ಸುದ್ದಿ

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು

ಭಾರತದ ಕಾಲಮಾನ ಪ್ರಕಾರ ಬುಧವಾರ ಬೆಳಗ್ಗೆ 3.27ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಭೂಸ್ಪರ್ಶ ನ್ಯೂಯಾರ್ಕ್‌: ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಜ್ ವಿಲ್ಮೋರ್ ಅವರ ಭೂಮಿಗೆ ಮರಳುವ ಪ್ರಯಾಣ ಶುರುವಾಗಿದ್ದು, ನಾಸಾ ಇದನ್ನು ನೇರ ಪ್ರಸಾರ ಮಾಡುತ್ತಿದೆ. ಅಮೆರಿಕ ಕಾಲಮಾನ ಪ್ರಕಾರ ಮಂಗಳವಾರ ಸಂಜೆ ಸುನೀತಾ ವಿಲ್ಲಿಯಮ್ಸ್‌ ಹೊತ್ತ ಗಗನನೌಕೆ ಭೂಸ್ಪರ್ಶ ಮಾಡಲಿದೆ. ಈ ಇಬ್ಬರು ಗಗನಯಾತ್ರಿಗಳು ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದ್ದು, ಈ ಅಪರೂಪದ ಕ್ಷಣಗಳನ್ನು ನಾಸಾ ನೇರಪ್ರಸಾರ […]

ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಆಗಮಿಸುವ ಪ್ರಕ್ರಿಯೆ ಶುರು Read More »

ಔರಂಗಜೇಬನ ಗೋರಿ ತೆರವುಗೊಳಿಸಲು ಬೃಹತ್‌ ಪ್ರತಿಭಟನೆ : ವ್ಯಾಪಕ ಹಿಂಸಾಚಾರ

ಹಲವು ವಾಹನಗಳು ಬೆಂಕಿಗಾಹುತಿ, ಕಲ್ಲು ತೂರಾಟದಲ್ಲಿ ಪೊಲೀಸರಿಗೆ ಗಾಯ ಮುಂಬಯಿ: ಮಹಾರಾಷ್ಟ್ರದ ಸಂಭಾಜಿ ನಗರದಲ್ಲಿರುವ ಮೊಗಲ ದೊರೆ ಔರಂಗಜೇಬನ ಗೋರಿಯನ್ನು ತೆರವುಗೊಳಿಸಬೇಕೆಂಬ ಬೇಡಿಕೆ ಹಿಂಸಾಚಾರಕ್ಕೆ ತಿರುಗಿದ್ದು, ನಿನ್ನೆ ನಾಗಪುರದಲ್ಲಿ ನಡೆದ ಪ್ರತಿಭಟನೆ ವೇಳೆ ಅನೇಕ ವಾಹನಗಳನ್ನು ಸುಟ್ಟು ಹಾಕಲಾಗಿದೆ. ನಾಗಪುರ ನಗರದಲ್ಲಿ ಆರ್‌ಎಸ್‌ಎಸ್‌ ಮುಖ್ಯ ಕಚೇರಿಯಿರುವ ಮಹಲ್‌ನಲ್ಲಿ ಹಿಂದು ಸಂಘಟನೆಗಳು ಔರಂಗಜೇಬನ ಗೋರಿಯನ್ನು ತೆರವುಗೊಳಿಸಬೇಕೆಂದು ಅಗ್ರಹಿಸಿ ಪ್ರತಿಭಟನೆ ನಡೆಸಿದಾಗ ಹಿಂಸಾಚಾರ ಸ್ಫೋಟಗೊಂಡಿದೆ. ಬಜರಂಗ ದಳ, ವಿಶ್ವ ಹಿಂದು ಪರಿಷತ್‌ ಸೇರಿದಂತೆ ವಿವಿಧ ಹಿಂದು ಸಂಘಟನೆಗಳ ಪ್ರತಿಭಟನೆ ವೇಳೆ

ಔರಂಗಜೇಬನ ಗೋರಿ ತೆರವುಗೊಳಿಸಲು ಬೃಹತ್‌ ಪ್ರತಿಭಟನೆ : ವ್ಯಾಪಕ ಹಿಂಸಾಚಾರ Read More »

