ಸುದ್ದಿ

ಇಂದು ಗುವಾಹಟಿಯಲ್ಲಿ ಮೂರನೇ ಟಿ20 ಪಂದ್ಯ

ಸರಣಿ ವಶಪಡಿಸಿಕೊಳ್ಳಲು ಭಾರತ ತವಕ ; ನ್ಯೂಜಿಲೆಂಡ್‌ಗೆ ಗೆಲ್ಲುವ ಅನಿವಾರ್ಯತೆ ಗುವಾಹಟಿ : ಭಾರತ ಮತ್ತು ನ್ಯೂಜಿಲೆಂಡ್ ನಡುವಣ 5 ಪಂದ್ಯಗಳ ಟಿ20 ಸರಣಿಯ 3ನೇ ಪಂದ್ಯವು ಇಂದು ಗುವಾಹಟಿಯಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಟೀಮ್ ಇಂಡಿಯಾದಲ್ಲಿ ಒಂದು ಬದಲಾವಣೆ ಕಂಡು ಬರುವುದು ಖಚಿತ. ಕಳೆದ ಮ್ಯಾಚ್​ ವೇಳೆ ವಿಶ್ರಾಂತಿ ಪಡೆದಿದ್ದ ಜಸ್​ಪ್ರೀತ್ ಬುಮ್ರಾ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಮೊದಲ ಎರಡು ಪಂದ್ಯಗಳನ್ನು ಭಾರತ ಗೆದ್ದಿದ್ದು, ಮೂರನೇ ಪಂದ್ಯವನ್ನು ಗೆದ್ದರೆ ಸರಣಿ ಕೈವಶವಾಗಲಿದೆ. ಸರಣಿಯನ್ನು […]

ಇಂದು ಗುವಾಹಟಿಯಲ್ಲಿ ಮೂರನೇ ಟಿ20 ಪಂದ್ಯ Read More »

400 ಕೋ. ರೂ. ಮೌಲ್ಯದ ಕರೆನ್ಸಿ ನೋಟ್‌ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳು ಹೈಜಾಕ್‌

ದಟ್ಟ ಅರಣ್ಯದ ಘಾಟ್‌ನಲ್ಲಿ ನಡೆದ ಸಿನಿಮೀಯ ಶೈಲಿಯ ದರೋಡೆ ಕೃತ್ಯ ; ಮೂರು ರಾಜ್ಯಗಳ ಪೊಲೀಸರಿಂದ ತನಿಖೆ ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನು ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ದರೋಡೆ ಪ್ರಕರಣ ಅಂತಾರಾಜ್ಯ ಮಟ್ಟದ್ದಾಗಿದ್ದು, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ 3 ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ

400 ಕೋ. ರೂ. ಮೌಲ್ಯದ ಕರೆನ್ಸಿ ನೋಟ್‌ ಸಾಗಿಸುತ್ತಿದ್ದ ಎರಡು ಕಂಟೇನರ್‌ಗಳು ಹೈಜಾಕ್‌ Read More »

ರಾಮಕುಂಜ : ತಂದೆಗೆ ಇರಿದು ಮಗ ಆತ್ಮಹತ್ಯೆ ಪ್ರಕರಣಕ್ಕೆ ತಿರುವು

ತಂದೆಯೇ ಗುಂಡು ಹಾರಿಸಿ ಮಗನನ್ನು ಸಾಯಿಸಿದ್ದಾರೆ ಎಂದು ದೂರು ಕಡಬ : ಇಲ್ಲಿನ ರಾಮಕುಂಜದಲ್ಲಿ ಶನಿವಾರ ಸಂಜೆ ಬಾಲಕನೋರ್ವ ತಂದೆಗೆ ಇರಿದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ತಂದೆಯೇ ಮಗನಿಗೆ ಕೋವಿಯಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ದೂರು ದಾಖಲಾಗಿದೆ. ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಕುಂಜದ ಪಾದೆ ಎಂಬಲ್ಲಿ ಶನಿವಾರ ಸಂಜೆ ಈ ಘಟನೆ ನಡೆದಿತ್ತು. ಮೋಕ್ಷ (17) ಗುಂಡೇಟು ತಗುಲಿ ಸಾವನ್ನಪ್ಪಿದ ಬಾಲಕ. ರಾಮಕುಂಜ ಗ್ರಾಮದ ಪಾದೆ ನಿವಾಸಿ ತಂದೆ

ರಾಮಕುಂಜ : ತಂದೆಗೆ ಇರಿದು ಮಗ ಆತ್ಮಹತ್ಯೆ ಪ್ರಕರಣಕ್ಕೆ ತಿರುವು Read More »

