ್‌ ನೀಡಿದ್ದು, ಅದರಂತೆ ಉಪಚುನಾವಣೆ ಪ್ರಚಾರದ ನಡುವೆಯೇ ಸಿದ್ದರಾಮಯ್ಯ

ಮುಡಾ ಹಗರಣ : ಇಂದು ಲೋಕಾಯುಕ್ತ ವಿಚಾರಣೆ ಎದುರಿಸಲು ಸಿದ್ದರಾಮಯ್ಯ ಸಿದ್ಧ Read More »

error: Content is protected !!
Scroll to Top