ಇತಿಹಾಸ ಪ್ರಸಿದ್ದ  ಮಹತೋಭಾರ  ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತೂರು ಜಾತ್ರೆಗೆ ಬ್ರಹ್ಮರಥ ಮಂದಿರದಿಂದ ರಥವನ್ನು ಹೊರ ತರುವ ಮುಹೂರ್ತ | ರಥ ಕಟ್ಟುವ ಸ್ಥಳ ಸೂಚಿಸಿದ ಪುಷ್ಪ

ಪುತ್ತೂರು: ಇತಿಹಾಸ ಪ್ರಸಿದ್ದ  ಮಹತೋಭಾರ  ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ನಡೆಯುವ ಜಾತ್ರೋತ್ಸವ ಸೇರಿದಂತೆ ಏ.17ರ ಬ್ರಹ್ಮರಥೋತ್ಸವಕ್ಕೆ ಸಿದ್ಧತೆಗಾಗಿ ಮಾ.17ರಂದು ಬೆಳಿಗ್ಗೆ ಬ್ರಹ್ಮರಥ ಮಂದಿರದಿಂದ ಬ್ರಹ್ಮರಥವನ್ನು ರಥ ಬೀದಿಗೆ ತಂದು ನಿಲ್ಲಿಸುವ ಮೂಲಕ ಪುತ್ತೂರು ಜಾತ್ರೆಗೆ ಮುನ್ಸೂಚನೆ ನೀಡಲಾಗಿದೆ. ಪ್ರತಿ ವರ್ಷದಂತೆ ರಥ ಕಟ್ಟುವ ಸ್ಥಳದಲ್ಲಿ ಬಿಲ್ವಪತ್ರೆ ಭೂಸ್ಪರ್ಶ ಮಾಡುತ್ತಿದ್ದು, ಈ ಭಾರಿ ಪುಷ್ಪದ ಮಾಲೆಯೊಂದು ಭೂ ಸ್ಪರ್ಶ ಮಾಡಿದೆ. ಇಂದು ಬೆಳಿಗ್ಗೆ ಶುಭ ಮುಹೂರ್ತದಲ್ಲಿ ದೇವಳದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು

ಇತಿಹಾಸ ಪ್ರಸಿದ್ದ  ಮಹತೋಭಾರ  ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪುತ್ತೂರು ಜಾತ್ರೆಗೆ ಬ್ರಹ್ಮರಥ ಮಂದಿರದಿಂದ ರಥವನ್ನು ಹೊರ ತರುವ ಮುಹೂರ್ತ | ರಥ ಕಟ್ಟುವ ಸ್ಥಳ ಸೂಚಿಸಿದ ಪುಷ್ಪ Read More »

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ

ಪುತ್ತೂರು : ಸುಳ್ಯದ ಯುವ ಸಂಗೀತ ನಿರ್ದೇಶಕ ಮಯೂರ ಅಂಬೆಕಲ್ಲು ಹಾಗು ತೇಜಸ್‍ ಕಿರಣ್‍ ರವರ ನಿರ್ದೇಶನದಿಂದ ಮೂಡಿಬಂದ “ಭಾವ ತೀರ ಯಾನ” ಸಿನಿಮಾ ರಾಜ್ಯಾದ್ಯಂತ ಅದ್ಭುತವಾಗಿ ಚಿತ್ರ ಪ್ರದರ್ಶನಗೊಳ್ಳುತ್ತಿದೆ ಪುತ್ತೂರಿನ ಭಾರತ್ ಸಿನಿಮಾಸ್‍ನಲ್ಲಿ ಭಾವ ತೀರ ಯಾನ ಮಾ. 18 (ನಾಳೆ) ರಂದು 10:30 ಕ್ಕೆ ಹಾಗೂ  ಸಂಜೆ  7:15ರ ಸಮಯಕ್ಕೆ  ಚಿತ್ರ ಪ್ರದರ್ಶನಗೊಳ್ಳಲಿದೆ.  ಕೌಂಟ‌ರ್’ನಲ್ಲಿ ಟಿಕೆಟ್ ಪಡೆದುಕೊಳ್ಳಲು ಕಷ್ಟ ಸಾಧ್ಯವಾಗುವವರು Book My Show Appನಲ್ಲಿ  ticketಗಳನ್ನು ಕಾಯ್ದಿರಿಸಿಕೊಳ್ಳಬಹುದು ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಭಾವ ತೀರ ಯಾನ ಸಿನಿಮಾ ಮಾ. 18 ರಂದು 10:30 ಕ್ಕೆ ಹಾಗೂ  ಸಂಜೆ  7:15ಕ್ಕೆ ಚಿತ್ರ ಪ್ರದರ್ಶನ Read More »