ಅಯೋಧ್ಯೆಯ ಶ್ರೀ ರಾಮನಿಗೆ 286 KG ತೂಕದ ಧನಸ್ಸು

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಒಡಿಶಾದಿಂದ 286 ಕೆಜಿ ತೂಕದ ಚಿನ್ನದ ಧನಸ್ಸು ಸಮರ್ಪಣೆಯಾಗಿದೆ. ಈ ಧನಸ್ಸನ್ನು ತಮಿಳುನಾಡಿನ ಕಾಂಚೀಪುರಂನ ಮಹಿಳಾ ಕುಶಲಕರ್ಮಿಗಳ‌ ನೈಪುಣ್ಯದಿಂದ ತಯಾರು ಮಾಡಲಾಗಿದೆ. ಇದನ್ನು ತಯಾರಿಸಲು ಚಿನ್ನ, ಬೆಳ್ಳಿ, ತಾಮ್ರ, ಸತು, ಕಬ್ಬಿಣ ಮೊದಲಾದ ಮಿಶ್ರ ಲೋಹದಿಂದ ತಯಾರಿಸಲಾಗಿದೆ. ಇದರ ನಿರ್ಮಾಣ ಕಾರ್ಯ ಒಡಿಶಾದಲ್ಲಿ ಪೂರ್ಣಗೊಂಡಿದೆ.

ಅಯೋಧ್ಯೆಯ ಶ್ರೀ ರಾಮನಿಗೆ 286 KG ತೂಕದ ಧನಸ್ಸು Read More »

ಸಿದ್ದರಾಮಯ್ಯ ಕಟೌಟ್‌ ಬಿದ್ದು ಮೂವರಿಗೆ ಗಂಭೀರ ಗಾಯ

ಕಾಂಗ್ರೆಸ್‌ ಕಾರ್ಯಕ್ರಮಕ್ಕೆ ಅಳವಡಿಸಿದ್ದ ಬೃಹತ್‌ ಕಟೌಟ್‌ ಹುಬ್ಬಳ್ಳಿ: ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಹಮ್ಮಿಕೊಂಡಿರುವ ಮನೆ ಹಂಚಿಕೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಳವಡಿಸಿದ್ದ ಬೃಹತ್ ಕಟೌಟ್‌ಗಳು ಮುರಿಬಿದ್ದು ಮೂವರು ಗಾಯಗೊಂಡಿರುವ ಘಟನೆ ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಮಂಟೂರ ರಸ್ತೆಯ ಅಕ್ಕಪಕ್ಕ ಹಾಗೂ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಇತರ ಕಾಂಗ್ರೆಸ್ ನಾಯಕರ ಬೃಹತ್ ಕಟೌಟ್ ಅಳವಡಿಸಲಾಗಿತ್ತು. ಸಿಎಂ ಮತ್ತು ಸಚಿವ ಜಮೀರ್ ಅವರ

ಸಿದ್ದರಾಮಯ್ಯ ಕಟೌಟ್‌ ಬಿದ್ದು ಮೂವರಿಗೆ ಗಂಭೀರ ಗಾಯ Read More »

10 ರೂ.ಗೆ ಲಭ್ಯ ನಂದಿನಿ ಹಾಲು, ಮೊಸರು

ಹೊಸ ಪ್ಯಾಕೆಟ್‌ ಮಾರುಕಟ್ಟೆಗೆ ಬಿಡುಗಡೆ ಬೆಂಗಳೂರು: ಇನ್ನು ಮುಂದೆ ನಂದಿನಿ ಹಾಲು ಮತ್ತು ಮೊಸರು 10 ರೂ.ಗಳ ಪ್ಯಾಕೆಟ್‌ನಲ್ಲೂ ಸಿಗಲಿದೆ. ನಂದಿನಿ ಮಳಿಗೆಗಳಲ್ಲಿ 10 ರೂ. ಮೌಲ್ಯದ ಹಾಲು, ಮೊಸರಿನ ಪ್ಯಾಕೆಟ್‌ಗಳೊಂದಿಗೆ ಮೀಡಿಯಂ ಫ್ಯಾಟ್‌ ಇರುವ ಪನೀರ್‌, ಹೈ ಆರೋಮ ತುಪ್ಪ, ಪ್ರೊಬಯಾಟಿಕ್‌ ಮಾವಿನ ಲಸ್ಸಿ, ಡೇರಿ ವೈಟ್ನರ್‌ ಸೇರಿದಂತೆ ಒಟ್ಟು ಹತ್ತು ಹೊಸ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧದಲ್ಲಿ ಶುಕ್ರವಾರ ಬಿಡುಗಡೆ ಮಾಡಿದರು. ಕರ್ನಾಟಕ ಸಹಕಾರ ಹಾಲು ಉತ್ಪಾದಕ ಮಹಾಮಂಡಳ (ಕೆಎಂಎಫ್‌) ನಂದಿನಿ ಬ್ರ್ಯಾಂಡ್‌ನ ಹಾಲು