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು

ಸುಳ್ಯ : ಅಂಗಳದಲ್ಲಿ ನಿಂತಿದ್ದ ಕಾರು ಹಿಂದಕ್ಕೆ ಚಲಿಸಿದಾಗ ವ್ಯಕ್ತಿಯೋರ್ವರು ಮೇಲೇ ಹರಿದುಹೋಗಿರುವ ಪರಿಣಾಮ ಮೃತಪಟ್ಟ ಘಟನೆ ಸುಳ್ಯದಲ್ಲಿ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ನಿವೃತ್ತ ರೇಂಜರ್ ಜೋಸೆಫ್ (74) ಎಂದು ಪತ್ತೆಹಚ್ಚಲಾಗಿದೆ. ಸುಳ್ಯ ಕರಿಕ್ಕಳದ ಮುಚ್ಚಿಲದಲ್ಲಿರುವ ತಮ್ಮ ಮನೆಯ ಅಂಗಳದಲ್ಲಿ ನಿಂತಿದ್ದಾಗ ಕಾರು ಹಿಮ್ಮುಖ ಚಲಿಸಿ ನಿವೃತ್ತ ಜೋಸೇಫ್ ಅವರಿಗೆ ಗುದ್ದಿದಾಗ ಕುಸಿದು ಬಿದ್ದರೆನ್ನಲಾಗಿದೆ. ಮನೆಯಲ್ಲಿ ಅವರ ಪತ್ನಿ ಮಾತ್ರ ಇದ್ದು ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟರು ಎನ್ನಲಾಗಿದೆ. ಅರಣ್ಯ ಇಲಾಖೆಯಲ್ಲಿ

ಮನೆಯಲ್ಲಿದ್ದ ಕಾರು ಹಿಂದಕ್ಕೆ ಚಲಿಸಿ ವ್ಯಕ್ತಿಯೋರ್ವ ಮೃತ್ಯು Read More »

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ

ಉಪ್ಪಿನಂಗಡಿ  : ಉಪ್ಪಿನಂಗಡಿ  ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ 50ನೇ ವರ್ಷದ ನಿಮಿತ್ತ ನಡೆಸಲಾಗುತ್ತಿರುವ ಶ್ರೀ ಮಹಾಭಾರತ ಸರಣಿಯಲ್ಲಿ 69ನೇ ಕಾರ್ಯಕ್ರಮವಾಗಿ ಗಾಂಧಾರಿ ವಿವಾಹ  ತಾಳಮದ್ದಳೆಯು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿತು. ಭಾಗವತರಾಗಿ ಪದ್ಮನಾಭ ಕುಲಾಲ್ ಇಳಂತಿಲ,ಪ್ರಕಾಶ ಅಭ್ಯಂಕರ ಬೆಳ್ತಂಗಡಿ,ಶ್ರೀಮತಿ ಮಲ್ಲಿಕಾ ಶೆಟ್ಟಿ ಸಿದ್ದಕಟ್ಟೆ, ಸುರೇಶ್ ರಾವ್. ಬಿ ಹಿಮ್ಮೇಳದಲ್ಲಿ  ಶ್ರೀಪತಿ ಭಟ್ ಉಪ್ಪಿನಂಗಡಿ, ಪ್ರಚೇತ ಆಳ್ವ ಬಾರ್ಯ, ಅರ್ಜುನ ಅಭ್ಯಂಕರ ಬೆಳ್ತಂಗಡಿ,  ಅರ್ಥಧಾರಿಗಳಾಗಿ ಸತೀಶ ಶಿರ್ಲಾಲು (ದ್ವಾಪರ), ರವೀಂದ್ರದರ್ಬೆ ( ಕಲಿ)

ಮಹಾಭಾರತ ಸರಣಿಯಲ್ಲಿ ಗಾಂಧಾರಿ  ವಿವಾಹ ತಾಳಮದ್ದಳೆ Read More »