10 ರೂ.ಗೆ ಲಭ್ಯ ನಂದಿನಿ ಹಾಲು, ಮೊಸರು Read More »

ಮದುವೆ ಮನೆಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ : 7 ಮಂದಿ ಸಾವು

ಶಾಂತಿ ಸಮಿತಿಯ ಸದಸ್ಯನ ಮನೆಯ ಮದುವೆ ಕಾರ್ಯಕ್ರಮದಲ್ಲೇ ದುರಂತ ಇಸ್ಲಾಮಾಬಾದ್‌: ಪಾಕಿಸ್ತಾನದ ವಾಯವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶಾಂತಿ ಸಮಿತಿ ಸದಸ್ಯರೊಬ್ಬರ ನಿವಾಸದಲ್ಲಿ ನಡೆಯುತ್ತಿದ್ದ ವಿವಾಹ ಸಮಾರಂಭದ ವೇಳೆ ಆತ್ಮಾಹುತಿ ಬಾಂಬ್‌ ದಾಳಿ ನಡೆದು ಕನಿಷ್ಠ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಡೇರಾ ಇಸ್ಮಾಯಿಲ್ ಖಾನ್ ಜಿಲ್ಲೆಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ ನಡೆದಿದೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆತ್ಮಾಹುತಿ‌ ಬಾಂಬ್‌ ಸ್ಫೋಟದ ತೀವ್ರತೆಗೆ ಮದುವೆ ಮನೆಯ ಛಾವಣಿ ಕುಸಿದುಬಿದ್ದಿದೆ.

ಮದುವೆ ಮನೆಯಲ್ಲಿ ಆತ್ಮಾಹುತಿ ಬಾಂಬ್‌ ದಾಳಿ : 7 ಮಂದಿ ಸಾವು Read More »

ಬ್ಯಾಂಕ್‌ ಮ್ಯಾನೇಜರ್‌ ಸಹಿ ಫೋರ್ಜರಿ ಮಾಡಿ ಲಕ್ಷಾಂತರ ವಂಚನೆ : ನಾಲ್ವರ ವಿರುದ್ಧ ಕೇಸ್‌

ವಾಹನಕ್ಕೆ ಪಡೆದ ಸಾಲ ಸಂದಾಯವಾಗಿದೆ ಎಂದು ಪತ್ರ ತಯಾರಿಸಿದ ಖದೀಮರು ಬಂಟ್ವಾಳ : ವಾಹನವೊಂದಕ್ಕೆ ಬ್ಯಾಂಕ್‌ನಿಂದ ತೆಗೆದ ಲಕ್ಷಾಂತರ ರೂ. ಸಾಲ ಮರುಪಾವತಿಸದೆ ವಂಚಿಸಿದ ಘಟನೆ ನಡೆದಿದೆ. ಬ್ಯಾಂಕ್ ಮುಖ್ಯಸ್ಥರ ಫೋರ್ಜರಿ ಸಹಿಯನ್ನು ಲೆಟರ್ ಹೆಡ್‌ನಲ್ಲಿ ಬಳಸಿ ಸಾಲ ಸಂಪೂರ್ಣ ಸಂದಾಯವಾಗಿರುವುದಾಗಿ ಸುಳ್ಳು ಪತ್ರವನ್ನು ಆರ್.ಟಿ.ಒ.ಕಚೇರಿಗೆ ನೀಡಿರುವುದರ ಕುರಿತು ದೂರು ದಾಖಲಾಗಿದೆ. ಮೂಲತಃ ಬೆಳ್ತಂಗಡಿ ನಿವಾಸಿಗಳಾದ ತನ್ವಿರ್ ಹಾಗೂ ಅವನ ತಾಯಿ ನೆಬಿಶಾ ಮತ್ತು ಜುನೈದ್ ಮೆಲ್ಕಾರ್ ಹಾಗೂ ರಮೀಝ್ ಆಲಿಶ್ ಉಪ್ಪಿನಂಗಡಿ ಅವರ ಮೇಲೆ ಬಂಟ್ವಾಳ