ವೃದ್ಧ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಮಕ್ಕಳಿಗೆ ಸಿಗಲ್ಲ ಆಸ್ತಿ

ಪೋಷಕರಿಂದ ವರ್ಗಾವಣೆ ಆಗಿರುವ ಆಸ್ತಿ, ಬರೆಸಿಕೊಂಡಿರುವ ಉಯಿಲು ರದ್ದುಪಡಿಸಲು ಆದೇಶ ಬೆಂಗಳೂರು : ವಯಸ್ಸಾದ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಅವರ ಆಸ್ತಿ ಮಕ್ಕಳಿಗೆ ಸಿಗಲ್ಲ. ಹೀಗೊಂದು ಆದೇಶವನ್ನು ಕರ್ನಾಟಕ ಸರಕಾರ ನೀಡಿದೆ. ವಯಸ್ಸಾದ ತಂದೆ ತಾಯಿಯನ್ನು ಚಿಕಿತ್ಸೆ ನೆಪದಲ್ಲಿ ಆಸ್ಪತ್ರೆಗಳಿಗೆ ತಂದು ದಾಖಲಿಸಿ ಮಕ್ಕಳು ನಾಪತ್ತೆಯಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಕರಾರ ಈ ಆದೇಶ ಹೊರಡಿಸಿದೆ. ಬೆಳಗಾವಿ ಜಿಲ್ಲೆಯೊಂದರಲ್ಲೇ ಇಂಥ 150ಕ್ಕೂ ಹೆಚ್ಚು ಪ್ರಕರಣಗಳು ಇತ್ತೀಚೆಗೆ ಪತ್ತೆಯಾಗಿದ್ದವು. ಸಂಧ್ಯಾಕಾಲದಲ್ಲಿ ಹೆತ್ತ ತಂದೆ-ತಾಯಿಯನ್ನು ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ. ಭಾರತೀಯ

ವೃದ್ಧ ತಂದೆ ತಾಯಿಯನ್ನು ಉಪೇಕ್ಷಿಸಿದರೆ ಮಕ್ಕಳಿಗೆ ಸಿಗಲ್ಲ ಆಸ್ತಿ Read More »

ನಾಳೆಯೇ ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಮರಳುವ ಸಾಧ್ಯತೆ

9 ತಿಂಗಳ ಅಂತರಿಕ್ಷ ವಾಸಕ್ಕೆ ಕೊನೆಗೂ ಮುಕ್ತಿ ಸನ್ನಿಹಿತ ನ್ಯೂಯಾರ್ಕ್‌ : ಒಂಬತ್ತು ತಿಂಗಳಿಂದ ಅಂತರಿಕ್ಷದಲ್ಲಿ ಸಿಕ್ಕಿಬಿದ್ದಿರುವ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲ್ಲಿಯಮ್ಸ್‌ ಅವರನ್ನು ಭೂಮಿಗೆ ಕರೆತರಲು ಕ್ಷಣಗಣನೆ ಶುರುವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಂಗಳವಾರ ಸಂಜೆಗಾಗುವಾಗ ಸುನೀತಾ ವಿಲ್ಲಿಯಮ್ಸ್‌ ಇರುವ ಗಗನನೌಕೆ ಭೂಮಿ ಸ್ಪರ್ಶ ಮಾಡಲಿದೆ. ಆ ಮೂಲಕ ಸುದೀರ್ಘ 9 ತಿಂಗಳ ಅಂತರಿಕ್ಷ ವಾಸ ಅಂತ್ಯಗೊಳ್ಳಲಿದೆ. ಆರಂಭದಲ್ಲಿ ಬುಧವಾರ ಅಥವಾ ಗುರುವಾರ ಇಬ್ಬರು ಗಗನಯಾತ್ರಿಗಳನ್ನು ವಾಪಸ್‌ ಕರೆತರಲು ಯೋಜನೆ ರಚಿಸಲಾಗಿತ್ತು. ಆದರೆ ಈ

ನಾಳೆಯೇ ಸುನೀತಾ ವಿಲ್ಲಿಯಮ್ಸ್‌ ಭೂಮಿಗೆ ಮರಳುವ ಸಾಧ್ಯತೆ Read More »

ಒಂದು ವರ್ಷದಲ್ಲಿ 59 ಸಲ ಡ್ರಗ್ಸ್‌ ಸಾಗಾಟ : ಆದರೂ ಸಿಕ್ಕಿಬೀಳಲಿಲ್ಲ ಈ ಚಾಲಾಕಿಯರು

ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ ಬೃಹತ್‌ ಡ್ರಗ್ಸ್‌ ಜಾಲದಲ್ಲಿ ಯಾರೆಲ್ಲ ಶಾಮೀಲಾಗಿದ್ದಾರೆ? ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿರುವ ರಾಜ್ಯದ ಅತಿದೊಡ್ಡ ಡ್ರಗ್ಸ್ ಜಾಲದ ಹಲವು ಮಾಹಿತಿಗಳು ಬೆಚ್ಚಿಬೀಳಿಸುವಂತಿದೆ. ದಾಖಲೆಯ 75 ಕೋಟಿ ರೂ. ಮೌಲ್ಯದ ಡ್ರಗ್ಸ್‌ ಜೊತೆ ಸಿಕ್ಕಿಬಿದ್ದಿರುವ ಇಬ್ಬರು ವಿದೇಶಿ ಮಹಿಳೆಯರು ಈ ಮೊದಲು ಒಂದು ವರ್ಷದ ಅವಧಿಯಲ್ಲಿ ವಿಮಾನ ನಿಲ್ದಾಣದ ಮೂಲಕ 59 ಸಲ ಡ್ರಗ್ಸ್‌ ಸಾಗಿಸಿದ್ದರೂ ಸಿಕ್ಕಿಬೀಳದೆ ಪಾರಾಗಿದ್ದರು. ಆದರೆ ಅದು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಯೊಂದು ಕಾಡುತ್ತಿದೆ. ರನ್ಯಾ ರಾವ್‌

ಒಂದು ವರ್ಷದಲ್ಲಿ 59 ಸಲ ಡ್ರಗ್ಸ್‌ ಸಾಗಾಟ : ಆದರೂ ಸಿಕ್ಕಿಬೀಳಲಿಲ್ಲ ಈ ಚಾಲಾಕಿಯರು Read More »

ಕಾಫಿ ಮೈಮೇಲೆ ಚೆಲ್ಲಿದ್ದಕ್ಕೆ 415 ಕೋ. ರೂ. ದಂಡ!

ಸ್ಟಾರ್‌ಬಕ್ಸ್‌ ಕಂಪನಿ ವಿರುದ್ಧ ತೀರ್ಪು ನೀಡಿದ ನ್ಯಾಯಾಲಯ ಕ್ಯಾಲಿಫೋರ್ನಿಯಾ : ಕಾಫಿ ಮೈಮೇಲೆ ಚೆಲ್ಲಿದ್ದಕ್ಕೆ ಸ್ಟಾರ್‌ಬಕ್ಸ್‌ ಭಾರಿ ಬೆಲೆಯನ್ನೇ ತೆರಬೇಕಾಗಿ ಬಂದಿದೆ. ಸ್ಟಾರ್‌ಬಕ್ಸ್‌ನ ಬಿಸಿ ಕಾಫಿ ತೊಡೆ ಭಾಗದ ಮೇಲೆ ಬಿದ್ದು ಗಂಭೀರ ಗಾಯಗೊಂಡಿದ್ದ ವ್ಯಕ್ತಿಗೆ 50 ಮಿಲಿಯನ್‌ ಡಾಲರ್‌ ಅಂದರೆ ಸುಮಾರು 415 ಕೋಟಿ ರೂ. ಪರಿಹಾರ ನೀಡಬೇಕೆಂದು ಸ್ಟಾರ್‌ಬಕ್ಸ್‌ಗೆ ಕೋರ್ಟ್ ಆದೇಶ ನೀಡಿದೆ. ಕಾಫಿ ಮುಚ್ಚಳವನ್ನು ಸರಿಯಾಗಿ ಮುಚ್ಚದೆ ಕೊಟ್ಟಿದ್ದರಿಂದ ಬಿಸಿ ಕಾಫಿ ತೊಡೆ ಮೇಲೆ ಬಿದ್ದಿದ್ದು, ಪರಿಣಾಮ ಆ ವ್ಯಕ್ತಿಯ ಜನನಾಂಗಕ್ಕೂ ಗಾಯಗಳಾಗಿದ್ದವು.

ಕಾಫಿ ಮೈಮೇಲೆ ಚೆಲ್ಲಿದ್ದಕ್ಕೆ 415 ಕೋ. ರೂ. ದಂಡ! Read More »

error: Content is protected !!
Scroll to Top