ಬ್ಯಾಂಕ್‌ ಮ್ಯಾನೇಜರ್‌ ಸಹಿ ಫೋರ್ಜರಿ ಮಾಡಿ ಲಕ್ಷಾಂತರ ವಂಚನೆ : ನಾಲ್ವರ ವಿರುದ್ಧ ಕೇಸ್‌ Read More »

ಬೆಳ್ತಂಗಡಿ : ಬೈಕ್‌ ಕಳ್ಳತನ ಆರೋಪದಲ್ಲಿ ಇಬ್ಬರನ್ನು ಹಿಡಿದು ಕಟ್ಟಿಹಾಕಿ ಥಳಿಸಿದ ಗ್ರಾಮಸ್ಥರು

ಬೆಳ್ತಂಗಡಿ : ಬೈಕ್ ಕಳ್ಳತನ ಮಾಡಿ ಪರಾರಿಯಾಗುತ್ತಿರುವ ಆರೋಪದ ಮೇರೆಗೆ ಸಾರ್ವಜನಿಕರು ಸೇರಿ ಇಬ್ಬರು ಆರೋಪಿಗಳನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿ ನಂತರ ಮರಕ್ಕೆ ಕಟ್ಟಿ ಹಾಕಿ ವೇಣೂರು ಪೊಲೀಸರಿಗೆ ಒಪ್ಪಿಸಿದ ಘಟನೆ ಮರೋಡಿಯಲ್ಲಿ ನಡೆದಿದೆ. ಈ ಬಗ್ಗೆ ಇಬ್ಬರು ಬೈಕ್ ಕಳ್ಳತನಕ್ಕೆ ಯತ್ನಿಸಿದ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಇದೇ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೆ ಒಳಗಾದವರು ನೀಡಿದ ದೂರಿನಂತೆ ಸ್ಥಳೀಯರಾದ 8 ಮಂದಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಲಾಗಿದೆ ಎರಡೂ ಪ್ರಕರಣಗಳಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳ್ತಂಗಡಿ ತಾಲೂಕಿನ

ಬೆಳ್ತಂಗಡಿ : ಬೈಕ್‌ ಕಳ್ಳತನ ಆರೋಪದಲ್ಲಿ ಇಬ್ಬರನ್ನು ಹಿಡಿದು ಕಟ್ಟಿಹಾಕಿ ಥಳಿಸಿದ ಗ್ರಾಮಸ್ಥರು Read More »

ರೆಡ್ಡಿ, ರಾಮುಲು ಹೆಸರಿನಲ್ಲಿದ್ದ ಮನೆಯಲ್ಲಿ ಬೆಂಕಿ ಅವಘಡ

ಭರತ್‌ ರೆಡ್ಡಿ ಬೆಂಬಲಿಗರು ಬೆಂಕಿ ಹಚ್ಚಿರುವ ಆರೋಪ ಬಳ್ಳಾರಿ : ಬಳ್ಳಾರಿಯಲ್ಲಿ ಇತ್ತೀಚೆಗೆ ಸಂಭವಿಸಿದ ಬ್ಯಾನರ್‌ ಗಲಾಟೆ ಮತ್ತು ಕಾಂಗ್ರೆಸ್‌ ಕಾರ್ಯಕರ್ತನ ಕೊಲೆ ಪ್ರಕರಣದ ಕಾವು ತಣ್ಣಗಾಗುವ ಮೊದಲೇ ಇನ್ನೊಂದು ಘಟನೆ ಸಂಭವಿಸಿದೆ. ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಜಂಟಿ ಹೆಸರಿನಲ್ಲಿದ್ದ ಮನೆಯೊಂದರಲ್ಲಿ ಶುಕ್ರವಾರ ಸಂಜೆ ಅಗ್ನಿ ಅವಘಡ ಸಂಭವಿಸಿದ್ದು, ಇದು ಕಾಂಗ್ರೆಸ್‌ ಕಾರ್ಯಕರ್ತರ ಕೃತ್ಯ ಎಂದು ರೆಡ್ಡಿ ಸಹೋದರರು ಆರೋಪಿಸಿದ್ದಾರೆ. ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಸೇರಿದ

ರೆಡ್ಡಿ, ರಾಮುಲು ಹೆಸರಿನಲ್ಲಿದ್ದ ಮನೆಯಲ್ಲಿ ಬೆಂಕಿ ಅವಘಡ Read More »

error: Content is protected !!
Scroll to Top